ಪ್ರೀತಿ ಎಲ್ಲಿ ಬೇಕಾದ್ರೂ ಆಗ್ಬಹುದು ಎಂಬುದಕ್ಕೆ ನಾನಾ ಉದಾಹರಣೆ ಇದೆ. ಇದಕ್ಕೆ ವಯಸ್ಸು ತಿಳಿಯೋದಿಲ್ಲ ಎನ್ನುವ ಮಾತಿಗೂ ಸಾಕ್ಷ್ಯ ಸಿಕ್ತಿರುತ್ತದೆ. ಪ್ರೀತಿಸಿದ ಜೋಡಿ ಮಧ್ಯೆ ವಯಸ್ಸಿನ ಅಂತರ ಹೆಚ್ಚಿದ್ರೆ ಟ್ರೋಲರ್ ಬಾಯಿಗೆ ಆಹಾರವಾಗೋದು ಸಾಮಾನ್ಯ. ಈ ಜೋಡಿ ಕೂಡ ನೆಟ್ಟಿಗರ ಕಣ್ಣಿಗೆ ಬಿದ್ದಿದ್ದಾರೆ.
ಪ್ರೀತಿಗೆ ವಯಸ್ಸಿನ ಮಿತಿ ಇಲ್ಲ ಎಂಬುದು ಇತ್ತೀಚಿನ ದಿನಗಳಲ್ಲಿ ಪದೇ ಪದೇ ಸಾಭೀತಾಗ್ತಿದೆ. ಅತ್ಯಂತ ಕಡಿಮೆ ವಯಸ್ಸಿನ ಹುಡುಗಿ ಅಥವಾ ಹುಡುಗ ತಮ್ಮ ಅಪ್ಪನ ವಯಸ್ಸಿನವರನ್ನು ಸಂಗಾತಿಯಾಗಿ ಪಡೆಯುತ್ತಿದ್ದಾರೆ. ಇದಕ್ಕೆ ಈಗ ಮತ್ತೊಂದು ಉದಾಹರಣೆ ಸಿಕ್ಕಿದೆ. ತನಗಿಂತ 42 ವರ್ಷ ಕಡಿಮೆ ವಯಸ್ಸಿನ ಹುಡುಗಿಯನ್ನು ವೃದ್ಧರೊಬ್ಬರು ಮದುವೆಯಾಗಿದ್ದಾರೆ. ಅವರಿಬ್ಬರ ಕಥೆ ರೋಚಕವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಈ ಜೋಡಿ ಆಗಾಗ ಟ್ರೋಲರ್ ಬಾಯಿಗೆ ಆಹಾರವಾಗ್ತಾರೆ. ಆದ್ರೆ ಅದ್ರ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ.
28 ವರ್ಷದ ಹುಡುಗಿಗೆ 70ರ ಅಜ್ಜನ ಮೇಲೆ ಪ್ರೀತಿ (Love) : ಈ ಸ್ಟೋರಿಯಲ್ಲಿ 70 ವರ್ಷ ವಯಸ್ಸಿನ ಡೇವ್ ಹಿರೋ ಆದ್ರೆ 28 ವರ್ಷದ ಜಾಕಿ ಹಿರೋಯಿನ್. ಇವರಿಬ್ಬರು ಅಮೆರಿಕಾದಲ್ಲಿ ವಾಸವಾಗಿದ್ದಾರೆ. ಇವರಿಬ್ಬರ ಭೇಟಿ ೭ ವರ್ಷಗಳ ಹಿಂದೆ ಡೇಟಿಂಗ್ (dating) ಅಪ್ಲಿಕೇಶನ್‌ನಲ್ಲಿ ಆಗಿತ್ತು. ಇದರ ನಂತರ ಡೇವ್, ಜಾಕಿಯನ್ನು ಭೇಟಿಯಾಗಲು ಅವಳ ದೇಶ ಫಿಲಿಪೈನ್ಸ್ (Philippines) ಗೆ ಬಂದಿದ್ದ. ಭೇಟಿ ನಂತ್ರ ಇಬ್ಬರು ಡೇಟಿಂಗ್ ಶುರು ಮಾಡಿದ್ದರು. ಡೇವ್ ಮತ್ತು ಜಾಕಿ ಮಧ್ಯೆ ವಯಸ್ಸಿನ ಅಂತರ ಹೆಚ್ಚಿರುವ ಕಾರಣ ಜನರು ಈ ಜೋಡಿಯನ್ನು ಗೋಲ್ಡ್ ಡಿಗ್ಗರ್ ಎಂದು ಕರೆಯುತ್ತಾರೆ. ನನ್ನ ಪತಿ ಡೇವ್ ರನ್ನು ಜನರು ನನ್ನ ಅಜ್ಜನೆಂದು ಹೇಳ್ತಾರೆ. ಆದ್ರೆ ನಮ್ಮಿಬ್ಬರ ಮಧ್ಯೆ ನಿಜವಾದ ಪ್ರೀತಿ ಇದೆ. ಜನರು, ನಾನು ಡೇವ್ ಹಣಕ್ಕಾಗಿ ಪ್ರೀತಿ ನಾಟಕವಾಡ್ತಿದ್ದೇನೆಂದು ಹೇಳುತ್ತಾರೆ. ಆದ್ರೆ ನಾನು ಡೇವ್ ರನ್ನು ಹಣಕ್ಕಾಗಿ ಪ್ರೀತಿ ಮಾಡಿಲ್ಲ ಎಂದು ಜಾಕ್ ಹೇಳಿದ್ದಾಳೆ.
ಡೇಟಿಂಗ್ ರೂಮರ್ ಖಚಿತ ಪಡಿಸಿದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ?
ಟಿಕ್ ಟಾಕ್ ನಲ್ಲಿ ಪ್ರಸಿದ್ಧಿ ಪಡೆದ ಜೋಡಿ : ಸಾಮಾಜಿಕ ಜಾಲತಾಣ ಟಿಕ್ ಟಾಕ್ ನಲ್ಲಿ ಈ ಜೋಡಿ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. @dave_jackie2818 ಹೆಸರಿನ ಟಿಕ್ ಟಾಕ್ ಖಾತೆಯನ್ನು ಇವರು ಹೊಂದಿದ್ದಾರೆ. ಇದ್ರಲ್ಲಿ ನಾನಾ ವಿಡಿಯೋಗಳನ್ನು ಇವರು ಪೋಸ್ಟ್ ಮಾಡ್ತಿರುತ್ತಾರೆ. ಇವರ ಟಿಕ್ ಟಾಕ್ ಖಾತೆಯಲ್ಲಿ 50 ಸಾವಿರ ಫಾಲೋವರ್ಸ್ ಇದ್ದಾರೆ. ಟಿಕ್ ಟಾಕ್ ನಲ್ಲಿ ಅವರು ಹಾಕುವ ಪೋಸ್ಟ್ ಗೆ ಜನರು ನಾನಾ ರೀತಿಯ ಪ್ರತಿಕ್ರಿಯೆ ನೀಡ್ತಿರುತ್ತಾರೆ. ಒಂದು ಪೋಸ್ಟ್ ಗೆ ೩೦ ಸಾವಿರಕ್ಕೂ ಹೆಚ್ಚಿ ಲೈಕ್ಸ್ ಸಿಕ್ಕಿದೆ. ವಿಡಿಯೋ ಮೂಲಕ ನಮ್ಮ ಪ್ರೀತಿ ನಿಜವಾಗಿದ್ದು ಎಂಬುದನ್ನು ತೋರಿಸುವ ಪ್ರಯತ್ನ ನಡೆಸ್ತಿದ್ದಾರೆ ಈ ಜೋಡಿ.
ಮೊದಲ ನೋಟದಲ್ಲೇ ಲವ್ ಆಗಿದ್ಯಾ ಅಂತ ಕಂಡು ಕೊಳ್ಳುವುದು ಹೇಗೆ?
ನಮ್ಮಿಬ್ಬರ ವಯಸ್ಸಿನ ಮಧ್ಯೆ 42 ವರ್ಷಗಳ ಅಂತರವಿದೆ. ಆದ್ರೆ ಇದ್ರಿಂದ ನಮಗೆ ತೊಂದರೆ ಏನೂ ಆಗಿಲ್ಲ ಎನ್ನುತ್ತಾಳೆ ಹುಡುಗಿ. ಮತ್ತೊಂದು ವೀಡಿಯೊದಲ್ಲಿ, ಜಾಕಿ ತನ್ನ ಪತಿ ಡೇವ್‌ನ ಕಾಲಿನ ಮೇಲೆ ಕುಳಿತಿರುವುದು ಕಂಡುಬಂದಿದೆ. ನಾವಿಬ್ಬರು ತುಂಬಾ ಅದೃಷ್ಟವಂತರು ಎಂದು ಇದಕ್ಕೆ ಶೀರ್ಷಿಕೆ ಹಾಕಲಾಗಿದೆ. ಆದ್ರೆ ಅದಕ್ಕೆ ಜನರು ನೆಗೆಟಿವ್ ಕಮೆಂಟ್ ನೀಡಿದ್ದಾರೆ. ಒಬ್ಬರು ಗೋಲ್ಡ್ ಡಿಗ್ಗರ್ ಅಂದ್ರೆ ಇನ್ನೊಬ್ಬರು ಅಜ್ಜ ಎಂದಿದ್ದಾರೆ.
ಡೇವ್ ಗೆ ಮಕ್ಕಳಿಲ್ಲ : ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ಕಮೆಂಟ್ ಗೆ ಉತ್ತರ ಉತ್ತರ ನೀಡಿರುವ ಜಾಕಿ, ಡೇವ್ ಅಜ್ಜನಲ್ಲ. ಆತನಿಗೆ ಯಾವುದೇ ಮಕ್ಕಳಿಲ್ಲ. ನಾನು ನಿಮಗೆ ಈ ಬಗ್ಗೆ ಪ್ರತಿಕ್ರಿಯೆ ನೀಡುವ ಬದಲು ಸುಮ್ಮನಿರೋದು ಒಳ್ಳೆಯದು. ಯಾಕೆಂದ್ರೆ ನಾವು ನೀವೆಲ್ಲ ವೃದ್ಧರಾಗ್ತೇವೆ. ಬೇರೆಯವರಿಗೆ ಒಳ್ಳೆಯದು ಮಾಡಲು ಸಾಧ್ಯವಾಗಿಲ್ಲವೆಂದ್ರೆ ಸುಮ್ಮನಿರಿ ಎಂದು ಜಾಕಿ ಹೇಳಿದ್ದಾಳೆ. ವಯಸ್ಸಿಗಿಂತ ನಮ್ಮಿಬ್ಬರ ಮಧ್ಯೆ ಇರುವ ಪ್ರೀತಿ ಮುಖ್ಯ ಎಂದು ಜಾಕಿ ಪ್ರತಿಕ್ರಿಯಿಸಿದ್ದಾಳೆ.