ಈ ದೇಶದಲ್ಲಿ ‘ಮಾನಸಿಕ ಆರೋಗ್ಯ ರಜೆ’ ಸಿಗಲಿದೆ ಗೊತ್ತಾ?

Suvarna News   | Asianet News
Published : Jun 05, 2021, 01:27 PM ISTUpdated : Jun 05, 2021, 01:35 PM IST
ಈ ದೇಶದಲ್ಲಿ ‘ಮಾನಸಿಕ ಆರೋಗ್ಯ ರಜೆ’ ಸಿಗಲಿದೆ ಗೊತ್ತಾ?

ಸಾರಾಂಶ

ಫಿಲಿಪ್ಪಿನ್ಸ್‌ನಲ್ಲಿ ಹೊಸ ಮಸೂದೆಯನ್ನು ಮಂಡಿಸಲಾಗಿದೆ. ಈ ಮಸೂದೆಯು ನೌಕರರಿಗೆ ಮೆಂಟೆಲ್ ವೆಲ್‌ನೆಸ್ ರಜೆ ಪಡೆಯಲು ಅವಕಾಶ ಮಾಡಿಕೊಡುತ್ತದೆ. ಕೋವಿಡ್-19 ಸಾಂಕ್ರಾಮಿಕದಿಂದಾಗಿ ನೌಕರರಲ್ಲಿ ಖಿನ್ನತೆಯಂಥ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿದ್ದು, ಈ ರಜೆಯಿಂದ ಅವರ ಮಾನಸಿಕ ಆರೋಗ್ಯ ಸಮಾಲೋಚನೆಗೆ ನೆರವು ದೊರೆಯಲಿದೆ.

ಖಾಸಗಿಯಾಗಲಿ, ಸರಕಾರಿ ಉದ್ಯೋಗವಾಗಲಿ ಒಂದಿಷ್ಟು ಸೌಲಭ್ಯಗಳು ಇದ್ದೇ ಇರುತ್ತವೆ. ವಿಶೇಷವಾಗಿ ರಜೆಗಳ ವಿಷಯದಲ್ಲಿ ಈ ಬಗ್ಗೆ ಯಾವುದೇ ಭಿನ್ನಾಭಿಪ್ರಾಯವಿರುವುದಿಲ್ಲ. ಸಾಮಾನ್ಯವಾಗಿ ರಜೆಗಳೆಂದರೆ ಸಿಎಲ್, ಪಿಎಲ್, ಸಿಕ್ ಲೀವ್, ಪೇರೆಂಟಲ್ ಲೀವ್ ಇತ್ಯಾದಿಗಳ ಬಗ್ಗೆ ಕೇಳಿರುತ್ತೀರಿ. ಆದರೆ, ಮಾನಸಿಕ ಆರೋಗ್ಯಕ್ಕಾಗಿಯೂ ರಜೆಗಳನ್ನು ನೀಡುವುದು ವಿರಳ. ಯಾಕೆಂದರೆ, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಇನ್ನೂ ಜಾಗೃತಿ ಇಲ್ಲದಿರುವುದು ಇದಕ್ಕೆ ಕಾರಣ.

ಆದರೆ, ಈ ವಿಷಯದಲ್ಲಿ ಫಿಲಿಪ್ಪಿನ್ಸ್ ಸ್ವಲ್ಪ ವಿಭಿನ್ನವಾಗಿ ಯೋಚಿಸುತ್ತಿದೆ. ಫಿಲಿಪ್ಪಿನ್ಸ್‌ನಲ್ಲಿ ಮಾನಸಿಕ ಆರೋಗ್ಯ ರಜೆ ಒದಗಿಸುವ ಹೊಸ ಮಸೂದೆಯನ್ನು ಮಂಡಿಸಲಾಗುತ್ತಿದೆ. ಅಲ್ಲಿನ ಜನಪ್ರತಿನಿಧಿಗಳ ಸಭೆಯಲ್ಲಿ ಇಂಥದೊಂದು ಮಸೂದೆಯನ್ನು ಮಂಡಿಸಲಾಗಿದೆ. ಪ್ರಸ್ತಾವಿತ ಹೊಸ ಬಿಲ್ ಸರಕಾರಿ ಹಾಗೂ ಖಾಸಗಿ ವಲಯದ ಉದ್ಯೋಗಗಳಿಗೆ ಇದು ಅನ್ವಯವಾಗಲಿದೆ.

ನಿಮ್ಮಲ್ಲೂ ಇರಬಹುದಾದ ಗುಪ್ತ ಖಿನ್ನತೆಯ ಲಕ್ಷಣಗಳು ಇವು!

ಹೌಸಲ್ ಬಿಲ್ 6253 ಅಥವಾ ಉದ್ದೇಶಿತ ಮೆಂಟಲ್ ವೆಲ್‌ನೆಸ್ ಲೀವ್ ಆಕ್ಟ್(Mental Wellness Leave Act), ಈಗಾಗಲೇ ಅಸ್ತಿತ್ವದಲ್ಲಿರುವ ಕಡ್ಡಾಯ ರಜೆ ಹಾಗೂ ಅನಾರೋಗ್ಯ ರಜೆಗಳಿಗೆ ಹೆಚ್ಚುವರಿಯಾಗಿ ಐದು ದಿನಗಳ ರಜೆಯನ್ನು ಒದಗಿಸುತ್ತದೆ. ಅಂದರೆ, ಉದ್ಯೋಗಿಯೂ ಸಿಕ್‌ ಲೀವ್ ಜೊತೆಗೆ ಮಾನಸಿಕ ಆರೋಗ್ಯ ಸಂಬಂಧಿ ರಜೆಯಾಗಿ ಹೆಚ್ಚುವರಿ ಐದು ದಿನಗಳನ್ನು ಪಡೆದುಕೊಳ್ಳಬಹುದು. 

ಈ ರಜೆಗಳನ್ನು ಬಳಸಿಕೊಂಡು ಉದ್ಯೋಗಿಗಳು ಮಾನಸಿಕ ಆರೋಗ್ಯ ವೃದ್ಧಿಗೆ ವೈದ್ಯರೊಂದಿಗೆ ಸಮಾಲೋಚನೆ ನಡೆಸುವುದು, ಥೆರಪಿಗೊಳಗಾಗುವುದು ಅಥವಾ ನಿತ್ಯದ ರೂಟೀನ್ ಕೆಲಸದಿಂದ ಬ್ರೇಕ್ ತೆಗೆದುಕೊಳ್ಳಲು ಈ ಉದ್ದೇಶಿತ ಕಾಯಿದೆಯ ಸಾಧ್ಯವಾಗಲಿದೆ ಎಂದು ಆಂಗ್ ಪ್ರೊಬೇನ್ಸಿಯಾನೋ ಪಕ್ಷದ ನಾಯಕ ಮತ್ತು  ಮಸೂದೆ ನಿರ್ಮಾತೃ ಆಲ್‌ಫ್ರೆಡ್ ಡೆಲೋಸ್ ಸ್ಯಾಂಟೋಸ್ ತಿಳಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಉದ್ಯೋಗದಾತ ಕಂಪನಿಗಳು, ನೌಕರರ ಮಾನಸಿಕ ಆರೋಗ್ಯವನ್ನು ಉತ್ತೇಜಿಸಲು ಅವಕಾಶವನ್ನೂ ಕಲ್ಪಿಸಿಕೊಡುತ್ತದೆ ಎನ್ನುತ್ತಾರೆ ಜನಪ್ರತಿನಿಧಿ ಸ್ಯಾಂಟೋಸ್. 

ಜುಲೈ 5, 2018 ರಿಂದ ಜಾರಿಗೆ ಬಂದ ಫಿಲಿಪ್ಪಿನ್ ಮಾನಸಿಕ ಆರೋಗ್ಯ ಕಾನೂನು, ಹಕ್ಕುಗಳು ಆಧಾರಿತ ಮಾನಸಿಕ ಆರೋಗ್ಯ ಮಸೂದೆಯಾಗಿದ್ದು, ಕಾರ್ಮಿಕರು ಯಾವುದೇ ತಾರತಮ್ಯವಿಲ್ಲದೇ ಮನೋವೈದ್ಯಕೀಯ, ನರವೈಜ್ಞಾನಿಕ ಮತ್ತು ಮಾನಸಿಕ ಸಹಾಯವನ್ನು ಪಡೆಯಲು ನೆರವು ನೀಡುತ್ತದೆ. 

ಜೀವನಶೈಲಿ ಬದಲಾಯಿಸಿ, ಮಾನಸಿಕ ಆರೋಗ್ಯ ಉತ್ತಮವಾಗಿಸಿ

ಈಗಾಗಲೇ ಚಾಲ್ತಿಯಲ್ಲಿರುವ ಮೆಂಟಲ್ ಹೆಲ್ತ್ ಕಾನೂನಿನ ವ್ಯಾಪ್ತಿಯನ್ನು ಹೆಚ್ಚಿಸಬೇಕೆಂದು ಜನಪ್ರತಿನಿಧಿಗಳ ಅಭಿಪ್ರಾಯವಾಗಿದೆ. ಮೆಂಟಲ್ ಹೆಲ್ತ್ ವೆಲ್‌ನೆಸ್ ಆಕ್ಟ್ ರೂವಾರಿ ಡೆಲೋಸ್ ಸ್ಯಾಂಟೋಸ್ ಕೂಡ ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ. ಹೆಚ್ಚುತ್ತಿರುವ ಮಾನಸಿಕ ಅನಾರೋಗ್ಯ ಮತ್ತು ಸಾಂಕ್ರಾಮಿಕದಿಂದಾಗಿ ಹೆಚ್ಚಿರುವ ಆತ್ಮಹತ್ಯೆದರವನ್ನು ನಿಯಂತ್ರಿಸಲು ಕಾನೂನಿ ವ್ಯಾಪ್ತಿಯನ್ನು ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಸ್ಯಾಂಟೋಸ್ ಹೇಳುತ್ತಾರೆ.

ಫಿಲಿಪ್ಪಿನ್ಸ್ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, 17 ಲಕ್ಷ ಫಿಲಿಪ್ಪಿನ್ಸ್ ಜನರು ಈ ಖಿನ್ನತೆಯಿಂದ ಬಳಲುತ್ತಿದ್ದಾರೆ. ಅಂದರೆ, ಫಿಲಿಪ್ಪಿನ್ಸ್‌ನಲ್ಲಿ ಮಾನಸಿಕ ಆರೋಗ್ಯ ಸುಧಾರಣೆಯ ಅಗತ್ಯವನ್ನು ಈ ಡೇಟಾ ಸೂಚಿಸುತ್ತದೆ.

ಫಿಲಿಪ್ಪಿನ್ಸ್‌ನ ನ್ಯಾಷನಲ್ ಸೆಂಟರ್ ಫಾರ್  ಮೆಂಟಲ್ ಹೆಲ್ತ್ ಕ್ರೈಸಿಸ್ ಹಾಟ್‌ಲೈನ್ ಹೇಳುವ ಪ್ರಕಾರ, 2020ರಲ್ಲಿ ಈ ಸೆಂಟರ್ 11,000ಕ್ಕೂ ಅಧಿಕೂ ಕರೆಗಳನ್ನು ಸ್ವೀಕರಿಸಿದೆ. 2019ಕ್ಕೆ ಹೋಲಿಸಿದರೆ ಈ ಪ್ರಮಾಣ ಶೇ.247ರಷ್ಟು ಹೆಚ್ಚಾಗಿದೆ. 2019ರಲ್ಲಿ ಈ ಸೆಂಟರ್ ಕೇವಲ 300 ಕರೆಗಳನ್ನು ಮಾತ್ರ ಸ್ವೀಕರಿಸಿತ್ತು!

ಕೋವಿಡ್-19 ಸಾಂಕ್ರಾಮಿಕ ಅಪ್ಪಳಿಸುವ ಮೊದಲೂ ನಮ್ಮ ಉದ್ಯೋಗಿಗಳು, ನೌಕರರು ತಮ್ಮಕೆಲಸಗಳಿಗೆ ಸಂಬಂಧಿಸಿದಂತೆ, ಕುಟುಂಬಗಳಿಗೆ ಸಂಬಂಧ ಹಾಗೂ ಸೋಷಿಯಲ್ ಮೀಡಿಯಾಗಳಿಂದಾಗಿ ಸಾಕಷ್ಟು ಒತ್ತಡವನ್ನು ಎದುರಿಸುತ್ತಿದ್ದರು. ಇವುಗಳ ಜೊತೆಗೆ ಕೋವಿಡ್ 19ನಿಂದಾಗಿ ಅವರಲ್ಲಿ ಇನ್ನೂ ಹೆಚ್ಚಿನ ಭಯ ಮತ್ತು ಆತಂಕವನ್ನು ಹೆಚ್ಚಿಸಿತು. ನಮ್ಮ ಫ್ರಂಟ್‌ಲೈನ್ ಮತ್ತು ಅಗತ್ಯ ಕೆಲಸಗಾರರಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎನ್ನುತ್ತಾರೆ ಡೆಲೋ ಸ್ಯಾಂಟೋಸ್. 

ಕೊರೋನಾ ಕಾಲ: ಯುವಜನರ ಮಾನಸಿಕ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ

ಮೆಂಟಲ್ ವೆಲ್‌ನೆಸ್ ಲೀವ್‌ನಂಥ ಕಾರ್ಯಕ್ರಮಗಳು ನಮ್ಮ ಕೆಲಸಗಾರರಿನಲ್ಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಜೊತೆಗೆ ಈ ರೀತಿಯ ಸೌಲಭ್ಯವನ್ನು ಪಡೆಯುವ ಕಾರ್ಮಿಕರಲ್ಲಿ ಉತ್ಪಾದಕೆಯನ್ನು ಹೆಚ್ಚಿಸಬಹುದು ಎನ್ನುತಾರೆ ಅವರು ಸ್ಯಾಂಟೋಸ್.

PREV
click me!

Recommended Stories

ಬೆಂಗಳೂರಿನ ಅಮರ್‌ ಸುಬ್ರಹ್ಮಣ್ಯ ಆಪಲ್‌ ಎಐ ಟೀಮ್‌ಗೆ ಉಪಾಧ್ಯಕ್ಷ!
ಸರಾಸರಿ ಮಾಸಿಕ ವೇತನ: ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ, ಸಿಗೋ ಸ್ಯಾಲರಿ ಎಷ್ಟು?