ಪತಿ ಒಳ್ಳೆಯವ್ನೆ ಆದ್ರೂ ನಾನ್ಯಾಕೆ ಅನ್ಯ ಪುರುಷರ ಸಹವಾಸ ಮಾಡ್ದೆ ಗೊತ್ತಾ?

By Suvarna News  |  First Published May 26, 2023, 6:32 PM IST

ಪತಿ – ಪತ್ನಿ ಸಂಬಂಧ ಅತ್ಯಂತ ಸೂಕ್ಷ್ಮವಾದದ್ದು. ಸಣ್ಣ ಸಮಸ್ಯೆ ಕಾಣಿಸಿಕೊಂಡ್ರೂ ಸಂಬಂಧ ಹಾಳಾಗುತ್ತದೆ. ಜೀವನ ಪರ್ಯಂತ ಸುಖ ನೀಡದ ಪತಿ ಸಿಕ್ಕಿದ್ರೆ ಆಕೆ ಏನು ಮಾಡ್ಬೇಕು?
 


ಈಗ್ಲೂ ಭಾರತದ ಬಹುತೇಕ ಜನರು ತಮ್ಮ ದಾಂಪತ್ಯ ಸಮಸ್ಯೆ ಬಗ್ಗೆ ಬಹಿರಂಗವಾಗಿ ಹೇಳೋದಿಲ್ಲ. ಕೌಟುಂಬಿಕ ಗಲಾಟೆ, ದಾಂಪತ್ಯ ಸುಖವನ್ನು ಮುಚ್ಚಿಟ್ಟು ಜೀವನ ನಡೆಸುವ ಜನರಿದ್ದಾರೆ. ಹಾಗಂತ ಎಲ್ಲರೂ ಇದೇ ನಿಯಮ ಪಾಲನೆ ಮಾಡ್ತಿಲ್ಲ. ಕೆಲವರ ಆಲೋಚನೆ ಬದಲಾಗಿದೆ. ತಾವು ಬಯಸಿದ್ದು ಸಿಕ್ಕಿಲ್ಲ ಎನ್ನುವ ಸಮಯದಲ್ಲಿ ಸಂಗಾತಿಯಿಂದ ದೂರವಾಗುವ ಕಠಿಣ ನಿರ್ಧಾರ ತೆಗೆದುಕೊಂಡವರ ಸಂಖ್ಯೆಯೂ ಏರಿಕೆಯಾಗ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ದಾಂಪತ್ಯದ ಗುಟ್ಟನ್ನು ಹಂಚಿಕೊಳ್ತಿದ್ದಾರೆ. ಕೆಲವರು ತಜ್ಞರ ಸಲಹೆ ಪಡೆದು ಮುಂದಿನ ನಿರ್ಧಾರ ಮಾಡ್ತಿದ್ದಾರೆ. ಇನ್ನು ಕೆಲವರು ತಮಗೆ ಯಾವುದು ಸೂಕ್ತ ಎಂಬುದನ್ನು ಚಿಂತಿಸಿ ಅದೇ ದಾರಿಯಲ್ಲಿ ನಡೆಯುತ್ತಿದ್ದಾರೆ. ಮಹಿಳೆಯೊಬ್ಬಳು ತನ್ನ  ಹಾಗೂ ಪತಿಯ ಮಧ್ಯೆ ಇರುವ ಸಂಬಂಧದ ಬಗ್ಗೆ ವಿವರವಾಗಿ ತಿಳಿಸಿದ್ದಾಳೆ. ಒಳ್ಳೆಯ ಪತಿಯಿದ್ರೂ ತಾನ್ಯಾಕೇ ಬೇರೆ ಪುರುಷರ ಜೊತೆ ಸಂಬಂಧ ಇಟ್ಟುಕೊಂಡಿದ್ದೇನೆ ಎಂಬುದನ್ನು ವಿವರಿಸಿದ್ದಾಳೆ. ಆಕೆ ಏನು ಹೇಳಿದ್ದಾಳೆ ಅನ್ನೋದನ್ನು ನಾವಿಂದು ಹೇಳ್ತೇವೆ. 

ಎರಡು ವರ್ಷದ ಹಿಂದೆ ಬದಲಾಯ್ತು ಜೀವನ (Life) : ಮದುವೆಯಾದ ನಂತ್ರವೂ ಅಕ್ರಮ ಸಂಬಂಧ ಬೆಳೆಸುವ ಬಗ್ಗೆ ನೀವೇನು ಆಲೋಚನೆ ಮಾಡ್ತೀರಿ ಅಂತಾ ಎರಡು ವರ್ಷಗಳ ಹಿಂದೆ ನನ್ನನ್ನು ಕೇಳಿದ್ರೆ ನಾನು ಕೋಪ (Anger)ಗೊಳ್ತಿದ್ದೆ ಇಲ್ಲವೆ ಅಳ್ತಿದ್ದೆ. ಆದ್ರೀಗ ಅದ್ರಲ್ಲಿ ತಪ್ಪೇನಿದೆ ಎಂದು ಧೈರ್ಯವಾಗಿ ಹೇಳ್ತೇನೆ. ಯಾಕೆಂದ್ರೆ ನನ್ನ ಅಗತ್ಯಗಳನ್ನು ತನ್ನ ಪತಿ ಪೂರೈಸ್ತಿಲ್ಲ. ನನಗೆ ಏನು ಬೇಕು ಎಂಬುದು ಇತರ ಪುರುಷರಿಗೆ ಗೊತ್ತಿದೆ. ಅವರು ನನ್ನನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದಾರೆ. ಹಾಗಂತ ಈ ವಿಷ್ಯವನ್ನು ನಾನು ಮುಚ್ಚಿಟ್ಟಿಲ್ಲ. ನನ್ನ ಪತಿಗೆ ಇದ್ರ ಬಗ್ಗೆ ಎಲ್ಲವನೂ ಹೇಳಿದ್ದೇನೆ. 

Tap to resize

Latest Videos

Relationship Tips: ನೀವು ಹೀಗೆ ಮಾಡೋದ್ರಿಂದಾನೇ ಸಂಬಂಧ ಮುರಿದು ಬೀಳೋದು

ಎಲ್ಲವೂ ಇದೆ ಆದ್ರೆ ಅದೇ ಇಲ್ಲ : ನಾವಿಬ್ಬರೂ  ಚೆನ್ನಾಗಿದ್ದೇವೆ. ನಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ. ಆದರೆ ನಮ್ಮ ಜೀವನದ ಕಹಿ ಸತ್ಯವೆಂದರೆ ನಮ್ಮ ಲೈಂಗಿಕ (Sexual) ಜೀವನ. ಸಂಭೋಗದಲ್ಲಿ ಇಬ್ಬರಿಗೂ ಹೊಂದಿಕೆಯಾಗ್ತಿಲ್ಲ. ನಮ್ಮಿಬ್ಬರ ನಿರೀಕ್ಷೆ (Expectation),  ಆಸೆಗಳು ಭಿನ್ನವಾಗಿವೆ. ಎಷ್ಟೇ ಪ್ರಯತ್ನಿಸಿದರೂ ಒಬ್ಬರನ್ನೊಬ್ಬರು ಸಂತೋಷವಾಗಿಡಲು ಸಾಧ್ಯವಾಗಲಿಲ್ಲ. ನನ್ನ ಲೈಂಗಿಕ ಅಗತ್ಯವನ್ನು ಪೂರೈಸಲು ಪತಿಗೆ ಸಾಧ್ಯವಿಲ್ಲ ಎಂದಾಗ ನಾವು ಬೇರೆ ದಾರಿ ನೋಡಿಕೊಳ್ಳಬೇಕಾಯ್ತು. ನಾನು ಪರ ಪುರುಷರ ಕಡೆ ವಾಲಬೇಕಾಯ್ತು.

ಮುಕ್ತ ಸಂಬಂಧ (Relationship) : ನನ್ನ ಇಚ್ಛೆಯನ್ನು ಸಂಪೂರ್ಣವಾಗಿ ಪೂರೈಸಲು ಸಾಧ್ಯವಿಲ್ಲ ಎಂಬುದು ಪತಿಗೆ ತಿಳಿಸಿದ್ದು. ಇದೇ ಕಾರಣಕ್ಕೆ ಆತ ಮುಕ್ತ ಸಂಬಂಧವನ್ನು ಒಪ್ಪಿಕೊಂಡಿದ್ದ. ಪತಿ ಕೂಡ ಬೇರೆ ಹುಡುಗಿಯರ ಜೊತೆ ಬೆರೆಯುತ್ತಾನೆ ಅಂತಾ ನಾನು ಅಂದುಕೊಂಡಿದ್ದೆ. ಆರಂಭದಲ್ಲಿ ನನಗೆ ಎಲ್ಲವೂ ವಿಶೇಷವಾಗಿತ್ತು. ಹೊಸ ಹೊಸ ಪ್ರಯೋಗಗಳನ್ನು ಮಾಡಲು ನಾನು ಬಯಸಿದ್ದೆ.  ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯುವ ಅನಿವಾರ್ಯತೆಯಿತ್ತು. ಇದೇ ಕಾರಣಕ್ಕೆ ಮುಕ್ತವಾಗಿ ಮಾತನಾಡುವ ನಿರ್ಧಾರಕ್ಕೆ ನಾವಿಬ್ಬರು ಬಂದಿದ್ದೆವು. ನಾವಿಬ್ಬರು ಪ್ರಾಮಾಣಿಕವಾಗಿದ್ದೇವೆ. ಎಂದಿಗೂ ನಾನು ಪತಿಗೆ ಸುಳ್ಳು ಹೇಳಿಲ್ಲ. ನಮ್ಮಿಬ್ಬರ ಮಧ್ಯೆ ರಹಸ್ಯವಿದ್ರೆ ಅದ್ಯಾವಾಗ್ಲೂ ಸಂಬಂಧ ಮುರಿದು ಬೀಳ್ತಿತ್ತು. ನಮ್ಮ ದಾಂಪತ್ಯ ನಂಬಿಕೆ ಮೇಲೆ ನಿಂತಿದೆ. ನನ್ನಿಷ್ಟವನ್ನು ನಾನು ಪತಿಗೆ ಹೇಳಿದ್ದೇನೆ. ನಾವಿಬ್ಬರೂ ನಮ್ಮ ಆಸೆಗಳನ್ನು ಹಂಚಿಕೊಂಡ ಕಾರಣ ಇಬ್ಬರು ಆರಾಮವಾಗಿ ಜೀವನ ನಡೆಸುತ್ತಿದ್ದೇವೆ. ನನ್ನ ಪತಿ ಏನು ಮಾಡ್ತಿದ್ದಾನೆ, ಯಾವ ಸಾಹಸಕ್ಕೆ ಕೈ ಹಾಕಿದ್ದಾನೆ ಎಲ್ಲದರ ಅರಿವು ನನಗಿರುತ್ತದೆ. ನಮ್ಮಿಬ್ಬರ ಮಧ್ಯೆ ಸಮಸ್ಯೆ ತಂದಿದ್ದು ಅದೊಂದೆ. ಅದೊಂದು ಕೊರತೆ ಕಾಡದೆ ಹೋಗಿದ್ರೆ ನಾನೆಂದು ಮುಕ್ತ ಸಂಬಂಧವನ್ನು ಒಪ್ಪಿಕೊಳ್ತಿರಲಿಲ್ಲ. 

The Karezza Method: ಸುಖಕರ ಲೈಂಗಿಕ ಜೀವನಕ್ಕೆ ಈ ತಂತ್ರ ಬಳಸಿ

click me!