
ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡ ಸಿನಿಮಾಗಳು OTT ಫ್ಲಾಟ್ ಪಾರ್ಮ್‌ನಲ್ಲಿ ಫೇಲ್ ಆಗೋದು ತುಂಬಾ ಕಡಿಮೆ. ಅದಕ್ಕೆ ತಾಜಾ ಉದಾಹರಣೆ ಅಂದರೆ ಕೆಜಿಎಫ್ 2, ಕಾಂತಾರ, ಕಾಂತಾರ ಚಾಪ್ಟರ್ 1, ಕಾಟೇರ, ಸು ಫ್ರಮ್ ಸೋ ಮೊದಲಾದ ಸಿನಿಮಾಗಳು. ಹೀಗಿದ್ದೂ ಕೆಲವು ಕನ್ನಡ ಸಿನಿಮಾಗಳು ಭಾರೀ ನಿರೀಕ್ಷೆಗಳನ್ನ ಹುಟ್ಟುಹಾಕಿ ಓಟಿಟಿಯಲ್ಲಿ ವೀಕ್ಷಕರ ಗಮನ ಸೆಳೆಯುವಲ್ಲಿ ವಿಫಲವಾದವು. ಅವುಗಳ ವಿವರ ಇಲ್ಲಿದೆ.
ಯಶ್ ಅಭಿನಯದ ಈ ಚಿತ್ರ ಬಿಡುಗಡೆಗೂ ಮುನ್ನ ಭಾರೀ ಸೌಂಡ್ ಮಾಡಿತ್ತು. ಅಂತೆಯೇ ಬಿಡುಗಡೆಯ ಮೊದಲ ದಿನವೇ ಕನ್ನಡದಲ್ಲಿ ದಾಖಲೆಯ ಓಪನಿಂಗ್ ಪಡೆಯಿತು. ಜೊತೆಗೆ ವಿಶ್ವಾದ್ಯಂತ ₹150 ಕೋಟಿ ಗಳಿಸಿತ್ತು. ಇದರೊಂದಿಗೆ ₹340 ಕೋಟಿಗಳಿಸುವಲ್ಲಿ ಯಶಸ್ವಿ ಆಯಿತು. ಆದರೆ ಕಥೆ ಮತ್ತು ನಿರೂಪಣೆಯ ಬಗ್ಗೆ ಕೇಳಿಬಂದ ನೆಗೆಟಿವ್ ವಿಮರ್ಶೆಗಳಿಂದಾಗಿ ಇದರ ಓಟಿಟಿ ಹಕ್ಕುಗಳ ಮೌಲ್ಯ ಕುಸಿಯಿತು. ಜೊತೆಗೆ ಡಿಜಿಟಲ್ ವೇದಿಕೆಯಲ್ಲೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಯಿತು. ಬಿಡುಗಡೆಗೂ ಮುನ್ನ ಸುಮಾರು ₹150-200 ಕೋಟಿ ಬೇಡಿಕೆಯಲ್ಲಿದ್ದ ಓಟಿಟಿ ಹಕ್ಕುಗಳ ಮೌಲ್ಯ, ಚಿತ್ರಕ್ಕೆ ಸಿಕ್ಕ ನೆಗೆಟಿವ್ ಪ್ರತಿಕ್ರಿಯೆಯಿಂದಾಗಿ ತೀವ್ರವಾಗಿ ಕುಸಿಯಿತು.
ದರ್ಶನ್ ನಟನೆಯ ಈ ಸಿನಿಮಾ ಇದಾಗಿದೆ. ಅಭಿಮಾನಿಗಳ ಅಬ್ಬರದಿಂದಾಗಿ ಬಾಕ್ಸ್ ಆಫೀಸ್‌ನಲ್ಲಿ ಆರಂಭದ ದಿನದಲ್ಲಿ ಭರ್ಜರಿ ಕಲೆಕ್ಷನ್ ಮಾಡಿತು. ಸಿನಿಮಾ ₹100 ಕೋಟಿ ಕ್ಲಬ್ ಸೇರಿದೆ ಎಂದು ಚಿತ್ರತಂಡ ಘೋಷಣೆ ಮಾಡಿದೆ. ನಂತರ Amazon Prime Video ನಲ್ಲಿ ಬಿಡುಗಡೆ ಆಯಿತು. ಪ್ರೇಕ್ಷಕರಿಂದ ಚಿತ್ರದ ಮೇಕಿಂಗ್ ಬಗ್ಗೆ ನೆಗೆಟಿವ್ ಕಾಮೆಂಟ್ ಬಂದಿದ್ದರಿಂದ ಒಟಿಟಿಯಲ್ಲಿ ಯಶಸ್ಸು ಕಾಣಲಿಲ್ಲ.
ಧ್ರುವ ಸರ್ಜಾ ಅಭಿನಯದ ಈ ಪ್ಯಾನ್-ಇಂಡಿಯಾ ಸಿನಿಮಾ ಭಾರೀ ಹೈಪ್ ಪಡೆದುಕೊಂಡಿತ್ತು. ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ₹6 ಕೋಟಿಗೂ ಅಧಿಕ ಗಳಿಸಿ ಉತ್ತಮ ಓಪನಿಂಗ್ ಪಡೆಯಿತು. ಥಿಯೇಟರ್‌ನಲ್ಲಿಯೇ ತೀವ್ರ ಟ್ರೋಲ್‌ಗೆ ಒಳಗಾದ ಈ ಚಿತ್ರದ ಓಟಿಟಿ ಹಕ್ಕುಗಳನ್ನು ಖರೀದಿಸಲು ಪ್ರಮುಖ ವೇದಿಕೆಗಳು ಹಿಂದೇಟು ಹಾಕಿದವು. ತಡವಾಗಿ ಓಟಿಟಿಗೆ ಬಂದರೂ ಡಿಜಿಟಲ್ ವೀಕ್ಷಕರಿಂದ ತಿರಸ್ಕರಿಸಲ್ಪಟ್ಟಿತು.
ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಕಮರ್ಷಿಯಲ್ ಸಿನಿಮಾ. ಭಾವನಾತ್ಮಕ ಕಾರಣದಿಂದ ಥಿಯೇಟರ್‌ನಲ್ಲಿ ದಾಖಲೆಯ ₹150 ಕೋಟಿಗೂ ಅಧಿಕ ಗಳಿಸಿ ಬ್ಲಾಕ್‌ಬಸ್ಟರ್ ಆಯಿತು. SonyLIVನಲ್ಲಿ ಬಿಡುಗಡೆಯಾದ ನಂತರ ಪರಭಾಷಾ ಪ್ರೇಕ್ಷಕರು ಮತ್ತು ಸಾಮಾನ್ಯ ವೀಕ್ಷಕರಿಂದ ಚಿತ್ರದ ನಿರೂಪಣೆ ಮತ್ತು ತಾಂತ್ರಿಕ ಅಂಶಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿ ಥಿಯೇಟರ್‌ನಲ್ಲಿದ್ದ ಕ್ರೇಜ್ ಓಟಿಟಿಯಲ್ಲಿ ಮುಂದುವರಿಯಲಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.