72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಕನ್ನಡದ 'ಮಿಥ್ಯ' ಚಿತ್ರವು ಅತ್ಯುತ್ತಮ ಕನ್ನಡ ಸಿನಿಮಾ ಸೇರಿದಂತೆ ಮೂರು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಇದರೊಂದಿಗೆ, ಮಮ್ಮುಟ್ಟಿ, ಯಾಮಿ ಗೌತಮ್, ಕಾರ್ತಿಕ್ ಆರ್ಯನ್ ಅತ್ಯುತ್ತಮ ನಟ-ನಟಿ ಎನಿಸಿದ್ದಾರೆ.
ಬೆಂಗಳೂರು (ಜು.18): 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಭಾರತೀಯ ಚಿತ್ರರಂಗದ ಅತ್ಯುತ್ತಮ ಸಾಧನೆಗಳನ್ನು ಗುರುತಿಸಿ ಗೌರವಿಸಲಾಗಿದೆ. ಕನ್ನಡದಲ್ಲಿ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಪರಂವಾ ಸ್ಟುಡಿಯೋಸ್ ನಿರ್ಮಾಣದ, ಸುಮಂತ್ ಭಟ್ ನಿರ್ದೇಶನದ ಮಿಥ್ಯ ಚಿತ್ರಕ್ಕೆ ಮೂರು ರಾಷ್ಟ್ರಪ್ರಶಸ್ತಿ ಸಂದಿದೆ. ಅತ್ಯುತ್ತಮ ಕನ್ನಡ ಸಿನಿಮಾ, ಅತ್ಯುತ್ತಮ ಬಾಲ ನಟ ಹಾಗೂ ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ ವಿಭಾಗದಲ್ಲಿ ಪ್ರಶಸ್ತಿ ಸಂದಿದೆ. ಅತ್ಯುತ್ತಮ ಬಾಲ ನಟ ವಿಭಾಗದಲ್ಲಿ ಆತೀಶ್ ಶೆಟ್ಟಿ ಹಾಗೂ ಅತ್ಯುತ್ತಮ ನಟಿ (ಪೋಷಕ ಪಾತ್ರ) ವಿಭಾಗದಲ್ಲಿ ರೂಪಶ್ರಿ ವರ್ಕಾಡಿ ಪ್ರಶಸ್ತಿ ಜಯಿಸಿದ್ದಾರೆ.
ಇನ್ನು ಒಟ್ಟಾರೆಯಾಗಿ ಅತ್ಯುತ್ತಮ ನಟ/ನಟಿ ವಿಭಾಗದ ಪ್ರಮುಖ ಪ್ರಶಸ್ತಿಗಳನ್ನು ಮಮ್ಮುಟ್ಟಿ, ಯಾಮಿ ಗೌತಮ್ ಮತ್ತು ಕಾರ್ತಿಕ್ ಆರ್ಯನ್ ಮುಡಿಗೇರಿಸಿಕೊಂಡಿದ್ದರೆ, ಧನುಷ್ ಅವರು ಕ್ರಮವಾಗಿ ಕ್ಯಾಪ್ಟನ್ ಮಿಲ್ಲರ್ ಮತ್ತು ರಾಯನ್ ಚಿತ್ರಗಳಿಗಾಗಿ ಎರಡು ಗೌರವಗಳನ್ನು ಪಡೆದಿದ್ದಾರೆ. ಕಲ್ಕಿ 2898 ಎಡಿ ಚಿತ್ರವು ಅತ್ಯಂತ ಜನಪ್ರಿಯ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ಗೆದ್ದರೆ, ಸ್ವಾತಂತ್ರ್ಯ ವೀರ್ ಸಾವರ್ಕರ್ ಚಿತ್ರಕ್ಕಾಗಿ ರಣದೀಪ್ ಹೂಡಾ ಅವರಿಗೆ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ ಒಲಿದಿದೆ.
ವಿಜೇತರನ್ನು ಆಯ್ಕೆ ಮಾಡಲು ಬರೋಬ್ಬರಿ 400 ಚಲನಚಿತ್ರಗಳನ್ನು ವೀಕ್ಷಿಸಲಾಗಿತ್ತು. ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಓಂ ರಾವತ್, ಅಸೀಮ್ ಬಜಾಜ್, ಪ್ರಿಯಾ ಕೆ, ರಾಕೇಶ್ ರಂಜನ್, ಮೀರಾ ಚೋಪ್ರಾ, ನೆಪೋಲಿಯನ್, ಶ್ರೀಲೇಖಾ ಮುಖರ್ಜಿ, ಅರ್ಚನಾ ಉಡುಪ ಮತ್ತು ವಿ.ಜಿ. ಕಲಾ ಇದ್ದರು. ಅಭಿನಯ, ನಿರ್ದೇಶನ, ಸಂಗೀತ, ಚಿತ್ರಕಥೆ ಹಾಗೂ ತಾಂತ್ರಿಕ ಶ್ರೇಷ್ಠತೆ ಸೇರಿದಂತೆ ವಿವಿಧ ವಿಭಾಗಗಳ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ.
ಪ್ರಕಟಿಸಲಾಗಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರ ಸಂಪೂರ್ಣ ಪಟ್ಟಿ
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ: ಸುಚನಾ ನಮಿದಾಸ್ (ಮಹಾರಾಜ)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ: ಸಂಜಯ್ ಮಿಶ್ರಾ (ಭಕ್ಷಕ್)
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ: ಯಾಮಿ ಗೌತಮ್ (ಆರ್ಟಿಕಲ್ 370)
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ: ಕಾರ್ತಿಕ್ ಆರ್ಯನ್ (ಚಂದು ಚಾಂಪಿಯನ್), ಮಮ್ಮುಟ್ಟಿ (ಬ್ರಹ್ಮಯುಗಂ)
ಅತ್ಯುತ್ತಮ ನಿರ್ದೇಶಕ: ರಾಜ್‌ಕುಮಾರ್ ಪೆರಿಸಾಮಿ (ಅಮರನ್)
ಅತ್ಯುತ್ತಮ ಜನಪ್ರಿಯ ಚಿತ್ರ: ಕಲ್ಕಿ 2898 AD
ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರ: ಸ್ವಾತಂತ್ರ್ಯ ವೀರ್ ಸಾವರ್ಕರ್ (ನಿರ್ದೇಶಕ: ರಣದೀಪ್ ಹೂಡಾ)
ಅತ್ಯುತ್ತಮ ಚಲನಚಿತ್ರ: ಆರ್ಟಿಕಲ್ 370
ಅತ್ಯುತ್ತಮ ಕಿರುಚಿತ್ರ: ಹಮ್ಸಫರ್ (ಮರಾಠಿ)
ಅತ್ಯುತ್ತಮ ಅನಿಮೇಷನ್ ಚಿತ್ರ: ಟಚ್ಡ್ ಆಸ್ ವಾಟರ್ (ಸೈಲೆಂಟ್)
ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ನಾನ್ ಫಿಕ್ಷನ್ ಚಿತ್ರ: ಪಿಪ್ಲಾಂಟ್ರಿ: ಎ ಟೇಲ್ ಆಫ್ ಇಕೋ ಫೆಮಿನಿಸಂ
ಅತ್ಯುತ್ತಮ ಸಾಕ್ಷ್ಯಚಿತ್ರ: ರಾಮ್-ನಾಮಿ
ಅತ್ಯುತ್ತಮ ಕಲೆ/ಸಂಸ್ಕೃತಿ ಚಲನಚಿತ್ರ: ಮೈನ್ ನಿದಾ
ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರ: ಅಂಜೆನ್ (ಅದೃಶ್ಯ)
ಅತ್ಯುತ್ತಮ ನಾನ್-ಫೀಚರ್ ಚಲನಚಿತ್ರ: ಭಂಗಾರ್ (ಮರಾಠಿ ಮತ್ತು ಇಂಗ್ಲಿಷ್)
ವಿಶೇಷ ಉಲ್ಲೇಖ
ಮೀಯಳಗನ್-ತಮಿಳು(ಫಿಲ್ಮ್ ಸೌಂಡ್ ಮಿಕ್ಸ್ ಇಂಜಿನಿಯರ್: ಸುರೇನ್ ಜಿ)
ವಿಶೇಷ ಉಲ್ಲೇಖ
ಕ್ಯಾಪ್ಟನ್ ಮಿಲ್ಲರ್-ತಮಿಳು, ನಟ: ಧನುಷ್
ಅತ್ಯುತ್ತಮ ತುಳು ಚಿತ್ರ: ಇಂಬು (ನಿರ್ಮಾಪಕ: ಪಿಚ್ಚರ್ ಸ್ಟುಡಿಯೋ, ನಿರ್ದೇಶಕ: ಶಿವಧ್ವಜ್ ಶೆಟ್ಟಿ)
ಅತ್ಯುತ್ತಮ ಗರ್ವಾಲಿ ಚಿತ್ರ: ಧೋಲಿ (ನಿರ್ಮಾಪಕ: SC ಫಾರ್ಮಾಸೆಮ್ PVT LTD, ನಿರ್ದೇಶಕ: ದಿನೇಶ್ ಪಿ ಭೋಂಸ್ಲೆ)
ಅತ್ಯುತ್ತಮ ತೆಲುಗು ಚಿತ್ರ: ಸಮಿತಿ ಕುರೋಲ್ಲು (ನಿರ್ಮಾಪಕ: ಪಿಂಕ್ ಎಲಿಫೆಂಟ್ ಪಿಕ್ಚರ್ಸ್, ಶ್ರೀ ರಾಧಾ ದಾಮೋದರ ಸ್ಟುಡಿಯೋಸ್, ನಿರ್ದೇಶಕ: ಯಧು ವಂಶಿ)
ಅತ್ಯುತ್ತಮ ತಮಿಳು ಚಿತ್ರ: ರಾಯನ್ (ನಿರ್ಮಾಪಕ: ಸನ್ ಟಿವಿ ನೆಟ್‌ವರ್ಕ್ ಲಿಮಿಟೆಡ್, ನಿರ್ದೇಶಕ: ಧನುಷ್)
ಅತ್ಯುತ್ತಮ ಒಡಿಯಾ ಚಿತ್ರ: ಲಹರಿ-ಟೈಡ್ ಆಫ್ ಟೈಮ್ಸ್ (ನಿರ್ಮಾಪಕ: ಜಿಲಿಕ್ ಮೋಷನ್ ಪಿಕ್ಚರ್ಸ್, ನಿರ್ದೇಶಕ: ಅಮರ್ತ್ಯ ಭಟ್ಟಾಚಾರ್ಯ)
ಅತ್ಯುತ್ತಮ ಮರಾಠಿ ಚಿತ್ರ: ಮುಕ್ಕಂ ಪೋಸ್ಟ್ ಬೊಂಬಿಲವಾಡಿ (ನಿರ್ಮಾಪಕ: ವಿವೇಕ್ ಫಿಲ್ಮ್ಸ್, ನಿರ್ದೇಶಕ: ಪರೇಶ್ ಮೊಕಾಶಿ)
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.