IIT BHU placement: ವಿದ್ಯಾರ್ಥಿಗೆ ವಾರ್ಷಿಕ 2 ಕೋಟಿ ರೂ. ವೇತನ ಪ್ಯಾಕೇಜ್!

By Suvarna NewsFirst Published Dec 2, 2021, 7:04 PM IST
Highlights

ವಿದ್ಯಾರ್ಥಿಗಳು ಅಂತಿಮ ವರ್ಷದ ಶಿಕ್ಷಣ ಓದುವಾಗಲೇ ನೌಕರಿ ಸಿಕ್ಕರೇ ಎಷ್ಟು ವೇತನ, ಪ್ಯಾಕೇಜ್ ಸಿಗಬಹುದು? ಕೆಲವೊಂದು ಸಾರಿ ಊಹಿಗೆ ಮೀರಿದ ಪ್ಯಾಕೇಜ್ ಸಿಗಬಹುದು. ಐಐಟಿ ಬಿಎಚ್‌ಯು ವಿದ್ಯಾರ್ಥಿಯೊಬ್ಬ ಬರೋಬ್ಬರಿ 2 ಕೋಟಿ ರೂ. ವೇತನ ಪ್ಯಾಕೇಜ್‌ ನೌಕರಿಯನ್ನು ಪಡೆದುಕೊಳ್ಳಲು ಯಶಸ್ವಿಯಾಗಿದ್ದಾನೆ.

ವಿದ್ಯೆ ಎಂಬುದು ಜೀವನದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ. ನಿಮ್ಮ ಯಾವುದೇ ಯಶಸ್ಸಿಗೆ ಪ್ರಮುಖ ಕಾರಣವೇ ವಿದ್ಯೆ, ಶಿಕ್ಷಣ (Education) ಎನ್ನಬಹುದು. ಕಲಿಕೆಯ ಹಂತದಲ್ಲಿ ನೀವು ಅಸಾಧಾರಣ ಪ್ರತಿಭೆ, ಸತತ ಪ್ರಯತ್ನ ಹಾಗೂ ಚಿಂತನೆಶೀಲತೆಯಿಂದಾಗಿ ಯಾವುದೇ ಕಾರ್ಯವನ್ನು ಸರಳವಾಗಿ ಮಾಡಬಹುದು. ಅಂದುಕೊಂಡ ಗುರಿಯನ್ನು ಪ್ರಯಾಸವಿಲ್ಲದೇ ತಲುಪಬಹುದು. ಯಾಕೆಂದರೆ, ಕೋವಿಡ್ ಪೂರ್ವ ಸಾಕಷ್ಟು ಕ್ಯಾಂಪಸ್‌ ಸಂದರ್ಶನಗಳ ಬಗ್ಗೆ ಕೇಳಿದ್ದೆವು. ಆದರೆ, ಕೋವಿಡ್ ಬಳಿಕ ಅಂಥ ನೇಮಕಾತಿ ಡ್ರೈವ್ ‌ಗಳು ವಿರಳವಾಗಿದ್ದವು. ಇದೀಗ ಮತ್ತೆ  ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳು ಆರಂಭವವಾಗಿವೆ ಮತ್ತು ದೇಶದ ಉನ್ನತ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯೊಬ್ಬ  ಬರೋಬ್ಬರಿ 2 ಕೋಟಿ ರೂಪಾಯಿ ಪ್ಯಾಕೇಜ್ ಸಂಬಳ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ. ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ(Indian Institute of Technology -IIT) ಬಿಎಚ್‌ಯು ವಿದ್ಯಾರ್ಥಿ ಈ ಭಾರಿ ಮೊತ್ತದ ಸಂಬಳ ಪ್ಯಾಕೇಜ್‌ಗೆ ಆಯ್ಕೆಯಾಗಿದ್ದಾನೆ. ಇದೊಂದು ರೀತಿಯಲ್ಲಿ ಕಸಸು ನನಸಾದ ಗಳಿಗೆ ಎನ್ನಬಹುದು. ಐಐಟಿಯಲ್ಲಿ ನೇಮಕ ಶುರುವಾದ ಮೊದಲೇ ದಿನವೇ ಈ ವಿದ್ಯಾರ್ಥಿ ಭಾರೀ ಮೊತ್ತದ ವಾರ್ಷಿಕ ವೇತನ ಪ್ಯಾಕೇಜ್ ಪಡೆದುಕೊಂಡು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ.

ಐಐಟಿ ಬಿಎಚ್‌ಯು (IIT BHU) ಕ್ಯಾಂಪಸ್‌ ಪ್ಲೇಸ್‌ಮೆಂಟ್‌ನಲ್ಲಿ ಪಾಲ್ಗೊಂಡಿದ್ದ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋ ಸೇವಾ ಪೂರೈಕೆದಾರ ಕಂಪನಿಯು ಈ ನೇಮಕವನ್ನು ಮಾಡಿಕೊಂಡಿದೆ. ಕ್ಯಾಂಪಸ್ ಪ್ಲೇಸ್‌ಮೆಂಟ್ (Campus Placement)ನಲ್ಲಿ ಈ ಕಂಪನಿಯೂ ಕೂಡ ಭಾಗವಹಿಸಿತ್ತು. ಐಐಟಿ ಬಿಎಚ್‌ಯು ವಿದ್ಯಾರ್ಥಿಯು ಕಂಪನಿಯ ಅಗತ್ಯಗಳಿಗೆ ಸರಿಹೊಂದುವ ಪ್ರತಿಭಾವಂತ ಎಂಬುದು ಗೊತ್ತಾಗುತ್ತಿದ್ದಂತೆ ಭಾರಿ ಮೊತ್ತದ ವೇತನ ಪ್ಯಾಕೇಜ್ ನೀಡಿ ನೇಮಕ ಮಾಡಿಕೊಂಡಿದೆ.

ಐಐಟಿ ಬಿಎಚ್‌ಯು (IIT BHU)ವಿನಲ್ಲಿ ಈ ವರ್ಷ ಕ್ಯಾಂಪಸ್ ಪ್ಲೇಸ್‌ಮೆಂಟ್ ನಡೆಯುತ್ತಿದೆ. ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪ್ಲೇಸ್‌ಮೆಂಟ್‌ ಡ್ರೈವ್‌ನಲ್ಲಿ ಪಾಲ್ಗೊಂಡಿದ್ದಾರೆ. ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಳ್ಳುವುದು ಮತ್ತು ಹೈಬ್ರಿಡ್ ಮೋಡ್ ಅನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾದ್ದರಿಂದ, ವಿದ್ಯಾರ್ಥಿಗಳು ತಮ್ಮದೇ ಆದ ಕಂಪ್ಯೂಟರ್ ಮತ್ತು ಲ್ಯಾಪ್‌ಟ್ಯಾಪ್‌ಗಳನ್ನು ಬಳಸಿಕೊಳ್ಳುವ ಮೂಲಕ ಪ್ಲೇಸ್‌ಮೆಂಟ್ ಡ್ರೈವ್ ಅನ್ನು  ಸ್ವತಃ ಆಯೋಜಿಸಿದ್ದಾರೆ. 

Government jobs: NFLನಲ್ಲಿ ಸೀನಿಯರ್ ಕನ್ಸಲ್ಟಂಟ್, ಕನ್ಸಲ್ಟಂಟ್ ಹುದ್ದೆಗಳಿಗೆ ನೇಮಕಾತಿ, ಅರ್ಜಿ ಸಲ್ಲಿಸಿ!

ಈ ಪ್ಲೇಸ್‌ಮೆಂಟ್ ಡ್ರೈವ್ ದಿನದ 24 ಗಂಟೆಯೂ ನಡೆಯುತ್ತಿದ್ದು, ಬಹಳಷ್ಟು ಬಹು ರಾಷ್ಟ್ರೀಯ ಕಂಪನಿಗಳು (Multi-National companies) ಐಐಟಿ ಬಿಎಚ್‌ಯು ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳುತ್ತಿವೆ. ಈ ಡ್ರೈವ್ ಐದು ದಿನಗಳವರೆಗೆ ನಡೆಯಲಿದ್ದು, ಕನಿಷ್ಠ 200 ಕಂಪನಿಗಳು ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. 

ಈ ಪ್ಲೇಸ್‌ಮೆಂಟ್ ಡ್ರೈವ್‌ಲ್ಲಿ ಮೈಕ್ರೋಸಾಫ್ಟ್ (Microsoft), ವಿಪ್ರೋ(Wipro), Tata Steel (ಟಾಟಾ ಸ್ಟೀಲ್), Jaguar (ಜಾಗ್ವಾರ್), Google (ಗೂಗಲ್), Reliance (ರಿಲಯನ್ಸ್), Samsung (ಸ್ಯಾಮ್ಸಂಗ್), JIO 5G (ಜಿಯೋ 5ಜಿ), OYO, Flipkart (ಫ್ಲಿಪ್‌ಕಾರ್ಟ್), Amazon (ಅಮೆಜಾನ್), Uber (ಉಬರ್), Tata Consultancy Servics (ಟಿಸಿಎಸ್), ಝೋಮೊಟೋ ಸೇರಿದಂತೆ ಇನ್ನಿತರ ಕಂಪನಿಗಳು ಭಾಗವಹಿಸಿವೆ. 

ಐಐಟಿ ಬಿಎಚ್‌ಯು ಪ್ಲೇಸ್‌ಮೆಂಟ್, ರಾಜಪುತನಾ ಹಾಸ್ಟೆಲ್ ಆಫ್ ಪ್ಲೇಸ್ಮೆಂಟ್ ಇನ್‌ಸ್ಟಿಟ್ಯೂಟ್‌ನಲ್ಲಿ ಆಯೋಜಿಸಲಾಗಿದೆ. ಈ ಪ್ಲೇಸ್ ಮೆಂಟ್ ಅನ್ನು  ವಿದ್ಯಾರ್ಥಿಗಳೇ ಆಯೋಜಿಸಿದ್ದು, ಬಿಟೆಕ್, ಐಡಿಡಿ ವಿದ್ಯಾರ್ಥಿಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. 

UPSC Recruitment: ಪ್ರೊಫೆಸರ್, ಟ್ಯೂಟರ್ ಹುದ್ದೆಗಳ ನೇಮಕ್ಕೆ ಅರ್ಜಿ ಆಹ್ವಾನ

ಕೊನೆಗೂ ಈ ವಿದ್ಯಾರ್ಥಿಗಳ ಪ್ರಯತ್ನಕ್ಕೆ ಫಲ ದೊರೆತಿದೆ. ಬಹಳಷ್ಟು ಬಹುರಾಷ್ಟ್ರೀಯ ಕಂಪನಿಗಳು ಪಾಲ್ಗೊಂಡಿದ್ದು, ನೇಮಕಾತಿ ಪ್ರಕ್ರಿಯೆ ಜೋರಾಗಿದೆ. ಹಾಗೆಯೇ, ವಿದ್ಯಾರ್ಥಿಯೊಬ್ಬ 2 ಕೋಟಿ ರೂಪಾಯಿ ವೇತನ ಪ್ಯಾಕೇಜ್ ಪಡೆದುಕೊಳ್ಳುವ ಮೂಲಕ ದೇಶದ ಗಮನ ಸೆಳೆದಿದ್ದಾನೆ.

click me!