ವರ್ಷ 40 ಆಯ್ತು, ಮದ್ವೆ ಆಗ್ತಿಲ್ಲವೆಂದರೆ ಹೀಗ್ ಮಾಡಿ ನೋಡಿ, ಡೇಟಿಂಗ್ ಟಿಪ್ಸ್

By Suvarna News  |  First Published Sep 22, 2023, 1:12 PM IST

ನಿಜವಾದ ಪ್ರೀತಿ ಸಿಗೋದು ಈಗಿನ ದಿನಗಳಲ್ಲಿ ಸುಲಭವಲ್ಲ. ಪ್ರೀತಿ ಹುಡುಕಾಟದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ವಯಸ್ಸು ಹೆಚ್ಚಾಗ್ತಾ ಹೋದಂತೆ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಆ ಸಮಯದಲ್ಲಿ ಎಚ್ಚರಿಕೆ ಹೆಜ್ಜೆ ಇಟ್ರೆ ಸಂಗಾತಿ ಸಿಗೋದ್ರಲ್ಲಿ ಅನುಮಾನವಿಲ್ಲ.  
 


ವರ್ಷ 40 ಆಗ್ತಾ ಬಂದಿದೆ, ಇನ್ನೂ ಸಂಗಾತಿ ಸಿಕ್ಕಿಲ್ಲ ಎಂದಾಗ ನೋವಾಗುವುದು ಸಹಜ. ಈ ವಯಸ್ಸಿನವರೆಗೆ ಪ್ರೀತಿ ಇಲ್ಲದೆ ಜೀವನ ನಡೆಸೋದು ಸುಲಭ ಕೂಡ ಅಲ್ಲ. 40ನೇ ವಯಸ್ಸಿನಲ್ಲೂ ಆ ವ್ಯಕ್ತಿ ಬೇಡ, ಈ ವ್ಯಕ್ತಿ ಬೇಡ ಎಂದಾಗ ಮನೆಯವರು, ಸಂಬಂಧಿಕರ ಬೈಗುಳ ಕೇಳಬೇಕಾಗುತ್ತದೆ. ಇಷ್ಟು ವಯಸ್ಸಿನಲ್ಲಿ ಮತ್ತ್ಯಾರು ಸಿಗ್ತಾರೆ? ಸಿಕ್ಕ ವ್ಯಕ್ತಿಯನ್ನೇ ಬಾಳ ಸಂಗಾತಿಯಾಗಿ ಒಪ್ಪಿಕೊಂಡು, ಹೊಂದಾಣಿಕೆ ಜೀವನ ನಡೆಸು ಎನ್ನುತ್ತಾರೆ. ಕುಟುಂಬಸ್ಥರ ಈ ಮಾತು ಒಂದು ಕಡೆ ಹೌದು ಎನ್ನಿಸಿದ್ರೂ ಇನ್ನೊಂದು ಕಡೆ ಮನಸ್ಸು ಒಪ್ಪದ ವ್ಯಕ್ತಿ ಜೊತೆ ಜೀವನ ನಡೆಸೋದು ಕಷ್ಟವಾಗುತ್ತದೆ. 20- ನ25ರ ವಯಸ್ಸಿನಲ್ಲಿ ಸಂಗಾತಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಸುಲಭ. 40ರ ಹರೆಯದಲ್ಲಿ ಸ್ವಲ್ಪ ಕಷ್ಟ. ಯಾಕೆಂದ್ರೆ, ಇಷ್ಟು ವರ್ಷ ಒಂಟಿಯಾಗಿ ಜೀವನ ನಡೆಸಿರುವ ಜನರಿಗೆ ಅದು ಅಭ್ಯಾಸವಾಗಿರುತ್ತದೆ. ದಿಢೀರ್ ಸಂಗಾತಿ ಜೊತೆ ಎಲ್ಲವನ್ನೂ ಹಂಚಿಕೊಳ್ಳೋದು ಕಷ್ಟವಾಗುತ್ತದೆ. ಆದ್ರೆ ಜೀವನದಲ್ಲಿ ಮತ್ತಷ್ಟು ಖುಷಿ ಸಿಗ್ಬೇಕೆಂದ್ರೆ ಬಾಳಿಗೊಂದು ಸಂಗಾತಿಯ ಎಂಟ್ರಿಯಾಗ್ಬೇಕು. ನೀವು ಕೆಲ ಟಿಪ್ಸ್ ಫಾಲೋ ಮಾಡುವ ಮೂಲಕ 40ನೇ ವಯಸ್ಸಿನಲ್ಲೂ ಸಂಗಾತಿಯನ್ನು ಪಡೆಯಹುದು. 

ಆತ್ಮವಿಶ್ವಾಸ (Self Confidence ) ಬಹಳ ಮುಖ್ಯ : ನಿಮ್ಮ ವಯಸ್ಸಿನವರು ಅಥವಾ ನಿಮಗಿಂತ ಚಿಕ್ಕ ವಯಸ್ಸಿನವರು ಪ್ರೀತಿ (Love) ಯೊಂದಿಗೆ ಜೀವನ ನಡೆಸುತ್ತಿದ್ದರೆ ಅವರನ್ನು ನೋಡಿ ನಿಮಗೆ ನಿಮ್ಮ ಮೇಲೆಯೇ ಜಿಗುಪ್ಸೆ ಬರಬಹುದು. ಹಿಂದೆಯೇ ಇದೆಲ್ಲವನ್ನು ಮಾಡ್ಬೇಕಿತ್ತು, ಈಗ ಕಾಲ ಮುಗಿತು ಎನ್ನಿಸಬಹುದು. ನಿಮ್ಮ ಈ ಆಲೋಚನೆ ನಿಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನಿಮ್ಮ ಮೇಲೆ ವಿಶ್ವಾಸವನ್ನು ಯಾವಾಗ್ಲೂ ಕಳೆದುಕೊಳ್ಳಬೇಡಿ. ನೀವು ಮಾಡುವ ಕೆಲಸ, ಹುದ್ದೆ ಹಾಗೂ ನಿಮ್ಮನ್ನು ನೀವು ಸದಾ ಪ್ರೀತಿಸಿ. 

Tap to resize

Latest Videos

ಅಚ್ಚರಿಯಾದ್ರೂ ಸತ್ಯ, ಈ ರಾಶಿಯವರು ಹುಟ್ಟುತ್ತಲೇ ಪ್ರಬುದ್ಧರಾಗಿರುತ್ತಾರೆ!

ಆನ್ಲೈನ್ (Online) ಡೇಟಿಂಗ್ ಸಹಾಯ ಪಡೆಯಿರಿ : ಈಗಿನ ದಿನಗಳಲ್ಲಿ ಆನ್ಲೈನ್ ಡೇಟಿಂಗ್ ಪ್ರಸಿದ್ಧಿ ಪಡೆಯುತ್ತಿದೆ. ಇದ್ರಲ್ಲಿ ಕೆಲವರು ನಿಜವಾದ ಪ್ರೀತಿಯನ್ನು ಕಂಡುಕೊಂಡಿದ್ದಾರೆ. ನೀವೂ ಪ್ರಯತ್ನ ನಡೆಸಬಹುದು. ಆದ್ರೆ ಡೇಟಿಂಗ್ ಅಪ್ಲಿಕೇಷನ್ ಬಳಸುವ ಮುನ್ನ ನಿಮ್ಮ ಸೆಕ್ಯೂರಿಟಿ ಬಗ್ಗೆ ಗಮನವಿರಲಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಎಲ್ಲ ಕಡೆ ಬಹಿರಂಗಗೊಳಿಸಬೇಡಿ. ಅಪರಿಚಿತ ವ್ಯಕ್ತಿ ಭೇಟಿ ವೇಳೆಯೂ ಎಚ್ಚರದಿಂದ ಇರಲಿ. ಸಂಬಂಧ ಬೆಳೆಸಲು ಯಾವುದೆ ಆತುರ ಬೇಡ.

ಫಿಟ್ನೆಸ್ (Fitenss) ಕಾಯ್ದುಕೊಳ್ಳಿ : ಫಿಟ್ ಆಗಿರುವ ವ್ಯಕ್ತಿಗೆ ವಯಸ್ಸು ಕೇವಲ ಸಂಖ್ಯೆಯಾಗಿರುತ್ತದೆ. ನೀವು 40ರ ವಯಸ್ಸಿನಲ್ಲೂ ಅನೇಕರನ್ನು ಆಕರ್ಷಿಸಬೇಕು ಎಂದ್ರೆ ನಿಮ್ಮ ಫಿಟ್ನೆಸ್ ಗೆ ಮಹತ್ವ ನೀಡಿ. ಪ್ರೀತಿ ಹುಡುಕಾಟದಲ್ಲಿ ನಿತ್ಯದ ವ್ಯಾಯಾಮ ಮರೆಯಬೇಡಿ. 40ರ ವಯಸ್ಸಿನಲ್ಲಿ ಸಂಗಾತಿ ಸಿಗುವ ಸಾಧ್ಯತೆಯನ್ನು ಹೆಚ್ಚು – ಕಡಿಮೆ ಮಾಡುವ ಶಕ್ತಿ ಫಿಟ್ನೆಸ್ ಗಿದೆ. 

ತೋರ್ಪಡಿಕೆ ವ್ಯಕ್ತಿತ್ವ ಬೇಡ (Show Off Personality): ನಿಮ್ಮ ಸ್ವಭಾವವೇ ನಿಮ್ಮನ್ನು ಈವರೆಗೆ ಒಂಟಿಯಾಗಿಸಿರಬಹುದು. ಹಾಗಂತ ನಿಮ್ಮದಲ್ಲದ ವ್ಯಕ್ತಿತ್ವ ಪ್ರದರ್ಶಿಸುವ ಸಾಹಸಕ್ಕೆ ಕೈ ಹಾಕಬೇಡಿ. ಪ್ರತಿಯೊಬ್ಬ ವ್ಯಕ್ತಿಯೂ ನಿಜವಾದ ಪ್ರೀತಿ ಬಯಸ್ತಾನೆಯೇ ವಿನಃ ನಾಟಕೀಯ ಪ್ರೀತಿ, ವ್ಯಕ್ತಿತ್ವ, ಮನುಷ್ಯನಲ್ಲ. 

ಭಾರತದ ಈ ಗ್ರಾಮದಲ್ಲಿ ಮದುವೆಗೂ ಮುನ್ನ ನೈಟ್ ಕ್ಲಬ್ಬಲ್ಲಿ ದೈಹಿಕ ಸಂಬಂಧ ಬೆಳೆಸ್ಬಹುದು!

ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಿ : ಸಾಮಾಜಿಕ ಕಾರ್ಯಕ್ರಮ, ಸಂಬಂಧಿಕರ, ಕುಟುಂಬಸ್ಥರ ಮನೆಯಲ್ಲಿ ನಡೆಯುವ ಪಾರ್ಟಿ, ಸಮಾರಂಭದಲ್ಲಿ ಪಾಲ್ಗೊಳ್ಳಬೇಕು. ಒಂಟಿ ಎನ್ನುವ ಕಾರಣಕ್ಕೆ ಮನೆಯಲ್ಲಿ ಕುಳಿತ್ರೆ ಸಂಗಾತಿ ಸಿಗೋದು ಕಷ್ಟ. ನಿಮಗೆ ಸಮಾರಂಭಗಳಲ್ಲಿ ಒಂದಿಷ್ಟು ಹೊಸಬರ ಪರಿಚಯವಾಗುತ್ತದೆ. ಅಲ್ಲಿಯೇ ನಿಮಗೆ ಪ್ರೀತಿ ಸಿಕ್ಕರೂ ಅಚ್ಚರಿಯಿಲ್ಲ. 40ರ ವಯಸ್ಸಿನಲ್ಲಿ ನೀವು ಪ್ರೀತಿಯನ್ನು ಹುಡುಕುತ್ತಿದ್ದರೆ ಈ ಎಲ್ಲ ವಿಷ್ಯದ ಬಗ್ಗೆ ಗಮನ ನೀಡಿ. 

click me!