ಪ್ಯೂನ್‌ ಹುದ್ದೆಗೆ ಸಿಗುತ್ತೆ ವರ್ಷಕ್ಕೆ 97 ಲಕ್ಷ ಸಂಬಳ: ಯಾರೆಲ್ಲ ಅರ್ಜಿ ಸಲ್ಲಿಸಬಹುದು ಗೊತ್ತಾ..?

By BK Ashwin  |  First Published Jul 29, 2022, 6:32 PM IST

ಆಸ್ಟ್ರೇಲಿಯದಲ್ಲಿ ಸದ್ಯ ಸ್ವಚ್ಛತಾ ಕಾರ್ಮಿಕರ ಕೆಲಸಕ್ಕೆ ಉದ್ಯೋಗಿಗಳೇ ದೊರೆಯುತ್ತಿಲ್ಲವಂತೆ. ಈ ಹಿನ್ನೆಲೆ ಕಸ ಗುಡಿಸುವವರಿಗೆ ಹಾಗೂ ಪ್ಯೂನ್‌ ಹುದ್ದೆಗೆ ಉತ್ತಮ ವೇತನದ ಜತೆಗೆ ವಾರಕ್ಕೆ 2 ದಿನ ರಜೆಯನ್ನೂ ಘೋಷಿಸಿದೆ. 


ಕೆಲಸಕ್ಕೆ ಸೇರಿದ ಕೂಡಲೇ ಯುವಕರಿಗೆ ತಾವಂದುಕೊಂಡಷ್ಟು ವೇತನ ಸಿಗೋದಿಲ್ಲ. ಕಡಿಮೆ ವೇತನದಿಂದ ಕೆಲಸ ಆರಂಭಿಸಿ ತಮ್ಮಿಷ್ಟದ ಸಂಬಳ ಪಡೆಯಲು ಅವರು ಹಲವು ವರ್ಷಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಇನ್ನು, ಭಾರತದಲ್ಲಿ ಪ್ಯೂನ್‌, ಕಸ ಗುಡಿಸುವವರು ಹಾಗೂ ಇತರೆ ಡಿ ಗ್ರೂಪ್‌ ಕೆಲಸ ಮಾಡುವ ನೌಕರರಿಗೆ ಕಡಿಮೆ ವೇತನವನ್ನೇ ನೀಡಲಾಗುತ್ತದೆ. ಆದರೂ ಸಹ ಇಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶ ಬಂದಾಗ ಡಿಗ್ರಿ ಹಾಗೂ ಪಿಜಿ ಓದಿದವರು ಸಹ ಸರ್ಕಾರಿ ಕೆಲಸಕ್ಕೆ ಅಪ್ಲೈ ಮಾಡುತ್ತಾರೆ. ಇನ್ನು, ಪ್ಯೂನ್‌ (Peon) ಹುದ್ದೆಗೆ ತಿಂಗಳು 8 ಲಕ್ಷ ರೂ. ವೇತನ ಪಡೆಯಬಹುದು ಎಂದರೆ ನಿಮಗೆ ಅಚ್ಚರಿಯಾಗುವುದಲ್ಲವೇ..? ಇದು ಸುಳ್ಳು ಸುದ್ದಿ ಅಲ್ಲ ಸ್ವಾಮಿ, ಇದು ನಿಜ.

ಆಸ್ಟ್ರೇಲಿಯದಲ್ಲಿ ಕಸ ಗುಡಸುವವರು (Sweeper) ಹಾಗೂ ಪ್ಯೂನ್‌ಗಳಿಗೆ ವಾರ್ಷಿಕ 97 ಲಕ್ಷ ರೂ. ಪ್ಯಾಕೇಜ್‌ ನೀಡುತ್ತಿವೆಯಂತೆ. ಇದಕ್ಕೆ ಕಾರಣ, ಆ ಹುದ್ದೆಗಳಿಗೆ  ಬೇಡಿಕೆ ಬಹಳ ಕಡಿಮೆ ಇದ್ದು, ಅರ್ಜಿ ಸಲ್ಲಿಸುವವರು ಬಹಳ ಕಡಿಮೆ ಅಂತೆ. ಈ ಹಿನ್ನೆಲೆ, ಡಿ ದರ್ಜೆ ನೌಕರರಿಗೆ (D Group Employees) ಅಷ್ಟು ಹೆಚ್ಚು ವೇತನ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಅಲ್ಲದೆ, ಇಷ್ಟು ಒಳ್ಳೆ ಸ್ಯಾಲರಿ ಕೊಡ್ತೀವಿ ಅಂದ್ರೂ ಆ ಕೆಲಸಕ್ಕೆ ಹೋಗೋಕೆ ಜನರು ಅಲ್ಲಿನವರು ಹಿಂದೇಟು ಹಾಕ್ತಿದ್ದಾರಂತೆ. 

Latest Videos

undefined

ಬೋರಾದ ಕೆಲಸ... ವಾರಾಂತ್ಯದಲ್ಲಿ ಕ್ಯಾಬ್ ಡ್ರೈವರ್ ಆದ ಸಾಫ್ಟ್‌ವೇರ್ ಡೆವಲಪರ್‌

ಅರೇ, ಈ ಕೆಲಸಕ್ಕೆ ನಾವು ಹೋಗ್ತೀವಿ, ಅಷ್ಟೊಂದು ಸಂಬಳ ಕೊಡ್ತಾರೆ ಎಂದರೆ ಯಾಕೆ ಬಿಡೋಣ ಅಂತ ಬ್ಯಾಗ್‌ ಹೊತ್ಕೊಂಡು ನೀವೂ ಆಸ್ಟ್ರೇಲಿಯಾಕಕೆ ಹೋಗೋಕೆ ರೆಡಿಯಾದ್ರಾ, ಸ್ವಲ್ಪ ತಡೀರಿ.. ಈ ಹುದ್ದೆಗಳಿಗೆ ಯಾರು ಅರ್ಜಿ ಸಲ್ಲಿಸಬಹುದು ಎಂಬ ಷರತ್ತು ಸಹ ಇಲ್ಲಿದೆ.. 

ಈ ಹುದ್ದೆಗೆ ಯಾರು ಅರ್ಜಿ ಸಲ್ಲಿಸಬಹುದು..?
ಪ್ಯೂನ್‌ ಹುದ್ದೆಗೆ ಹಾಗೂ ಕಸ ಗುಡಿಸುವವರಿಗೆ ಆಸ್ಟ್ರೇಲಿಯಾದಲ್ಲಿ ಯಾವುದೇ ನಿರ್ದಿಷ್ಟ ಅರ್ಹತೆಯನ್ನು (Eligibility) ಘೋಷಿಸಲಾಗಿಲ್ಲ.  ಆದರೂ, ವಿವಿಧ ಕಂಪನಿಗಳು ವಿಭಿನ್ನ ಅರ್ಹತೆಯನ್ನು ಫಿಕ್ಸ್‌ ಮಾಡುತ್ತಿವೆಯಂತೆ. ಅಲ್ಲದೆ, ಈ ಕೆಲಸಗಳನ್ನು ಮಾಡಿ ಅನುಭವ (Experience) ಇರುವವರಿಗೆ ಮಾತ್ರ ಕಂಪನಿಗಳು ಕೆಲಸ ನೀಡುತ್ತಿವೆಯಂತೆ. ಹಾಗೂ, ಈ ಹುದ್ದೆಗಳಿಗೆ ಜಾಹೀರಾತುಗಳನ್ನೂ (Advertisement) ನೀಡುತ್ತಿದೆ.

 ಒಂದು ಗಂಟೆಗೆಷ್ಟು ವೇತನ..?
2021 ರಿಂದ ಆಸ್ಟ್ರೇಲಿಯಾದಲ್ಲಿ ಸ್ವಚ್ಛತಾ ಕಾರ್ಮಿಕರಿಗೆ ತೀವ್ರ ಕೊರತೆ ಇದೆ. ಈ ಹಿನ್ನೆಲೆ ಒಂದು ವರ್ಷದ ಹಿಂದೆ ಒಂದು ಗಂಟೆಗೆ 2700 ರೂ. ವೇತನ ನೀಡುತ್ತಿದ್ದವರು ಈಗ 45 ಡಾಲರ್‌ ಅಂದರೆ 3600 ರೂ. ನೀಡಲಾಗುತ್ತಿದೆಯಂತೆ. ಅಲ್ಲದೆ, ಕೆಲ ಕಂಪನಿಗಳು ಗಂಟೆಗೆ 4700 ರೂ. ವೇತನ ನೀಡಲು ಸಹ ಮುಮದಾಗಿದೆ ಎಂದು ತಿಳಿದುಬಂದಿದೆ.

Success Story: ಕ್ಯಾಬ್ ಡ್ರೈವರ್‌ ಆಗಿದ್ದವ ಸಾಫ್ಟ್‌ವೇರ್ ಇಂಜಿನಿಯರ್ ಆದ!

ದಿನಕ್ಕೆ 8 ಗಂಟೆ ಕೆಲಸ, ವಾರಕ್ಕೆ 2 ದಿನ ರಜೆ
ಅಲ್ಲದೆ, ಕಸ ಗುಡಿಸುವವರು ಹಾಗೂ ಪ್ಯೂನ್‌ ಕೆಲಸಗಳಿಗೆ ವಾರಕ್ಕೆ 2 ದಿನ ರಜೆ ನೀಡಲಾಗುತ್ತಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತಿದೆ. ಅಂದರೆ, ಟೆಕ್ಕಿ ಹಾಗೂ ಇತರೆ ಉದ್ಯೋಗಿಗಳಂತೆ ಇವರೂ ಸಹ ವಾರಕ್ಕೆ 5 ದಿನ ಮಾತ್ರ ಕೆಲಸ ಮಾಡುತ್ತಾರೆ.  ಅಲ್ಲದೆ, ದಿನಕ್ಕೆ 8 ಗಮಟೆ ಕೆಲಸ ಮಾಡಿದ್ರೆ ಸಾಕು. ಆದರೂ, ಓವರ್‌ ಟೈಮ್‌ ಮಾಡುವ ಕಸ ಗುಡಿಸುವವರಿಗೆ ಪ್ರತಿ ಗಂಟೆಗೆ 3600 ರೂ. ಹೆಚ್ಚುವರಿಯಾಗಿ ನೀಡಲಾಗುತ್ತದೆ ಎಂದೂ ತಿಳಿದುಬಂದಿದೆ. ಈ ಸಂಬಂಧ ಕಂಪನಿಗಳು ಹೊಸ ಜಾಹೀರಾತುಗಳನ್ನು ನೀಡುತ್ತಿದೆ  ಎಂದೂ ತಿಳಿದುಬಂದಿದೆ. 

ಇಷ್ಟೊಂದು ಸಂಬಳ, ವಾರಕ್ಕೆ ಎರಡು ದಿನ ರಜೆ ಜತೆಗೆ ಓವರ್‌ ಟೈಂ - ಇಷ್ಟೆಲ್ಲ ಆಫರ್‌ಗಳು ಲಭ್ಯವಿದೆ ನೋಡಿ. ಯಾರಿಗುಂಟು ಯಾರಿಗಿಲ್ಲ ನೋಡಿ.. 

click me!