48 ವರ್ಷ ಹಳೆಯ ರೆಸ್ಯೂಮ್ ಶೇರ್ ಮಾಡಿದ ಬಿಲ್‌ಗೇಟ್ಸ್‌: ಕೆಲಸ ಹುಡುಕುವವರಿಗೆ ಸಂದೇಶ

By Anusha Kb  |  First Published Jul 2, 2022, 12:01 PM IST

ಸಾವಿರಾರು ಜನರಿಗೆ ಉದ್ಯೋಗ ನೀಡಿದ ಉದ್ಯೋಗದಾತ, ಟೆಕ್‌ ದೈತ್ಯ, ಮೈಕ್ರೋಸಾಫ್ಟ್‌ನ ಸಹ ಸಂಸ್ಥಾಪಕ ಬಿಲ್‌ಗೇಟ್ಸ್ ಅವರು ತಮ್ಮ ರೆಸ್ಯೂಮ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸುಮಾರು ಐದು ದಶಕ ಸಮೀಪಿಸಿದ 48 ವರ್ಷ ಹಳೆಯದಾದ ಈ ರೆಸ್ಯೂಮ್ ಈಗ ಇಂಟರ್‌ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. 


ನವದೆಹಲಿ: ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿರುವ ಅನೇಕರು ತಮ್ಮ ಕನಸಿನ ಕೆಲಸವನ್ನು ಗಳಿಸುವುದಕ್ಕಾಗಿ ಸಮರ್ಪಕವಾದ ರೆಸ್ಯೂಮ್‌ ತಯಾರಿಸಲು ಹೆಣಗಾಡುತ್ತಾರೆ. ಉದ್ಯೋಗದಾತನಿಗೆ ಮೊದಲಿಗೆ ಒಳ್ಳೆಯ ಪ್ರಭಾವ ಬೀರುವಲ್ಲಿ ರೆಸ್ಯೂಮ್ ಅಥವಾ ನಮ್ಮ ಬಯೋಡೇಟಾ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ಅದರ ತಯಾರಿಗೆ ಹೆಣಗಾಡುವಷ್ಟು ಬೇರಾವುದಕ್ಕೂ ಹೆಣಗುವುದಿಲ್ಲ. ಉದ್ಯೋಗಿಗಳಾಗಿದ್ದಲ್ಲಿ ನಿಮಗೆ ಅದರ ಅನುಭವ ಇರಬಹುದು. ಆದರ ಈಗ ಸಾವಿರಾರು ಜನರಿಗೆ ಉದ್ಯೋಗ ನೀಡಿದ ಉದ್ಯೋಗದಾತ, ಟೆಕ್‌ ದೈತ್ಯ, ಮೈಕ್ರೋಸಾಫ್ಟ್‌ನ ಸಹ ಸಂಸ್ಥಾಪಕ ಬಿಲ್‌ಗೇಟ್ಸ್ ಅವರು ತಮ್ಮ ರೆಸ್ಯೂಮ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸುಮಾರು ಐದು ದಶಕ ಸಮೀಪಿಸಿದ 48 ವರ್ಷ ಹಳೆಯದಾದ ಈ ರೆಸ್ಯೂಮ್ ಈಗ ಇಂಟರ್‌ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. 


ಬಿಲ್ ಗೇಟ್ಸ್ ಎಂದು ಜಗತ್ತಿಗೆ ಚಿರಪರಿಚಿತರಾದ ವಿಲಿಯಂ ಹೆನ್ರಿ ಗೇಟ್ಸ್ III (William Henry Gates III) ಅವರು ನಿನ್ನೆ (ಜೂ.1)  ತಮ್ಮ ಈ ರೆಸ್ಯೂಮ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕುವ ಮೂಲಕ ಸಂಚಲನ ಸೃಷ್ಟಿಸಿದರು. ಪ್ರಸ್ತುತ 66 ವರ್ಷದ ಬಿಲಿಯನೇರ್ ಆಗಿರುವ ಬಿಲ್‌ಗೇಟ್ಸ್‌ ಆ ಸಮಯದಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ (Harvard University) ಮೊದಲ ವರ್ಷದಲ್ಲಿದ್ದರು. ಒಂದು ಪೇಜ್‌ನ ಈ ದಾಖಲೆಯೂ ಅವರ ವಿದ್ಯಾರ್ಥಿ ಜೀವನವು ಸಾಕಷ್ಟು ಸಾಧನೆಗಳಿಂದ ತುಂಬಿದ್ದನ್ನು ತೋರಿಸುತ್ತಿದೆ. 'ನೀವು ಇತ್ತೀಚಿನ ಪದವೀಧರ ಆಗಿರಲಿ, ಅಥವಾ ಕಾಲೇಜು ಬಿಟ್ಟವರು ಆಗಿರಲಿ. ಆದರೆ ನಿಮ್ಮ ರೆಸ್ಯೂಮ್  48 ವರ್ಷಗಳ ಹಿಂದಿನ ನನ್ನ ರೆಸ್ಯೂಮ್‌ಗಿಂತ ಉತ್ತಮವಾಗಿ ಕಾಣುತ್ತದೆ ಎಂದು ನನಗೆ ಖಾತ್ರಿಯಿದೆ' ಎಂದು ಬಿಲ್ ಗೇಟ್ಸ್ ಈ ರೆಸ್ಯೂಮ್‌ ಅನ್ನು ಪೋಸ್ಟ್ ಮಾಡಿ ಬರೆದಿದ್ದಾರೆ.

Tap to resize

Latest Videos

ರೇಪಿಸ್ಟ್‌ ಜೊತೆ ನಂಟು: ಗೇಟ್ಸ್‌ ದಂಪತಿ ಡೈವೋರ್ಸ್‌ ರಹಸ್ಯ ಬಯಲು!

ಆ ಸಮಯದಲ್ಲಿಯೇ ಬಿಲ್‌ಗೇಟ್ಸ್  ಸಾಕಷ್ಟು ಕೋರ್ಸ್‌ಗಳನ್ನು ತೆಗೆದುಕೊಂಡಿದ್ದರು ಮತ್ತು ಎಲ್ಲದರಲ್ಲೂ ಎ ಗ್ರೇಡ್‌ ಗಳಿಸಿದ್ದರು. ಸಾಮಾನ್ಯವಾಗಿ ಹೆಚ್ಚಿನ ಪ್ರಥಮ ವರ್ಷದ ವಿದ್ಯಾರ್ಥಿಗಳಲ್ಲಿ ತೋರಿಸಲು ಯಾವುದೇ ಅನುಭವವಿರುವುದಿಲ್ಲ. ಆದರೆ ಬಿಲ್‌ಗೇಟ್ಸ್ ಅವರು ಈ ವಿಚಾರಕ್ಕೆ ತದ್ವಿರುದ್ಧವಾಗಿದ್ದರು.
ಹೀಗಾಗಿ ಲಿಂಕ್ಡಿನ್‌ನಲ್ಲಿ ಪೋಸ್ಟ್‌ ಆದ ಈ ರೆಸ್ಯೂಮ್ ಸಾಕಷ್ಟು ವೈರಲ್ ಆಗಿದೆ.  ಕೆಲವರು ಎಲ್ಲೋ ಪ್ರಾರಂಭಿಸುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

ಗೇಟ್ಸ್ ಅವರ ಪೋಸ್ಟ್‌ಗೆ ಬಂದ ಕಾಮೆಂಟ್ ಮತ್ತಷ್ಟು ಗಮನ ಸೆಳೆದಿದೆ. ಆತ್ಮೀಯ ಶ್ರೀ ವಿಲಿಯಂ ಹೆಚ್. ಗೇಟ್ಸ್, ಮೈಕ್ರೋಸಾಫ್ಟ್‌ನೊಂದಿಗೆ ಸ್ಥಾನ ಪಡೆಯಲು ಸಮಯ ತೆಗೆದುಕೊಂಡಿದ್ದಕ್ಕಾಗಿ ಧನ್ಯವಾದಗಳು. ನಾವು ನಿಮ್ಮ ಸಾಧನೆಗಳನ್ನು ಗೌರವಿಸುತ್ತೇವೆ ಮತ್ತು ನಿಮ್ಮ ಆಸಕ್ತಿಯನ್ನು ಪ್ರಶಂಸಿಸುತ್ತೇವೆ. ಬಹಳ ಎಚ್ಚರಿಕೆಯಿಂದ ಪರಿಗಣಿಸಿದ ನಂತರ ನಾವು ಇತರ ಅಭ್ಯರ್ಥಿಗಳೊಂದಿಗೆ ಮುಂದುವರಿಯಲು ನಿರ್ಧರಿಸಿದ್ದೇವೆ. ನಿಮ್ಮ ಎಲ್ಲಾ ಮಾಹಿತಿಯನ್ನು ನಾವು ಫೈಲ್‌ನಲ್ಲಿ ಇರಿಸುತ್ತೇವೆ. ಸಂದರ್ಭಗಳು ಬದಲಾದರೆ ನಾವು ಲಭ್ಯವಿರುವ ಯಾವುದೇ ಸೂಕ್ತ ಸ್ಥಾನಗಳಿಗೆ ನಿಮ್ಮನ್ನು ಪರಿಗಣಿಸಬಹುದು. ನಿಮ್ಮ ವೃತ್ತಿಜೀವನದಲ್ಲಿ  ಯಶಸ್ಸನ್ನು ಬಯಸುತ್ತೇವೆ ಎಂದು ಯಾರೋ ಕಾಮೆಂಟ್ ಮಾಡಿದ್ದಾರೆ. 

ಶತಮಾನದ ದಾನಿ: ಬಿಲ್‌ಗೇಟ್ಸ್‌ ಹಿಂದಿಕ್ಕಿದ ಹೆಮ್ಮೆಯ ಭಾರತೀಯ ಜಮ್‍ಸೆಟ್‍ಜಿ ಟಾಟಾ!
ಹಲವಾರು ಬಳಕೆದಾರರು ಬಿಲ್ ಗೇಟ್ಸ್ ಅವರ ಪುನರಾರಂಭವು ಪರಿಪೂರ್ಣವಾಗಿದೆ ಎಂದು ಹೇಳಿದ್ದಾರೆ. ರೆಸ್ಯೂಮ್‌ ಹಂಚಿಕೊಂಡಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. ಇದು 48 ವರ್ಷ ಹಳೆಯ ರೆಸ್ಯೂಮ್ ಆಗಿದ್ದರೂ ಈಗಲೂ ಉತ್ತಮವಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ರೆಸ್ಯೂಮ್ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಒಂದು ಪುಟದ ರೆಸ್ಯೂಮ್ ಅದ್ಭುತವಾಗಿದೆ. ನಾವೆಲ್ಲರೂ ಹಿಂತಿರುಗಿ ನೋಡಲು ನಮ್ಮ ಹಿಂದಿನ ರೆಸ್ಯೂಮ್‌ಗಳ ನಕಲುಗಳನ್ನು ಇಟ್ಟುಕೊಳ್ಳಬೇಕು. ಕೆಲವೊಮ್ಮೆ, ನಾವು ನಮ್ಮ ಜೀವನದಲ್ಲಿ ಎಷ್ಟು ಸಾಧನೆ ಮಾಡಿದ್ದೇವೆ ಎಂಬುದನ್ನು ನಾವು ಮರೆತುಬಿಡುತ್ತೇವೆ ಎಂದು ಇನ್ನೊಬ್ಬ ಬಳಕೆದಾರರು ಹೇಳಿದರು.

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಬಿಲ್ ಗೇಟ್ಸ್ (Bill Gates) ಅವರ ಮೊದಲ ರೆಸ್ಯೂಮ್ ವಿಶ್ವದಾದ್ಯಂತ ಲಕ್ಷಾಂತರ ಯುವ ಉದ್ಯೋಗಾಕಾಂಕ್ಷಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಜಗತ್ತಿಗೆ ತಿಳಿದಿರುವಂತೆ ಟೆಕ್ ದೈತ್ಯ ಮೈಕ್ರೋಸಾಫ್ಟ್ ಸಹ-ಸ್ಥಾಪಕ ಬಿಲ್‌ ಗೇಟ್ಸ್ , ಲಾಭರಹಿತವಾದ ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್  ಎಂಬ ಎನ್‌ಜಿಒ ಅನ್ನು ನಡೆಸುತ್ತಿದ್ದು, ವೃತ್ತಿಪರ ನೆಟ್‌ವರ್ಕಿಂಗ್ ಸೈಟ್‌ನಲ್ಲಿ 35 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ. 

click me!