
ಭಾರತದ ಅತಿದೊಡ್ಡ ಐಟಿ ಸೇವಾ ಕಂಪನಿ ಟಿಸಿಎಸ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ 16 ಉದ್ಯೋಗಿಗಳನ್ನು ವಜಾಗೊಳಿಸಿದೆ ಮತ್ತು ಆರು ಮಾರಾಟಗಾರರನ್ನು ನಿರ್ಬಂಧಿಸಿದೆ. ಈ ಬಗ್ಗೆ ಸ್ವತಃ ಕಂಪೆನಿ ಸ್ಪಷ್ಟಪಡಿಸಿದ್ದು, ನಮ್ಮ ತನಿಖೆಯಲ್ಲಿ 19 ಉದ್ಯೋಗಿಗಳು ಭಾಗಿಯಾಗಿರುವುದು ಕಂಡುಬಂದಿದೆ. ನೀತಿ ಸಂಹಿತೆ ಉಲ್ಲಂಘನೆಗಾಗಿ 16 ಉದ್ಯೋಗಿಗಳನ್ನು ಕಂಪನಿಯಿಂದ ವಜಾ ಮಾಡಲಾಗಿದೆ ಮತ್ತು ಮೂರು ಉದ್ಯೋಗಿಗಳನ್ನು ಸಂಪನ್ಮೂಲ ನಿರ್ವಹಣೆ ಕಾರ್ಯದಿಂದ (HR management function ) ತೆಗೆದುಹಾಕಲಾಗಿದೆ, ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಲ್ಲಿ ಎಂಜಿನಿಯರ್ ಹುದ್ದೆಗೆ ನೇಮಕಾತಿ, ಇಲ್ಲಿದೆ ಸಂಪೂರ್ಣ ವಿವರ
ಆರು ಮಾರಾಟಗಾರರು, ಅವರ ಮಾಲೀಕರು ಮತ್ತು ಅಂಗಸಂಸ್ಥೆಗಳನ್ನು TCS ನೊಂದಿಗೆ ಯಾವುದೇ ವ್ಯವಹಾರ ಮಾಡದಂತೆ ಡಿಬಾರ್ ಮಾಡಲಾಗಿದೆ ಎಂದು ಕಂಪೆನಿ ಹೇಳಿದೆ.
ಜೂನ್ ಅಂತ್ಯದಲ್ಲಿ, ಅತಿದೊಡ್ಡ ಸಾಫ್ಟ್‌ವೇರ್ ರಫ್ತುದಾರ ಕಂಪೆನಿಗಳಲ್ಲಿ ನೇಮಕಾತಿ ಹಗರಣದ ವಿಚಾರಗಳು ಬಹಿರಂಗವಾಯ್ತು, ಇದರಲ್ಲಿ ಕೆಲವು ಕಾರ್ಯಗಳನ್ನು ನಿರ್ವಹಿಸುವ ಮಾರಾಟಗಾರರು TCS ಸಿಬ್ಬಂದಿಗಳೊಂದಿಗೆ ಶಾಮೀಲಾಗಿರುವ ಬಗ್ಗೆ ಅನುಮಾನವಿದೆ.
ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕೆ. ಕೃತಿವಾಸನ್ ಅಧಿಕಾರ ವಹಿಸಿಕೊಂಡ ಕೆಲವೇ ವಾರಗಳಲ್ಲಿ ಹಗರಣಗಳು ಬೆಳಕಿಗೆ ಬಂದಿತ್ತು, ಇದು ಅವರಿಗೆ ಎದುರಾದ ಮೊದಲ ಪ್ರಮುಖ ಸವಾಲಾಗಿದೆ.
ಭಾರತ್ ಅರ್ಥ್ ಮೂವರ್ಸ್ ನರ್ಸ್, ಡಿಫೆನ್ಸ್, ಏರೋಸ್ಪೇಸ್, ಇಂಜಿನಿಯರಿಂಗ್ ವಿಭಾಗದ ಹುದ್ದೆಗಳಿಗೆ ಅರ್ಜಿ ಆಹ್ವಾನ
ಈ ಸಮಸ್ಯೆಯು ಕೆಲವು ಉದ್ಯೋಗಿಗಳು ಮತ್ತು ಗುತ್ತಿಗೆದಾರರನ್ನು ಸರಬರಾಜು ಮಾಡುವ ಮಾರಾಟಗಾರರಿಂದ ಆಗಿದೆ. ಅವರು ಕಂಪನಿಯ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಕಂಪನಿಯ ಯಾವುದೇ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿ ಈ ಹಗರಣದಲ್ಲಿ ಭಾಗಿಯಾಗಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ . ಇದು ಕಂಪನಿಯ ವಿರುದ್ಧದ ವಂಚನೆ ಅಲ್ಲ. ಇದು ಯಾವುದೇ ಆರ್ಥಿಕ ಪರಿಣಾಮಗಳನ್ನು ಹೊಂದಿಲ್ಲ ಎಂದು ಕಂಪೆನಿ ಹೇಳಿದೆ.
ಇನ್ನು ಕಂಪೆನಿ ತನ್ನ ಹೇಳಿಕೆಯಲ್ಲಿ, ಸಂಪನ್ಮೂಲ ನಿರ್ವಹಣಾ ಕೆಲಸದಲ್ಲಿ ನಿಯಮಿತವಾಗಿ ಸಿಬ್ಬಂದಿಯನ್ನು ಬದಲಾಯಿಸುವುದು ಮತ್ತು ಪೂರೈಕೆದಾರ ನಿರ್ವಹಣೆಯ ಮೇಲೆ ವಿಶ್ಲೇಷಣೆಯನ್ನು ಹೆಚ್ಚಿಸುವುದು ಸೇರಿದಂತೆ ಆಡಳಿತ ಕ್ರಮಗಳನ್ನು ಅಭಿವೃದ್ಧಿ ಪಡಿಸಲು TCS ಮುಂದಾಗಿದೆ ಎಂದು ಹೇಳಿದೆ.
ಕಂಪನಿಯು ಎಲ್ಲಾ ಪಾಲುದಾರರು ಮತ್ತು ಉದ್ಯೋಗಿಗಳು ಟಾಟಾ ನೀತಿ ಸಂಹಿತೆಗೆ ಬದ್ಧವಾಗಿರಬೇಕು. ಅನೈತಿಕ ನಡವಳಿಕೆಗೆ ಇದು ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ ಎಂದು ಕಂಪೆನಿ ಕಟ್ಟುನಿಟ್ಟಾಗಿ ಹೇಳಿದೆ.