ಗಂಡನ ಅಕ್ರಮ ಸಂಬಂಧವೊಂದೇ ಪತ್ನಿ ಮೇಲಿನ ಕ್ರೌರ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ, ಹೈಕೋರ್ಟ್

Published : Oct 25, 2026, 04:03 PM IST
Extramarital Affairs

ಸಾರಾಂಶ

ಗಂಡನ ಅಕ್ರಮ ಸಂಬಂಧಕ್ಕೆ ಕೋರ್ಟ್ ಮಣೆ ಹಾಕಿತಾ? ಹೈಕೋರ್ಟ್ ನೀಡಿದ ತೀರ್ಪು ಇದೀಗ ಚರ್ಚೆಯಾಗುತ್ತಿದೆ. ಮತ್ತೊಬ್ಬ ಮಹಿಳೆ ಜೊತೆ ಗಂಡನಿಗೆ ಇರುವ ಅಕಮ ಸಂಬಂಧ ಮಾತ್ರ ಪತ್ನಿ ಮೇಲಿನ ಕ್ರೌರ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿದೆ. ಏನಿದು ಆದೇಶ?

ಚೆನ್ನೈ (ಅ.25) ಅಕ್ರಮ ಸಂಬಂಧ ಕುರಿತು, ಕ್ರೌರ್ಯ ಕುರಿತು ಹೈಕೋರ್ಟ್ ನೀಡಿದ ತೀರ್ಪೋಂದು ಎಲ್ಲರ ಗಮನಸೆಳೆದಿದೆ. ಗಂಡನಿಗೆ ಮತ್ತೊಬ್ಬ ಮಹಿಳೆ ಜೊತೆ ಅಕ್ರಮ ಸಂಬಂಧವಿದ್ದರೆ ಅದು ಮಾತ್ರ ಪತ್ನಿ ವಿರುದ್ದ ಕ್ರೌರ್ಯವಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಸೆಕ್ಷನ್ 498ಎ ಅಡಿಯಲ್ಲಿ ಪತ್ನಿ ಮೇಲಿನ ಕೌರ್ಯ ಸಾಬೀತಾಗಲು ಪತಿಯ ಅಕ್ರಮ ಸಂಬಂಧ ಆರೋಪ ಮಾತ್ರ ಸಾಕಾಗಲ್ಲ. ಅದಕ್ಕಿಂತ ಹೆಚ್ಚಿನ ಸಾಕ್ಷ್ಯದ ಅಗತ್ಯವಿದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.

ಏನಿದು ಹೈಕೋರ್ಟ್ ತೀರ್ಪು

ವರದಕ್ಷಿಣೆ ಹಾಗೂ ಪತಿಯ ಅಕ್ರಮ ಸಂಬಂಧ ಕಾರಣ ಮಹಿಳೆಯೊಬ್ಬರು ಒಂದೂವರೆ ವರ್ಷದ ಮಗುವಿನ ಜೊತೆ ದುರಂತ ಅಂತ್ಯಕಂಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಮಹಿಳಾ ನ್ಯಾಯಾಲಯ 2018ರಲ್ಲಿ ಗಂಡನ ಮೇಲಿನ ಆರೋಪ ಸಾಬೀತುಪಡಿಸಲು ಸಾಕ್ಷ್ಯಗಳಿಲ್ಲ. ಜೊತೆಗೆ ಸರ್ಕಾರ ಪುರುಷನ ಕ್ರೌರ್ಯ ಸಾಬೀತುಪಡಿಸಲು ಸಾಕ್ಷ್ಯಗಳನ್ನು, ಪೂರಕ ದಾಖಲೆಗಳನ್ನು ಒದಗಿಸಿಲ್ಲ ಎಂದಿತ್ತು. ಜೊತೆಗೆ ಮೃತ ಮಹಿಳೆಯ ಗಂಡನನ್ನು ಖುಲಾಸೆಗೊಳಿಸಿತ್ತು.

ಮನವಿ ತಿರಸ್ಕರಿಸಿದ ಕೋರ್ಟ್

ಈ ತೀರ್ಪಿನ ವಿರುದ್ಧ ತಮಿಳುನಾಡು ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಹೀಗಾಗಿ ಹೈಕೋರ್ಟ್ ವಿಚಾರಣೆ ವೇಳೆ ಮಹಿಳೆ ಸಹೋದರ ಫಿರ್ಯಾದಿಯಾಗಿದ್ದರು. ಮದ್ರಾಸ್ ಹೈಕೋರ್ಟ್ ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡು ಹಲವು ಅಂಶಗಳ ಮೇಲೆ ಬೆಳಕು ಚೆಲ್ಲಿದೆ. ಪತಿಗೆ ಅಕ್ರಮ ಸಂಬಂಧವಿದೆ ಎಂದರೆ ಅದು ಮಹಿಳೆ ಮೇಲಿನ ಕ್ರೌರ್ಯವಾಗುವುದಿಲ್ಲ. ಇಷ್ಟೇ ಅಲ್ಲ ಈ ಆರೋಪ ಮಹಿಳೆಯನ್ನು ದುಡುಕಿನ ನಿರ್ಧಾರಕ್ಕೆ ತಳ್ಳುವ ಪ್ರೇರೇಪಣೆಯಾಗುವುದಿಲ್ಲ. ಕೇವಲ ಅಕ್ರಮ ಸಂಬಂದ ಆರೋಪ ಮಾತ್ರ ಸಾಕಾಗುವುದಿಲ್ಲ. ಸಾಬೀತುಪಡಿಸುವ ಸಾಕ್ಷ್ಯಗಳು ಬೇಕು ಎಂದು ಮದ್ರಾಸ್ ಹೈಕೋರ್ಟ್ ಹೇಳಿತು. ಇದೇ ವೇಳೆ ಸುಪ್ರೀಂ ಕೋರ್ಟ್‌ನ ಪಿನಾಕಿನ್ ಮಹಿಪತ್ರಯ ರಾವಲ್ ವರ್ಸಸ್ ಗುಜರಾತ್ ಸರ್ಕಾರದ ಪ್ರಕರಣಧ ತೀರ್ಪು ಉಲ್ಲೇಖಿಸಿತು. ಈ ಮೂಲಕ ಮಹಿಳೆ ಸಹೋದರ ಹಾಗೂ ಸರ್ಕಾರದ ಮೇಲ್ಮನವಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿತು.

ಈ ಕೋರ್ಟ್ ತೀರ್ಪು ಎಲ್ಲರ ಗಮನಸೆಳೆದಿದೆ. ವಿಶೇಷವಾಗಿ ಕೋರ್ಟ್ ಹಲವು ಸ್ಪಷ್ಟ ಪದಗಳಲ್ಲಿ ತೀರ್ಪು ನೀಡಿದೆ. ಮಹಿಳೆ ಮೇಲಿನ ಕ್ರೌರ್ಯ ಸಾಬೀತುಪಡಿಸಲು ಪತಿಯ ಅಕ್ರಮ ಸಂಬಂಧ ಆರೋಪ ಮಾತ್ರ ಸಾಕಾಗುವುದಿಲ್ಲ ಎಂದಿದೆ. ಈ ಮೂಲಕ ಆರೋಪ ಹಿಡಿದು ಮಹಿಳೆಯ ಮೇಲೆ ಕ್ರೌರ್ಯ ನಡೆದಿದೆ ಎಂದರೆ ಕೋರ್ಟ್ ಪರಿಗಣಿಸುವುದಿಲ್ಲ. ಅದನ್ನು ಸಾಬೀತುಪಡಿಸುವ, ಅಕ್ರಮ ಸಂಬಂಧದಿಂದ ಪತ್ನಿಗೆ ಆಗಿರುವ ಕ್ರೌರ್ಯವನ್ನು ಸಾಬೀತುಪಡಿಸುವ ಸಾಕ್ಷ್ಯ ನೀಡಬೇಕು ಎಂದು ಕೋರ್ಟ್ ಹೇಳಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Marriage ಪ್ರಾಮಿಸ್ ಮಾಡೋ ಮುನ್ನ ಯೋಚಿಸಿ; ರಾಜ್ಯಪಾಲರಾದ ಆನಂದಿಬೆನ್‌ರಿಂದ ಯೂತ್ಸ್‌ಗೆ ಮಾರ್ಮಿಕ ಸಂದೇಶ! ಅಸಲಿ ಕಥೆ ಏನು?
ವಿದೇಶಿ ಗೆಳೆಯನ ಕೈಹಿಡಿದ ನಟ ಅರ್ಜುನ್ ಸರ್ಜಾ ಕಿರಿಯ ಪುತ್ರಿ.. ಅದ್ದೂರಿಯಾಗಿ ನೆರವೇರಿತು ಅಂಜನಾ-ಇಸಾಯ್ ವಿವಾಹ