ಈ ಜಾಗದಲ್ಲಿ ಕಿಸ್​ ಕೊಡೋ ಮುನ್ನ ಎಚ್ಚರ! ಗೆಳತಿ ಕೊಟ್ಟ ಮುತ್ತಿನಿಂದ ರಕ್ತ ಹೆಪ್ಪುಗಟ್ಟಿ ಯುವಕನ ಸಾವು- ಆಗಿದ್ದೇನು

Published : Mar 23, 2026, 05:07 PM IST
Kiss death

ಸಾರಾಂಶ

ಮೆಕ್ಸಿಕೋದಲ್ಲಿ, ಗೆಳತಿ ನೀಡಿದ ದೀರ್ಘ ಚುಂಬನದಿಂದಾಗಿ 18 ವರ್ಷದ ಯುವಕನೊಬ್ಬ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಕುತ್ತಿಗೆಯ ಮೇಲೆ ನೀಡಿದ ಲವ್ ಬೈಟ್‌ನಿಂದ ರಕ್ತ ಹೆಪ್ಪುಗಟ್ಟಿ, ಅದು ಮೆದುಳಿಗೆ ಸಾಗಿ ಪಾರ್ಶ್ವವಾಯುವಿಗೆ ಕಾರಣವಾಯಿತು ಎಂದು ವೈದ್ಯರು ತಿಳಿಸಿದ್ದಾರೆ.

ತರುಣ-ತರುಣಿಯರಲ್ಲಿ ಉನ್ಮಾದ ಹೆಚ್ಚಾದಾಗ ಅದು ಸಾವಿನ ಬಾಯಿಗೂ ನೂಕಬಹುದು ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಮೆಕ್ಸಿಕೋ ನಗರದಲ್ಲಿ ಯುವಕನೊಬ್ಬ ತನ್ನ ಗೆಳತಿಯಿಂದ ಪಡೆದ ದೀರ್ಘ ಚುಂಬನದಿಂದ ರಕ್ತ ಹೆಪ್ಪುಗಟ್ಟುವಿಕೆಯಿಂದ ಪಾರ್ಶ್ವವಾಯುವಿಗೆ ಒಳಗಾದ ನಂತರ ಸಾವನ್ನಪ್ಪಿದ್ದಾನೆ. ಕೆಲ ವರ್ಷಗಳ ಹಿಂದೆ ನಡೆದಿರುವ ಈ ಘಟನೆ ಇದೀಗ ಮತ್ತೆ ವೈರಲ್​ ಆಗುತ್ತಿದೆ. ಯುವತಿಯ ಲವ್ ಬೈಟ್​ನಿಂದಾಗಿ ರಕ್ತ ಹೆಪ್ಪುಗಟ್ಟಿ ಆತನಿಗೆ ಈ ಗತಿ ಬಂದಿತು ಎಂದು ವೈದ್ಯರು ತಿಳಿಸಿದ್ದಾರೆ.

ಜೂಲಿಯೊ ಮಾಸಿಯಸ್ ಗೊನ್ಜಾಲೆಜ್ ಎಂಬ ಯುವಕನಿಗೆ ಗೆಳತಿ ಕೊಟ್ಟ ಕಿಸ್ಸೇ ಮುಳುವಾಯಿತು. ರಕ್ತ ಹೆಪ್ಪುಗಟ್ಟಿ ಮೆದುಳಿಗೆ ಪ್ರಯಾಣಿಸಿ ಪಾರ್ಶ್ವವಾಯುವಿಗೆ ಕಾರಣವಾಯಿತು ಎಂದು ಇಂಡಿಪೆಂಡೆಂಟ್ ಮತ್ತು ಸ್ಥಳೀಯ ಮೆಕ್ಸಿಕನ್ ಮಾಧ್ಯಮ ವರದಿ ಮಾಡಿದೆ. ತನ್ನ 24 ವರ್ಷದ ಗೆಳತಿಯೊಂದಿಗೆ ಸುತ್ತಾಡಿ ಕಿಸ್​ ಪಡೆದ ನಂತರ 18ರ ತರುಣ ತನ್ನ ಕುಟುಂಬದೊಂದಿಗೆ ಊಟ ಮಾಡುವಾಗ ಇದ್ದಕ್ಕಿಂತೆಯೇ ಕುಸಿದು ಬಿದ್ದು, ಮೃತಪಟ್ಟಿದ್ದಾನೆ.

ಆಗಿದ್ದೇನು?

ಈ 24ರ ಯುವತಿ ತನಗಿಂದ ಐದಾರು ವರ್ಷ ಕಿರಿಯವನಾಗಿರುವ ಯುವಕನ ಕುತ್ತಿಗೆಯ ಭಾಗಕ್ಕೆ ಅತಿಯಾಗಿ ಕಿಸ್​ ಮಾಡಿಬಿಟ್ಟಿದ್ದಾಳೆ. ಆ ಉನ್ಮಾದದಲ್ಲಿ ಬಲವಾದ ಪ್ರಯೋಗವಾಗಿದೆ. ಇದು ಅಪಧಮನಿಯನ್ನು ಹಾನಿ ಮಾಡಿದೆ. ಇದರಿಂದ ಉಂಟಾದ ರಕ್ತ ಹೆಪ್ಪುಗಟ್ಟುವಿಕೆ (Clot) ಮೆದುಳಿಗೆ ಸಾಗಿ, ರಕ್ತ ಪರಿಚಲನೆ ನಿಲ್ಲಿಸಿದೆ ಎಂದು ವೈದ್ಯರು ಹೇಳಿದ್ದಾರೆ.

ಅಪಾಯಕಾರಿ ಸ್ಥಳ

ಕುತ್ತಿಗೆಯ ಬದಿಗಳಲ್ಲಿ ಕೆರೋಟಿಡ್ ಅಪಧಮನಿ ಇರುವುದರಿಂದ, ಈ ಭಾಗದಲ್ಲಿ ತೀವ್ರವಾಗಿ ಚುಂಬಿಸುವುದು ಅಪಾಯಕಾರಿ ಎನ್ನುವುದು ವೈದ್ಯರ ಸಲಹೆ. 2010 ರಲ್ಲಿ, 44 ವರ್ಷದ ಮಹಿಳೆಯೊಬ್ಬರಿಗೆ ಇದೇ ರೀತಿಯ ಕಿಸ್​ನಿಂದಾಗಿ ಪಾರ್ಶ್ವವಾಯು ಸಂಭವಿಸಿತ್ತು, ನಂತರ ಅವರು ಚೇತರಿಸಿಕೊಂಡರು. ವೈದ್ಯರು ಹೇಳುವ ಪ್ರಕಾರ, ಇಂಥ ಸಂದರ್ಭಗಳಲ್ಲಿ ರಕ್ತದ ಒಂದು ಗುಂಪು ಅರೆ-ಘನ ಅಥವಾ ಜೆಲ್ ತರಹದ ದ್ರವ ಸ್ಥಿತಿಯನ್ನು ಕಳೆದುಕೊಳ್ಳುತ್ತದೆ. ಚಲನರಹಿತ ರಕ್ತ ಹೆಪ್ಪುಗಟ್ಟುವಿಕೆ ಸಾಮಾನ್ಯವಾಗಿ ನಿರುಪದ್ರವವಾಗಿದೆ, ಆದರೆ ಅವು ಚಲಿಸಲು ಪ್ರಾರಂಭಿಸಿದಾಗ ಅವು ನಿಮ್ಮ ದೇಹಕ್ಕೆ ಹಾನಿಯಾಗಬಹುದು. ರಕ್ತ ಹೆಪ್ಪುಗಟ್ಟುವಿಕೆಯು ನಿಮ್ಮ ರಕ್ತನಾಳಗಳಿಂದ ನಿಮ್ಮ ಹೃದಯ ಅಥವಾ ನಿಮ್ಮ ಶ್ವಾಸಕೋಶಕ್ಕೆ ಚಲಿಸಲು ಪ್ರಾರಂಭಿಸಿದರೆ ರಕ್ತದ ಹರಿವನ್ನು ನಿಲ್ಲಿಸಬಹುದು. ಹೀಗಾದರೆ ಜೀವಕ್ಕೆ ಅಪಾಯ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹೆಚ್ಚುತ್ತಿದೆ 'ಮಂಕಿ ಬ್ರಾಂಚಿಂಗ್'.. ಸಂಗಾತಿ ಇದ್ದಕ್ಕಿದ್ದಂತೆ ಬದಲಾದ್ರಾ? ಗೊತ್ತಾಗದಂತೆ ನಡೆಸ್ತಾರೆ ಈ ಸೇಫ್ಟಿ ಗೇಮ್
Bigg Boss ಕಾವ್ಯಾ ಶೈವ ಬಗ್ಗೆ ಕೀಳು ಮಟ್ಟದ ಪ್ರಶ್ನೆ ಕೇಳಿದ ನೆಟ್ಟಿಗ: ಮುಟ್ಟಿಕೊಳ್ಳುವ ಉತ್ತರ ಕೊಟ್ಟ ನಟಿ