ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!

ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!

Published : Mar 15, 2026, 03:41 PM IST

ಬೆಂಗಳೂರಿನಲ್ಲಿ, ಪ್ರೀತಿಗಾಗಿ ಮನೆ ತೊರೆದ ಯುವತಿಯನ್ನು ಆಕೆಯ ಪ್ರಿಯಕರನೇ ಕೊಲೆ ಮಾಡಿದ್ದಾನೆ. ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ಆಸ್ತಿಗಾಗಿ ಮಗನೊಬ್ಬ ತನ್ನ ಹೆತ್ತ ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಪ್ರಕರಣಗಳು ಮಾನವೀಯ ಸಂಬಂಧಗಳ ಮೌಲ್ಯ ಕುಸಿಯುತ್ತಿರುವುದನ್ನು ಎತ್ತಿ ತೋರಿಸುತ್ತವೆ.

ಬೆಂಗಳೂರು: ಪ್ರೀತಿ ಎಂಬ ಎರಡಕ್ಷರದ ಮಾಯೆಗೆ ಬಿದ್ದು ಹೆತ್ತವರನ್ನು ಮರೆತು ಹೋದ ಯುವತಿಯೊಬ್ಬಳು ಅಂತಿಮವಾಗಿ ಪ್ರೇಯಸಿಯ ಕೈಯಲ್ಲೇ ದಾರುಣವಾಗಿ ಹತ್ಯೆಯಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಇತ್ತ ಹಣ ಮತ್ತು ಆಸ್ತಿಯ ಹಪಾಹಪಿಗೆ ಬಿದ್ದ ಮಗನೊಬ್ಬ ತನ್ನನ್ನು ಹೆತ್ತು ಹೊತ್ತು ಸಾಕಿದ ತಾಯಿಯನ್ನೇ ಮೃತ್ಯುಕೂಪಕ್ಕೆ ತಳ್ಳಲು ಯತ್ನಿಸಿದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಈ ಎರಡು ಘಟನೆಗಳು ಸಮಾಜದಲ್ಲಿ ಸಂಬಂಧಗಳ ಮೌಲ್ಯ ಎಷ್ಟು ಕುಸಿಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿವೆ.

ಪ್ರಕರಣ 1: ಪ್ರೀತಿ ಮಾಡಿ ಪ್ರಾಣ ಬಿಟ್ಟಳು ರಂಜಿತಾ! 

ಸತ್ತವಳು 23 ವರ್ಷದ ರಂಜಿತಾ. ಸ್ನಾತಕೋತ್ತರ ಪದವಿ (Master’s Degree) ವ್ಯಾಸಂಗ ಮಾಡುತ್ತಿದ್ದ ಈಕೆ, ಮನೆಯಲ್ಲಿ ನಾಲ್ವರು ಮಕ್ಕಳಲ್ಲಿ ಕೊನೆಯವಳು. ಪೋಷಕರು ಈಕೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕಿದ್ದರು. ಆದರೆ, ಎರಡು ತಿಂಗಳ ಹಿಂದೆ ರಂಜಿತಾ 'ನನಗೆ ಪ್ರಿಯಕರನೇ ಬೇಕು, ಅವನ ಜೊತೆಗೇ ಇರುತ್ತೇನೆ' ಎಂದು ಹಠ ಹಿಡಿದು ಮನೆಯವರಿಂದ ವಿರೋಧ ಕಟ್ಟಿಕೊಂಡು ಬೆಂಗಳೂರಿಗೆ ಬಂದಿದ್ದಳು. ಬೆಂಗಳೂರಿನಲ್ಲಿ ಪ್ರಿಯಕರನ ಜೊತೆ ಸಂಸಾರ ಹೂಡಿದ್ದ ಈಕೆಗೆ ತಾನು ನಂಬಿದವನೇ ಯಮ ಸ್ವರೂಪಿ ಎಂಬುದು ತಿಳಿದಿರಲಿಲ್ಲ.

ರಂಜಿತಾ ಬೆಂಗಳೂರಿಗೆ ಬಂದು ಕೇವಲ ಎರಡೇ ತಿಂಗಳು ಕಳೆಯುವಷ್ಟರಲ್ಲಿ, ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂಬ ಸುದ್ದಿ ಪೋಷಕರಿಗೆ ತಲುಪಿದೆ. ಆರಂಭದಲ್ಲಿ ಇದೊಂದು ಆತ್ಮ*ಹತ್ಯೆ ಎಂದು ಪ್ರಿಯಕರ ನಾಟಕವಾಡಿದ್ದ. ಆದರೆ ಪೊಲೀಸರು ಆಳವಾಗಿ ತನಿಖೆ ನಡೆಸಿದಾಗ ಹೊರಬಂದ ಸತ್ಯ ಕೇಳಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಅದು ಆತ್ಮ*ಹತ್ಯೆಯಲ್ಲ, ಬದಲಿಗೆ ಪಕ್ಕಾ ಪ್ಲಾನ್ ಮಾಡಿ ನಡೆಸಿದ ಕೊಲೆ! ಸಣ್ಣ ವಿಚಾರಕ್ಕೆ ಜಗಳವಾಗಿ, ಪ್ರಿಯಕರನೇ ಅವಳ ಕುತ್ತಿಗೆಗೆ ಕೇಬಲ್ ವೈರ್ ಸುತ್ತಿ ಉಸಿರುಗಟ್ಟಿಸಿ ಕೊಂದಿದ್ದಾನೆ. ನಂತರ ಇದನ್ನು ಆತ್ಮ*ಹತ್ಯೆ ಎಂದು ಬಿಂಬಿಸಲು ಫ್ಯಾನಿಗೆ ನೇತು ಹಾಕಿದ್ದ. ಪ್ರೀತಿಗಾಗಿ ಮನೆ ಬಿಟ್ಟ ಹುಡುಗಿ ಅಂತಿಮವಾಗಿ ಪ್ರಿಯಕರನಿಂದಲೇ ಹೆಣವಾಗಿದ್ದು ನಾಗರಿಕ ಸಮಾಜ ತಲೆತಗ್ಗಿಸುವಂತಿದೆ.

ಪ್ರಕರಣ 2: ಆಸ್ತಿಗಾಗಿ ಹೆತ್ತ ತಾಯಿಯನ್ನೇ ಕೊಲ್ಲಲು ಹೋದ ಪಾಪಿ ಮಗ!

ಕಲಿಕಾಲದಲ್ಲಿ ದುಡ್ಡು, ಆಸ್ತಿ ಮುಂದೆ ಯಾವ ಸಂಬಂಧವೂ ದೊಡ್ಡದಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿ. ಆಸ್ತಿ ಪಾಲು ಮಾಡಲಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಮಗನೊಬ್ಬ ರಾಕ್ಷಸನಾಗಿ ಬದಲಾಗಿದ್ದಾನೆ. ತನ್ನ ಅಣ್ಣನ ಜೊತೆ ಪದೇ ಪದೇ ಜಗಳವಾಡುತ್ತಿದ್ದ ಈ ಪಾಪಿ ಮಗ, ಜಗಳ ಬಿಡಿಸಲು ಬಂದ ವೃದ್ಧ ತಾಯಿಯನ್ನೇ ಮೃತ್ಯುಕೂಪಕ್ಕೆ ತಳ್ಳಲು ಯತ್ನಿಸಿದ್ದಾನೆ. ತಾಯಿಗೆ ಮನಬಂದಂತೆ ಥಳಿಸಿ, ಅವರ ಜೀವ ತೆಗೆಯಲು ಈ ಮಗ ಹಿಂಜರಿಯಲಿಲ್ಲ. ಅಣ್ಣ ಮತ್ತು ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆಸ್ತಿಗಾಗಿ ಹಪಹಪಿಸಿದ್ದಾನೆ. ಅದೃಷ್ಟವಶಾತ್ ತಾಯಿ ಈ ದಾಳಿಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆತ್ತವರನ್ನು ದೈವವೆಂದು ಪೂಜಿಸಬೇಕಾದ ಮಕ್ಕಳು, ಆಸ್ತಿಗಾಗಿ ಅವರನ್ನು ಕೊಲ್ಲಲು ಹೊರಟಿರುವುದು ಮನುಕುಲಕ್ಕೆ ಹಿಡಿದ ಕನ್ನಡಿಯಾಗಿದೆ.

23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
24:12Wife escape: ಜಿಮ್ ಬಾಡಿ ಗಂಡನಿಂದ ಸುಖವಿಲ್ಲವೆಂದು, ಸ್ಲಿಮ್ ಬಾಡಿ ಹುಡುಗನ ಹಿಂದೆ ಹೆಂಡತಿ ಪರಾರಿ!
24:18ಮನಸ್ಸಿಲ್ಲದೆ ಮದುವೆಯಾದ ಗಂಡನ ಬಿಟ್ಟು ಪ್ರೇಮಿಯೊಂದಿಗೆ ಹೋದ ಮಗಳು; ವಾಪಸ್ ಕರೆತಂದು ವಿಷವುಣಿಸಿ ಸುಟ್ಟು ಹಾಕಿದ ಅಪ್ಪ!
25:00ಅವಳಿಗೆ 57.. ಅವನಿಗೆ 27, ಇಬ್ಬರಿಗೂ ಆಗಿತ್ತು ಕುಚ್​​..ಕುಚ್​​..! ಆ ಶಿಕ್ಷಕಿ ಸತ್ತಿದ್ದೇಗೆ? ಕೊಂದಿದ್ದು ಯಾರು..?
23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
Read more