ಕೌಟುಂಬಿಕ ಕೇಸಲ್ಲಿ ಗಂಡನ ಕುಟುಂಬಸ್ಥರನ್ನು ಸಿಲುಕಿಸುವುದು ತರವಲ್ಲ: ಕೋರ್ಟ್‌ ಅಭಿಪ್ರಾಯ

Published : Nov 12, 2026, 06:30 AM IST
Court

ಸಾರಾಂಶ

ವೈವಾಹಿಕ ವ್ಯಾಜ್ಯಗಳಲ್ಲಿ ಪತಿಯ ಕುಟುಂಬದ ಪ್ರತಿಯೊಬ್ಬ ಸದಸ್ಯರನ್ನು ಅನಗತ್ಯವಾಗಿ ಸಿಲುಕಿಸುವುದು ಸರಿಯಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ನಿರ್ದಿಷ್ಟ ಸಾಕ್ಷ್ಯಾಧಾರಗಳಿಲ್ಲದೆ ಕುಟುಂಬಸ್ಥರನ್ನು ಎಳೆಯುವುದು ಕಾನೂನಿನ ದುರ್ಬಳಕೆಯಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಬೆಂಗಳೂರು: ವೈವಾಹಿಕ ವ್ಯಾಜ್ಯಗಳಲ್ಲಿ ತಮ್ಮ ಪತಿಯ ಕುಟುಂಬದ ಪ್ರತಿಯೊಬ್ಬ ಸದಸ್ಯರನ್ನೂ ಸಿಲುಕಿಸಿ ಪೊಲೀಸ್ ಠಾಣೆ ಹಾಗೂ ಕೋರ್ಟ್‌ಗೆ ಎಳೆಯುವ ಪತ್ನಿಯ ಪ್ರವೃತ್ತಿ ಸುತಾರಾಂ ತರವಲ್ಲ ಎಂದು ಹೈಕೋರ್ಟ್‌ ನುಡಿದಿದೆ.

‘ಕೌಟುಂಬಿಕ ಕ್ರೌರ್ಯ, ವರದಕ್ಷಿಣೆ ಮತ್ತು ಬಲವಂತದ ಗರ್ಭಪಾತದ ಆರೋಪದಡಿ ಪತ್ನಿ ದಾಖಲಿಸಿರುವ ದೂರಿನ ಸಂಬಂಧ ಪೊಲೀಸರು ತಮ್ಮ ವಿರುದ್ಧದ ದೋಷಾರೋಪ ಪಟ್ಟಿ ರದ್ದುಪಡಿಸುವಂತೆ ಕೋರಿ ಪತಿ, ಆತನ ತಾಯಿ ಮತ್ತು ಸಹೋದರಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ಪುರಸ್ಕರಿಸಿದ ನ್ಯಾ.ಎಂ.ನಾಗಪ್ರಸನ್ನ ಅವರ ಪೀಠ ಹೀಗೆ ನುಡಿದಿದೆ.

ಕ್ರಿಮಿನಲ್ ಕ್ರೌರ್ಯ

ವೈವಾಹಿಕ ಕಲಹವನ್ನು ಆಧರಿಸಿ ನೀಡಲಾಗುವ ದೂರುಗಳಲ್ಲಿ ಕ್ರಿಮಿನಲ್ ಕ್ರೌರ್ಯ ನಿರೂಪಿಸುವ ನಿರ್ದಿಷ್ಟ ಕೃತ್ಯಗಳಿರಬೇಕು. ಅದನ್ನು ದೋಷಾರೋಪ ಪಟ್ಟಿಯೂ ಪುಷ್ಟೀಕರಿಸಬೇಕು. ಆದರೆ, ದೂರುದಾರ ಪತ್ನಿ ಮಾಡಿರುವ ನಿರ್ದಿಷ್ಟ ಆರೋಪಗಳಿಗೆ ಸಾಕ್ಷ್ಯಧಾರಗಳೇ ಇಲ್ಲದಿರುವಾಗ, ಕುಟುಂಬದ ಸದಸ್ಯರೆಲ್ಲರನ್ನೂ ಕಾನೂನಿನ ಅಗ್ನಿಪರೀಕ್ಷೆಗೆ ಒಳಪಡಿಸುವುದು ಸಮರ್ಥನೀಯವಲ್ಲ. ವಿಚಾರಣೆ ಮುಂದುವರಿಸಿದರೆ ಆರೋಪಿ ಸ್ಥಾನದಲ್ಲಿರುವವರಿಗೆ ಸ್ವಯಂ ಶಿಕ್ಷೆಯಾಗಿ ಪರಿಣಮಿಸುತ್ತದೆ ಎಂದು ಪೀಠ ಹೇಳಿದೆ.

ಅಲ್ಲದೇ, ಪತಿಯ ಸಂಬಂಧಿಗಳು ಎಂಬ ಏಕಮಾತ್ರ ಕಾರಣಕ್ಕೆ ಆಧಾರರಹಿತವಾಗಿ ಕುಟುಂಬದ ಸದಸ್ಯರೆಲ್ಲರನ್ನೂ ಆರೋಪಿಗಳನ್ನಾಗಿ ಮಾಡಲಾಗುವುದಿಲ್ಲ. ಇಂತಹ ಪ್ರಕರಣಗಳಲ್ಲಿ ವ್ಯವಹರಿಸುವಾಗ ಪೊಲೀಸರು ಮತ್ತು ವಿಚಾರಣಾ ನ್ಯಾಯಾಲಯ ಸದಾ ಎಚ್ಚರ ವಹಿಸಬೇಕು. ವೈವಾಹಿಕ ಕಲಹವನ್ನು ಆಧರಿಸಿ ನೀಡಲಾಗುವ ದೂರುಗಳಲ್ಲಿ ಕ್ರಿಮಿನಲ್ ಕ್ರೌರ್ಯ ನಿರೂಪಿಸುವ ನಿರ್ದಿಷ್ಟ ಕೃತ್ಯಗಳಿರಬೇಕು. ದೋಷಾರೋಪ ಪಟ್ಟಿಯೂ ಪುಷ್ಟೀಕರಿಸಬೇಕು ಎಂದು ಪೀಠ ಕಿವಿಮಾತು ಹೇಳಿದೆ.

ಪ್ರಕರಣದ ವಿವರ

ದೂರುದಾರೆ ಹಾಗೂ ಅವರ ಪತಿ 2025ರಲ್ಲಿ ಮದುವೆಯಾಗಿದ್ದರು. ಮದುವೆಯ ನಂತರ ಹೆಂಡತಿ ಮಾನಸಿಕ ತೊಂದರೆಯಿಂದ ಬಳಲುತ್ತಿರುವುದು ತನ್ನ ಗಮನಕ್ಕೆ ಬಂತು. ತನ್ನ ಮೇಲೆ ಆಗಾಗ್ಗೆ ಹಲ್ಲೆ ಮಾಡುವುದು ಬಾಯಿಗೆ ಬಂದಂತೆ ಬೈಯ್ಯುವುದು, ಕೈಗೆ ಸಿಕ್ಕ ವಸ್ತುಗಳನ್ನು ಎಸೆದು ಜಗಳವಾಡುತ್ತಿದ್ದರು ಎಂದು ಪತಿ ಠಾಣೆಗೆ ದೂರು ನೀಡಿದ್ದರು. ಪ್ರತಿಯಾಗಿ ಪತ್ನಿಯು ಪತಿ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಕೌಟುಂಬಿಕ ಕ್ರೌರ್ಯ, ವರದಕ್ಷಿಣೆ ಮತ್ತು ಬಲವಂತದ ಗರ್ಭಪಾತದ ಆರೋಪ ಹೊರಿಸಿ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದ ದೂರುದಾರೆಯ ಪತಿ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅದರ ರದ್ದತಿಗೆ ಕೋರಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರ್ಷದೀಪ್ ಸಿಂಗ್ ಜೊತೆ ನಟಿ ಸಮ್ರೀನ್ ಕೌರ್ ಎಂಗೇಜ್‌ಮೆಂಟ್; ಇಬ್ಬರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?
ನನ್ನ ವನವಾಸಕ್ಕೆ ಕೊನೆ ಇಲ್ವಾ? ಹೆಣ್ಣು ಮತ್ತೆ ಮದ್ವೆಯಾಗಬಾರದಾ, ಇದ್ಯಾವ ನ್ಯಾಯ? ಪವನ್​ ಕಲ್ಯಾಣ್​ ಮಾಜಿ ಪತ್ನಿ ಪ್ರಶ್ನೆ