ಮಂಡ್ಯ ಜನತೆ ಮನೆಗೆ ಬಂದ್ರೆ ಅವಿವಾ ರೂಮ್‌ಗೆ ಓಡೋಗ್ತಾಳೆ: ಪತ್ನಿ ಬಗ್ಗೆ ಅಭಿಷೇಕ್ ಅಂಬರೀಶ್

By Vaishnavi Chandrashekar  |  First Published Nov 15, 2023, 12:41 PM IST

ಅತ್ತೆ ಸೊಸೆ ಮನೆಯಲ್ಲಿ ಹೇಗಿರುತ್ತಾರೆ? ಅಭಿಷೇಕ್ ಅಂಬರೀಶ್ ತಮಾಷೆಯ ಮಾತುಗಳು ವೈರಲ್....


ಕನ್ನಡ ಚಿತ್ರರಂಗದ ಓನ್ ಆಂಡ್ ಓನ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಅವರ ಮುದ್ದಿನ ಪುತ್ರ ಅಭಿಷೇಕ್ ತಮ್ಮ ಮುಂದಿನ ಬಹು ನಿರೀಕ್ಷಿತ ಸಿನಿಮಾ ಬ್ಯಾಡ್‌ಮ್ಯಾನರ್ಸ್‌ ಪ್ರಮೋಷನ್‌ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅತ್ತೆ ಸೊಸೆ ಹೇಗಿರುತ್ತಾರೆಂದು ಹಂಚಿಕೊಂಡಿದ್ದಾರೆ. 

'ಅವಿವಾಗೆ ಪ್ರತಿಯೊಂದು ಹಬ್ಬನೂ ಹೊಸ ಅನುಭವ ಕೊಡುತ್ತದೆ. ಇದರ ಬಗ್ಗೆ ತಿಳಿದುಕೊಂಡಿದ್ದರು ಅಷ್ಟೆ ಈಗ ಕಲಿಯುತ್ತಿದ್ದಾರೆ. ಅತ್ತೆ ಸೊಸೆ ಸಖತ್ ಕ್ಲೋಸ್ ಆಗಿಬಿಟ್ಟಿದ್ದಾರೆ ಅದೇ ನನಗೆ ಸಮಸ್ಯೆ ಅಗಿರುವುದು. ಹಲವು ಕಡೆ ಅತ್ತೆ ಸೊಸೆ ನಡುವೆ ಆಗುವ ಸಮಸ್ಯೆ ಇಡೀ ಮನೆಗೆ ದೊಡ್ಡ ಸಮಸ್ಯೆ ಆಗಿ ಬಿಡುತ್ತದೆ ಆದರೆ ನಮ್ಮ ಮನೆಯಲ್ಲಿ ಉಲ್ಟಾ ಆಗಿದೆ. ತುಂಬಾ ಚೆನ್ನಾಗಿ ತುಂಬಾ ಕ್ಲೊಸ್ ಆಗಿ ಬಿಟ್ಟಿದ್ದಾರೆ ಅದಿಕ್ಕೆ ನನಗೆ ಪ್ರಾಬ್ಲಂ ಆಗುತ್ತಿದೆ. ಯಾಕೆ ಪ್ರಾಬ್ಲಂ ಆಗುತ್ತಿದೆ ಅಂದ್ರೆ ಒಬ್ರು ಮೇಲೆ ನಾನು ಕೂಗಾಡಿದರೆ ಇಬ್ಬರು ಒಂದು ಟೀಂ ಆಗಿ ನನ್ನ ಮೇಲೆ ಅಟ್ಯಾಕ್ ಮಾಡುತ್ತಾರೆ. ನನ್ನ ಪತ್ನಿ ನನ್ನ ಮೇಲೆ ದೂರ ಹೇಳಬೇಕು ಅಂದ್ರೆ ಮೊದಲು ನನ್ನ ತಾಯಿ  ಬಳಿ ಹೋಗುತ್ತಾರೆ ...ನಾನು ಏನೋ ಮಾಡುತ್ತಿಲ್ಲ ಸರಿಯಾಗಿಲ್ಲ ಅಂದ್ರೆ ನನ್ನ ತಾಯಿ ಹೋಗಿ ಸೊಸೆಗೆ ಹೇಳುತ್ತಾರೆ. ಇಬ್ರು ಸೇರ್ಕೊಂಡ್ರೆ ಕಷ್ಟ ನನಗೆ...ಟಾಪ್ ಫ್ಲೋರ್‌ನಲ್ಲಿದ್ರೆ ಒಬ್ರು ಕಾಟ ಗ್ರೌಂಡ್‌ ಫ್ಲೋರ್‌ನಲ್ಲಿದ್ರೆ ಒಬ್ರು ಕಾಟ. ಡಬಲ್ ಆಂಗಲ್‌ನಲ್ಲಿ ಒಬ್ರು ಶೂಟ್ ಮಾಡುತ್ತಿದ್ದಾರೆ ನನ್ನನ್ನು' ಎಂದು ಅಭಿಷೇಕ್ ಮಾತನಾಡಿದ್ದಾರೆ.

Tap to resize

Latest Videos

ಮದುವೆ ದಿನ ಡ್ರಗ್ಸ್‌ ಮಾಡ್ಕೊಂಡು ಬಂದಿದ್ದ ವರ್ತೂರ್ ಸಂತೋಷ್, ಎರಡೇ ದಿನಕ್ಕೆ ಡಿವೋರ್ಸ್ ಅಂತಾರೆ; ಮಾವ ಕಣ್ಣೀರು

'ತಮಾಷೆ ಮಾಡುತ್ತಿರುವೆ. ನಾನು ಪುಣ್ಯ ಮಾಡಿದ್ದೆ ಅಮ್ಮ ಮಗಳ ರೀತಿ ಇದ್ದಾರೆ ಇಬ್ರು ಆದರೆ ಹುಡುಗರಿಗೆ ಆಗುವ ಸಮಸ್ಯೆ ಹೇಳಿಕೊಳ್ಳುತ್ತಿರುವೆ. ಮದುವೆ ಆದ್ಮೇಲೆ ಗಂಡಸರಿಗೆ ಒಂದಿಷ್ಟು ಜವಾಬ್ದಾರಿಗಳು ಬರುತ್ತೆ ಹಾಗೆ ಹೆಣ್ಣು ಮಕ್ಕಳಿಗೂ ಬರುತ್ತೆ. ಮಂಡ್ಯ ಜನರು ಮನೆಗೆ ಬಂದಾಗ ಅವಿವಾ ಜಾಸ್ತಿ ಹೊರಗಡೆ ಬರಲ್ಲ ಏಕೆಂದರೆ ಸ್ವಲ್ಪ ನಾಚಿಕೆ ಆಕೆಗೆ. ಮೊದಲ ಸಲ ಬೀಗರ ಊಟಕ್ಕೆಂದು ಮಂಡ್ಯಗೆ ಹೋದಾಗ ಆಕೆಗೆ ತುಂಬಾ ಖುಷಿ ಆಯ್ತು. ಅಂಬರೀಶ್ ಅವರ ಸೊಸೆ ಅಂತ ಪ್ರೀತಿ ಕೊಡ್ತಾರೆ ಅಲ್ವಾ ಅದು ಆಕೆಗೆ ತುಂಬಾ ಇಂಪ್ಯಾಕ್ಟ್ ಮಾಡಿದೆ' ಎಂದು ಅಭಿಷೇಕ್ ಹೇಳಿದ್ದಾರೆ. 

 

click me!