ಬೆಂಗ್ಳೂರಲ್ಲಿ ವಿವಿಧ ಹುದ್ದೆಗೆ ಇಂಟರ್ ​​ವ್ಯೂ: SSLC ಮುಗಿಸಿದವರೂ ಇದೆ ಚಾನ್ಸ್

Published : Apr 17, 2021, 04:24 PM IST
ಬೆಂಗ್ಳೂರಲ್ಲಿ ವಿವಿಧ ಹುದ್ದೆಗೆ ಇಂಟರ್ ​​ವ್ಯೂ: SSLC ಮುಗಿಸಿದವರೂ ಇದೆ ಚಾನ್ಸ್

ಸಾರಾಂಶ

ತಾತ್ಕಾಲಿಕ ವೈದ್ಯರು, ನರ್ಸ್, ​​ಸ್ವಾಬ್​​ ಕಲೆಕ್ಟರ್ಸ್​​ ನೇಮಕಕ್ಕೆ ಬಿಬಿಎಂಪಿ, ನೇರ ಸಂದರ್ಶನಕ್ಕೆ ಆಹ್ವಾನಿಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.

ಬೆಂಗಳೂರು, (ಏ.17): ಬಿಬಿಎಂಪಿ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಸೋಂಕು ಉಲ್ಬಣ ಹಿನ್ನೆಲೆ BBMP ತಾತ್ಕಾಲಿಕ ವೈದ್ಯರು, ನರ್ಸ್, ​​ಸ್ವಾಬ್​​ ಕಲೆಕ್ಟರ್ಸ್​​ ನೇಮಕಕ್ಕೆ ಮುಂದಾಗಿದೆ. 

3 ತಿಂಗಳ ಅವಧಿಗೆ ನೇಮಕಕ್ಕೆ ನೋಟಿಫಿಕೆಶನ್​ ಹೊರಡಿಸಿದ ಬಿಬಿಎಂಪಿ, ನೇರ ಸಂದರ್ಶನಕ್ಕೆ ಆಹ್ವಾನಿಸಿದೆ. ಇದೇ ಏಪ್ರಿಲ್​​ 19ರಿಂದ ಏಪ್ರಿಲ್​​ 21ರವರೆಗೆ ಸಂದರ್ಶನ ನಡೆಯಲಿದೆ. 

ಸಂದರ್ಶನ ಬೆಂಗಳೂರು ದಕ್ಷಿಣ ವಲಯ ಜಯನಗರದ ವಲಯವಾರು ಬಿಬಿಎಂಪಿ ಕಚೇರಿಯಲ್ಲಿ ಬೆಳಿಗ್ಗೆ 11ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ 

ಇನ್ನಷ್ಟು ಜಾಬ್ಸ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಏನೆಲ್ಲಾ ಅರ್ಹತೆಯಿರಬೇಕು..? 
-MBBS ವೈದರು - ಭಾರತೀಯ ಮೆಡಿಕಲ್​​ ಕೌನ್ಸಿಲ್​ನಿಂದ ಮಾನ್ಯತೆ ಪಡೆದಿರಬೇಕು (80 ಸಾವಿರ ಸಂಬಳ)
-BDS ವೈದ್ಯರು (Bachelor of Dental Surgery) - ಡೆಂಟಲ್​ ಕೌನ್ಸಿಲ್​​ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದಿರಬೇಕು (60 ಸಾವಿರ ಸಂಬಳ)
ಆಯುಷ್ ವೈದ್ಯರು - ಮಾನ್ಯತೆ ಪಡೆದ ಆಯುರ್ವೇದ ಯುನಿವರ್ಸಿಟಿಯಿಂದ BAMS or BUMS or BSMS or MHMS ಡಿಗ್ರಿ ಆಗಿರಬೇಕು (60 ಸಾವಿರ ಸಂಬಳ)
-ಲಸಿಕೆ ನೀಡಲು ಸ್ಟಾಫ್​ ನರ್ಸ್​​ಗಳು - ಮಾನ್ಯತೆ ಪಡೆದ ನರ್ಸಿಂಗ್​​ ಕೌನ್ಸಿಲ್​ನಲ್ಲಿ BSc/GNM/diploma ನೊಂದಾಯಿಸಿರಬೇಕು (20 ಸಾವಿರ ಸಂಬಳ)
-ಸ್ವಾಬ್​​ ಕಲೆಕ್ಟರ್ಸ್​​ - ಕನಿಷ್ಠ 10 ನೇ ತರಗತಿ ಪಾಸಾಗಿರಬೇಕು ( 19 ಸಾವಿರ ಸಂಬಳ)

ಈ ಎಲ್ಲಾ ಹುದ್ದೆಗಳಿಗೆ ಸಂದರ್ಶನದಲ್ಲಿ  ಭಾಗಿಯಾಗುವವರಿಗೆ 50 ವರ್ಷ ದಾಟಿರಬಾರದು. ಅಲ್ಲದೇ ಕನ್ನಡದಲ್ಲಿ ಮಾತನಾಡಲು, ಓದಲು, ಬರೆಯಲು ಗೊತ್ತಿರಬೇಕು. 

PREV
click me!

Recommended Stories

ಭಾರತದಲ್ಲಿ ಸಂಬಳ ಕಡಿಮೆ, ವಿದೇಶದಲ್ಲಿ ಕೆಲಸ ಮಾಡಲು ಶೇ. 52ರಷ್ಟು ಯುವಕರಿಗೆ ಇಷ್ಟ ಎಂದ ಅಧ್ಯಯನ!
ಬೆಂಗಳೂರು ಮೆಟ್ರೋದಲ್ಲಿ 2 ಲಕ್ಷ ವೇತನದ ಉದ್ಯೋಗ! ಯಾರು ಅರ್ಜಿ ಸಲ್ಲಿಸಬಹುದು? ಇಂದೇ ಅರ್ಜಿ ಸಲ್ಲಿಸಿ