
ಅಮ್ಮ-ಮಗುವಿನ ಬಾಂಧವ್ಯವನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಮಗುವಿನ ಬಗ್ಗೆ ಅಮ್ಮನಿಗಿರುವ ಕಾಳಜಿ ಅಪರಿಮಿತ. ಮಕ್ಕಳು ತಮ್ಮ ಕಾಲ ಮೇಲೆ ತಾವು ಸದೃಢವಾಗಿ ನಡೆಯುವವರೆಗೂ ಅಮ್ಮ ಅವರ ಹಿಂದೆಯೇ ಇದ್ದು ಸದಾಕಾಲ ಗಮನಿಸುತ್ತಿರುತ್ತಾಳೆ. ತನ್ನ ಕಂದ ಎಲ್ಲಾದರೂ ಬಿದ್ದುಬಿಟ್ಟರೆ, ಪೆಟ್ಟಾದರೆ, ಏನಾದರೂ ಗಂಭೀರವಾದ ಗಾಯವಾಗಿಬಿಟ್ಟರೆ ಎಂದು ಆತಂಕ ಪಡುತ್ತಾಳೆ. ಹೀಗಾಗಿ, ಯಾವ ಕೆಲಸದಲ್ಲಿ ನಿರತವಾಗಿದ್ದರೂ ಆಕೆಯ ಒಂದು ಕಣ್ಣು ಮತ್ತು ಕಿವಿ ಮಗುವಿನ ಚಲನವಲನದ ಮೇಲೆಯೇ ನೆಟ್ಟಿರುತ್ತದೆ. ಮಗುವಿನ ಕಾಳಜಿ ಮಾಡುವುದು ಮನುಷ್ಯರಲ್ಲಿ ಮಾತ್ರವಲ್ಲ, ಸಕಲ ಪ್ರಾಣಿಪ್ರಪಂಚದ ಅಭ್ಯಾಸ. ಹಕ್ಕಿಗಳು ತಮ್ಮ ಮರಿಗಳನ್ನು ಪೊರೆಯುವುದು, ಆನೆಯಂತಹ ಬೃಹತ್ ಪ್ರಾಣಿಗಳು ತಮ್ಮ ಮರಿಗಳನ್ನು ಕಾಳಜಿಯಿಂದ ನೋಡಿಕೊಳ್ಳುವುದು ಸಾಮಾನ್ಯವಾಗಿ ಕಂಡುಬರುತ್ತವೆ. ಅಷ್ಟೇ ಅಲ್ಲ, ನಿಜ ಜೀವನದ ಘಟನೆಗಳ ಮೂಲಕವೇ ಅಪಾಯದಿಂದ ಪಾರಾಗುವುದು ಹೇಗೆ ಎನ್ನುವ ತರಬೇತಿಯನ್ನೂ ಮಕ್ಕಳಿಗೆ ನೀಡುತ್ತವೆ. ಅಂತಹ ತಾಯಿ ಪ್ರೀತಿ ಹಾಗೂ ಮಗುವಿನ ಬಗ್ಗೆ ತಾಯಿ ಜೀವ ಹೊಂದಿರುವ ಕಾಳಜಿಯನ್ನು ಬಿಂಬಿಸುವ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗಿದೆ.
ಪೋಲಾರ್ ಬೇರ್ ಅಥವಾ ಹಿಮಕರಡಿ ಹಾಗೂ ಅದರ ಮರಿಯೊಂದರ ದೃಶ್ಯ ಈ ವೀಡಿಯೋದಲ್ಲಿದೆ. ಹೇಳಿಕೇಳಿ ಹಿಮಕರಡಿಗಳು ಅತ್ಯಂತ ದುರ್ಗಮ ಪ್ರದೇಶದಲ್ಲಿ ವಾಸಿಸುವ ಜೀವಿಗಳು. ಹಿಮ ಕವಿದ ಧ್ರುವ ಪ್ರದೇಶದಲ್ಲಿ ಇವು ವಾಸಿಸುತ್ತವೆ. ಅಲ್ಲಿನ ವೀಡಿಯೋ ಇದಾಗಿದ್ದು, ತಾಯಿ ಕರಡಿಯ ಕಾಳಜಿಯನ್ನು ಅತ್ಯಂತ ಸೂಕ್ತವಾಗಿ ಬಿಂಬಿಸುವಲ್ಲಿ ಯಶಸ್ವಿಯಾಗಿದೆ. ವೀಡಿಯೋದಲ್ಲಿ ಹಿಮಕರಡಿಯ (Polar Bear) ಮರಿಯೊಂದು (Baby) ನೀರಿನಿಂದ (Water) ಮೇಲಕ್ಕೆ ಹತ್ತಿ ಸಾಗಲು ಯತ್ನಿಸುವುದು ಕಂಡುಬರುತ್ತದೆ. ಆದರೆ, ಅದರ ಬಳಿ ಸಾಧ್ಯವಾಗದೆ ನೀರಿನಲ್ಲಿ ಕುಸಿಯುವಂತೆ ಆಗುತ್ತದೆ. ಆ ಸಮಯದಲ್ಲಿ ಅದೆಲ್ಲಿಂದಲೋ ಅಲ್ಲಿಗೆ ಬರುವ ತಾಯಿ (Mother) ಹಿಮಕರಡಿ ಆ ಕೊಳಕ್ಕೆ (Pool) ಧುಮುಕಿ ಮರಿಗೆ ಆಧಾರವಾಗಿ ನಿಲ್ಲುತ್ತದೆ. ಅಷ್ಟೇ ಅಲ್ಲ, ಸುರಕ್ಷಿತವಾಗಿ (Safety) ಕಲ್ಲಿನ ಮೇಲಕ್ಕೆ ಹತ್ತಿಸುತ್ತದೆ. ಸುರಕ್ಷಿತವಾಗಿ ನೀರಿನಿಂದ ಮೇಲಕ್ಕೆ ಹತ್ತುವುದು ಹೇಗೆ ಎನ್ನುವ ತರಬೇತಿಯನ್ನು (Training) ಅಮ್ಮ ಹಿಮಕರಡಿ ಮರಿಗೆ ನೀಡುತ್ತದೆ.
ನಯನತಾರಾ- ವಿಘ್ನೇಶ್ ದಾಂಪತ್ಯಕ್ಕೆ ತೆರೆ ಬಿತ್ತಾ? ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ, ಭಾವುಕ ಪೋಸ್ಟ್!
13 ಸೆಕೆಂಡ್ ಗಳ ವೀಡಿಯೋ
ಗೇಬ್ರಿಯಲ್ ಕಾರ್ನೊ ಎನ್ನುವವರ ಸೋಷಿಯಲ್ ಮೀಡಿಯಾ (Social Media) ಎಕ್ಸ್ ಖಾತೆಯಲ್ಲಿ ಈ ವೀಡಿಯೋವನ್ನು ಶೇರ್ (Share) ಮಾಡಲಾಗಿದೆ. ಈ ಕ್ಲಿಪ್ ಕೇವಲ 13 ಸೆಕೆಂಡುಗಳದ್ದಾಗಿದ್ದರೂ ಮನಸ್ಸನ್ನು ಸೂರೆಗೊಳ್ಳುತ್ತದೆ. ಇದಕ್ಕೆ ಲಕ್ಷಾಂತರ ಲೈಕುಗಳು, ಕಾಮೆಂಟುಗಳ (Comments) ಬಂದಿದ್ದು, 11 ಲಕ್ಷಕ್ಕೂ ಅಧಿಕ ಜನ ವೀಕ್ಷಣೆ ಮಾಡಿದ್ದಾರೆ. ಜಗತ್ತಿನ ಪ್ರಾಣಿಪ್ರಿಯರ ಗಮನ ಸೆಳೆದಿರುವ ಈ ವೀಡಿಯೋ ಭಾರೀ ಮೆಚ್ಚುಗೆ ಪಡೆದಿದೆ.
ರಕ್ಷಣೆ (Rescue) ಸಹಜ
ಮಕ್ಕಳನ್ನು ರಕ್ಷಿಸುವ ಗುಣ ತಾಯಂದಿರಲ್ಲಿ ಎಷ್ಟು ಸಹಜವಾಗಿ ಇರುತ್ತದೆ ಎನ್ನುವುದನ್ನು ಬಹಳ ಸ್ಪಷ್ಟವಾಗಿ ಈ ವೀಡಿಯೋ ತಿಳಿಸುತ್ತದೆ. ಹಲವರು ತಾಯಿ ಪೋಲಾರ್ ಬೇರ್ ನ ಧೈರ್ಯವನ್ನು (Brave) ಹೊಗಳಿದ್ದರೆ, ಕೆಲವರು ಅಮ್ಮನ ಪ್ರೀತಿ, ರಕ್ಷಣೆಯೇ ಹಾಗಿರುತ್ತದೆ ಎಂದು ಹೇಳಿದ್ದಾರೆ.
ಲಾಲಿ ಹಾಡುತ್ತಾ ತಮ್ಮನನ್ನು ತೊಟ್ಟಿಲಲ್ಲಿ ಮಲಗಿಸಿದ ಧ್ರುವ ಸರ್ಜಾ ಮಗಳು: ಕ್ಯೂಟ್ ವಿಡಿಯೋ ವೈರಲ್
ಒಬ್ಬ ಬಳಕೆದಾರರು, ಹಿಮ ಕರಡಿಗಳು ಅದ್ಭುತವಾಗಿ ಈಜುತ್ತವೆ, ಅವರಷ್ಟು ಅತ್ಯುತ್ತಮವಾಗಿ ಈಜುವ (Swim) ಪ್ರಾಣಿಗಳಿಲ್ಲ’ ಎಂದೂ ಹೇಳಿದ್ದಾರೆ. ಒಬ್ಬರು, “ಅತ್ಯಂತ ಭಾವಪೂರ್ಣ ವೀಡಿಯೋ’ ಎಂದು ಹೇಳಿದ್ದರೆ, “ಪ್ರಾಣಿ ಪ್ರಪಂಚದಲ್ಲಾಗಲೀ, ಮನುಷ್ಯರಲ್ಲಾಗಲೀ, ತಾಯಿ ಪ್ರೀತಿ (Love) ಎಂದಿಗೂ ಅನಿರ್ಬಂಧಿತವಾಗಿದ್ದು, ಸಾಟಿಯಿಲ್ಲ’ ಎಂದು ಹಲವರು ಹೊಗಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.