
ಮದುವೆ (marriage)ಗೆ ವಯಸ್ಸಿನ ನಿರ್ಬಂಧ ಇಲ್ಲ ಊರು ಹೋಗು, ಕಾಡು ಬಾ ಎನ್ನುವ ಟೈಂನಲ್ಲೂ ಮದುವೆ ಆಗುವ ಜನರಿದ್ದಾರೆ. ಇಳಿ ವಯಸ್ಸಿನಲ್ಲಿ ಅನೇಕರು ಸಂಗಾತಿ ಬಯಸ್ತಿದ್ದಾರೆ. ಅದಕ್ಕೆ ಕಾರಣ ಒಂಟಿತನ. ಪತ್ನಿ ಅಥವಾ ಪತಿ ಮೊದಲೇ ಸಾವನ್ನಪ್ಪಿದ್ರೆ, ಹಿರಿಯರಿಗೆ ಒಂಟಿತನ ಕಾಡಲು ಶುರುವಾಗುತ್ತದೆ. ಮನೆ ಮಕ್ಕಳೆಲ್ಲ ನಗರ ಸೇರಿರ್ತಾರೆ. ಈಗಿನ ದಿನಗಳಲ್ಲಿ ಇರೋ ಒಬ್ಬ ಇಬ್ಬರು ಮಕ್ಕಳು ವಿದೇಶದಲ್ಲಿ ಸೆಟಲ್ ಆಗಿರ್ತಾರೆ. ಇಂಥ ಸಮಯದಲ್ಲಿ ಒಂಟಿಯಾಗಿ ಮನೆಯಲ್ಲಿರುವ ಪಾಲಕರಿಗೆ ಮನೆ ಜವಾಬ್ದಾರಿ ನೋಡಿಕೊಳ್ಳೋದು ಕಷ್ಟ. ಸಣ್ಣ ಸಮಸ್ಯೆ ಬಂದ್ರೂ ಅದನ್ನು ಹೇಳಿಕೊಳ್ಳಲು ಮನೆಯಲ್ಲಿ ಒಂದೇ ಒಂದು ಮನುಷ್ಯ ಜಾತಿ ಇರೋದಿಲ್ಲ. ಪತಿ ಕಳೆದುಕೊಂಡ ಮಹಿಳೆ, ಒಂಟಿಯಾಗಿ ಎಲ್ಲವನ್ನೂ ನಿಭಾಯಿಸಬಲ್ಲಳು. ಆದ್ರೆ ಪತ್ನಿ ಕಳೆದುಕೊಂಡ ಪತಿಗೆ ಜೀವನ ಮುನ್ನಡೆಸೋದು ಬಹಳ ಕಷ್ಟ. ಮಕ್ಕಳ ಜೊತೆ ಅವರ ಮನೆಯಲ್ಲಿ ಇರಲಾರದೆ, ತನ್ನ ಮನೆಯಲ್ಲಿ ಏಕಾಂಗಿಯಾಗಿ ಜೀವನ ಸಾಗಿಸಲೂ ಆಗದೆ ಕಷ್ಟಪಡ್ತಾರೆ. ಅದಕ್ಕೆ ಈಗ ಈ ಅಜ್ಜ ಉತ್ತಮ ನಿದರ್ಶನ. 90ನೇ ವಯಸ್ಸಿನಲ್ಲಿ ಇನ್ನೊಂದು ಮದುವೆ ಆಗುವ ನಿರ್ಧಾರಕ್ಕೆ ಬಂದ ಅಜ್ಜ, ಕೊನೆಗೂ ತನ್ನ ಬಯಕೆ ತೀರಿಸಿಕೊಂಡಿದ್ದಾನೆ. ಮಕ್ಕಳು, ಮೊಮ್ಮಕ್ಕಳು ಸೇರಿದಂತೆ 30ಕ್ಕೂ ಹೆಚ್ಚು ಕುಟುಂಬಸ್ಥರನ್ನು ಹೊಂದಿರುವ ಅಜ್ಜನಿಗೆ ಈಗ ಮತ್ತೆ ಮದುವೆ ಆಗುವ ಆಸೆ ಬಂದಿದೆ. ಈ ವಿಷ್ಯವನ್ನು ತನ್ನ ಮಕ್ಕಳ ಮುಂದೆ ಹೇಳಿಕೊಂಡ ಆತ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ. 90 ಅಜ್ಜನಿಗೆ ಸಿಕ್ಕ ಪತ್ನಿ, ಅಜ್ಜನಿಗಿಂತ 35 ವರ್ಷ ಚಿಕ್ಕವಳು.
ಘಟನೆ ಪಾಕಿಸ್ತಾನ (Pakistan)ದ ಖೈಬರ್ ಪಖ್ತುಂಖ್ವಾದ ಶಾಂಗ್ಲಾ ಜಿಲ್ಲೆಯಲ್ಲಿ ನಡೆದಿದೆ. 90 ವರ್ಷದ ಮೌಲಾನಾ ಸೈಫುಲ್ಲಾ ಎರಡನೇ ಬಾರಿ ಮದುವೆ ಆಗಿದ್ದಾನೆ. ಮಾಧ್ಯಮ ವರದಿಗಳ ಪ್ರಕಾರ, ಮೌಲಾನಾ ಸೈಫುಲ್ಲಾ ಮೊದಲ ಪತ್ನಿ ಸುಮಾರು 9 ವರ್ಷಗಳ ಹಿಂದೆ ಸಾವನ್ನಪ್ಪಿದ್ದಳು. ಇದಾದ ನಂತ್ರ ಮೌಲಾನಾ ಸೈಫುಲ್ಲಾ ತನ್ನ ಮಕ್ಕಳಿಗೆ, ತನ್ನ ಮದುವೆ ಇಷ್ಟವನ್ನು ಹೇಳಿದ್ದ. ತಂದೆಯ ಈ ಆಸೆಯನ್ನು ಕೇಳಿದ ನಾಲ್ವರು ಪುತ್ರರು ಜವಾಬ್ದಾರಿಯನ್ನು ವಹಿಸಿಕೊಂಡ್ರು, ಅಪ್ಪನಿಗೆ ಜೋಡಿ ಹುಡುಕಲು ಶುರು ಮಾಡಿದ್ರು.
55 ವರ್ಷದ ಮಹಿಳೆ ಜೊತೆ ಮದುವೆ : ನಾಲ್ವರು ಮಕ್ಕಳು ಕೊನೆಗೂ ಮೌಲಾನಾ ಸೈಫುಲ್ಲಾಗೆ ಬೇಗಂ ಹುಡುಕಿದ್ದಾರೆ. 55 ವರ್ಷದ ಮಹಿಳೆ, ಮೌಲಾನಾನನ್ನು ಮದುವೆ ಆಗಲು ಒಪ್ಪಿಕೊಂಡಿದ್ದಾಳೆ. ಇದರಿಂದ ಮನೆಯವರೆಲ್ಲ ಖುಷಿಯಾಗಿದ್ದಾರೆ. ನಂತ್ರ ಅವರ ನಿಖಾವನ್ನು ಪೂರ್ಣ ವಿಧಿವಿಧಾನಗಳೊಂದಿಗೆ ಮಾಡಲಾಗಿದೆ. ಇದರಲ್ಲಿ 1 ತೊಲ ಚಿನ್ನವನ್ನು 'ಹಕ್ ಮೆಹರ್' ಎಂದು ನಿಗದಿಪಡಿಸಲಾಯಿತು. ಕುಟುಂಬದ ಹೊರತಾಗಿ, ಸಂಬಂಧಿಕರು ಮತ್ತು ನೆರೆಹೊರೆಯವರು ಸಹ ಈ ವಿವಾಹ ಸಮಾರಂಭದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.
ಒಂಟಿಯಾಗಿದ್ದ ತಂದೆ : ಮೌಲಾನಾ ಸೈಫುಲ್ಲಾ ಅವರ ನಾಲ್ವರು ಪುತ್ರರು ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಮೌಲಾನಾ ಪತ್ನಿ ಸಾವಿನ ನಂತ್ರ ಮೌಲಾನಾ ಸೈಫುಲ್ಲಾ ಒಂಟಿಯಾಗಿದ್ದ. ಅವನಿಗೆ ಸಂಗಾತಿ ಅವಶ್ಯಕತೆ ಇತ್ತು. ತಂದೆ, ನಾನು ಮದುವೆ ಆಗ್ತೇನೆ ಎನ್ನುತ್ತಿದ್ದಂತೆ ತಂದೆಗೆ ಮತ್ತೆ ಸಂಗಾತಿ ಹುಡುಕಲು ಮಕ್ಕಳು ಸಂತೋಷದಿಂದ ಒಪ್ಪಿಕೊಂಡಿದ್ದರು. ತಂದೆಯ ಖುಷಿ ಅವರಿಗೆ ಮುಖ್ಯವಾಗಿತ್ತು. ಹಾಗಾಗಿಯೇ ತಂದೆ ಮದುವೆಗೆ ಒಪ್ಪಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ಫೋಟೋ ವೈರಲ್ ಆಗಿದೆ. ಜನರು ಪತ್ನಿಯ ವಯಸ್ಸಿ ಕೇಳಿ ಆಘಾತಕ್ಕೊಳಗಾಗಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.