ತಮಾಷೆಗೆ ಡಿಎನ್ಎ ಪರೀಕ್ಷೆ ಮಾಡಿಸಿದವಳಿಗೆ ಶಾಕ್, ಕಲೀಗ್ ಸಂಶಯ ನಿಜವಾಯ್ತು

By Roopa Hegde  |  First Published Nov 5, 2024, 12:44 PM IST

ಸುಲಭ ಎನ್ನುವ ಮಾತ್ರಕ್ಕೆ ಕಂಡ ಕಂಡಾಗೆಲ್ಲ ಡಿಎನ್ಎ ಪರೀಕ್ಷೆ ಮಾಡಿಸಿದ್ರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಇರೋ ನೆಮ್ಮದಿಯನ್ನೂ ಕಳೆದುಕೊಳ್ಳಬೇಕಾಗುತ್ತೆ. ಈ ಹುಡುಗಿಗೆ ಒಂದ್ಕಡೆ ಭಯಾನಕ ಸತ್ಯಗೊತ್ತಾದ್ರೂ ನೆಮ್ಮದಿ ಇಲ್ಲದಂತಾಗಿದೆ. 


ಮಗು ಹುಟ್ತಿದ್ದಂತೆ ಹೋಲಿಕೆ (comparison) ಶುರುವಾಗುತ್ತೆ. ಅಮ್ಮನ ಹಾಗೆ ಕಾಣ್ತಾರೆ, ಅಪ್ಪನ ಹಾಗೆ ಕಾಣ್ತಾರೆ ಅಂತ ಜನರು ಕಮೆಂಟ್ ನೀಡಲು ಶುರು ಮಾಡ್ತಾರೆ. ಮಕ್ಕಳು ದೊಡ್ಡವರಾಗ್ತಿದ್ದಂತೆ ಈ ಚರ್ಚೆ ಕೆಲವೊಮ್ಮೆ ಅತಿರೇಕಕ್ಕೆ ಹೋಗಿರುತ್ತೆ. ಕುಟುಂಬದ ಎಲ್ಲ ಸದಸ್ಯರಿಗಿಂತ ನೀನು ಭಿನ್ನವಾಗಿದ್ದೀಯಾ ಅಂತ ಅನೇಕರು ತಮಾಷೆ (funny) ಮಾಡೋದನ್ನು ಕೇಳಿರ್ತೇವೆ. ಇದನ್ನು ಬಹುತೇಕರು ಗಂಭೀರವಾಗಿ ಪರಿಗಣಿಸೋದಿಲ್ಲ. ಆದ್ರೆ ಈ ಹುಡುಗಿ ಇಂಥ ಕಮೆಂಟ್ ಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದಲ್ಲದೆ, ಪರೀಕ್ಷೆಗೆ ಮುಂದಾಗಿದ್ದಾಳೆ. ಆದ್ರೆ ಆಕೆಗೆ ಸಿಕ್ಕ ಡಿಎನ್ ಎ ಪರೀಕ್ಷಾ ವರದಿ (DNA Test Report), ಅವಳ ಜೀವನವನ್ನು ಅಲ್ಲೋಲ ಕಲ್ಲೋಲಗೊಳಿಸಿದೆ. 

ವಿದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಡಿಎನ್ ಎ ಪರೀಕ್ಷೆ ಸಾಮಾನ್ಯ ಎನ್ನುವಂತಾಗಿದೆ. ಹಿಂದೆ ಡಿಎನ್ ಎ ಪರೀಕ್ಷೆ ಕಷ್ಟವಾಗಿತ್ತು. ಅನೇಕ ದಾಖಲೆ ನೀಡ್ಬೇಕಿತ್ತು. ಆದ್ರೀಗ ಹಣ ನೀಡಿದ್ರೆ ಯಾವುದೇ ವ್ಯಕ್ತಿ ಡಿಎನ್ ಎ ಪರೀಕ್ಷೆ ಮಾಡಿಸಬಹುದು. ಇದೇ ಕಾರಣಕ್ಕೆ ಜನರು, ಸಣ್ಣಪುಟ್ಟ ವಿಷ್ಯಕ್ಕೂ ಡಿಎನ್ ಎ ಪರೀಕ್ಷೆ ಮಾಡಿಸಿಕೊಳ್ತಿದ್ದಾರೆ. ಡಿಎನ್ ಎ ಪರೀಕ್ಷಾ ವರದಿ ಸಂತೋಷದಾಯಕವಾಗಿರುತ್ತದೆ ಎನ್ನಲು ಸಾಧ್ಯವಿಲ್ಲ. ಅನೇಕ ಬಾರಿ ಇದು ಬಾಳಿಗೆ ಬಿರುಗಾಳಿ ಆಗ್ಬಹುದು. ಇಡೀ ಜೀವನವನ್ನೇ ಸರ್ವನಾಶ ಮಾಡ್ಬಹುದು. ಅದಕ್ಕೆ ಈ ಚೀನಾದ ಹುಡುಗಿ ಉತ್ತಮ ನಿದರ್ಶನ. ಕಚೇರಿ ಸಿಬ್ಬಂದಿ ಮಾತಿಗೆ ಕಿವಿಗೊಡದೆ ಹೋಗಿದ್ರೆ ಅಪ್ಪ – ಅಮ್ಮನ ಜೊತೆ ಸಂತೋಷದಿಂದ ಇರಬಹುದಿತ್ತು. ಆದ್ರೆ ಅವರ ತಮಾಷೆಯನ್ನು ಗಂಭೀರವಾಗಿ ತೆಗೆದುಕೊಂಡು, ಡಿಎನ್ ಎ ಪರೀಕ್ಷೆ ಮಾಡಿಸಿ, ಈಗ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎನ್ನುವ ಸ್ಥಿತಿಯಲ್ಲಿದ್ದಾಳೆ. ಆಕೆಯ ಬಾಳಿನ ನೆಮ್ಮದಿ ಕಾಣೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷ್ಯವಾಗಿದ್ದಾಳೆ. 

Tap to resize

Latest Videos

undefined

ಪಿಂಚಣಿ ನಿಯಮದಲ್ಲಿ ಮಹತ್ವದ ಬದಲಾವಣೆ, ಮಗಳ ಹೆಸರು ಕಡ್ಡಾಯಗೊಳಿಸಿದ ಸರ್ಕಾರ

ಘಟನೆ ನಡೆದಿರೋದು ಉತ್ತರ ಚೀನಾದಲ್ಲಿ (North China). 24 ವರ್ಷದ ಹುಡುಗಿ ತನ್ನ ಕಥೆಯನ್ನು ಹೆನಾನ್ ಬ್ರಾಡ್ ಕಾಸ್ಟ್ ಜೊತೆ ಹಂಚಿಕೊಂಡಿದ್ದಾಳೆ. ಆಕೆಯ ಆಫೀಸ್ ನಲ್ಲಿ, ಅವಳನ್ನು ಗೇಲಿ ಮಾಡ್ತಿದ್ದರು. ಅವಳ ಮೂಗು ಹಾಗೂ ತುಟಿ ಭಿನ್ನವಾಗಿದ್ದು, ಕ್ಸಿನ್‌ಜಿಯಾಂಗ್‌ನಲ್ಲಿ ವಾಸಿಸುತ್ತಿದ್ದರೂ,  ದಕ್ಷಿಣ ಚೀನಾದ ವ್ಯಕ್ತಿಯಂತೆ ಕಾಣುತ್ತಾಳೆ ಎಂದು ಜನರು ಹೇಳುತ್ತಿದ್ದರು. ಇದು ಹುಡುಗಿ ಮನಸ್ಸಿನಲ್ಲಿ ಆಳವಾಗಿ ಬೇರೂರಿತ್ತು. ಈ ಬಗ್ಗೆ ಅಪ್ಪ- ಅಮ್ಮ ನನ್ನು ಪ್ರಶ್ನೆ ಮಾಡಿದ್ದಳು. ಆದ್ರೆ ಅವರಿಂದ ಸೂಕ್ತ ಉತ್ತರ ಸಿಕ್ಕಿರಲಿಲ್ಲ. ಹಾಗಾಗಿ ಡಿಎನ್ ಎ ಪರೀಕ್ಷೆಗೆ ಆಕೆ ಮುಂದಾಗಿದ್ದಳು.

ಡಿಎನ್ ಎ ಪರೀಕ್ಷೆ ವರದಿಯಲ್ಲೇನಿದೆ? : ಹುಡುಗಿ ಡಿಎನ್ ಎ ಪರೀಕ್ಷಾ ವರದಿ ನೋಡಿ ದಂಗಾಗಿದ್ದಾಳೆ. ಆಫೀಸ್ ನಲ್ಲಿ ಹೇಳುವಂತೆ ಹುಡುಗಿ ಕ್ಸಿನ್‌ಜಿಯಾಂಗ್‌ ಜನರ ಜೊತೆ ಸಂಬಂಧ ಹೊಂದಿಲ್ಲ. ತಂದೆ- ತಾಐಇ ಡಿಎನ್ ಎ ಜೊತೆ ಈಕೆ ಪರೀಕ್ಷಾ ವರದಿ ಮ್ಯಾಚ್ ಆಗ್ತಿರಲಿಲ್ಲ. ಹುಡುಗಿ ಗುವಾನ್ಕ್ಸಿ ಪ್ರಾಂತ್ಯಕ್ಕೆ ಸೇರಿದವಳು. ಹೆನಾನ್ ಜೊತೆ ಸಂಬಂಧವಿಲ್ಲ ಎಂಬುದು ಗೊತ್ತಾಗಿದೆ. 

ಹೆಂಡತಿ ಮುಂದೆ ಗಂಡ ಹೇಳಬಾರದ 4 ವಿಷಯಗಳು

ಹುಡುಗಿ ಹೆನಾನ್ ನವಳಲ್ಲ, ಗುವಾನ್ಕ್ಸಿ ಪ್ರಾಂತ್ಯಕ್ಕೆ ಸೇರಿದವಳು ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಜನರಲ್ಲಿ ಚರ್ಚೆ ಶುರುವಾಗಿದೆ. ಆಕೆಯ ಸ್ವಂತ ಪಾಲಕರು ಯಾರು ಎಂಬ ಪ್ರಶ್ನೆ ಕಾಡ್ತಿದೆ. ಈ ಮಧ್ಯೆ ಅಲ್ಲಿನ ಮಹಿಳೆಯೊಬ್ಬಳು, 24 ವರ್ಷಗಳ ಹಿಂದೆ ನಾನು, ನನ್ನ ಮಗುವನ್ನು ಕಳೆದುಕೊಂಡಿದ್ದು, ಅದೇ ಮಗು ಈಕೆಯಿರಬಹುದು ಎಂದು ಶಂಕಿಸಿದ್ದಾಳೆ. ಹುಡುಗಿ ತನ್ನ ಜೈವಿಕ ಪೋಷಕರ ಹುಡುಕಾಟ ನಡೆಸುತ್ತಿದ್ದಾಳೆ. ಆಕೆ ತನ್ನ ಪಾಲಕರನ್ನು ಸೇರಬೇಕು ಎಂಬುದು ಬಹುತೇಕ ನೆಟ್ಟಿಗರ ಆಶಯವಾಗಿದೆ. 

click me!