Naukri JobSpeak Index : ನೇಮಕಾತಿ ವಿಷಯದಲ್ಲಿ ಬೆಂಗಳೂರು ನಗರವೇ ಟಾಪ್

By Suvarna News  |  First Published Dec 6, 2021, 8:41 PM IST

ಕಳೆದ ನವೆಂಬರ್ ತಿಂಗಳಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ 
ನೌಕರಿ ಜಾಬ್‌ಸ್ಪೀಕ್‌ ಸೂಚ್ಯಂಕ ವರದಿ ಪ್ರಕಾರ ನೇಮಕಾತಿ ಪ್ರಗತಿಯಲ್ಲಿ ಬೆಂಗಳೂರು ನಗರ ಮುಂದು
ಸಗಟು ವ್ಯಾಪಾರ ವಲಯದಲ್ಲಿ  ಸಾಕಷ್ಟು ಪ್ರಗತಿ
 


ನವದೆಹಲಿ (ಡಿ.6):  ಕೊವಿಡ್ 19 ಸಾಂಕ್ರಾಮಿಕದ ನಡುವೆ ಭಾರತದಲ್ಲಿ ಉದ್ಯೋಗ ನೇಮಕಾತಿ ಪ್ರಗತಿ (Employment Recruitment Progress) ಸಾಧಿಸುತ್ತಿದೆ. ಚಿಲ್ಲರೆ ವ್ಯಾಪಾರ ವಲಯ, ಹಬ್ಬದ ಹಿನ್ನೆಲೆ, ಶಿಕ್ಷಣ ಸಂಸ್ಥೆಗಳ ಪ್ರಾರಂಭದ ಹಿನ್ನೆಲೆಯಲ್ಲಿ ಈ ಏರಿಕೆ ಕಂಡಿದ್ದು 2021ರ ನವೆಂಬರ್ ನಲ್ಲಿ ಒಟ್ಟು 26%  ರಷ್ಟು ಬೆಳವಣಿಗೆ ಕಂಡಿದೆ.  ನೇಮಕಾತಿ ವಿಷಯದಲ್ಲಿ ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರು (bengaluru) ನಗರವೇ ಮುಂದಿದೆ ಎಂದು ನೌಕ್ರಿ ಜಾಬ್ ಸ್ಪೀಕ್ ಸಮೀಕ್ಷೆ ಹೇಳಿದೆ. ಸಗಟು ವ್ಯಾಪಾರ ವಲಯದಲ್ಲಿ (retail sector )  ಭಾರತದ ಔದ್ಯೋಗಿಕ ಮಾರುಕಟ್ಟೆ  ಸಾಕಷ್ಟು ಪ್ರಗತಿ ಕಂಡುಬಂದಿದ್ದು, 2021 ನವೆಂಬರ್ ತಿಂಗಳಿನಲ್ಲಿ ಶೇ 47 ರಷ್ಟು ಪ್ರಗತಿ ಸಾಧಿಸಿದೆ ಎಂದಿದೆ. ಪ್ರತಿ ತಿಂಗಳ ನೇಮಕಾತಿ ವಿವರಗಳ ಆಧಾರದ ಮೇಲೆ ಅಂಕಿ ಅಂಶ, ದಾಖಲೆ ಸಮೇತ ವರದಿ ನೀಡುವ ನೌಕ್ರಿ ಜಾಬ್ ಸ್ಪೀಕ್, ವಿವಿಧ ಕೈಗಾರಿಕೆ, ನಗರ, ಅನುಭವ ವಿವರಗಳ ಆಧಾರದ ಮೇಲೆ ವರದಿ ತಯಾರಿಸುತ್ತದೆ.

ನೌಕ್ರಿ ಜಾಬ್ ಸ್ಪೀಕ್ ವರದಿ ಪ್ರಕಾರ,  ಪ್ರವಾಸ ಮತ್ತು ಹಾಸ್ಪಿಟಾಲಿಟಿ ಕ್ಷೇತ್ರದಲ್ಲಿ ಈ ನವೆಂಬರ್ ತಿಂಗಳಿನಲ್ಲಿ 58% ಏರಿಕೆ ಕಂಡಿದೆ. ಶಿಕ್ಷಣ (Eduction) ಕ್ಷೇತ್ರದಲ್ಲಿ 54% , ಬ್ಯಾಂಕ್ ಮತ್ತು ಹಣಕಾಸು ವಲಯದಲ್ಲಿ 30%,  ಮಾಹಿತಿ ಮತ್ತು ತಂತ್ರಜ್ಞಾನದಲ್ಲಿ (91%) ,  ಐಟಿ ವಲಯದಲ್ಲಿ (IT sector) 50% , ಡಿಜಿಟಲ್ ಸಾಧ್ಯತೆಗಳನ್ನು ತನ್ನದಾಗಿಸಿಕೊಂಡಿರುವ ಭಾರತದ ಸಂಸ್ಥೆಗಳು ಟೆಕ್ (tech) ವೃತ್ತಿಪರರಿಗಾಗಿ ಹೆಚ್ಚಿನ ಅವಕಾಶವನ್ನು ಸೃಷ್ಟಿಸುತ್ತಿವೆ. ಕಳೆದ ವರ್ಷದ ನವೆಂಬರ್ ತಿಂಗಳಿಗೆ ಹೋಲಿಸಿದರೆ ಈ ಕ್ಷೇತ್ರದಲ್ಲಿ ಅಂತದ್ದೇನು ಹೆಚ್ಚಿನ ಬದಲಾವಣೆ ಕಂಡಿಲ್ಲ.

Tap to resize

Latest Videos

undefined

MOE IMPOSITION QUOTA: ಮೀಸಲಾತಿ ಆಧಾರದಲ್ಲಿ ಹಿರಿಯ ಅಧ್ಯಾಪಕರ ಹುದ್ದೆಗಳ ಭರ್ತಿಗೆ ಮುಂದಾದ ಐಐಟಿ

ಹಾಸ್ಪಿಟಾಲಿಟಿ (hospitality), ರೀಟೈಲ್ ಕ್ಷೇತ್ರದಲ್ಲೂ ಪ್ರಗತಿ ಹೋಟೆಲ್, ರೆಸಾರ್ಟ್ ಉದ್ಯಮ ಕೋವಿಡ್ 19 ಲಾಕ್ ಡೌನ್ ಹಾಗೂ ನಿರ್ಬಂಧದಿಂದಾಗಿ ಆರ್ಥಿಕ ಹೊಡೆತಕ್ಕೆ ಸಿಲುಕಿದ ಕ್ಷೇತ್ರಗಳಲ್ಲಿ ಹೋಟೆಲ್ ಉದ್ಯಮ ಮುಂಚೂಣಿಯಲ್ಲಿತ್ತು. ಆದರೆ, ನಿಧಾನಗತಿಯಲ್ಲಿ ಅನ್ ಲಾಕ್ ಪ್ರಕ್ರಿಯೆ ಜಾರಿಯಾಗಿದ್ದು, ದೇಶದೆಲ್ಲೆಡೆ ಹೋಟೆಲ್ ಉದ್ಯಮ ಚೇತರಿಸಿಕೊಳುತ್ತಿದೆ. ದಿ ನೌಕರಿ ಜಾಬ್‌ಸ್ಪೀಕ್‌ ಇದೊಂದು ಮಾಸಿಕ ಸೂಚ್ಯಂಕವಾಗಿದ್ದು, ನೌಕರಿ ಡಾಟ್‌ ಕಾಂ ವೆಬ್‌ತಾಣದ ತಿಂಗಳಿನ ಉದ್ಯೋಗ ಪಟ್ಟಿಯನ್ನು ಆಧರಿಸಿ ನೇಮಕಾತಿ ಚಟುವಟಿಕೆಗಳನ್ನು ಲೆಕ್ಕ ಹಾಕಿ, ದಾಖಲಿಸುವ ಕೆಲಸ ಮಾಡುತ್ತದೆ. 

RRB NTPC result date: ಜನವರಿ 15ರೊಳಗೆ ರೈಲ್ವೇ ನೇಮಕಾತಿ ಪರೀಕ್ಷಾ ಫಲಿತಾಂಶ ಪ್ರಕಟ

ಮಹಾನಗರಗಳಲ್ಲಿ (metro city) ಎಷ್ಟು?: ಮೆಟ್ರೋ ಸಿಟಿಗಳಲ್ಲಿ ನೇಮಕಾತಿ ಧನಾತ್ಮಕವಾಗಿದ್ದು, ದೇಶದ ಪ್ರಮುಖ ನಗರಗಳ ಪೈಕಿ ಬೆಂಗಳೂರಲ್ಲಿ ಅತಿ ಹೆಚ್ಚು ನೇಮಕಾತಿ ಸಾಧಿಸಲಾಗಿದೆ. ಬೆಂಗಳೂರು, ಹೈದರಾಬಾದ್, ಪುಣೆ, ಮೊದಲ ಮೂರು ಸ್ಥಾನಗಳಲ್ಲಿದೆ. ಇಲ್ಲಿ ಕ್ರಮವಾಗಿ, 49%, 47%, 47% ಪ್ರಗತಿ ಕಾಣಲಾಗಿದೆ. ದೆಹಲಿ/ ಎನ್ ಸಿಆರ್ ಶೇ 34%ರಷ್ಟು, ಮುಂಬೈ 36% ,  ಕೋಲ್ಕತಾ ಶೇ23%,   ಪ್ರಗತಿ ಕಂಡಿದೆ.

ಕೋವಿಡ್ ಭಯ: ಶೇ.90 ಜನರಿಗೆ ಇಷ್ಟವಿಲ್ಲದ ಉದ್ಯೋಗದಲ್ಲಿರಲು ಸಿದ್ಧರಿಲ್ಲ!

ನಗರ ಪ್ರದೇಶದಲ್ಲಿ ವಾಸಿಸುವ ಎಲ್ಲಾ ವಯಸ್ಸಿನ ಜನರಿಗೆ 2020 ರ ಜನವರಿ-ಮಾರ್ಚ್‌ನಲ್ಲಿ ನಿರುದ್ಯೋಗ ದರವು ಶೇಕಡಾ 9.1 ರಷ್ಟಿದೆ ಎಂದು ಸಮೀಕ್ಷೆ ಹೇಳಿದೆ.  ನಿರುದ್ಯೋಗ ದರವನ್ನು ಕಾರ್ಮಿಕ ಶಕ್ತಿಯಲ್ಲಿ ನಿರುದ್ಯೋಗಿಗಳ ಶೇಕಡಾವಾರು ಎಂದು ವ್ಯಾಖ್ಯಾನಿಸಲಾಗಿದೆ, ಇದು ಕೆಲಸ ಮಾಡುವ ಮತ್ತು ಕೆಲಸ ಹುಡುಕುತ್ತಿರುವ ಜನರ ಮೊತ್ತವಾಗಿದೆ.

click me!