
ಕಷ್ಟಕಾಲದಲ್ಲಿ ಜೊತೆಯಾದ ಪತ್ನಿಯ ಪ್ರೀತಿಯೇ ಡಿಕೆಶಿಯನ್ನ ಮತ್ತಷ್ಟು ಗಟ್ಟಿಯಾಗಿಸಿತು. ಜೈಲಿನಿಂದ ಮರಳಿದ ಡಿಕೆಶಿ, ಹಿಂದೆಂದಿಗಿಂತಲೂ ಪ್ರಬಲ ನಾಯಕರಾಗಿ ಬೆಳೆದರು. ಪತ್ನಿಯ ಆ ಬೆಂಬಲವೇ ಇಂದು ಡಿ.ಕೆ.ಶಿವಕುಮಾರ್ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.
ರಾಜಕಾರಣದಲ್ಲಿ ಟಫ್ ಮ್ಯಾನ್; ಮನೆಯೊಳಗೆ ಫ್ಯಾಮಿಲಿ ಮ್ಯಾನ್..!
ಸೋಲು.. ಜೈಲು.. ಕರಾಳ ದಿನಗಳಲ್ಲಿ ಕವಚವಾಗಿದ್ದ ಮಡದಿ..!
ರಫ್ & ಟಫ್ ಡಿಕೆಗೆ ಹೆಣ್ಣು ಕೊಡಲು ಒಪ್ಪಿರಲಿಲ್ಲ ಮಾವ..!
ಪತ್ನಿ ಎದುರು ಮಗುವಿನಂತೆ ಕಣ್ಣೀರು ಸುರಿಸುವ ಬಂಡೆ..!
ಡಿಕೆ ಕಷ್ಟಕಾಲದಲ್ಲಿ ಕುಟುಂಬ ಸಲಹಿದ ಗಟ್ಟಿಗಿತ್ತಿ ಮಡದಿ ಉಷಾ..!
ಡಿಕೆಶಿ ಪರ ಪ್ರಚಾರ.. ಪತಿಗಾಗಿ ಪೂಜೆ ಪುನಸ್ಕಾರ..!
ಹಾಗಿದ್ರೆ.. ಇವೆಲ್ಲವನ್ನೂ ಡಿಟೇಲ್ ಆಗಿ ನೋಡೋಣ ಬನ್ನಿ..
ಕನಕಪುರ ಬಂಡೆ ಖ್ಯಾತಿಯ ಡಿಕೆ ಶಿವಕುಮಾರ್ (DK Shivakumar) ಹಿಂದಿನ ಅಸಲಿ ಶಕ್ತಿ.. ಡಿಕೆಶಿ ಯಶಸ್ಸಿನ 'ಉಷಾ' ಕಿರಣ..! ರಾಜಕಾರಣದಲ್ಲಿ ಟಫ್ ಮ್ಯಾನ್.. ಮನೆಯೊಳಗೆ ಅಪ್ಪಟ ಫ್ಯಾಮಿಲಿ ಮ್ಯಾನ್..! ಜ್ಯೋತಿಷಿ ಹೇಳಿದ್ದ ಆ ಭವಿಷ್ಯ.. ಡಿಕೆ ಬಾಳಿಗೆ ಬಂದಿದ್ಹೇಗೆ ‘ಉಷಾ’ರತ್ನ..? ಸೋಲು.. ಜೈಲು.. ಕರಾಳ ದಿನಗಳಲ್ಲಿ ಕವಚವಾಗಿದ್ದ ಮಡದಿ.. ಡಿಕೆ ಮನೆಬೆಳಗಿದ ಜ್ಯೋತಿ..!, ಇದೇ ಈ ಹೊತ್ತಿನ ವಿಶೇಷ.. ಡಿಕೆ ಮನಮೆಚ್ಚಿದ ಮಡದಿ
ಪ್ರತಿ ಗಂಡಿನ ಯಶಸ್ಸಿನ ಹಿಂದೆ ಇದ್ದೇ ಇರ್ತಾಳೆ ಒಬ್ಬ ಹೆಣ್ಣು.. ಇದು ಕೇವಲ ಮಾತಲ್ಲ, ಶತಶತಮಾನಗಳಿಂದ ಸಾಬೀತಾಗುತ್ತಾ ಬಂದಿರುವ ಸತ್ಯ. ಇವತ್ತು ರಾಜ್ಯದ ಅತ್ಯುನ್ನತ ಸ್ಥಾನಕ್ಕೇರಿರುವ ಸಿಎಂ ಡಿಕೆ ಶಿವಕುಮಾರ್ ಅವರ ವಿಚಾರದಲ್ಲೂ ಇದು ಅಕ್ಷರಶಃ ಸತ್ಯ. ಕನಕಪುರ ಬಂಡೆ ಹಿಂದಿರುವ ಅಸಲಿ ಶಕ್ತಿ ಅವರ ಪತ್ನಿ ಉಷಾ ಶಿವಕುಮಾರ್ (Usha Shivakumar).
ಡಿಕೆ ಮನಮೆಚ್ಚಿದ ಮಡದಿಯ ಮತ್ತಷ್ಟು ಹೋರಾಟದ ಕಥೆ ನೋಡೋಣ ಚಿಕ್ಕ ಬ್ರೇಕ್ನ ಬಳಿಕ.
ಡಿ. ಕೆ ಶಿವಕುಮಾರ್ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾಗ ಕುಟುಂಬವನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡವರು ಪತ್ನಿ ಉಷಾ. ಡಿ.ಕೆ ಜೈಲುಪಾಲಾದಾಗ ಗಟ್ಟಿಗಿತ್ತಿಯಂತೆ ಮನೆ ಒಳಗೆ ಹೊರಗೆ ಎರಡೂ ಕಡೆ ಹೋರಾಡಿದವರು ಉಷಾ. ಅಂತೆಯೇ ಇವತ್ತಿ ಡಿ.ಕೆ,ಶಿ ಯಶಸ್ಸಿಗೆ ಪತ್ನಿಯ ಕೊಡುಗೆ ತುಂಬಾ ಇದೆ.
ಕಷ್ಟಕಾಲದಲ್ಲಿ ಜೊತೆಯಾದ ಪತ್ನಿಯ ಪ್ರೀತಿಯೇ ಡಿಕೆಶಿಯನ್ನ ಮತ್ತಷ್ಟು ಗಟ್ಟಿಯಾಗಿಸಿತು. ಜೈಲಿನಿಂದ ಮರಳಿದ ಡಿಕೆಶಿ, ಹಿಂದೆಂದಿಗಿಂತಲೂ ಪ್ರಬಲ ನಾಯಕರಾಗಿ ಬೆಳೆದರು. ಪತ್ನಿಯ ಆ ಬೆಂಬಲವೇ ಇಂದು ಡಿ.ಕೆ.ಶಿಯನ್ನ ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..