Wife escape: ಜಿಮ್ ಬಾಡಿ ಗಂಡನಿಂದ ಸುಖವಿಲ್ಲವೆಂದು, ಸ್ಲಿಮ್ ಬಾಡಿ ಹುಡುಗನ ಹಿಂದೆ ಹೆಂಡತಿ ಪರಾರಿ!

Wife escape: ಜಿಮ್ ಬಾಡಿ ಗಂಡನಿಂದ ಸುಖವಿಲ್ಲವೆಂದು, ಸ್ಲಿಮ್ ಬಾಡಿ ಹುಡುಗನ ಹಿಂದೆ ಹೆಂಡತಿ ಪರಾರಿ!

Published : Apr 24, 2026, 07:13 PM IST

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ, ಇಬ್ಬರು ಮಹಿಳೆಯರು ತಮ್ಮ ಪ್ರಿಯಕರರಿಗಾಗಿ ಗಂಡ ಮತ್ತು ಮಕ್ಕಳನ್ನು ತೊರೆದು ಹೋಗಿದ್ದಾರೆ. ತನ್ನನ್ನು ಪ್ರೀತಿಸುತ್ತಿದ್ದ ಜಿಮ್ ಬಾಡಿ ಗಂಡನಿಗೆ ದ್ರೋಹ ಬಗೆದು ಮನೆ ಮಾಲೀಕನ ಮಗನೊಂದಿಗೆ ಓಡಿಹೋಗಿದ್ದಾಳೆ.

ಬೆಂಗಳೂರು: ಸಂಸಾರ ಅಂದ ಮೇಲೆ ಅಲ್ಲಿ ನಂಬಿಕೆ ಇರಬೇಕು, ಪರಸ್ಪರ ಗೌರವ ಇರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಅಕ್ರಮ ಸಂಬಂಧ ಎನ್ನುವ ಹೆಮ್ಮಾರಿ ಸುಂದರ ಸಂಸಾರಗಳನ್ನು ಸ್ಮಶಾನ ಮಾಡುತ್ತಿದೆ. ಪ್ರೀತಿಸಿ ಮದುವೆಯಾದ ಗಂಡ, ತನ್ನನ್ನೇ ನಂಬಿ ಹುಟ್ಟಿದ ಮಕ್ಕಳನ್ನೂ ಮರೆತು ಪ್ರಿಯಕರನ ಜೊತೆ ಓಡಿ ಹೋಗುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದು ಸಮಾಜಕ್ಕೆ ಆತಂಕಕಾರಿ ಸಂಗತಿಯಾಗಿದೆ. ಇತ್ತೀಚೆಗೆ ನಡೆದ ಎರಡು ಭಿನ್ನ ಘಟನೆಗಳು ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ.

ಘಟನೆ 1: ಗಂಡ-ಮಕ್ಕಳಿಗೆ ನಿದ್ರೆ ಮಾತ್ರೆ ಹಾಕಿದ 'ಮಹಾ' ತಾಯಿ!

ಅದೊಂದು ಸುಂದರ ಪುಟ್ಟ ಕುಟುಂಬ. ಗಂಡ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಾ ಸಂಸಾರದ ನೊಗ ಹೊತ್ತಿದ್ದ. ಹೆಂಡತಿ ಪ್ರಿಯಾಂಕಾ ಇಬ್ಬರು ಮಕ್ಕಳನ್ನು ನೋಡಿಕೊಂಡು ಮನೆಯಲ್ಲೇ ಇದ್ದಳು. ಮೇಲ್ನೋಟಕ್ಕೆ ಈ ಸಂಸಾರದಲ್ಲಿ ಯಾವುದೇ ಕಷ್ಟವಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಪ್ರಿಯಾಂಕಾ ಮನಸ್ಸಿನಲ್ಲಿ ಮಾತ್ರ ಬೇರೆಯದೇ ಸಂಚು ನಡೆಯುತ್ತಿತ್ತು.

ಅಂದು ರಾತ್ರಿ ಎಂದಿನಂತೆ ಎಲ್ಲರೂ ಊಟ ಮಾಡಿ ಮಲಗಲು ಸಿದ್ಧವಾಗಿದ್ದರು. ಆದರೆ ಪ್ರಿಯಾಂಕಾ ಅಂದು ತನ್ನ ಗಂಡ ಮತ್ತು ಇಬ್ಬರು ಮಕ್ಕಳಿಗೆ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿದ್ದಳು. ಗಂಡ ಮತ್ತು ಮಕ್ಕಳು ಗಾಢ ನಿದ್ರೆಗೆ ಜಾರುತ್ತಿದ್ದಂತೆಯೇ, 'ಹೊರಗೆ ಕಸ ಹಾಕಿ ಬರುತ್ತೇನೆ' ಎಂದು ಹೇಳಿ ಮನೆಯಿಂದ ಹೊರಬಂದವಳು ವಾಪಸ್ ಬರಲೇ ಇಲ್ಲ. ಗಾಬರಿಗೊಂಡ ಗಂಡ ಪೊಲೀಸರ ಮೊರೆ ಹೋದಾಗ ಅಸಲಿ ಸತ್ಯ ಬಯಲಾಗಿದೆ. ಈಕೆ ತನ್ನ ಪ್ರಿಯಕರನ ಜೊತೆ ಮೊದಲೇ ಪ್ಲಾನ್ ಮಾಡಿಕೊಂಡು ಎಸ್ಕೇಪ್ ಆಗಿದ್ದಳು. ತನ್ನ ಸುಖಕ್ಕಾಗಿ ಹಸುಗೂಸುಗಳಿಗೆ ನಿದ್ರೆ ಮಾತ್ರೆ ನೀಡಿದ ಈಕೆಯ ಕ್ರೂರ ಬುದ್ಧಿಗೆ ಪೊಲೀಸರೇ ಹೌಹಾರಿದ್ದಾರೆ.

ಘಟನೆ 2: ಮನೆ ಮಾಲೀಕನ ಮಗನ ಜೊತೆ ಜಿಮ್ ಟ್ರೈನರ್ ಹೆಂಡತಿ ಲವ್ವು!

ಇನ್ನೊಂದು ಪ್ರಕರಣದಲ್ಲಿ, 5 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಗಂಡ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಾ ತನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೆ ಹೆಂಡತಿ ಮಾತ್ರ ತಾನು ವಾಸವಿದ್ದ ಮನೆಯ ಮಾಲೀಕನ ಮಗನ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಳು. ಹೆಂಡತಿಯ ಈ ನಡವಳಿಕೆ ಗಂಡನಿಗೆ ತಿಳಿಯುತ್ತಿದ್ದಂತೆಯೇ, ಅವಳನ್ನು ಆತನಿಂದ ದೂರವಿಡಲು ಎರಡು ಮೂರು ಬಾರಿ ಮನೆ ಬದಲಾಯಿಸಿದ್ದ. ಹೆಂಡತಿ ಸುಧಾರಿಸಿಕೊಳ್ಳಬಹುದು ಎಂಬ ಭರವಸೆಯಲ್ಲಿ ಆತ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆದರೆ ಆಕೆ ಮಾತ್ರ ತನ್ನ ಹಳೇ ಪ್ರಿಯಕರನ ಸಹವಾಸ ಬಿಡಲಿಲ್ಲ. ಕೊನೆಗೆ ಒಂದು ದಿನ ಗಂಡನಿಗೆ ಕೈ ಕೊಟ್ಟು ತನ್ನ ಗೆಳೆಯನ ಜೊತೆ ಪರಾರಿಯಾಗಿದ್ದಾಳೆ.

ಸಮಾಜಕ್ಕೆ ಹೋಗುತ್ತಿರುವ ಸಂದೇಶವೇನು?

ಈ ಎರಡು ಘಟನೆಗಳನ್ನು ಗಮನಿಸಿದರೆ, ಇಂದಿನ ದಿನಗಳಲ್ಲಿ ನೈತಿಕ ಮೌಲ್ಯಗಳು ಹೇಗೆ ಕುಸಿಯುತ್ತಿವೆ ಎಂಬುದು ತಿಳಿಯುತ್ತದೆ. ಅತ್ತ ಗಂಡ ತನ್ನ ಹೆಂಡತಿ ಬರದಿದ್ದರೆ ವಿಷ ಕುಡಿಯುತ್ತೇನೆ ಎಂದು ರೋದಿಸುತ್ತಿದ್ದರೆ, ಇತ್ತ ಹೆಂಡತಿ ಮಾತ್ರ ಮಕ್ಕಳ ಮುಖವನ್ನೂ ನೋಡದೆ ಅನ್ಯ ಪುರುಷನ ಜೊತೆ ಸುಖ ಕಾಣಲು ಹೋಗಿದ್ದಾಳೆ. ಇಂತಹ ಪ್ರಕರಣಗಳು ಕೇವಲ ಒಂದು ಕುಟುಂಬವನ್ನಲ್ಲ, ಬದಲಿಗೆ ಮಕ್ಕಳ ಭವಿಷ್ಯವನ್ನೂ ಹಾಳು ಮಾಡುತ್ತಿವೆ.
ಸದ್ಯ ಈ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೆ ಕಾನೂನಿನ ಶಿಕ್ಷೆಗಿಂತಲೂ ಮಿಗಿಲಾಗಿ, ಇಂತಹ ಕಿಡಿಗೇಡಿ ಮಹಿಳೆಯರಿಗೆ ಸಮಾಜದ ನೈತಿಕ ಪಾಠ ಸಿಗಬೇಕಿದೆ.

23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
24:12Wife escape: ಜಿಮ್ ಬಾಡಿ ಗಂಡನಿಂದ ಸುಖವಿಲ್ಲವೆಂದು, ಸ್ಲಿಮ್ ಬಾಡಿ ಹುಡುಗನ ಹಿಂದೆ ಹೆಂಡತಿ ಪರಾರಿ!
24:18ಮನಸ್ಸಿಲ್ಲದೆ ಮದುವೆಯಾದ ಗಂಡನ ಬಿಟ್ಟು ಪ್ರೇಮಿಯೊಂದಿಗೆ ಹೋದ ಮಗಳು; ವಾಪಸ್ ಕರೆತಂದು ವಿಷವುಣಿಸಿ ಸುಟ್ಟು ಹಾಕಿದ ಅಪ್ಪ!
25:00ಅವಳಿಗೆ 57.. ಅವನಿಗೆ 27, ಇಬ್ಬರಿಗೂ ಆಗಿತ್ತು ಕುಚ್​​..ಕುಚ್​​..! ಆ ಶಿಕ್ಷಕಿ ಸತ್ತಿದ್ದೇಗೆ? ಕೊಂದಿದ್ದು ಯಾರು..?
23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
Read more