ಲವ್ ಮಾಕ್ಟೈಲ್ ಸೇರಿ ಮರು ಬಿಡುಗಡೆಗೆ ತಯಾರಾಗಿವೆ ಮೂರು ಚಿತ್ರಗಳು

Kannadaprabha News   | Asianet News
Published : Oct 09, 2020, 09:28 AM ISTUpdated : Oct 09, 2020, 10:15 AM IST
ಲವ್ ಮಾಕ್ಟೈಲ್ ಸೇರಿ ಮರು ಬಿಡುಗಡೆಗೆ ತಯಾರಾಗಿವೆ ಮೂರು ಚಿತ್ರಗಳು

ಸಾರಾಂಶ

ಅ. 15ರಿಂದ ಥಿಯೇಟರ್‌ ತೆರೆಯಲು ಅನುಮತಿ ಸಿಕ್ಕಿದ್ದೇ, ಈಗಾಗಲೇ ಸೆಟ್ಟೇರಿರುವ ಸಿನಿಮಾಗಳು ತರಾತುರಿಯಲ್ಲಿ ಶೂಟಿಂಗ್‌ ಪೂರ್ಣಗೊಳಿಸಲು ಮುಂದಾಗಿವೆ. ಹೊಸ ಚಿತ್ರಗಳೂ ಸೆಟ್ಟೇರುವ ಹುರುಪಿನಲ್ಲಿವೆ. ಇನ್ನೊಂದು ಬೆಳವಣಿಗೆ ಎಂದರೆ ಲಾಕ್‌ಡೌನ್‌ಗೂ ಮೊದಲು ಪ್ರದರ್ಶನ ಕಾಣುತ್ತಿದ್ದ ‘ಲವ್‌ ಮಾಕ್ಟೈಲ್‌’, ‘ಶಿವಾರ್ಜುನ’, ‘ಜಂಟಲ್‌ಮ್ಯಾನ್‌’ ಚಿತ್ರಗಳು ಮತ್ತೆ ತೆರೆಯ ಮೇಲೆ ಬರಲು ಸಿದ್ಧವಾಗಿವೆ. ತನ್ಮೂಲಕ ಚಿತ್ರರಂಗ ಮತ್ತೆ ಹಳಿ ಏರಿದೆ. ಚಿತ್ರಗಳು ಹೊಸ ಪ್ರಯೋಗಕ್ಕೆ ಸಜ್ಜಾಗುತ್ತಿವೆ.

ಜನರನ್ನು ಚಿತ್ರಮಂದಿರಕ್ಕೆ ಕರೆತರುವ ಪ್ರಯತ್ನ : ಜಾಕ್‌ ಮಂಜು

ಲವ್‌ ಮಾಕ್ಟೈಲ್‌ ಬಿಡುಗಡೆ ಹಿಂದೆ ನಿರ್ಮಾಪಕ, ವಿತರಕ ಜಾಕ್‌ ಮಂಜು ಅವರ ಶ್ರಮ ಮತ್ತು ಒಳ್ಳೆಯ ಉದ್ದೇಶ ಇದೆ. ‘ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳ ಮಲ್ಟಿಪ್ಲೆಕ್ಸ್‌ ಹಾಗೂ 40ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಲವ್‌ ಮಾಕ್ಟೈಲ್‌ ಬಿಡುಗಡೆಯಾಗುತ್ತಿದೆ. ಇದನ್ನು ನಾನು ವ್ಯಾಪಾರಕ್ಕಾಗಿ ಮಾಡುತ್ತಿಲ್ಲ, ಜನ ಚಿತ್ರಮಂದಿರಕ್ಕೆ ಬರಬೇಕು ಎನ್ನುವುದಷ್ಟೇ ನನ್ನ ಉದ್ದೇಶ. ಇದರಿಂದ ಚಿತ್ರರಂಗವನ್ನೇ ನಂಬಿಕೊಂಡಿರುವ ಸಾಕಷ್ಟುಮಂದಿಗೆ ಅನುಕೂಲ ಆಗುತ್ತದೆ. ಸೆಕೆಂಡ್‌ ಕ್ಲಾಸ್‌ಗೆ 40 ರು., ಬಾಲ್ಕನಿಗೆ 50 ರು. ದರ ಫಿಕ್ಸ್‌ ಮಾಡಿ ಪ್ರೇಕ್ಷಕರಿಗೂ ಅನುಕೂಲ ಮಾಡಿಕೊಡುತ್ತಿದ್ದೇವೆ. ಈಗ ಹಳೆಯ ಚಿತ್ರಗಳೇ ಮರು ಬಿಡುಗಡೆಯಾದರೆ ಮುಂದೆ ಹೊಸ ಚಿತ್ರಗಳಿಗೆ ಹಾದಿ ಸುಗಮವಾಗುತ್ತದೆ ಎನ್ನುವ ನಂಬಿಕೆಯಿಂದ ಈ ಪ್ರಯತ್ನ ಮಾಡುತ್ತಿದ್ದೇನೆ. ಇದನ್ನು ಚಿತ್ರರಂಗದ ಹಲವು ಮಂದಿಯಿಂದ ಬೆಂಬಲ ಸಿಕ್ಕುತ್ತಿದೆ’ ಎನ್ನುತ್ತಾರೆ ಜಾಕ್‌ ಮಂಜು.

ರಾಜ್ಯದ 600 ಥಿಯೇಟರ್‌ಗಳಿಗೆ ಸಿನಿಮಾ ಕೊಡೋರು ಯಾರು? 

ಶಿವಾರ್ಜುನ

ದಿ. ಚಿರಂಜೀವಿ ಸರ್ಜಾ ಅವರು ಅಭಿನಯಿಸಿದ್ದ ಚಿತ್ರ ‘ಶಿವಾರ್ಜುನ’ ಲಾಕ್‌ಡೌನ್‌ಗೂ ಮೊದಲು ತೆರೆಯ ಮೇಲಿತ್ತು. ಶಿವತೇಜಸ್‌ ನಿರ್ದೇಶನದ ಚಿತ್ರ ಇದೀಗ ಮತ್ತೆ ಅ. 16ರಂದು ಬಿಡುಗಡೆ ಕಾಣುತ್ತಿದೆ. ಚಿರಂಜೀವಿ ಸರ್ಜಾ ಅಭಿಮಾನಿಗಳು, ಚಿತ್ರ ಪ್ರಿಯರು ಮತ್ತೆ ಬಂದು ಸಿನಿಮಾ ನೋಡುತ್ತಾರೆ ಎನ್ನುವ ನಂಬಿಕೆ ಚಿತ್ರತಂಡದ್ದು.

ನಿವೃತ್ತ ಕ್ಯಾಪ್ಟನ್‌ ಪಾತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್‌ 

ಜಂಟಲ್‌ಮ್ಯಾನ್‌

ಜಡೇಶ್‌ ಕುಮಾರ್‌ ಹಂಪಿ ನಿರ್ದೇಶನದ, ಪ್ರಜ್ವಲ್‌ ದೇವರಾಜ್‌ ಅಭಿನಯದ ಚಿತ್ರ ಜಂಟಲ್‌ಮ್ಯಾನ್‌ ಲಾಕ್‌ಡೌನ್‌ ಪೂರ್ವದಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿತ್ತು. ಇದೀಗ ದಸರಾ ಹಬ್ಬದ ದಿನ ಮರು ಬಿಡುಗಡೆ ಕಾಣುತ್ತಿದೆ. ಅದೇ ದಿನ ದಿ. ಚಿರಂಜೀವಿ ಸರ್ಜಾ ಅಭಿನಯದ ಹೊಸ ಚಿತ್ರ ‘ರಣಂ’ ಕೂಡ ಬಿಡುಗಡೆಯಾಗುವುದಾಗಿ ನಿರ್ಮಾಪಕ ಕನಕಪುರ ಶ್ರೀನಿವಾಸ್‌ ಘೋಷಣೆ ಮಾಡಿದ್ದಾರೆ.

ಲಾಂಗ್ ಬ್ರೇಕ್‌ ನಂತರ ಮತ್ತೆ ಬಂದ ರಾಕಿ ಬಾಯ್; ಕೆಜಿಎಫ್‌ 2 ಹವಾ ಶುರು? 

ಅಲ್ಲಿಗೆ ಇದೇ ತಿಂಗಳಿನಲ್ಲಿ ಹಳೆಯ ಚಿತ್ರಗಳು ಮರು ಬಿಡುಗಡೆಯಾದರೆ, ಹೊಸ ಚಿತ್ರಗಳೂ ತೆರೆಗೆ ಬರಲಿವೆ. ಇದು ಹೀಗೆಯೇ ಮುಂದುವರಿದರೆ ವರ್ಷದ ಕಡೆಗೆ ಮತ್ತು ಮುಂದಿನ ವರ್ಷದ ಆರಂಭದಲ್ಲಿ ಸ್ಟಾರ್‌ ನಟರ ಸಿನಿಮಾಗಳು ಸೇರಿದಂತೆ, ಹಲವು ಚಿತ್ರಗಳು ಬಿಡುಗಡೆಯ ಭಾಗ್ಯ ಕಾಣಲಿವೆ.

"

ಲವ್‌ ಮಾಕ್ಟೈಲ್‌

ಮದರಂಗಿ ಕೃಷ್ಣ, ಮಿಲನ ನಾಗರಾಜ್‌, ಅಮೃತಾ ಅಯ್ಯಂಗಾರ್‌ ಅಭಿನಯಿಸಿದ್ದ ‘ಲವ್‌ ಮಾಕ್ಟೈಲ್‌’ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಓಟಿಟಿಯಲ್ಲಿಯೂ ಬಿಡುಗಡೆಯಾಗಿತ್ತು. ಇದೀಗ ಅ. 16ರಂದು ಮರು ಬಿಡುಗಡೆಯಾಗುವ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರದ ಕಡೆಗೆ ಕರೆದು ತರುವ ಪ್ರಯತ್ನಕ್ಕೆ ಕೈ ಹಾಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?