
ಕನ್ನಡದ ಎಕ್ಸ್‌ಕ್ಲೂಸಿವ್ ಕಾರ್ಯಕ್ರಮಗಳು ಪ್ರಗುಣಿ ಓಟಿಟಿಯಲ್ಲಿ ಪ್ರಸಾರವಾಗಬೇಕು ಅನ್ನುವುದು ತಂಡದ ಉದ್ದೇಶ. ಅದಕ್ಕಾಗಿ ಆರಂಭದಲ್ಲಿಯೇ ಶಾರ್ಟ್‌ಫಿಲ್ಮ್ ಸ್ಪರ್ಧೆ ಆಯೋಜಿಸಿದೆ. ಹೊಸಬರಿಂದ ಶಾರ್ಟ್‌ಫಿಲ್ಮ್ ಕಳುಹಿಸಲು ಕೇಳಿಕೊಂಡಿದೆ. ಅದರ ನಂತರ ಪ್ರಗುಣಿ ಓಟಿಟಿ ಪ್ರಸಾರ ಆರಂಭಿಸಲಿದೆ.
100 ಕೋಟಿಯ ಸಿನಿಮಾ, 15 ಕೋಟಿ ಸಿನಿಮಾಗೂ ಪ್ರೇಕ್ಷಕರು ಸೇಮ್..! OTT ಲಾಭ ಹೇಳಿದ ನಟ
ಸಿನಿಮಾ, ಧಾರಾವಾಹಿ ನಿರ್ಮಾಣ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಗುರುಪ್ರಸಾದ್ ಮುದ್ರಾಡಿ, ನಿರ್ಮಾಪಕ ನಿತ್ಯಾನಂದ ಭಟ್, ಪ್ರಸನ್ನ ಮಧ್ಯಸ್ಥ ಮತ್ತು ಸಾತ್ವಿಕ್ ಚಕ್ರವರ್ತಿ ಎಂಬ ನಾಲ್ವರ ಕನಸು ಈ ಓಟಿಟಿ. ನಿರ್ದೇಶಕ ಟಿಎನ್ ಸೀತಾರಾಮ್, ಈಟಿವಿ ಬಿಸಿನೆಸ್ ಹೆಡ್ ಆಗಿದ್ದ ಪವನ್ ಕುಮಾರ್ ಮಾನ್ವಿ ಮಾರ್ಗದರ್ಶನದಲ್ಲಿ ಈ ಓಟಿಟಿ ಕೆಲಸ ಮಾಡಲಿದೆ.
ಓಟಿಟಿ ನಿಜಕ್ಕೂ ಚಿತ್ರರಂಗಕ್ಕೆ ನೆರವಾಗುತ್ತಾ?
ಶಾರ್ಟ್‌ಫಿಲ್ಮ್ ಸ್ಪರ್ಧೆ
ಶಾರ್ಟ್‌ಫಿಲ್ಮ್ 45 ನಿಮಿಷಗಳಿಗಿಂತ ಕಡಿಮೆ ಇರಬೇಕು. ಈಗಾಗಲೇ ಬೇರೆ ಸ್ಪರ್ಧೆಯಲ್ಲಿ ಭಾಗವಹಿಸಿದ ಶಾರ್ಟ್‌ಫಿಲ್ಮ್‌ಗಳನ್ನೂ ಕಳುಹಿಸಬಹುದು. 90 ದಿನಗಳ ಕಾಲಾವಕಾಶ ಇದೆ. ಈ ಸ್ಪರ್ಧೆಗೆ ನಿರ್ದೇಶಕ ಟಿಎನ್ ಸೀತಾರಾಮ್, ನಿರ್ದೇಶಕ ಪಿ. ಶೇಷಾದ್ರಿ, ಛಾಯಾಗ್ರಾಹಕ ಜಿಎಸ್ ಭಾಸ್ಕರ್, ಸಂಗೀತ ನಿರ್ದೇಶಕ ವಿ. ಮನೋಹರ್, ಕತೆಗಾರ ಜೋಗಿ, ಕತೆಗಾರ್ತಿ ಗೀತಾ ಬಿ ಯು ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಈ ಕುರಿತು ಪೂರ್ತಿ ವಿವರಗಳಿಗೆ ನೋಡಿ: www.praguni.com
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.