ಕೂಲಿ ಕಾರ್ಮಿಕರಿಗೆ ಸಿಗ್ತಿಲ್ಲ ಉದ್ಯೋಗ ಖಾತ್ರಿ ಯೋಜನೆಯ ಕೆಲಸ!

By Suvarna News  |  First Published Jun 23, 2022, 9:02 PM IST
  • ದೇವರು ವರ ಕೊಟ್ರೆ  ಪಿಡಿಓ  ಕೊಡ್ತಿಲ್ಲ! 
  • ಜೆಸಿಬಿ ಗಳಿಂದ ಕೆಲಸ ಮಾಡಿಸಿದರೆ ಕ್ರಮ ಕೈಗೋಳ್ಳಲಾಗುವುದು ಎಂದ ಸಿಇಓ ಸುರೇಶ ಇಟ್ನಾಳ್ 
  • ಪಿಡಿಓಗಳಿಗೆ ಎಚ್ಚರಿಕೆ ನೀಡಿದ ಜಿಲ್ಲಾ ಪಂಚಾಯತ ಸಿಇಓ 

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್

ಧಾರವಾಡ (ಜೂನ್ 23): ಕೇಂದ್ರ ಸರಕಾರದ ಮಹಾತ್ಮಾ ಗಾಂದಿ ಉದ್ಯೋಗ ಖಾತ್ರಿ ಯೋಜನೆಯು ಬಡವರಿಗೆ ಕೂಲಿ ಕಾರರಿಗೆ  ಅನೂಕೂಲವಾಗುವಂತೆ ಎನ್ ಆರ್ ಇ ಜಿ ಕೆಲಸಗಳನ್ನ ನೀಡಬೇಕು ಎಂದು ಸರಕಾರದ ಆದೇಶವಿದೆ. ಆದರೆ ನಾವೂ ಕೆಲಸವನ್ನ ಮಾಡುತ್ತೇವೆ. ನಾವೂ ನಿರುದ್ಯೂಗಿಗಳಾಗಿದ್ದೇವೆ. ನಮಗೆ ಕೆಲಸ ಕೊಡಿ ಎಂದು ಕೂಲಿ ಕಾರ್ಮಿಕರು ಧಾರವಾಡ ಜಿಲ್ಲಾ ಪಂಚಾಯತ ಸಿ ಇ ಓ ಸುರೇಶ ಇಟ್ನಾಳ್ ಅವರಿಗೆ ಮನವಿಯನ್ನು ಸಲ್ಲಿಸಿದ್ದರು.

Tap to resize

Latest Videos

ಬೇಕೆಂದೆ  ಜಿಲ್ಲಾ ಪಂಚಾಯತ್ ಕಚೇರಿ ಎದುರು ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಕಾರ್ಮಿಕರು,  ಧಾರವಾಡ ತಾಲೂಕಿನ ಕುರುಬಗಟ್ಟಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಮುಳಮುತ್ತಲ, ಮಂಗಳಗಟ್ಟಿ, ಕುರುಬಗಟ್ಟಿ ಗ್ರಾಮಸ್ಥರು ನಮಗರ ಕೆಲಸ ಕೋಡಿ ಎಂದು ಜಿಲ್ಲಾ ಪಂಚಾಯತ ಕಚೇರಿ ಎದುರು ಪ್ರತಿಬಟನೆ ನಡೆಸಿ ಆಕ್ರೋಶ ಹಾಕಿದ್ದಾರೆ.

ಇನ್ನು ನಾವು ಕಳೆದ ಒಂದು ತಿಂಗಳಿಂದ ನಮಗೆ ಕೆಲಸ ಮಾಡುತ್ತೆವೆ ನಮಗೆ ಕೆಲಸ ಕೋಡಿ ಎಂದು ಕುರುಬಗಟ್ಟಿ ಪಿಡಿಓ ಅವರಿಗೆ ಮನವಿ ಮಾಡಿದರು ನಮಗೆ ಕೆಲಸವನ್ನ ಕೊಡುತ್ತಿಲ್ಲ ಇದರಿಂದ ನಮಗೆ ಕೆಲಸವೂ ಇಲ್ಲ,  ನಾವೂ ನಿರುದ್ಯೂಗಿಗಳಾಗುತ್ತಿದ್ದೆವೆ..ಪಿಡಿಓ ಅವರು ಕೂಲಿ ಕಾರ್ಮಿರನ್ನ ಬಳಸಿ ಎನ್ ಆರ್ ಜಿ ಕೆಲಸವನ್ನ ಮಾಡಿಸಬೇಕು ಆದರೆ ಅವರು ಜೆಸಿಬಿ ಬಳಸಿಕ್ಕೊಂಡು ಕರೆಯ ಕೆಲಸವನ್ನ ಮಾಡುತ್ತಿದ್ದಾರೆ..ಎಂದು ಕೂಲಿ ಕಾರ್ಮಿಕರು ಆರೋಪಿಸಿದರು. ಇನ್ನು ನಮಗೆ ಕೆಲಸ ಕೋಡಿ ಎಂದು ಎಷ್ಟೋ ಭಾರಿ ಕೇಳಿಕೊಂಡರು ಪಿಡಿಓ ಅವರು ಕ‌್ಯಶರೆ ಎನ್ನುತ್ತಿಲ್ಲ ಎಂದು ಸಿಇಓ ಅವರ ಮುಂದೆ ಕೇಳಿಕ್ಕೊಂಡರು.

ಸರ್ಕಾರಿ ಶಾಲೆಗೆ ಅಡ್ಮಿಶನ್ ಆಗಿರುವ ಟಾಪ್ ಜಿಲ್ಲೆಯಲ್ಲಿ ಮಕ್ಕಳಿಗಿಲ್ಲ ತರಗತಿ ಕೊಠಡಿ!

ಇನ್ನು ಕೂಲಿ ಕಾರ್ಮಿಕರ ಪರವಾಗಿ ನಿಂತ ಎ ಐ ಡಿ ಎಸ್ ಓ ಸಂಘಟನೆಯ ಸದಸ್ಯ ಶರಣು ನಾವು ಕೂಡಾ ಪಂಚಾಯತ ಗೆ ಹೋಗಿ ಚೆಕ್ ಮಾಡಿಸಿದಾಗ ನಿರುದ್ಯೂಗಿಗಳಿಗೆ ಕೆಲಸವನ್ನು ಕೊಡಬೇಕಾದ ಪಿಡಿಓ ಕೆಲಸವನ್ನ ಕೊಡ್ತಾ ಇಲ್ಲ. ಅವರು ಯಂತ್ರೋಪಕರಣಗಳ ಮುಖಾಂತರ ಕೆಲಸವನ್ನ ಮಾಡಿಸುತ್ತಿದ್ದಾರೆ‌‌. ಅರ್ಹ ಫಲಾನುಭವಿಗಳಿಗೆ ಕೆಲಸವನ್ನ ಕೊಡ್ತಾ ಇಲ್ಲ ಎಂದು ಆಕ್ರೊಶ ಹಾಕಿದರು.

ಇನ್ನು ಸಿಇಓ ಸುರೇಶ ಇಟ್ನಾಳ ಮಾತನಾಡಿ, ಅವರು ಬಂದು ಮನವಿ ಕೊಟ್ಡಿದ್ದಾರೆ. ಅವರಿಗೆ ಜಾಬ್ ಕಾರ್ಡ ಇಲ್ಲ, ಸದ್ಯ ಪಿಡಿಓ ಅವರು ಅವರ ಜಾಬ್ ಕಾರ್ಡ ಮಾಡಿಸಿ ಅವರಿಗೆ ದಿನಗೂಲಿ ಕೆಲಸವನ್ನ ಕೊಡಿಸೋ ಕೆಲಸವನ್ನ ನಾವು ಮಾಡುತ್ತೆವೆ. ಇನ್ನು ಪಿಡಿಓ ಗಳು ಜಸಿಬಿಗಳ ಮುಖಾಂತರ ಕೇಲಸವನ್ನ ಮಾಡಿದರೆ  ಅವರ ಮೆಲೆ ಕ್ರಮವನ್ನ ಕೈಗೊಳ್ಳಲಾಗುವುದು.

ಹಾವೇರಿ: ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ ನುಂಗಿದ ಸಿಬ್ಬಂದಿ..!

ಎನ್ ಆರ್ ಜಿ ಕೆಲಸ ಕೂಲಿ ಕಾರ್ಮಿಕರನ್ನ ಬಳಸಿ ಕೆಲಸವನ್ನ ಮಾಡಿಸಬೇಕು. ಹೀಗಾಗಿ ನಾವೂ ಕೂಡಾ ಪಂಚಾಯತಿ ಗಳ ಮೆಲೆ ನಿಗಾ ಇಟ್ಟಿದ್ದೆವೆ‌‌ ಯಾರಾದರೂ ಯಂತ್ರೋಪಕರಣಗಳ ಮುಖಾಂತರ ಕೆಲಸ ಮಾಡಿಸಿದವರ ವಿರುದ್ದ ಕಠೀಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಇಓ ಸುರೇಶ ಇಟ್ನಾಳ ಎಲ್ಲ ಪಿಡಿಓಗಳಿಗೆ ಖಡಕ್ ಎಚ್ಚರಿಕೆಯನ್ನ ನೀಡಿದರು.

click me!