'ನಿಮ್ಮಂತಹ ಮಹಿಳೆಗೆ ಮಸಾಜ್ ಮಾಡಿದ್ದು ನನ್ನ ಅದೃಷ್ಟ': ಕಾಮದ ದೃಷ್ಟಿ ಬೀರಿದ ಮಸಾಜರ್ ವಿರುದ್ಧ ಯುವತಿಯ ದೂರು

Published : Apr 07, 2026, 05:08 PM IST
tcm-clinic-1

ಸಾರಾಂಶ

ಸಿಂಗಾಪುರದ 'ಗೋಂಗ್ ಫಾಂಗ್ ಟಾಂಗ್ ಟಿಸಿಎಂ' ಮಸಾಜ್ ಸೆಂಟರ್‌ನಲ್ಲಿ ಪುರುಷ ಮಸಾಜರ್ ಒಬ್ಬಾತ ಯುವತಿಯ ಖಾಸಗಿ ಭಾಗಗಳನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆಯ ಕುರಿತು ಯುವತಿಯ ಸಹೋದರಿ ಸೋಶಿಯಲ್ ಮೀಡಿಯಾದಲ್ಲಿ ಆಘಾತಕಾರಿ ವಿವರಗಳನ್ನು ಹಂಚಿಕೊಂಡಿದ್ದಾರೆ.

ಸಿಂಗಾಪುರ (ಏ.7): ಮಸಾಜ್ ಮಾಡಿಸಿಕೊಳ್ಳಲು ತೆರಳಿದ್ದ ಯುವತಿಯೊಬ್ಬರಿಗೆ ಮಸಾಜ್ ಸೆಂಟರ್‌ನಲ್ಲಿ ಕೆಟ್ಟ ಅನುಭವವಾಗಿರುವ ಘಟನೆ ಬೆಳಕಿಗೆ ಬಂದಿದೆ. ಸಿಂಗಾಪುರದ 'ಗೋಂಗ್ ಫಾಂಗ್ ಟಾಂಗ್ ಟಿಸಿಎಂ' (Gong Fang Tang TCM) ಎಂಬ ಮಸಾಜ್ ಸೆಂಟರ್‌ನ ಪುರುಷ ಮಸಾಜರ್ ವಿರುದ್ಧ ಯುವತಿ ಹಾಗೂ ಆಕೆಯ ಸಹೋದರಿ ಸೂಸನ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸೂಸನ್ ಎಂಬ ಯುವತಿ ತನ್ನ ಸಹೋದರಿ 'ಮೇ'ಗೆ ಎದುರಾದ ಕರಾಳ ಅನುಭವವನ್ನು ಸೋಶಿಯಲ್‌ ಮೀಡಿಯಾದಲ್ಲಿ ವಿವರಿಸಿದ್ದಾರೆ. "ಮಸಾಜ್ ಮಾಡುವ ನೆಪದಲ್ಲಿ ಆ ಪುರುಷ ಮಸಾಜರ್ ಮೇ ಅವರ ದೇಹದ ಖಾಸಗಿ ಭಾಗಗಳಲ್ಲಿ ಅನುಮತಿಯಿಲ್ಲದೆ ಸ್ಪರ್ಶಿಸಿದ್ದಾನೆ. ಕಂಕುಳು ಮತ್ತು ಎದೆಯ ಮೇಲ್ಭಾಗದಲ್ಲಿ ಪದೇ ಪದೇ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ," ಎಂದು ಸೂಸನ್ ಆರೋಪಿಸಿದ್ದಾರೆ.

ಮಸಾಜರ್‌ನ ಅಸಭ್ಯ ವರ್ತನೆ

ಮಸಾಜ್ ನಡೆಯುತ್ತಿದ್ದಾಗ ಆ ವ್ಯಕ್ತಿ ಯುವತಿಯೊಂದಿಗೆ ಅತಿಯಾಗಿ ಮಾತನಾಡಲು ಪ್ರಯತ್ನಿಸಿದ್ದಾನೆ. "ಆತ ನನ್ನ ಸಹೋದರಿಯ ದೇಹದ ಬಗ್ಗೆ ಅಸಭ್ಯ ಕಾಮೆಂಟ್ ಮಾಡುತ್ತಿದ್ದ. 'ನೀವು ತುಂಬಾ ಸುಂದರಿಯಾಗಿದ್ದೀರಿ, ನಿಮ್ಮಂತಹ ಮಹಿಳೆಗೆ ಮಸಾಜ್ ಮಾಡಲು ಸಿಕ್ಕಿದ್ದು ನನ್ನ ಅದೃಷ್ಟ' ಎಂದು ಅಶ್ಲೀಲವಾಗಿ ಮಾತನಾಡುತ್ತಿದ್ದ," ಎಂದು ಸೂಸನ್ ತಿಳಿಸಿದ್ದಾರೆ. ಯುವತಿ ಮಸಾಜ್ ಮಧ್ಯದಲ್ಲಿ ಹಲವು ಬಾರಿ ತಮಗೆ ಇದು ಸಮ್ಮತಿಯಿಲ್ಲ ಎನ್ನುವ ವರ್ತನೆ ತೋರಿಸಿದ್ದರು. ಆತನ ಕೈಗಳನ್ನು ತಳ್ಳಿಹಾಕಿದರೂ, ಆತ ತನ್ನ ಅಸಭ್ಯ ವರ್ತನೆ ನಿಲ್ಲಿಸಿರಲಿಲ್ಲ. ಮಸಾಜ್ ಮುಗಿದು ಯುವತಿ ಕುಳಿತುಕೊಂಡಾಗಲೂ ಆತ ಆಕೆಯ ಹೊಟ್ಟೆ ಮತ್ತು ಇತರ ಭಾಗಗಳಲ್ಲಿ ಅನಗತ್ಯವಾಗಿ ಸ್ಪರ್ಶಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕುಟುಂಬದ ಆಕ್ರೋಶ

"ನಾವು 2023ರಿಂದ ಈ ಮಸಾಜ್ ಸೆಂಟರ್‌ಗೆ ಹೋಗುತ್ತಿದ್ದೇವೆ. ಈ ಹಿಂದೆ ಅದೇ ವ್ಯಕ್ತಿ ಮಸಾಜ್ ಮಾಡಿದ್ದರೂ ಅಂದು ಆತ ಇಂತಹ ಯಾವುದೇ ಕೃತ್ಯ ಎಸಗಿರಲಿಲ್ಲ. ಈಗಿನ ವರ್ತನೆ ನಮ್ಮನ್ನು ದಿಗಿಲುಗೊಳಿಸಿದೆ," ಎಂದು ಸೂಸನ್ ಆತಂಕ ವ್ಯಕ್ತಪಡಿಸಿದ್ದಾರೆ. ಈ ವಿಷಯವಾಗಿ ಮಸಾಜ್ ಸೆಂಟರ್ ಆಡಳಿತ ಮಂಡಳಿಗೆ ಮೂರು ಬಾರಿ ಇಮೇಲ್ ಕಳಿಸಿದರೂ, ಅವರು ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಯುವತಿ ದೂರಿದ್ದಾರೆ. ಸದ್ಯ ಕುಟುಂಬಸ್ಥರು ಈ ಸಂಬಂಧ ಪೊಲೀಸರಿಗೆ ಅಧಿಕೃತವಾಗಿ ದೂರು ನೀಡಿದ್ದು, ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸಿಂಗಾಪುರದ ಕೈನೆಕ್ಸ್ ಮಾಲ್ ಮತ್ತು ಈಸ್ಟ್ ಕೋಸ್ಟ್ ರೋಡ್‌ನಲ್ಲಿ ಈ ಸಂಸ್ಥೆಯ ಶಾಖೆಗಳಿವೆ. ಈ ಘಟನೆಯು ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಮಹಿಳೆಯರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಎದುರಾಗಿದೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಲೋ ಅರ್ಜುನ, ನಿಂಗೆ ಹಾರ್ಟ್​ ಸರ್ಜನ್​ ಸರ್ಟಿಫಿಕೇಟ್​ ಕೊಟ್ಟವರು ಯಾರು?' Karna Serial ಫ್ಯಾನ್ಸ್​ ಆಕ್ರೋಶ
ಯಾರೂ ಊಹಿಸದ ಸ್ಥಳದಲ್ಲಿ ನಟಿ Sanjana Burli ಹನಿಮೂನ್​: ಸ್ಥಳ ರಿವೀಲ್ ಮಾಡಲ್ಲ ಎಂದಿದ್ದು ಇದಕ್ಕೇನಾ