ಅಲಾರಂ ಹೊಡೆದಾಗಲ್ಲೆಲ್ಲಾ ಏಳ್ಬೇಕು, ತಿಂಗಳಿಗೆ ಭರ್ತಿ 26 ಲಕ್ಷ ಸಂಬಳ !

By Suvarna News  |  First Published Jul 1, 2022, 10:52 AM IST

ದಿನಪೂರ್ತಿ ಹೊಟ್ಟೆ ತುಂಬಾ ತಿನ್ತಾ, ಕಣ್ತುಂಬಾ ನಿದ್ದೆ (Sleep) ಮಾಡ್ತಾ ಇರ್ಬೇಕು ಅನ್ನೋದು ಹಲವರ ಆಸೆ. ಕೆಲ್ಸ ಮಾಡೋದು ಅಂದ್ರೆ ಸಾಕು ಮೂಗು ಮುರೀತಾರೆ. ಆದ್ರೆ ಸೋಮಾರಿಗಳಿಗಳು ದುಡ್ಡು ಮಾಡೋಕೆ ಎಂಥೆಂಥಾ ದಾರಿಯನ್ನು ಹುಡುಕಿಕೊಳ್ತಾರೆ. ಇಲ್ಲೊಬ್ಬಾತ ಯಾವಾಗ ಬೇಕಾದ್ರೂ ನನ್ನನ್ನು ಎಬ್ಬಿಸಿ ಅಂತ ಜನರಿಗೆ ಆಫರ್ ಕೊಟ್ಟು, ತಿಂಗಳಿಗೆ ಭರ್ತಿ 26 ಲಕ್ಷ ರೂ. ಸಂಪಾದಿಸ್ತಿದ್ದಾನೆ.


ಜಗತ್ತಿನಲ್ಲಿ ಅದೆಷ್ಟು ಚಿತ್ರವಿಚಿತ್ರವಾದ ಆಸಕ್ತಿಕರ ಉದ್ಯೋಗ (Job)ಗಳಿವೆ.  ಅವುಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋದರೆ ಅಚ್ಚರಿಯಾಗೋದು ಖಂಡಿತ. ಇಡೀ ದಿನಾ ಟಿವಿ ನೋಡುವುದು, ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಕೆಲಸ (Work) ಮಾಡಿಕೊಳ್ಳುವುದು, ಸುಮ್ಮನೆ ಸೂಟ್ ಹಾಕಿಕೊಂಡು ಓಡಾಡುವುದಕ್ಕೆ ಕೂಡಾ ಸಂಬಳ ಕೊಡೋ ವಿಚಾರಗಳ ಬಗ್ಗೆ ನೀವು ಈ ಹಿಂದೆ ಕೇಳಿದ್ದೀರಿ. ಆದರೆ, ಇದು ಒಂಥರಾ ವಿಚಿತ್ರ. ಜಸ್ಟ್ ಮಲಗಿದೋರನ್ನು ಎಬ್ಬಿಸೋದಷ್ಟೇ ಕೆಲ್ಸ. ಇದರಿಂದ ನಿದ್ದೆ (Sleep)ಯಿಂದ ಏಳೋರು ಗಳಿಸ್ತಿರೋದು ತಿಂಗಳಿಗೆ ಬರೋಬ್ಬರಿ 26 ಲಕ್ಷ ಗಳಿಸ್ಬೋದು. ಜೇಕಿ ಬೋಹ್ಮ್ ಎಂಬ ವೀಡಿಯೋ ಇನ್‌ಫ್ಲುಯೆನ್ಸರ್ ಜನರಿಗೆ ಈ ಆಫರ್ ನೀಡಿದ್ದಾರೆ. ಯಾವ ರೀತಿಯಾದರೂ ಸರಿ ಅವ್ರನ್ನು ಗಾಢ ನಿದ್ದೆಯಿಂದ ಎಬ್ಬಿಸ್ಬೇಕು. ಇದರಿಂದ ಬೋಹ್ಮ್‌ ತಿಂಗಳಿಗೆ ಲಕ್ಷ ಲಕ್ಷ ಗಳಿಸ್ತಿದ್ದಾರೆ.

ಜೇಕಿ ಬೋಹ್ಮ್ ನಿದ್ರೆಗೆ ಭಂಗ ತರುವ ಹಲವು ವಸ್ತುಗಳನ್ನು ತಮ್ಮ ರೂಮಿನಲ್ಲಿ ತಂದು ಇರಿಸಿಕೊಂಡಿದ್ದಾರೆ. ಸ್ಪೀಕರ್‌, ಬಬಲ್ ಯಂತ್ರ ಮೊದಲಾದವುಗಳನ್ನು ಕೋಣೆಯಲ್ಲಿ ಇರಿಸಲಾಗಿದ್ದು, ಇದನ್ನು ಉಪಯೋಗಿಸಿ ನಿದ್ರಾಭಂಗಗೊಳಿಸಬಹುದು. ಅಥವಾ ಇತರ ಯಾವುದೇ ವಿಧಾನವನ್ನು ಸಹ ಅನುಸರಿಸಬಹುದು. ಒಟ್ಟಾರೆ ವ್ಯಕ್ತಿ ನಿದ್ದೆಯಿಂದ ಎದ್ದರಾಯಿತು ಅಷ್ಟೆ. ಪ್ರಕ್ರಿಯೆಯು ತುಂಬಾ ಸರಳವಾಗಿದೆ. ಇದಕ್ಕಾಗಿ ತಿಂಗಳಿಗೆ  26 ಲಕ್ಷ ರೂ. ಬೋಹ್ಮ್‌ಗೆ ಪಾವತಿಯಾಗುತ್ತಿದೆ. ಬೋಹ್ಮ್‌ ತಮ್ಮ ಕೆಲವು ಅನುಯಾಯಿಗಳನ್ನು ತನ್ನನ್ನು ಎಚ್ಚರಗೊಳಿಸಲು ಪ್ರೋತ್ಸಾಹಿಸುತ್ತಾರೆ. ಅನುಯಾಯಿಗಳು ಅಲಾರಾಂಗಾಗಿ ಯಾವುದೇ ಹಾಡನ್ನು ಮಾಡಬಹುದು ಮತ್ತು ಕಿರಿಕಿರಿಗೊಳಿಸುವ ಬೆಳಕಿನ ಪ್ರದರ್ಶನವನ್ನು ಸಹ ಏರ್ಪಡಿಸಬಹುದು.

Tap to resize

Latest Videos

ಮಧ್ಯಾಹ್ನ ನಿದ್ದೆ ಮಾಡಿದ್ರೆ ಸೋಮಾರಿಯಾಗಲ್ಲ, ಸೂಪರ್ ಆ್ಯಕ್ಟಿವ್ ಆಗ್ತಾರೆ

ಟಿಕ್‌ಟಾಕರ್‌ ಬೋಹ್ಹ್‌ ಸೋಷಿಯಲ್ ಮೀಡಿಯಾ (Social Media)ದಲ್ಲಿ 5.2 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಮಧ್ಯರಾತ್ರಿ 12:30ಕ್ಕೆ ಬೋಹ್ಮ್ ನಿದ್ರೆಯಿಂದ ಥಟ್ಟನೆ ಎಚ್ಚರಗೊಂಡಿರುವುದನ್ನು ತೋರಿಸುವ ವೀಡಿಯೋ 7 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಅವನ ಕೊಠಡಿಯಲ್ಲಿರುವ ಸ್ಪೀಕರ್‌ ಮಧ್ಯರಾತ್ರಿ 2 ಗಂಟೆಗೆ ಜೋರಾಗಿ ಡಬ್‌ಸ್ಟೆಪ್ ಟ್ಯೂನ್‌ಗಳನ್ನು ನುಡಿಸುವುದನ್ನು ತೋರಿಸುವ ಇನ್ನೊಂದು ವೀಡಿಯೋ ಸಹ ವೈರಲ್ ಆಗಿದೆ. ಜೇಕಿ ಬೋಹ್ಮ್ ತನ್ನ ವೀಕ್ಷಕರನ್ನು ಬೇರೆ ಬೇರೆ ರೀತಿಯಲ್ಲಿ ಎಚ್ಚರಗೊಳಿಸಲು ಅನುವು ಮಾಡಿಕೊಡುವ ಹೆಚ್ಚಿನ ವೈಶಿಷ್ಟ್ಯಗಳನ್ನು ಸೇರಿಸಲು ಬಯಸುತ್ತಾರೆ..

5 ದಿನ ನಾಯಿ ಆಹಾರ ತಿನ್ನುವ ಕೆಲಸ, 5 ಲಕ್ಷ ರೂ. ಸಂಬಳ !

ಹಲವು ತಿಂಗಳ ಹಿಂದೆ ಕಂಪೆನಿಯೊಂದು ಈ ರೀತಿಯ ಆಫರ್ ನೀಡಿತ್ತು. ಉದ್ಯೋಗವೇನೆಂದರೆ ನಾಯಿಗೆ ನೀಡುವ ಆಹಾರವನ್ನು ಸೇವಿಸಬೇಕಿದೆ. 5 ದಿನಗಳ ಕಾಲ ನಾಯಿ ಆಹಾರ ತಿನ್ನಬೇಕು. ಈ ಕೆಲಸಕ್ಕೆ ಸರಿಯಾಗಿ ಸಂಬಳವನ್ನು ನೀಡಲಾಗುತ್ತದೆ. ಆದರೆ ಇದರಿಂದ ಜೀರ್ಣಾಂಗ ವ್ಯವಸ್ಥೆ ಮತ್ತು ಹಸಿವಿನೊಂದಿಗೆ ಸಮಸ್ಯೆ ಎದುರಾಗುವುದರಲ್ಲಿ ಯಾವುದೇ ಇದನ್ನು ವಿಯರ್ಡ್ ಜಾಬ್ ಆಫ್ ಡಾಗ್ ಫುಡ್ ಟೆಸ್ಟರ್ ಎಂದು ಕರೆಯಲಾಗುತ್ತದೆ. ಈ ಕೆಲಸವನ್ನು ವೆಗಾನ್ ಪೆಟ್ ಕಂಪನಿ ನೀಡಿದೆ. 

ಮನುಷ್ಯ ನಿದ್ದೆಯೇ ಮಾಡದೆ ಎಷ್ಟು ದಿನ ಬದುಕಬಹುದು ಗೊತ್ತಾ?

ಇದೊಂದು ಕಷ್ಟದ ಕೆಲಸವಾಗಿದೆ. ರಿಸ್ಕ್ ತೆಗೆದುಕೊಳ್ಳಲು ಇಷ್ಟ ಪಡುವವರು ಈ ಕೆಲಸವನ್ನು ಆರಾಮವಾಗಿ ಇಷ್ಟಪಡಬಹುದು ನೀವು ನಿಮ್ಮ ನಾಯಿಯ ಆಹಾರವನ್ನು 5 ದಿನಗಳವರೆಗೆ ತಿನ್ನಬೇಕು ಮತ್ತು ಅದರ ವಿಶ್ಲೇಷಣೆಯನ್ನು ಹೇಳಬೇಕು. ಈ ಕೆಲಸ ಮುಗಿದ ತಕ್ಷಣ, ನೀವು £ 5,000 ಅಂದರೆ ಭಾರತೀಯ ಕರೆನ್ಸಿಯಲ್ಲಿ 5 ಲಕ್ಷ ರೂಪಾಯಿಗಳ ಚೆಕ್ ಅನ್ನು ಪಡೆಯುತ್ತೀರಿ. ವಾಸ್ತವವಾಗಿ ಈ ಕೆಲಸವು ಆಹಾರ ಪರೀಕ್ಷಕನ ಕೆಲಸವಾಗಿದೆ,

click me!