
ಪ್ರಸ್ತುತ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದೆ. ನಟ ಧೀರನ್ ರಾಮ್‌ಕುಮಾರ್ ಹಾಗೂ ಎಸ್ ಎ ಗೋವಿಂದರಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು.
ನಿತಿನ್ ಹಾಗೂ ನಾಗರಾಜ್ ಈ ಚಿತ್ರದ ನಿರ್ಮಾಪಕರು. ಫಣೀಶ್ ಭಾರದ್ವಾಜ್ ಈ ಚಿತ್ರದ ನಿರ್ದೇಶಕರು. ಶ್ರೀ ಈ ಚಿತ್ರದ ನಾಯಕ. ಉಳಿದಂತೆ ಬಾಲರಾಜ್, ಸುಶ್ಮಿತಾ ದಾಮೋದರ್, ಸುನೀತಾ, ಮೋಹನ್ ಜುನೇಜಾ, ಶೋಭರಾಜ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಪುನೀತ್, ಜೇಮ್ಸ್ ಚಿತ್ರತಂಡದಿಂದ ಸರ್ಕಾರಿ ಶಾಲೆಗೆ ನೆರವು..! ಇಲ್ನೋಡಿ ಫೋಟೋಸ್
ಆಡಿಸಿದಾತ ಚಿತ್ರವನ್ನು ನಿರ್ದೇಶನ ಮಾಡಿರುವ ಫಣೀಶ್ ಭಾರಧ್ವಾಜ್ ಅವರದ್ದು ಇದು ಎರಡನೇ ಸಿನಿಮಾ. ಕೊರೋನಾ ಲಾಕ್‌ಡೌನ್ ಮುನ್ನವೇ ಪ್ರಾರಂಭಗೊಂಡ ಈ ಚಿತ್ರವನ್ನು ಬೆಂಗಳೂರಿ ಹಾಗೂ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಒಂದು ಇಂಗ್ಲೀಷ್ ಹಾಡು ಸೇರಿದಂತೆ ಒಟ್ಟು ಐದು ಹಾಡುಗಳು ಇರಲಿದೆ.
ಲಾಕ್‌ಡೌನ್‌ಗೂ ಮೊದಲೇ ಆರಂಭವಾದ ಸಿನಿಮಾ. ಫಣೀಶ್ ನನ್ನ ಬಳಿ ಒಂದು ಸಾಲಿನ ಕತೆ ಕೇಳಿದ ಕೂಡಲೇ ನನಗೆ ಇಷ್ಟವಾಗಿ ಈ ಚಿತ್ರವನ್ನು ನಿರ್ಮಿಸಲು ಮುಂದಾದ್ವಿ. ಇದು ರೆಗ್ಯುಲರ್ ಹಾರರ್ ಸಿನಿಮಾ ಅಲ್ಲ. ವಿಶೇಷವಾದ ಕತೆಯನ್ನು ಈ ಚಿತ್ರದ ಮೂಲಕ ಹೇಳುತ್ತಿದ್ದೇವೆ. ಒಂದು ಒಳ್ಳೆಯ ಚಿತ್ರವನ್ನು ನಿರ್ಮಿಸಿರುವ ಖುಷಿ ನಮ್ಮದು. ನಿರ್ಮಾಣಕ್ಕೆ ನನ್ನ ಜತೆ ನಾಗರಾಜ್ ಸೇರಿಕೊಂಡಿದ್ದಾರೆ. ಸಿನಿಮಾ ಒಳ್ಳೆಯ ರೀತಿಯಲ್ಲಿ ಬಂದಿದೆ. - ನಿತಿನ್, ನಿರ್ಮಾಪಕ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.