
ನವದೆಹಲಿ (ಅ.17): ವಿಶ್ವದಲ್ಲಿಯೇ ಅತಿಹೆಚ್ಚು ಸಂಭಾವನೆ ಪಡೆಯುವುವ ಪದವೀಧರರನ್ನು ಕ್ರಿಯೇಟ್ ಮಾಡುವುದರಲ್ಲಿ ಯಾವುದಾದರೂ ಸಂಸ್ಥೆಗಳಿದ್ದರೆ ಅದರಲ್ಲಿ ಭಾರತದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮತ್ತು ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಖಂಡಿತವಾಗಿ ಇದರಲ್ಲಿ ಸ್ಥಾನ ಪಡೆಯುತ್ತದೆ. ಆದರೆ, ಉತ್ತರ ಪ್ರದೇಶದ ಮಘರ್ ಪ್ರದೇಶದ ಗೋತ್ವಾ ಗ್ರಾಮದ ನಿವಾಸಿ ಆರಾಧ್ಯ ತ್ರಿಪಾಠಿ ಈ ಯಾವ ಸಂಸ್ಥೆಗಳಲ್ಲ ಓದಿದವರಲ್ಲ. ಮದನ್ ಮೋಹನ್ ಮಾಳವೀಯ (ಎಂಎಂಎಂಯುಟಿ) ತಾಂತ್ರಿಕ ವಿವಿಯಲ್ಲಿ ಕಲಿತ ಆಕೆ ಈ ಎಲ್ಲಾ ನಿರೂಪಣೆಯನ್ನು ಹೊಸದಾಗಿ ಬರೆದಿದ್ದಾರೆ. ಐಐಟಿ, ಐಐಎಂನಲ್ಲಿ ಓದಿದವರಿಗೆ ಮಾತ್ರವೇ ಬಿಗ್ ಪೇ ಸ್ಕೇಲ್ ಸಿಗುತ್ತದೆ ಎನ್ನುವ ಕಲ್ಪನೆಗೆ ಕಲ್ಲುಹೊಡೆದಿದ್ದಾರೆ. ಈಕೆಗೆ ವಿಶ್ವದ ತಂತ್ರಜ್ಞಾನ ದೈತ್ಯ ಗೂಗಲ್‌ನಿಂದ ವಾರ್ಷಿಕ 52 ಲಕ್ಷ ರೂಪಾಯಿಯ ಪ್ಯಾಕೇಜ್ ಸಿಕ್ಕಿದೆ. ಅಂದರೆ ಪ್ರತಿ ತಿಂಗಳಿಗೆ 4.33 ಲಕ್ಷ ರೂಪಾಯಿಯ ಸಂಬಳ. ಎಂಎಂಎಂಯುಟಿ ಮಾಜಿ ವಿದ್ಯಾರ್ಥಿಯೊಬ್ಬರಿಗೆ ಸಿಕ್ಕ ಅತಿದೊಡ್ಡ ಪ್ಯಾಕೇಜ್ ಇದಾಗಿದೆ.
ಆರಾಧ್ಯ ತ್ರಿಪಾಠಿ ಅವರ ತಂದೆ ವಕೀಲರಾಗಿದ್ದರೆ, ತಾಯಿ ಗೃಹಿಣಿ. ಬಾಲ್ಯದಿಂದಲೇ ವಿದ್ಯಾಭ್ಯಾಸದಲ್ಲಿ ಗಮನಸೆಳೆದಿದ್ದ ಆರಾಧ್ಯ ತ್ರಿಪಾಠಿ, ಸೇಂಟ್ ಜೋಸೆಫ್ ಸ್ಕೂಲ್‌ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪೂರೈಸಿದ ಬಳಿಕ, ಕಂಪ್ಯೂಟರ್ ಇಂಜಿನಿರಿಂಗ್‌ನಲ್ಲಿ ಬಿಟೆಕ್ ಪದವಿ ಪಡೆಯುವ ಸಲುವಾಗಿ ಎಂಎಂಎಂಯುಟಿಗೆ ಸೇರಿದ್ದರು. ಅಂದಿನಿಂದ ಅವರು ವಿಶ್ವವಿದ್ಯಾನಿಲಯದಲ್ಲಿ ಮಾತ್ರವಲ್ಲದೆ ಒಟ್ಟಾರೆಯಾಗಿ ಟೆಕ್ ಉದ್ಯಮದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ, ಗೂಗಲ್‌ನಲ್ಲಿ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಎಂಜಿನಿಯರ್ ಆಗಿ ಹೆಚ್ಚು ದೊಡ್ಡ ಮೊತ್ತದ ಆಫರ್‌ಅನ್ನು ಸ್ವೀಕರಿಸಿದ್ದಾರೆ.
2003ರಲ್ಲಿ ಸ್ಕೇಲರ್ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಆರಾಧ್ಯ ತಮ್ಮ ಕೆಲಸವನ್ನು ಆರಂಭ ಮಾಡಿದ್ದರು. ಕಂಪನಿಯಲ್ಲಿ ಆಕೆಯ ಕೆಲಸ ಎಲ್ಲರಿಗೂ ಇಷ್ಟವಾಗಿತ್ತು. ಕಂಪನಿ ಈಕೆಯನ್ನು ತನ್ನಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂಟರ್ನ್‌ಶಿಪ್ ಮುಗಿದ ಬಳಿಕ 32 ಲಕ್ಷದ ಜಾಬ್ ಆಫರ್‌ಅನ್ನು ಅರಾಧ್ಯ ತ್ರಿಪಾಠಿಗೆ ನೀಡಿತ್ತು. ಇದು ಆರಾಧ್ಯ ತ್ರಿಪಾಠಿಗಗೆ ದೊಡ್ಡ ಮೊತ್ತವೇ ಆಗಿತ್ತಾದರೂ, ಕೆಲವೇ ತಿಂಗಳಲ್ಲಿ ಗೂಗಲ್ ಅದಕ್ಕಿಂತ ದೊಡ್ಡ ಮೊತ್ತದ ಆಫರ್ ನೀಡುವ ಮೂಲಕ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಉದ್ಯೋಗಿಗಳ ಲೆಕ್ಕಾಚಾರದಲ್ಲಿ ವಿಶ್ವದ 10 ಬೃಹತ್ ಕಂಪನಿಗಳಿವು, ಭಾರತದಿಂದ ಒಂದೇ ಕಂಪನಿ!
ತಮ್ಮ ಲಿಂಕ್ಡಿನ್ ಪೇಜ್‌ನಲ್ಲಿ ಬರೆದುಕೊಂಡಿರುವ ಆಕೆ, ನನಗೆ React.JS, React Redux, NextJs, Typescript, NodeJs, MongoDb, ExpressJS ಮತ್ತು SCSS ನಂತಹ ಹಲವಾರು ಟೆಕ್ ಸ್ಟಾಕ್‌ಗಳೊಂದಿಗೆ ದೃಢವಾದ ಹಿಡಿತ ಮತ್ತು ಅನುಭವವನ್ನು ಹೊಂದಿದ್ದೇನೆ. ನಾನು ಡೇಟಾ ಸ್ಟ್ರಕ್ಚರ್‌ಗಳು ಮತ್ತು ಅಲ್ಗಾರಿದಮ್‌ಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದೇನೆ ಮತ್ತು ವಿವಿಧ ಕೋಡಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಮಾರು 1000+ ಪ್ರಶ್ನೆಗಳನ್ನು ಪರಿಹರಿಸಿದ್ದೇನೆ ಮತ್ತು ಅವುಗಳ ಮೇಲೆ ಉತ್ತಮ ರೇಟಿಂಗ್ ಅನ್ನು ಹೊಂದಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
ತಮ್ಮ ಹೆಚ್ಚಿನ ಅನುಭವಗಳು ಇಂಟರ್ನ್‌ಶಿಪ್ ಸಮಯದಲ್ಲಿಯೇ ಬಂದಿತ್ತು ಎಂದು ಆರಾಧ್ಯ ತ್ರಿಪಾಠಿ ಹೇಳಿದ್ದಾರೆ. ಒಬ್ಬ ವ್ಯಕ್ತಿ ದೊಡ್ಡದಾಗಿ ಏನಾದರೂ ಸಾಧನೆ ಮಾಡಿದರೆ, ಅದಕ್ಕೆ ಅವರು ಕೆಲಸ ಮಾಡುವ ಕಂಪನಿ ಕೂಡ ಕಾರಣವಾಗುತ್ತದೆ ಎಂದಿದ್ದಾರೆ.
ದಕ್ಷಿಣ ಭಾರತಕ್ಕೆ ಲಗ್ಗೆ ಇಟ್ಟ ಫಿಡೆಲಿಟಿ, ಬೆಂಗಳೂರಿನಲ್ಲಿ ಹೊಸ ಕಚೇರಿ, 800 ಜಾಬ್ಸ್!