ಕಚೇರಿಯಿಂದ ಕೆಲಸ ಕಡ್ಡಾಯಗೊಳಿಸಿದ ಬೆನ್ನಲ್ಲೇ ಡ್ರೆಸ್ ಕೋಡ್ ಜಾರಿಗೊಳಿಸಿದ ಟಿಸಿಎಸ್!

By Suvarna News  |  First Published Oct 17, 2023, 8:49 PM IST

ಟಾಟಾ ಕನ್ಸಲ್ಟೆನ್ಸಿ ಸರ್ವೀಸ್(TCS) ವರ್ಕ್ ಫ್ರಮ್ ಹೋಮ್ ಅಂತ್ಯಗೊಳಿಸಿದೆ. ಉದ್ಯೋಗಿಗಳು ಕಚೇರಿಯಿಂದಲೇ ಕೆಲಸ ಮಾಡುವಂತೆ ಕಡ್ಡಾಯಗೊಳಿಸಿದೆ. ಇದೀಗ ಉದ್ಯೋಗಿಗಳಿಗೆ ಮತ್ತೊಂದು ಶಾಕ್ ನೀಡಿದೆ. ಕಚೇರಿಗೆ ಬೇಕಾಬಿಟ್ಟಿ ಉಡುಪು ಧರಿಸಿ ಬರುವಂತಿಲ್ಲ. ಇದಕ್ಕಾಗಿ ಡ್ರೆಸ್ ಕೋಡ್ ಜಾರಿಗೊಳಿಸಿದೆ.


ಬೆಂಗಳೂರು(ಅ.17) ಕೊರೋನಾ ಸಮಯದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್(TCS) ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನೀಡಿತ್ತು. ಇತ್ತೀಚೆಗೆ ಟಿಸಿಎಸ್ ವರ್ಕ್ ಫ್ರಮ್ ಹೋಮ್ ಅಂತ್ಯಗೊಳಿಸಿ, ಎಲ್ಲಾ ಉದ್ಯೋಗಿಗಳು ಕಚೇರಿಯಿಂದಲೇ ಕೆಲಸ ಮಾಡುವಂತೆ ತಾಕೀತು ಮಾಡಿತ್ತು. ಹೊಸ ನಿಯಮ ಜಾರಿಗೊಂಡ ಬೆನ್ನಲ್ಲೇ ಟಿಸಿಎಸ್ ಇದೀಗ ಮತ್ತೊಂದು ನಿಯಮ ಜಾರಿಗೊಳಿಸಿದೆ. ಕಚೇರಿಗೆ ಉದ್ಯೋಗಿಗಳು ಬೇಕಾಬಿಟ್ಟಿ ಡ್ರೆಸ್ ಹಾಕಿ ಬರುವಂತಿಲ್ಲ. ನಿಗದಿತ ಡ್ರೆಸ್‌ನಲ್ಲಿ ಕಚೇರಿಗೆ ಬರುವಂತೆ ಟಿಸಿಎಸ್ ಸೂಚಿಸಿದೆ.

ಟಿಸಿಎಸ್ ವರ್ಕ್ ಫ್ರಮ್ ಹೋಮ್ ಅಂತ್ಯಗೊಳಿಸಿ ಕಚೇರಿಯಿಂದ ಕೆಲಸ ಕಡ್ಡಾಯಗೊಳಿಸಿದೆ. ಆದರೆ ಬಹುತೇಕ ಉದ್ಯೋಗಿಗಳು ಟಿ ಶರ್ಟ್, ಶಾರ್ಟ್ಸ್ ಸೇರಿದಂತೆ ವಿವಿಧ ಬಗೆಯ ಉಡುಪುಗಳನ್ನು ಹಾಕಿ ಕಚೇರಿಗೆ ಆಗಮಿಸುತ್ತಿದ್ದಾರೆ. ಟಿಸಿಎಸ್ ಕಂಪನಿ ಡ್ರೆಸ್ ಕೋಡ್ ನಿಯಮ ಜಾರಿಗೊಳಿಸುತ್ತಿದೆ. ಇದು ಕಡ್ಡಾಯ ನಿಯಮವಾಗಿದೆ. ಪುರುಷರು ಫುಲ್ ಸ್ಲೀವ್ ಶರ್ಟ್ ಧರಿಸಬೇಕು. ಈ ಶರ್ಟ್ ಬ್ಯೂಸಿನೆಸ್ ಕ್ಯಾಶ್ಯುಲ್ ಶರ್ಟ್ ಆಗಿರಬೇಕು. ಇನ್ನು ಫಾರ್ಮ್ ಪ್ಯಾಂಟ್ ಧರಿಸಬೇಕು. ಮಹಿಳೆಯರು ಬ್ಯೂಸಿನೆಸ್ ಫಾರ್ಮಲ್ ಡ್ರೆಸ್ ಧರಿಸಬೇಕು. ಇದು ಸೋಮವಾರದಿಂದ ಗುರುವಾರದ ವರೆಗೆ ಈ ಡ್ರೆಸ್ ಕೋಡ್ ಇರಬೇಕು ಎಂದು ಟಿಸಿಎಸ್ ಮಾನವ ಸಂಪನ್ಮೂಲ ಮುಖ್ಯಸ್ಥ ಮಿಲಿಂದ್ ಲಕ್ಕಡ್ ಹೇಳಿದ್ದಾರೆ.

Latest Videos

undefined

 

TCS ವರ್ಕ್ ಫ್ರಮ್ ಹೋಮ್ ಅಂತ್ಯ, ವಾರದಲ್ಲಿ 5 ದಿನ ಕಚೇರಿಗೆ ಮರಳಲು ಸೂಚಿಸಿದ ಹಿಂದಿದೆ 1 ಕಾರಣ!

ಸೆಮಿನಾರ್, ಸಭೆ, ಕ್ಲೈಂಟ್ ವಿಸಿಟ್ ವೇಳೆ ಸ್ಮಾರ್ಟ್ ಕ್ಯಾಶ್ಯುಲ್ ಡ್ರೆಸ್ ಧರಿಸಬೇಕು ಎಂದು ಮಿಲಿಂದ್ ಹೇಳಿದ್ದಾರೆ. ಕಳೆದ 2 ರಿಂದ 3 ವರ್ಷದಲ್ಲಿ ಹೊಸ ಹೊಸ ಉದ್ಯೋಗಿಗಳು ಕಂಪನಿ ಸೇರಿದ್ದಾರೆ. ಅವರು ಕಚೇರಿಯಿಂದ ಕೆಲಸ ಮಾಡಿದ ಅನುಭವ ಹೊಂದಿಲ್ಲ. ಅವರಿಗೆ ಟಿಸಿಎಸ್ ಹಿರಿಯ ಉದ್ಯೋಗಿಗಳು ಮಾದರಿಯಾಗಬೇಕು. ಟಿಸಿಎಸ್ ಕಂಪನಿಯ ಕೇಚರಿ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಮಿಲಿಂದ್ ಲಕ್ಕಡ್ ಹೇಳಿದ್ದಾರೆ.

ಅ.1ರಿಂದ ಅನ್ವಯ ಆಗುವಂತೆ ತನ್ನ ಉದ್ಯೋಗಿಗಳು ವಾರದಲ್ಲಿ 5 ದಿನ ಕಚೇರಿಗೆ ಬಂದು ಕೆಲಸ ಮಾಡುವಂತೆ ಇ-ಮೇಲ್‌ ಮೂಲಕ ಟಿಸಿಎಸ್ ಸೂಚನೆ ಭಾರಿ ಸಂಚಲನ ಸೃಷ್ಟಿಸಿತ್ತು. ಪ್ರಸ್ತುತ ಹೈಬ್ರಿಡ್‌ ಮಾದರಿಯಲ್ಲಿ ಉದ್ಯೋಗಿಗಳು ವಾರದಲ್ಲಿ ಕನಿಷ್ಠ 3 ದಿನ ಕಚೇರಿಗೆ ಬರಬೇಕೆಂಬ ನಿಯಮವಿತ್ತು. ಅದನ್ನು ಬದಲಿಸಿ 5 ದಿನಕ್ಕೆ ವಿಸ್ತರಿಸಲಾಗಿದೆ. ಅಂದಾಜು 5 ಲಕ್ಷದಷ್ಟು ಅಗಾಧ ಮಾನವ ಸಂಪನ್ಮೂಲವನ್ನು ಹೊಂದಿರುವ ಬೃಹತ್‌ ಐಟಿ ಕಂಪನಿ ಟಿಸಿಎಸ್‌ ಕೋವಿಡ್‌ ಅಲೆ ಬಂದಾಗ 2025ರೊಳಗೆ ಕನಿಷ್ಠ ಶೇ.25ರಷ್ಟು ಉದ್ಯೋಗಿಗಳನ್ನು ಕಚೇರಿಗೆ ಮರಳಿ ಕರೆತರಬೇಕೆಂಬ ಯೋಜನೆ ಹಾಕಿಕೊಂಡಿತ್ತು.

ಟಾಟಾ ಗ್ರೂಪ್ ಬ್ರ್ಯಾಂಡಿಂಗ್ ಬಳಸಲು ಭಾರತದ ಅತಿದೊಡ್ಡ ಐಟಿ ಕಂಪನಿ ನೀಡೋ ಹಣ ಎಷ್ಟು ನೋಡಿ..
 

click me!