ಗಂಡನಿಗೆ ಕಣ್ಣಿಲ್ಲ, ಪತ್ನಿಗೆ ನಡೆಯೋಕಾಗಲ್ಲ; ಇದು ದೈಹಿಕ ನ್ಯೂನತೆಯಲ್ಲ, ಪ್ರೀತಿ-ಸಹಭಾಗಿತ್ವದ ಶಕ್ತಿ!

Published : Nov 09, 2025, 11:29 AM IST
A blind husband and his chair seated wife

ಸಾರಾಂಶ

ಇಂದು ಸಣ್ಣ ಸಣ್ಣ ವಿಷಯಕ್ಕೂ ಡಿವೋರ್ಸ್‌ ಆಗ್ತಿದೆ, ವರ್ಷಾನುಗಟ್ಟಲೇ ಪ್ರೀತಿಸಿದರು, ದಶಕಗಳ ಕಾಲ ಒಟ್ಟಿಗೆ ಇದ್ದವರು ಆಮೇಲೆ ಡಿವೋರ್ಸ್‌ ಪಡೆದುಕೊಳ್ಳುತ್ತಿದ್ದಾರೆ. ಈಗ ಇಲ್ಲೊಂದು ಜೋಡಿಯು ದೈಹಿಕ ನ್ಯೂನತೆ ಇದ್ದರೂ ಕೂಡ ಪ್ರೀತಿಯೇ ಮುಖ್ಯ, ಅದೇ ಎಲ್ಲ ಎಂದು ಸಾಬೀತು ಮಾಡಿದೆ.

ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಈ ಫೋಟೋವೊಂದು ಭಾರೀ ವೈರಲ್‌ ಆಗ್ತಿದೆ. ಜೀವನದಲ್ಲಿ ಸಣ್ಣ ಕಷ್ಟ ಬಂದರೂ ಕೂಡ ಅನೇಕರು ಸೋಲೊಪ್ಪಿಕೊಳ್ಳುವ ಜಗತ್ತಿನಲ್ಲಿ, ಈ ದಂಪತಿ ಮಾತ್ರ ತಮ್ಮ ದೇಹದಲ್ಲಿರುವ ವೈಕಲ್ಯಗಳನ್ನು ಮೀರಿ, ಈಗ ಇರುವ ಬದುಕಿಗಾಗಿ ಹೋರಾಟ ಮಾಡುತ್ತಿದ್ದಾರೆ. ಈ ಫೋಟೋ ನೋಡಿದವರಿಗೆ ಬದುಕಬೇಕು ಎಂದು ಅನಿಸುವುದು.

ಗಂಡನಿಗೆ ಕಣ್ಣಿಲ್ಲ, ಪತ್ನಿಗೆ ಕಾಲಿಲ್ಲ

ದಂಪತಿಯು ತಮ್ಮ ಹೋರಾಟವನ್ನು ಶಕ್ತಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಗಂಡನಿಗೆ ಎರಡು ಕಣ್ಣು ಕಾಣೋದಿಲ್ಲ, ಹೆಂಡತಿಗೆ ನಡೆಯೋಕೆ ಬರೋದಿಲ್ಲ, ಕುರ್ಚಿ ಥರ ಹೋಗಬೇಕು. ಪತ್ನಿಗೆ ಎರಡೂ ಕಾಲುಗಳನ್ನು ಬಳಸಲು ಸಾಧ್ಯವಿಲ್ಲ. ಆದರೂ ಇವರು ಮಗುವಿನ ಜೊತೆಗೆ ಪ್ರೀತಿ, ನಗು, ಧೈರ್ಯದಿಂದ ಬದುಕುತ್ತಿದ್ದಾರೆ.

ಇದು ಕರುಣೆಯ ಕಥೆಯಲ್ಲ, ಬದಲಿಗೆ ಸಹಭಾಗಿತ್ವ, ಶಕ್ತಿಯ ಕಥೆ. ಎರಡು ಕೈ ಸೇರಿದರೆ ಚಪ್ಪಾಳೆ, ಹಾಗೆ ಇಲ್ಲಿ ಕೂಡ ಗಂಡನಿಗೆ ಕಣ್ಣಿಲ್ಲ, ಹೆಂಡತಿಗೆ ಕಣ್ಣಿದೆ, ಗಂಡನಿಗೆ ಕಾಲಿದೆ, ಹೆಂಡ್ತಿಗೆ ಕಾಲಿಲ್ಲ. ಇವರಿಬ್ಬರು ತಮ್ಮಲ್ಲಿರುವ ಕೊರತೆಯನ್ನು ಈ ರೀತಿ ಬೆಂಬಲವಾಗಿ ಬಳಸಿಕೊಂಡಿದ್ದಾರೆ.

ಗಂಡನಿಗೆ, ತನ್ನ ಮುಂದಿರುವ ಅಥವಾ ಸುತ್ತ ಮುತ್ತಲಿನ ಪರಿಸರವನ್ನು ನೋಡಲು ಸಾಧ್ಯವಾಗದಿದ್ದರೂ, ತನ್ನ ಹೆಂಡತಿಯ ಮೇಲೆ ನಂಬಿಕೆ ಇಟ್ಟು ಮುಂದೆ ಸಾಗುತ್ತಾನೆ.ಆ ಪತ್ನಿಯ ಅಚಲ ನಂಬಿಕೆಯಿಂದ ತನ್ನ ಜೊತೆಗೆ ಅಪ್ಪನನ್ನು ಕೂಡ ಕರೆದುಕೊಂಡು ಹೋಗುತ್ತಾಳೆ. ಈ ಆತ್ಮವಿಶ್ವಾಸ, ನಂಬಿಕೆ, ಸಹಭಾಗಿತ್ವಕ್ಕೆ ಏನೆಂದು ಹೆಸರಿಡೋಣ? ಹೆಂಡತಿಯಾದವಳು ತನಗೆ ನಡೆಯಲು ಸಾಧ್ಯವಾಗದಿದ್ದರೂ ಕೂಡ, ತನ್ನ ಗಂಡನ ಶಕ್ತಿ, ಕಾಳಜಿಯ ಮೂಲಕ ಎತ್ತರಕ್ಕೆ ನಿಲ್ಲುತ್ತಾಳೆ.

ಗಂಡ ಹೆಂಡತಿ ಇಬ್ಬರೂ ಸಂತೋಷದಿಂದ ಅಡುಗೆ ಮಾಡುತ್ತಾರೆ, ಮನೆಯನ್ನು ಸ್ವಚ್ಛಗೊಳಿಸುತ್ತಾರೆ, ಒಟ್ಟಾಗಿ ಬದುಕುತ್ತಾರೆ, ಜೀವನದಲ್ಲಿ ಅದಿರಬೇಕು, ಇದಿರಬೇಕು ಎಂದು ಬಯಸುವುದಿಲ್ಲ. ಅದಕ್ಕೆ ಕೇವಲ ಜೀವನದ ಮೇಲೆ ಪ್ರೀತಿ, ಭಕ್ತಿ ಬೇಕು ಎಂದು ಪ್ರತಿದಿನವೂ ಸಾಬೀತುಪಡಿಸುತ್ತಾರೆ, ಅದರಂತೆಯೇ ಬದುಕುತ್ತಾರೆ. ಅವರ ಈ ಸಂಬಂಧವು ತಾಳ್ಮೆ, ಗೌರವ, ಆಳವಾದ ಭಾವನಾತ್ಮಕವಾಗಿ ಕನೆಕ್ಟ್‌ ಆಗಿರೋದರ ಮೇಲೆ ನಿರ್ಮಿತವಾಗಿದೆ. ಎಷ್ಟೋ ಪರಿಪೂರ್ಣ ಜೋಡಿಯಲ್ಲಿ ಈ ಅಂಶ ಕಾಣಸಿಗೋದಿಲ್ಲ.

ಈ ಜೋಡಿಯ ಸಣ್ಣ ಮನೆಯಲ್ಲಿ, ಸಂಪತ್ತು ಅಥವಾ ಐಷಾರಾಮಿ ವಸ್ತುಗಳು ಇಲ್ಲದಿರಬಹುದು, ಆದರೆ ಅದಕ್ಕಿಂತ ಹೆಚ್ಚಿನದಾಗಿ ಶಾಂತಿ, ಉದ್ದೇಶ, ಸಹಭಾಗಿತ್ವ, ಬದುಕಿನ ಮೇಲೆ ಪ್ರೀತಿ ಇದೆ. ಇವರ ಕಥೆಯು ನಮಗೆ ನಿಜವಾದ ಪ್ರೀತಿ ಗೆಲ್ಲುತ್ತದೆ, ದೈಹಿಕ ಸಾಮರ್ಥ್ಯವಲ್ಲ ಎಂದು ಹೇಳುತ್ತದೆ. ಆದರೆ ದೇಹ ಬಿಟ್ಟು, ನಮ್ಮೊಳಗಿನ ಆತ್ಮವನ್ನು ನೋಡುವ, ಹೃದಯವನ್ನು ಪ್ರೀತಿಸುವ, ಏನೇ ಇರಲಿ ಪರಸ್ಪರ ಬೆಂಬಲವಾಗಿ ನಿಲ್ಲುವ ಸಾಮರ್ಥ್ಯದ ಬಗ್ಗೆ ಈ ಜೋಡಿ ಅನೇಕರಿಗೆ ಮಾದರಿ ಆಗಿದೆ.

ಸಮಾಜದಲ್ಲಿ ಇಂದು ಸೌಂದರ್ಯ, ಶಕ್ತಿಗೆ ಮೌಲ್ಯ ನೀಡುತ್ತಾರೆ. ಆದರೆ ಈ ದಂಪತಿ ಇಂದು ಅಂತರಾಳದ ಪ್ರೀತಿಯೇ ಮುಖ್ಯ ಎಂದು ಪ್ರಪಂಚಕ್ಕೆ ತೋರಿಸಿದ್ದಾರೆ. ಒಟ್ಟಾಗಿ ನಡೆಯುವುದೃ ಸುಂದರವಾದ ಜರ್ನಿ ಎಂದು ಈ ಜೋಡಿ ಹೇಳಿದೆ. ಅಂದಹಾಗೆ ಈ ಫೋಟೋದಲ್ಲಿರುವವರ ಹೆಸರು, ವಿಳಾಸ, ವೃತ್ತಿ ಬಗ್ಗೆ ಕೂಡ ಯಾವುದೇ ಮಾಹಿತಿ ಇಲ್ಲ. 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
Chanakya Niti: ಬೆಳಗ್ಗೆ ಎದ್ದಾಗ ಇವನ್ನೆಲ್ಲಾ ನೋಡ್ಬೇಡಿ.. ಚಾಣಕ್ಯ ಹೇಳಿದ ರಹಸ್ಯಗಳು