ಅರ್ಷದೀಪ್ ಸಿಂಗ್-ಸಮ್ರೀನ್ ಕೌರ್ ಪೋಸ್ಟ್‌ನಲ್ಲಿ ಚಾಹಲ್ ತಂಟೆಗೆ ಹೋದ ನೆಟ್ಟಿಗ: ಖಡಕ್ ಪಂಚ್ ಕೊಟ್ಟ ಸ್ಪಿನ್ನರ್‌

Published : Sep 19, 2026, 07:06 PM IST
Yuzvendra Chahal

ಸಾರಾಂಶ

ಅರ್ಷದೀಪ್ ಸಿಂಗ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಮ್ಮ ವೈಯಕ್ತಿಕ ಜೀವನವನ್ನು ಟ್ರೋಲ್ ಮಾಡಿದ ನೆಟ್ಟಿಗನಿಗೆ ಯಜುವೇಂದ್ರ ಚಾಹಲ್ ತಕ್ಕ ತಿರುಗೇಟು ನೀಡಿದ್ದಾರೆ. 'ಅದು ನಿನಗೆ ನಿಜವಾಗಿಯೂ ಜೋಕ್ ಅನಿಸ್ತಾ ಬ್ರೋ?' ಎಂದು ಮರುಪ್ರಶ್ನಿಸುವ ಮೂಲಕ ಟ್ರೋಲರ್ ಬಾಯಿ ಮುಚ್ಚಿಸಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್‌ ಲೆಗ್‌ ಸ್ಪಿನ್ನರ್ ಯಜುವೇಂದ್ರ ಚಾಹಲ್ (Yuzvendra Chahal), ಮೈದಾನದಲ್ಲಿ ತಮ್ಮ ಚಾಣಾಕ್ಷ ಬೌಲಿಂಗ್ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ತಮಾಷೆಯ ಕಮೆಂಟ್‌ಗಳು ಹಾಗೂ ಸದಾ ತಮಾಷೆಯ ವ್ಯಕ್ತಿತ್ವದಿಂದಲೇ ಅಭಿಮಾನಿಗಳ ನೆಚ್ಚಿನ ಆಟಗಾರನಾಗಿದ್ದಾರೆ. ಆದರೆ, ಕಳೆದ ಕೆಲವು ಸಮಯದಿಂದ ತಮ್ಮ ಖಾಸಗಿ ಹಾಗೂ ವೈಯಕ್ತಿಕ ಜೀವನದ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಅನಗತ್ಯವಾಗಿ ಟ್ರೋಲ್ ಆಗುತ್ತಿರುವ ಚಾಹಲ್, ಇದೀಗ ತಮ್ಮ ತಂಟೆಗೆ ಬಂದ ನೆಟ್ಟಿಗನೊಬ್ಬನಿಗೆ ಮುಟ್ಟಿನೋಡಿಕೊಳ್ಳುವಂಥ ತಿರುಗೇಟು ನೀಡಿದ್ದಾರೆ.

ಸಹ-ಆಟಗಾರ ಅರ್ಷದೀಪ್ ಸಿಂಗ್ (Arshdeep Singh) ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಮ್ಮ ಹಳೆಯ ಜೀವನವನ್ನು ನೆನಪಿಸಿ ಟ್ರೋಲ್ ಮಾಡಲು ಯತ್ನಿಸಿದ ಅಭಿಮಾನಿಗೆ ಚಾಹಲ್ ನೀಡಿರುವ ಸಖತ್‌ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಘಟನೆಯ ಹಿನ್ನೆಲೆ ಏನು?

ಟೀಮ್ ಇಂಡಿಯಾದ ವೇಗಿ ಅರ್ಷದೀಪ್ ಸಿಂಗ್ ಅವರ ಗೆಳತಿ ಸಮ್ರೀನ್ ಕೌರ್ (Samreen Kaur) ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಸುಂದರ ಫೋಟೋ ಒಂದನ್ನು ಹಂಚಿಕೊಂಡಿದ್ದರು. ಈ ಪೋಸ್ಟ್‌ಗೆ ಅರ್ಷದೀಪ್ ಸಿಂಗ್ "ಮೈ ಪ್ರೆಟಿ ಲಿಲ್ ಬೇಬಿ" (My pretty lil baby) ಎಂದು ಪ್ರೀತಿಯಿಂದ ಕಮೆಂಟ್ ಮಾಡಿದ್ದರು.

ಅರ್ಷದೀಪ್ ಅವರ ಈ ರೋಮ್ಯಾಂಟಿಕ್ ಕಮೆಂಟ್ ಕೆಳಗೆ ಬರೆದ ಭಾರತೀಯ ಅಭಿಮಾನಿಯೊಬ್ಬ, ಅನಗತ್ಯವಾಗಿ ಯಜುವೇಂದ್ರ ಚಾಹಲ್ ಅವರ ಹೆಸರನ್ನು ಎಳೆದು ತಂದಿದ್ದ. "ಚಾಹಲ್ ಕೂಡ ಒಮ್ಮೆ ಹೀಗೆಯೇ ಸಂತೋಷವಾಗಿದ್ದೆ ಅಲ್ವಾ?" ಎಂದು ಕಮೆಂಟ್ ಮಾಡುವ ಮೂಲಕ ಚಾಹಲ್ ಅವರ ಹಳೆಯ ವೈಯಕ್ತಿಕ ಜೀವನ ಹಾಗೂ ಮಾಜಿ ಪತ್ನಿ ಧನಶ್ರೀ ವರ್ಮಾ (Dhanashree Verma) ಜೊತೆಗಿನ ವಿಚ್ಛೇದನವನ್ನು ಪರೋಕ್ಷವಾಗಿ ನೆನಪಿಸಿ ಕಾಲೆಳೆಯಲು ಯತ್ನಿಸಿದ್ದ.

ಸೈಲೆಂಟ್ ಆಗಿಯೇ ಪಂಚ್ ಕೊಟ್ಟ ಚಾಹಲ್!

ಅಭಿಮಾನಿಯ ಈ ಅನಗತ್ಯ ಹಾಗೂ ವೈಯಕ್ತಿಕ ಕಮೆಂಟ್ ಕಂಡ ಯಜುವೇಂದ್ರ ಚಾಹಲ್, ಈ ಬಾರಿ ಸುಮ್ಮನೆ ಕೂರದೆ ಸೈಲೆಂಟ್ ಆಗಿಯೇ ಆತನಿಗೆ ತಕ್ಕ ಪಾಠ ಕಲಿಸಿದ್ದಾರೆ. ಆ ನೆಟ್ಟಿಗನ ಕಮೆಂಟ್‌ಗೆ ನೇರವಾಗಿಯೇ ರಿಪ್ಲೈ ಮಾಡಿದ ಚಾಹಲ್, "ಅದು ನಿನಗೆ ನಿಜವಾಗಿಯೂ ಜೋಕ್ ಅನಿಸ್ತಾ ಬ್ರೋ?" (Was that really funny, bro?) ಎಂದು ಒಂದೇ ಸಾಲಿನಲ್ಲಿ ಮರುಪ್ರಶ್ನೆ ಹಾಕಿದ್ದಾರೆ. ಚಾಹಲ್ ಅವರ ಮರುಪ್ರಶ್ನೆಗೆ ಆ ಟ್ರೋಲರ್ ಸಂಪೂರ್ಣವಾಗಿ ಸೈಲೆಂಟ್ ಆಗಿದ್ದಾನೆ.

ಅನಗತ್ಯ ಟ್ರೋಲ್‌ಗಳಿಗೆ ಚಾಹಲ್ ಬೇಸರ

ಮಾಜಿ ಪತ್ನಿ ಧನಶ್ರೀ ವರ್ಮಾ ಅವರಿಂದ ಕಾನೂನುಬದ್ಧವಾಗಿ ವಿಚ್ಛೇದನ (Divorce) ಪಡೆದು ದೂರವಾದಾಗಿನಿಂದಲೂ, ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಚಾಹಲ್ ಅವರ ಪ್ರತಿಯೊಂದು ಪೋಸ್ಟ್ ಅಥವಾ ಇತರ ಆಟಗಾರರ ಪೋಸ್ಟ್‌ಗಳ ಕೆಳಗೆ ಅವರ ಖಾಸಗಿ ಜೀವನದ ವಿಷಯವನ್ನು ತಂದು ಟ್ರೋಲ್ ಮಾಡುತ್ತಲೇ ಬಂದಿದ್ದಾರೆ.

ಪ್ರತಿಯೊಬ್ಬ ಕ್ರೀಡಾಪಟುವಿಗೂ ತಮ್ಮದೇ ಆದ ವೈಯಕ್ತಿಕ ಜೀವನ ಹಾಗೂ ಗೌರವವಿರುತ್ತದೆ. ಪದೇ ಪದೇ ತಮ್ಮ ಹಳೆಯ ಕಹಿ ಘಟನೆಗಳನ್ನು ನೆನಪಿಸಿ ತಮಾಷೆ ಮಾಡುತ್ತಿದ್ದ ಟ್ರೋಲರ್‌ಗಳಿಗೆ ಚಾಹಲ್ ಈ ಮೂಲಕ 'ಇನ್ಮುಂದೆ ನನ್ನ ಖಾಸಗಿ ಜೀವನದ ತಂಟೆಗೆ ಬರಬೇಡಿ' ಎಂದು ಗಂಭೀರ ಎಚ್ಚರಿಕೆಯನ್ನೇ ನೀಡಿದ್ದಾರೆ ಎಂದು ಕ್ರೀಡಾಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗಣೇಶನಿಗೆ ಪೂಜೆ ಸಲ್ಲಿಸಿದ ವಿಡಿಯೋ ಶೇರ್​ ಮಾಡಿ ಕಮೆಂಟ್​ ಸೆಕ್ಷನ್​ ಆಫ್​ ಮಾಡಿದ ನಟಿ ಸೋನಾಕ್ಷಿ ಸಿನ್ಹಾ
ಹನಿಮೂನ್ ಮುಗಿಯುವಷ್ಟರಲ್ಲೇ ಶಾಕಿಂಗ್ ಟ್ವಿಸ್ಟ್: 14ನೇ ದಿನಕ್ಕೆ ಗಂಡನಿಗೆ ಬೈ-ಬೈ ಹೇಳಿದ ನವವಧು!