ಪತಿಯನ್ನು ಲೀಸ್‌ಗೆ ನೀಡಿದ ಪತ್ನಿ, ತಿಂಗಳಿಗೆ 85 ಸಾವಿರ ರೂಪಾಯಿ

Published : Aug 16, 2026, 06:18 PM IST
Thai Woman Tries To Lease Cheating Husband To Mistress For Rs 85000 A Month

ಸಾರಾಂಶ

ಥಾಯ್ಲೆಂಡ್‌ನ 31 ವರ್ಷದ ಮಹಿಳೆಯೊಬ್ಬರು ಪತಿಗೆ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿರುವುದು ಪತ್ತೆಯಾದ ಬಳಿಕ, ಪತಿಯನ್ನು ಲೀಸ್‌ಗೆ ನೀಡುವ ವಿಚಿತ್ರ ಆಫರ್ ನೀಡಿದ ಘಟನೆ ವೈರಲ್ ಆಗಿದೆ.

ಪತಿ ಪೊಲೀಸ್ ಅಧಿಕಾರಿ, 10 ವರ್ಷಗಳ ದಾಂಪತ್ಯ, 8 ವರ್ಷದ ಮಗ... ಆದರೆ ಮತ್ತೊಬ್ಬ ಮಹಿಳೆಯ ಜೊತೆ ಪತಿಗೆ ಸಂಬಂಧವಿರುವುದು ಗೊತ್ತಾದ ಬಳಿಕ ಪತ್ನಿ ತೆಗೆದುಕೊಂಡ ನಿರ್ಧಾರ ಮಾತ್ರ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಪತಿ-ಪತ್ನಿಯ ಸಂಬಂಧದಲ್ಲಿ ನಂಬಿಕೆ ಮುರಿದಾಗ ಸಾಮಾನ್ಯವಾಗಿ ಜಗಳ, ಪ್ರತ್ಯೇಕತೆ ಅಥವಾ ವಿಚ್ಛೇದನದಂತಹ ನಿರ್ಧಾರಗಳು ಎದುರಾಗುತ್ತವೆ. ಆದರೆ ಥಾಯ್ಲೆಂಡ್‌ನ 31 ವರ್ಷದ ಮಹಿಳೆಯೊಬ್ಬರು ಪತಿಯ ಅಕ್ರಮ ಸಂಬಂಧವನ್ನು ಎದುರಿಸಿದ ರೀತಿ ಮಾತ್ರ ಸಂಪೂರ್ಣ ವಿಭಿನ್ನವಾಗಿದೆ. ತನ್ನ ಪತಿ ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧ ಮುಂದುವರಿಸಲು ಬಯಸುವುದಾದರೆ, ಆ ಮಹಿಳೆ ತಿಂಗಳಿಗೆ 30,000 ಥಾಯ್ ಬಹ್ತ್, ಅಂದರೆ ಸುಮಾರು ₹85,000 ಪಾವತಿಸಬೇಕು ಎಂದು ಪತ್ನಿ ಆಫರ್ ನೀಡಿದ್ದಾಳೆ. ಅಷ್ಟೇ ಅಲ್ಲ, ಪತಿಯನ್ನು ‘ಬಾಡಿಗೆಗೆ’ ತೆಗೆದುಕೊಳ್ಳುವಂತೆ ಆಕೆಗೆ ಹೇಳಿದ್ದಾಳೆ ಎನ್ನಲಾಗಿದೆ. ಈ ವಿಚಿತ್ರ ಪ್ರಕರಣ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

21ನೇ ವಯಸ್ಸಿನಲ್ಲೇ ಮದುವೆ

ವರದಿಗಳ ಪ್ರಕಾರ, ಈ ಮಹಿಳೆಯನ್ನು ಖುನ್ ಕ್ವಾಂಗ್ ಎಂದು ಗುರುತಿಸಲಾಗಿದೆ. ಅವರು ವಿಶ್ವವಿದ್ಯಾಲಯದ ವಿದ್ಯಾಭ್ಯಾಸ ಮುಗಿಸಿದ ಬಳಿಕ 21ನೇ ವಯಸ್ಸಿನಲ್ಲಿ ತಮ್ಮ ಪತಿಯನ್ನು ಮದುವೆಯಾಗಿದ್ದರು. ಪತಿ 35 ವರ್ಷದ ಪೊಲೀಸ್ ಅಧಿಕಾರಿಯಾಗಿದ್ದು, ದಂಪತಿಗೆ 8 ವರ್ಷದ ಮಗ ಇದ್ದಾನೆ. ಸುಮಾರು 10 ವರ್ಷಗಳ ಕಾಲ ಅವರ ದಾಂಪತ್ಯ ಜೀವನ ಸುಗಮವಾಗಿಯೇ ಸಾಗುತ್ತಿತ್ತು. ಆದರೆ 2025ರ ಮಧ್ಯಭಾಗದಲ್ಲಿ ಪರಿಸ್ಥಿತಿ ಬದಲಾಗತೊಡಗಿತು.

ಅಪರಿಚಿತ ಮಹಿಳೆಯ ಮೇಲೆ ಅನುಮಾನ

ಒಂದು ದಿನ ಖುನ್ ಕ್ವಾಂಗ್ ಅವರ ಸಾಮಾಜಿಕ ಜಾಲತಾಣ ಪೋಸ್ಟ್‌ಗಳನ್ನು ಅಪರಿಚಿತ ಮಹಿಳೆಯೊಬ್ಬರು ನಿರಂತರವಾಗಿ ವೀಕ್ಷಿಸುತ್ತಿರುವುದು ಅವರ ಗಮನಕ್ಕೆ ಬಂತು. ಆ ಮಹಿಳೆ ಅವರ ಪತಿಯನ್ನು ಕೂಡ ಫಾಲೋ ಮಾಡುತ್ತಿದ್ದಳು. ಮೊದಲಿಗೆ ಕ್ವಾಂಗ್ ಈ ವಿಷಯವನ್ನು ಪತಿಯಲ್ಲಿ ಕೇಳಲಿಲ್ಲ. ದಂಪತಿ ಪರಸ್ಪರರ ಮೊಬೈಲ್ ಅಥವಾ ವೈಯಕ್ತಿಕ ಜೀವನದಲ್ಲಿ ಹೆಚ್ಚು ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಆದರೆ ದಿನಗಳು ಕಳೆದಂತೆ ಪತಿಯ ವರ್ತನೆಯಲ್ಲಿ ಬದಲಾವಣೆ ಕಾಣಿಸಿತು. ತಡರಾತ್ರಿ ಮನೆಗೆ ಬರುವುದು, ಕರೆಗಳನ್ನು ನಿರ್ಲಕ್ಷಿಸುವುದು ಮತ್ತು ಕುಟುಂಬದಿಂದ ದೂರವಾಗುತ್ತಿರುವುದು ಕ್ವಾಂಗ್ ಅವರ ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿತು.

ಖಾಸಗಿ ತನಿಖಾಧಿಕಾರಿಯಿಂದ ಸತ್ಯ ಬಯಲು

ಕೊನೆಗೆ ಕ್ವಾಂಗ್ ಪತಿಯ ಮೇಲೆ ಅನುಮಾನ ಬಲವಾದ ಹಿನ್ನೆಲೆಯಲ್ಲಿ ಖಾಸಗಿ ತನಿಖಾಧಿಕಾರಿಯ ನೆರವು ಪಡೆದರು ಎನ್ನಲಾಗಿದೆ. ತನಿಖೆಯಲ್ಲಿ ಪತಿ ಮತ್ತೊಬ್ಬ ಮಹಿಳೆಯೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿರುವುದು ಬೆಳಕಿಗೆ ಬಂತು. ಇಷ್ಟೇ ಅಲ್ಲ, ಪತಿ ಆ ಮಹಿಳೆಯ ಅಪಾರ್ಟ್‌ಮೆಂಟ್‌ಗೆ ತೆರಳಿ ಅಲ್ಲಿಯೇ ವಾಸಿಸಲು ಆರಂಭಿಸಿದ್ದಾನೆ ಎಂಬುದು ತಿಳಿದುಬಂದಿತು. ತಾನು 10 ವರ್ಷಗಳ ಕಾಲ ಬದುಕಿದ ದಾಂಪತ್ಯದಲ್ಲಿ ಇಂತಹ ಘಟನೆ ನಡೆದಿದೆ ಎಂಬುದು ಕ್ವಾಂಗ್ ಅವರಿಗೆ ದೊಡ್ಡ ಆಘಾತವಾಗಿತ್ತು.

ಪತಿಯ ಪ್ರಿಯತಮೆಗೆ ವಿಚಿತ್ರ ಆಫರ್

ಪತಿಯ ಅಕ್ರಮ ಸಂಬಂಧದ ಸತ್ಯ ಗೊತ್ತಾದ ಬಳಿಕ ಕ್ವಾಂಗ್ ವಿಚ್ಛೇದನಕ್ಕೆ ಧಾವಿಸಲಿಲ್ಲ. ಬದಲಿಗೆ ಪತಿಯ ಪ್ರಿಯತಮೆಗೆ ಒಂದು ವಿಚಿತ್ರ ಪ್ರಸ್ತಾಪ ಮುಂದಿಟ್ಟರು. “ನನ್ನ ಪತಿಯೊಂದಿಗೆ ನೀನು ಇರಲು ಬಯಸಿದರೆ, ತಿಂಗಳಿಗೆ 30,000 ಬಹ್ತ್ ಪಾವತಿಸು” ಎಂಬ ರೀತಿಯಲ್ಲಿ ಆಕೆ ಆಫರ್ ನೀಡಿದ್ದಾಳೆ ಎಂದು ವರದಿಯಾಗಿದೆ.

ಭಾರತೀಯ ಕರೆನ್ಸಿಯಲ್ಲಿ ಇದರ ಮೌಲ್ಯ ಸುಮಾರು ₹85,000 ಪ್ರತಿ ತಿಂಗಳು.

ಅಂದರೆ, ಪತಿಯೇ ತನ್ನನ್ನು ಬಿಟ್ಟು ಮತ್ತೊಬ್ಬ ಮಹಿಳೆಯೊಂದಿಗೆ ಇರಲು ಬಯಸುತ್ತಿರುವುದಾದರೆ, ಆ ಸಂಬಂಧದ ಆರ್ಥಿಕ ಹೊಣೆಯನ್ನೂ ಅವರೇ ಹೊತ್ತುಕೊಳ್ಳಲಿ ಎಂಬುದು ಪತ್ನಿಯ ನಿಲುವಾಗಿತ್ತು.

ಪ್ರಿಯತಮೆಯೂ ಒಪ್ಪಿಕೊಂಡಳಂತೆ

ಈ ಪ್ರಕರಣದ ಮತ್ತೊಂದು ಅಚ್ಚರಿಯ ಸಂಗತಿ ಎಂದರೆ, ಪತಿಯ ಪ್ರಿಯತಮೆ ಈ ಪ್ರಸ್ತಾಪವನ್ನು ತಿರಸ್ಕರಿಸಲಿಲ್ಲ ಎನ್ನಲಾಗಿದೆ. ವರದಿಗಳ ಪ್ರಕಾರ, ತಿಂಗಳಿಗೆ ₹85,000 ಪಾವತಿಸುವುದು ತನ್ನಿಂದ ಸಾಧ್ಯ ಎಂದು ಆಕೆ ಹೇಳಿದ್ದಾಳೆ. ಹಣದ ವಿಷಯದಲ್ಲಿ ತನಗೆ ಸಮಸ್ಯೆಯಿಲ್ಲ ಎಂಬುದನ್ನೂ ತಿಳಿಸಿದ್ದಾಳೆ.

ಆದರೆ ಕೊನೆಯ ಕ್ಷಣದಲ್ಲಿ ಈ ವಿಚಿತ್ರ ‘ಡೀಲ್’ಗೆ ಒಪ್ಪದ ವ್ಯಕ್ತಿ ಯಾರು ಗೊತ್ತೇ?

ಸ್ವತಃ ಪತಿಯೇ, ಪತಿ ಈ ಪ್ರಸ್ತಾಪಕ್ಕೆ ಒಪ್ಪಲಿಲ್ಲ, ಪತ್ನಿ ಮತ್ತು ಪ್ರಿಯತಮೆಯ ನಡುವೆ ನಡೆದ ಈ ವಿಚಿತ್ರ ಪ್ರಸ್ತಾಪಕ್ಕೆ ಪೊಲೀಸ್ ಅಧಿಕಾರಿಯಾಗಿರುವ ಪತಿ ಒಪ್ಪಲಿಲ್ಲ ಎಂದು ವರದಿಗಳು ತಿಳಿಸಿವೆ. ಹೀಗಾಗಿ ₹85,000ರ ‘ಬಾಡಿಗೆ ಪತಿ’ ಡೀಲ್ ಮಾತಿನ ಹಂತದಲ್ಲೇ ಉಳಿಯಿತು.

ಟಿವಿ ಕಾರ್ಯಕ್ರಮದಲ್ಲಿ ಹೇಳಿಕೊಂಡ ಪತ್ನಿ

ಈ ಸಂಪೂರ್ಣ ಘಟನೆ ಥಾಯ್ಲೆಂಡ್‌ನ ಜನಪ್ರಿಯ ಟಿವಿ ಕಾರ್ಯಕ್ರಮ Hone-Krasae ನಲ್ಲಿ ಬೆಳಕಿಗೆ ಬಂದಿದೆ. ನಿರೂಪಕ Kanchai Kamnerdloy ನಡೆಸಿಕೊಡುವ ಕಾರ್ಯಕ್ರಮದಲ್ಲಿ ಖುನ್ ಕ್ವಾಂಗ್ ತಮ್ಮ ದಾಂಪತ್ಯ ಜೀವನದ ಸಂಕಷ್ಟವನ್ನು ಹಂಚಿಕೊಂಡಿದ್ದಾರೆ. ಈ ಘಟನೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಶುರುವಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಗ ಯಶ್​ ಕೋಟಿ ಬೆಲೆ ಕಾರಲ್ಲಿ, ಅಪ್ಪ ಮಾತ್ರ ಬಸ್‌ನಲ್ಲಿ: ತಂದೆಯ ಆ ರಹಸ್ಯ ತೆರೆದಿಟ್ಟ ರಾಕಿಂಗ್​ ಸ್ಟಾರ್​
ಅಮ್ಮ ಹಿಂದೂವಾದ್ರೂ ಪೂಜೆಗಿಲ್ಲ ಅವಕಾಶ- ಮನೆಯಲ್ಲಿ ಇಸ್ಲಾಂ ಬೋಧನೆ: ನಟಿ ಶರ್ಮಿಳಾ ಠಾಗೋರ್​ ಪುತ್ರಿ ಹೇಳಿದ್ದೇನು