ಐಕಿಯಾದಲ್ಲಿ ಸ್ಥಳೀಯರಿಗೆ ಶೇ.75 ಉದ್ಯೋಗಾವಕಾಶ ಭರವಸೆ: ಸಿಎಂ ಬೊಮ್ಮಾಯಿ

By Kannadaprabha News  |  First Published Jun 23, 2022, 9:55 AM IST

*  ದೇಶದ ಅತಿ ದೊಡ್ಡ ಐಕಿಯಾ ಮಳಿಗೆ ಬೆಂಗಳೂರಿನಲ್ಲಿ ಆರಂಭ
*  ಸ್ವೀಡನ್‌ ಮೂಲದ ಗೃಹ ಪೀಠೋಪಕರಣಗಳ ಮಾರಾಟ ಕಂಪನಿ ಐಕಿಯಾ
*  ರಾಜ್ಯದಲ್ಲಿ ಸುಮಾರು 3,000 ಕೋಟಿ ಹೂಡಿಕೆ ಮಾಡಲು ತೀರ್ಮಾನ


ಬೆಂಗಳೂರು(ಜೂ.23):  ಐಕಿಯಾ ಪೀಠೋಪಕರಣ ಮಳಿಗೆಯಲ್ಲಿ ಶೇಕಡ 75ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ನೀಡುವ ಭರವಸೆಯನ್ನು ಸಂಸ್ಥೆಯ ಮುಖ್ಯಸ್ಥರು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸ್ವೀಡನ್‌ ಮೂಲದ ಗೃಹ ಪೀಠೋಪಕರಣಗಳ ಮಾರಾಟ ಕಂಪನಿ ’ಐಕಿಯಾ’ ನಗರದ ನಾಗಸಂದ್ರದಲ್ಲಿ ನಿರ್ಮಿಸಿರುವ ದೇಶದ ಅತಿದೊಡ್ಡ ಮಳಿಗೆಯನ್ನು ಮುಖ್ಯಮಂತ್ರಿಗಳು ಬುಧವಾರ ಉದ್ಘಾಟಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವೋಸ್‌ನಲ್ಲಿ ನಡೆದ ಉದ್ಯಮ ಸಮಾವೇಶದಲ್ಲಿ ಐಕಿಯಾ ಮುಖ್ಯಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಲಾಗಿತ್ತು. ಸದ್ಯ ರಾಜ್ಯದಲ್ಲಿ ಸುಮಾರು 3,000 ಕೋಟಿ ಹೂಡಿಕೆ ಮಾಡಲು ತೀರ್ಮಾನ ಮಾಡಿದ್ದಾರೆ. ನೂತನ ಮಳಿಗೆ ಪ್ರಾರಂಭವಾಗಿದ್ದ ಸ್ಥಳೀಯ ಕುಶಲಕರ್ಮಿಗಳಾದ ಬಡಗಿಗಳು, ಶಿಲ್ಪಕಾರರು, ಉತ್ಪಾದಕರಿಗೆ ಅವಕಾಶ ದೊರೆಯುತ್ತದೆ. ಸದ್ಯ ಶೇ.27ರಷ್ಟು ಸ್ಥಳೀಯರಿಗೆ ಅವಕಾಶ ನೀಡಲಾಗುತ್ತಿದೆ. ಈ ಪ್ರಮಾಣವನ್ನು ಹೆಚ್ಚಳ ಮಾಡುವಂತೆ ಮನವಿ ಮಾಡಲಾಗಿದ್ದು, ಶೇ.75ರಷ್ಟು ಉದ್ಯೋಗವಕಾಶ ಸ್ಥಳೀಯರಿಗೆ ನೀಡುವ ಭರವಸೆಯನ್ನು ಐಕಿಯಾ ಮುಖ್ಯಸ್ಥರು ನೀಡಿದ್ದಾರೆ ಎಂದರು.

Tap to resize

Latest Videos

ಅಗ್ನಿಪಥ್: ಎಷ್ಟು ಯೋಧರಿಗೆ ಉದ್ಯೋಗ ನೀಡಿದ್ದೀರಿ- ಆನಂದ್ ಮಹೀಂದ್ರಾಗೆ ಯೋಧರ ಪ್ರಶ್ನೆ

ಉದ್ಘಾಟನಾ ಸಮಾರಂಭದಲ್ಲಿ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ, ಸ್ವೀಡನ್‌ ರಾಯಭಾರಿ ಕ್ಲಾಸ್‌ ಮೊಲಿನ್‌, ಐಕಿಯಾ ಇಂಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂಸನ್‌ ಪುಲ್ವೇಲರ್‌, ಐಕಿಯಾ ಕರ್ನಾಟಕದ ಮಾರುಕಟ್ಟೆವ್ಯವಸ್ಥಾಪಕ ಆಂಜೆ ಹಿಮ ಮೊದಲಾದವರು ಉಪಸ್ಥಿತರಿದ್ದರು.
 

click me!