ಹುಡುಗರು ಇನ್‌ಸ್ಟಾಗ್ರಾಂ ಪೋಸ್ಟ್ ಹಾಕುವಾಗ ಯೋಚಿಸಿ, ತುಂಬಾ ಪೋಸ್ ಕೊಟ್ಟು,ಯಾರನ್ನಾದರು ಪಟಾಯಿಸಬೇಕು ಎಂದು ಪೋಸ್ಟ್ ಹಾಕಬೇಡಿ. ಕಾರಣ ನೀವು ಸಿಂಪಲ್ ಆಗಿದ್ದರೂ ಸಾಕು ಹುಡ್ಗಿ ಬೀಳ್ತಾಳೆ. ಕಾರಣ ಹೀಗೆ ಇನ್‌ಸ್ಟಾಗ್ರಾಂ ಪೋಸ್ಟ್ ನೋಡಿ ಕೊನೆಗೆ ಮದುವೆಯಾದ ಸುಂದರ ಜೋಡಿಯ ರೋಮ್ಯಾಟಿಂಕ್ ಕತೆ ಇಲ್ಲಿದೆ.
ಸೋಶಿಯಲ್ ಮೀಡಿಯಾ ಮೂಲಕ ಪರಿಚಯ ಆಗಿ ಬಳಿಕ ಪ್ರೀತಿ, ಮದುವೆಯಾದ ಹಲವು ಉದಾಹರಣೆಗಳಿವೆ. ಅದರಲ್ಲೂ ಪ್ರಮುಖವಾಗಿ ಇನ್‌ಸ್ಟಾಗ್ರಾಂ ಇದೀಗ ಹಲವು ಸಿಂಗಲ್‌ಗಳನ್ನು ಮಿಂಗಲ್ ಮಾಡಿದೆ. ಹಲವು ಬಾರಿ ಯಾರನ್ನಾದರೂ ಪಟಾಯಿಸಲೇಬೇಕು ಎಂದು ಭಾರಿ ಫೋಸ್ ಕೊಟ್ಟು, ಇಂಪ್ರೆಸ್ ಮಾಡು ರೀತಿ ಫೋಟೋ, ವಿಡಿಯೋಗಳನ್ನು ಹಾಕಿದರೂ ಲೈಕ್, ಕಮೆಂಟ್ ಅಷ್ಟಕಷ್ಟೇ ಎಂದು ತಲೆಕೆಡಿಸಿಕೊಳ್ಳಬೇಡಿ. ಕಾರಣ ನೀವೆಷ್ಟು ಸಿಂಪಲ್ ಆಗಿ ಪೋಸ್ಟ್ ಹಾಕುತ್ತೀರೋ, ಅಷ್ಟು ಲೈಕ್, ಕಮೆಂಟ್ಸ್ ಮಾತ್ರವಲ್ಲ ನಿಮ್ಮನ್ನು ಇಷ್ಟಪಡುವವರ ಸಂಖ್ಯೆ ಕೂಡ ಹೆಚ್ಚಾಲಿದೆ. ಕಾರಣ ಹೀಗೆ ಇಲ್ಲೊಬ್ಬ ಇನ್‌ಸ್ಟಾಗ್ರಾಂನಲ್ಲಿ ಹಾಕಿದ ವಿಡಿಯೋದಿಂದ ಬಾಳ ಸಂಗಾತಿ ಸುಲಭವಾಗಿ ಸಿಕ್ಕಿದ್ದಾಳೆ. ಹಳೇ ವಿಡಿಯೋಗೆ ಮನಸೋತ ಹುಡುಗಿ ಆತನನ್ನೇ ಮದುವೆಯಾದ ರೋಮ್ಯಾಂಟಿಕ್ ಲವ್ ಸ್ಟೋರಿ ಇಲ್ಲಿದೆ.
ಈ ಲವ್ ಸ್ಟೋರಿ ಹುಡುಗರಿಗೆ ಹಲವು ಟಿಪ್ಸ್ ನೀಡುತ್ತಿದೆ. ಪ್ರಮುಖವಾಗಿ ಹುಡುಗಿ ನಿಮ್ಮನ್ನು ಇಷ್ಟಪಡಲು ಇನ್‌ಸ್ಟಾಗ್ರಾಂ ತುಂಬಿರಬೇಕು, ಫಾಲೋವರ್ಸ್ ಇರಬೇಕು, ಲೈಕ್ ಕಮೆಂಟ್ಸ್ ಹೆಚ್ಚಿರಬೇಕು ಎಂದೇನಿಲ್ಲ. ಒಂದೇ ಒಂದು ಪೋಸ್ಟ್ ಸಾಕು ನಿಮ್ಮ ಹೊಸ ಲವ್ ಸ್ಟೋರಿ ಆರಂಭವಾಗಲು. ಏಮ್ಸ್‌ನಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಗಂಜನ್ ಸೈನಿ ಬಳಿಕ ತನ್ನ ಮಾತು, ಭಾಷಣ, ಕತೆಗಳನ್ನು ಸುಂದರವಾಗಿ ಹೇಳುವ ಮೂಲಕ ಅತ್ಯಂತ ಜನಪ್ರಿಯವಾಗಿದ್ದಾಳೆ. ಈಕೆ ತನ್ನ ಬಾಳ ಸಂಗಾತಿಯನ್ನು ಆರಿಸಿಕೊಂಡ ರೀತಿ, ಮದುವೆಯಾದ ಕ್ಷಣಗಳ ಕುರಿತು ಹೇಳಿದ್ದಾಳೆ.
ಗಂಜನ್ ಸೈನಿ ಎಲ್ಲರಂತೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕುವುದು, ತನ್ನ ಭಾಷಣಗಳ, ಕತೆ ಹೇಳಿದ ವಿಡಿಯೋಗಳು, ಹಾಸ್ಯ ಸನ್ನಿವೇಶಗಳ ವಿಡಿಯೋಗಳನ್ನು , ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾಳೆ. ಜೊತೆಗೆ ಇನ್‌ಸ್ಟಾಗ್ರಾಂನಲ್ಲಿ ಬೇರೆ ಪೋಸ್ಟ್‌ಗಳ ಕುರಿತು ಕಣ್ಣಾಡಿಸುತ್ತಾರೆ. ಹೀಗಿರುವಾಗ ಸೈನಿಗೆ ಒಬ್ಬ ಯುವಕ ಹಾಡು ಹಾಡುತ್ತಿರುವ ರೀಲ್ಸ್ ಈಕೆಯ ಗಮನ ಸೆಳೆಯುತ್ತದೆ. ಅದ್ಭುತವಾಗಿ ಅಲ್ಲದಿದ್ದರೂ ಒಂದು ಕ್ಷಣಕ್ಕೆ ಕೇಳುವ ಇಂಪು ನೀಡುವಂತೆ ಹಾಡಿದ್ದ. ಸೈನಿಗೆ ಈ ಹಾಡು ಇಷ್ಟವಾಯಿತು ಅಷ್ಟೇ. ಹೀಗಾಗಿ ಈ ರೀಲ್ಸ್ ಸೇವ್ ಮಾಡಿಕೊಂಡಿದ್ದಳು. ಇದು 2021ರ ಕತೆ.
ಹುಡುಗ ಮತ್ತು ಗಂಡಸರ ನಡುವಿನ 10 ವ್ಯತ್ಯಾಸಗಳು, ಪ್ರತಿ ಹುಡುಗಿಯೂ ತಿಳಿದಿರಬೇಕು?
ವರ್ಷವೇ ಉರುಳಿ ಹೋಯಿತು. ಸೇವ್ ಮಾಡಿದ ರೀಲ್ಸ್ ಮತ್ತೆ ನೋಡಲೇ ಇಲ್ಲ. ಯುವಕ ಯಾರು ಅನ್ನೋ ಕುತೂಹಲವೂ ಈಕೆಗೆ ಇರಲಿಲ್ಲ. ಮತ್ತೊಮ್ಮೆ ರೀಲ್ಸ್ ನೋಡಬೇಕು ಎಂದು ಅನಿಸಿರಲಿಲ್ಲ. 2022ರಲ್ಲಿ ಸೈನಿ ತನ್ನ ಫೋಟೋ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲು ಮುಂದಾಗಿದ್ದಳು. ಉತ್ತಮ ಕ್ಯಾಪ್ಶನ್ ಬೇಕು ಎಂದು ಇನ್‌ಸ್ಟಾಗ್ರಾಂ ತಡಕಾಡಿದ್ದಾಳೆ. ಈ ವೇಳೆ ಮತ್ತೆ ಅದೇ ಹಳೇ ರೀಲ್ಸ್ ಇನ್‌ಸ್ಟಾಗ್ರಾಂನಲ್ಲಿ ಪತ್ತೆಯಾಗಿದೆ. ಈ ರೀಲ್ಸ್ ತಾನು ಸೇವ್ ಮಾಡಿದ್ದೇನೆ ಎಂದು ತಕ್ಷಣ ನೆನಪಿಗೆ ಬಂತು. ಸರಿ ಮತ್ತೊಮ್ಮೆ ಯುವಕನ ಹಾಡು ಕೇಳಿಸಿದಾಗ, ಈ ಬಾರಿ ಕೊಂಚ ಭಿನ್ನ ಅನುಭವಾಯಿತು ಎಂದು ಸೈನಿ ಹೇಳಿಕೊಂಡಿದ್ದಾಳೆ.
ಹಾಡು ಕೇಳಿದ ಸೈನಿ, ಯುವಕನ ಪ್ರೊಫೈಲ್ ನೋಡಲು ಬಯಸಿದ್ದಾಳೆ. ಪ್ರೊಫೈಲ್ ನೋಡುವಾಗ ಸೈನಿಗೆ ಇಂಟ್ರೆಸ್ಟಿಂಗ್ ಎನಿಸಿತ್ತು. ಕಾರಣ ಯುವಕನ ಪೋಸ್ಟ್ ಹೆಚ್ಚಿರಲಿಲ್ಲ. ಆದರೆ ಫ್ಲೋರಲ್ ಶರ್ಟ್, ಡಿಂಪಲ್ ಕೆನ್ನೆ, ನಗು ನೋಡಿ ಫಾಲೋ ಮಾಡಲು ಶುರುಮಾಡಿದ್ದಾಳೆ. ಯುವಕನ ಪ್ರೊಫೈಲ್‌ನಲ್ಲಿ ಹೆಚ್ಚು ಸ್ಟೈಲೀಶ್ ಫೋಟೋಗಳಾಗಲಿ, ವಿಡಿಯೋ ಇರಲಿಲ್ಲ. ಹಾಕಿರುವ ಒಂದಷ್ಟು ಫೋಟೋದಲ್ಲಿ ಮುಕ್ತ ನಗು, ಸರಳತೆ ಇತ್ತು ಅಷ್ಟೇ. ಆದರೆ ಫಾಲೋ ಮಾಡಿ ಮೆಲ್ಲನೆ ಚಾಟಿಂಗ್ ಆರಂಭಗೊಂಡಿತು. ಈ ಚಾಟಿಂಗ್ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಇದೀಗ ಮದುವೆಯ ಅರ್ಥ ಪಡೆದಿದೆ. ಕಳೆದ ತಿಂಗಳು ಅಂದರೆ ಡಿಸೆಂಬರ್ 2024ರಲ್ಲಿ ಇವರಿಬ್ಬರು ಮದುವೆಯಾಗಿದ್ದಾರೆ.ಈ ರೋಮ್ಯಾಂಟಿಂಕ್ ಲವ್ ಸ್ಟೋರಿಯನ್ನು ಸೈನಿ ಬಹಿರಂಗಪಡಿಸಿದ್ದಾಳೆ.
ಈ ದಿನಾಂಕದಂದು ಜನಿಸಿದ ಹುಡುಗಿಯರಿಗೆ ಮದುವೆ ನಂತರ ಅದೃಷ್ಟ ಬರುತ್ತೆ