5 ಗಂಟೆ ಶಿಫ್ಟ್ ಮುಗಿಸಿ 5.10ಕ್ಕೆ ಮನೆಗೆ ಹೊರಟ ಉದ್ಯೋಗಿಯ ತಡೆದು ನಿಲ್ಲಿಸಿದ ಮ್ಯಾನೇಜರ್..!

Published : Feb 27, 2026, 05:42 PM IST
work culture

ಸಾರಾಂಶ

5 ಗಂಟೆ ಅಂದ್ರೆ 5 ಗಂಟೆಗೆ ಎದ್ದು ಹೋಗುವ ಉದ್ಯೋಗಿಯನ್ನು ಬಹುತೇಕ ಮ್ಯಾನೇಜರ್‌ಗಳು ಒಪ್ಪುವುದಿಲ್ಲ. ಹೀಗಿರುವಾಗ ಕೆಲಸದ ಅವಧಿ ಮುಗಿದ ಮೇಲೆ  ಕಚೇರಿ ಬಿಟ್ಟ  ಉದ್ಯೋಗಿಯನ್ನು ಮ್ಯಾನೇಜರ್ ಅರ್ಧದಲ್ಲೇ ತಡೆದು ನಿಲ್ಲಿಸಿದರು ಎಂದು ಉದ್ಯೋಗಿಯೊಬ್ಬರು ಆರೋಪಿಸಿದ್ದಾರೆ.

ಕಷ್ಟ ಹೇಳಿಕೊಂಡ ಉದ್ಯೋಗಿಯ ಪೋಸ್ಟ್ ಸಕತ್ ವೈರಲ್

ಒಂದೊಂದು ಕಚೇರಿಯಲ್ಲಿ ಒಂದೊಂದು ಉದ್ಯೋಗಿಗಳು ಒಂದೊಂದು ತರ ಇರ್ತಾರೆ. ಕೆಲವರು ಕೊಟ್ಟ ಕೆಲಸವನ್ನು ಪಟಾಪಟ್ ಮುಗಿಸಿ ಬೇರೆನಾದರೂ ಮನೋರಂಜನೆ ಮಾಡುವವರಾದರೆ ಇನ್ನೂ ಕೆಲವರು ನಿಧಾನವಾಗಿ ಅಫೀಸ್ ಕೆಲಸದ ಅವಧಿ ಮುಗಿದ ನಂತರವೂ ಲ್ಯಾಪ್‌ಟಾಪ್ ಕುಟ್ಟುತ್ತಲೇ ಇರುವವರು. ಹಲವು ಕಂಪನಿಗಳಲ್ಲಿ ಉದ್ಯೋಗಿಗಳು ಕೆಲಸ ಸಮಯ 8 ಗಂಟೆ ಅಥವಾ 9 ಗಂಟೆಯಾಗಿದ್ದರೂ ಕೂಡ ಆ ಸಮಯವನ್ನು ಮೀರಿ ಅನೇಕರು ಕೆಲಸ ಮಾಡುತ್ತಿರುತ್ತಾರೆ. ಸ್ಕೂಲ್ ಬೆಲ್ ಹೊಡ್ದಂಗೆ 5 ಗಂಟೆ ಅಂದ್ರೆ 5 ಗಂಟೆಗೆ ಎದ್ದು ಹೋಗುವ ಉದ್ಯೋಗಿಯನ್ನು ಬಹುತೇಕ ಮ್ಯಾನೇಜರ್‌ಗಳು ಇಷ್ಟಪಡುವುದಿಲ್ಲ. ಆದರೂ ಕೆಲಸ ಮುಗಿಸಿದವರು ಎದ್ದು ಹೋಗುವುದಕ್ಕೆ ಹೆದರುವುದಿಲ್ಲ. ಹೀಗಿರುವಾಗ ಹೀಗೆ ಸಂಜೆ 5 ಗಂಟೆಗೆ ತನ್ನ ಕೆಲಸ ಮುಗಿಸಿ 5.10ಕ್ಕೆಲ್ಲಾ ಕಚೇರಿ ಬಿಟ್ಟ ಉದ್ಯೋಗಿಯೊಬ್ಬನನ್ನು ಮ್ಯಾನೇಜರ್ ಒಬ್ಬರು ಅರ್ಧದಲ್ಲೇ ತಡೆದು ನಿಲ್ಲಿಸಿದರು ಎಂದು ಉದ್ಯೋಗಿಯೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದು, ಆತನ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಐದು ಗಂಟೆಗೆ ಮೊದಲು ಮನೆಗೆ ಹೋಗುವುದಕ್ಕೆ ಮೊದಲು ಏಳುವುದಕ್ಕೆ ಯಾರೊಬ್ಬರು ಧೈರ್ಯ ಮಾಡದ ಕಂಪನಿಯಲ್ಲಿ ಕೆಲಸ ಮಾಡಿದೆ. ಬೇಕರಿ ಅಂಗಡಿಗಳನ್ನು ನಿರ್ಮಿಸುವುದು ಮತ್ತು ವಿನ್ಯಾಸಗೊಳಿಸುವುದರಲ್ಲಿ ಪರಿಣತಿ ಹೊಂದಿರುವ ಸಂಸ್ಥೆಯಲ್ಲಿ ಅಕೌಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೆ. ಅಧಿಕೃತ ಕೆಲಸದ ಸಮಯ ಬೆಳಿಗ್ಗೆ 8:30 ರಿಂದ ಸಂಜೆ 5 ರವರೆಗೆ ಇತ್ತು, ಆದರೆ ಅವರು ದಿನವೂ ಬೆಳಗ್ಗೆ 8:15 ರ ಸುಮಾರಿಗೆ ಬೇಗನೆ ಕಚೇರಿಗೆ ಬರುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಇಸ್ರೇಲ್‌ನಲ್ಲಿ ಪ್ರಧಾನಿ ಮೋದಿಗೆ ಬಗೆ ಬಗೆ ಭಕ್ಷ್ಯ ಮಾಡಿ ಬಡಿಸಿದ ಭಾರತೀಯ ಮೂಲದ ಇಸ್ರೇಲಿ ಕುಕ್ ಯಾರು

ತನ್ನ ಹೊಸ ಕೆಲಸದ ಸ್ಥಳದಲ್ಲಿ ಮೊದಲ ವಾರದಲ್ಲಿ, ಸಂಜೆ 5:05 ಅಥವಾ 5:10 ರ ಸುಮಾರಿಗೆ ಕಚೇರಿಯಿಂದ ಹೊರಟಿದ್ದಾಗಿ ಉದ್ಯೋಗಿ ಹೇಳಿಕೊಂಡರು. ಕೆಲವು ದಿನಗಳ ನಂತರ, ತನ್ನ ಮ್ಯಾನೇಜರ್ ತನ್ನ ಹೊರಡುವ ಸಮಯದ ಬಗ್ಗೆ ತನ್ನನ್ನು ನಿಲ್ಲಿಸಿ ಪ್ರಶ್ನಿಸಿದರು ಎಂದು ಅವರು ಹೇಳಿದ್ದಾರೆ. ನೀವು ಹೀಗೆ ಬೇಗನೇ ಹೋಗುವುದು ಸರಿಯಲ್ಲ ಎಂದು ಮ್ಯಾನೇಜರ್ ಹೇಳಿದ್ದಾಗಿ ಆ ಉದ್ಯೋಗಿ ಹೇಳಿಕೊಂಡಿದ್ದಾರೆ. ಏಕೆ ಎಂದು ಕೇಳಿದಾಗ ಸರಿ, ನೀವು ತುಂಬಾ ಬೇಗನೆ ಹೊರಡುತ್ತಿದ್ದೀರಿ, ಎಲ್ಲರೂ ಅದರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಮ್ಯಾನೇಜರ್ ಹೇಳಿದರಂತೆ. ಈ ವೇಳೆ ಉದ್ಯೋಗಿ ನಾನು ಕೆಲಸದ ಸಮಯ ಆರಂಭಕ್ಕೂ 15 ನಿಮಿಷ ಮೊದಲೇ ಬರುತ್ತೇನೆ ಎಂದು ಹೇಳಿದಾಗ ಮ್ಯಾನೇಜರ್ ನೀವು ಬೇಗನೇ ಬರುವುದನ್ನು ಯಾರೂ ನೋಡುತ್ತಿಲ್ಲ ಎಂದು ಹೇಳುವ ಮೂಲಕ ಆತ ಬೇಗ ಬರುತ್ತಾನೆ ಎಂಬುದನ್ನು ಒಪ್ಪಿಕೊಳ್ಳುವುದಕ್ಕೆ ನಿರಾಕರಿಸಿದರಂತೆ..

ಇದಾದ ನಂತರ ಕೆಲಸದ ಸ್ಥಳದ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾ, ಉದ್ಯೋಗಿ ಸಹೋದ್ಯೋಗಿಗಳನ್ನು ಹೆಚ್ಚು ಸೂಕ್ಷ್ಮವಾಗಿ ಗಮನಿಸಲು ಪ್ರಾರಂಭಿಸಿದರಂತೆ. ಹೀಗೆ ಗಮನಿಸಲು ಆರಂಭಿಸಿದಾಗ ಹೆಚ್ಚಿನ ಉದ್ಯೋಗಿಗಳು ಸಂಜೆ 5:20 ಅಥವಾ 5:25 ರವರೆಗೆ ಕಚೇರಿಯಲ್ಲಿಯೇ ಇರುತ್ತಿದ್ದರು. ಇದು ಬಾಕಿ ಇರುವ ಕೆಲಸದ ಕಾರಣದಿಂದಾಗಿ ಅಲ್ಲ, ಆದರೆ ಯಾರೂ ಮೊದಲು ಹೊರಡಲು ಬಯಸಿ ಕೆಂಗಣ್ಣಿಗೆ ಗುರಿಯಾಗಬಾರದು ಎಂಬ ಕಾರಣದಿಂದ ಎಂದು ಈ ಉದ್ಯೋಗಿ ಹೇಳಿದ್ದಾರೆ.

ನಾನು ಸುಮಾರು 75 ಉದ್ಯೋಗಿಗಳನ್ನು ಹೊಂದಿರುವ ಕಂಪನಿಯ ಬಗ್ಗೆ ಮಾತನಾಡುತ್ತಿದ್ದೇನೆ ಮತ್ತು ಈ ಎಲ್ಲಾ ಉದ್ಯೋಗಿಗಳು ಮುಂಚಿತವಾಗಿ ಹೊರಹೋಗದಂತೆ ಪರಸ್ಪರ ಒತ್ತೆಯಾಳುಗಳಾಗಿ ಹಿಡಿದಿಟ್ಟುಕೊಳ್ಳುತ್ತಾರೆ. 8 ವರ್ಷಗಳ ಹಿಂದೆ ನಾನು ಆ ಕಂಪನಿಯನ್ನು ತೊರೆದಿದ್ದೆ. ಆದರೆ ಅದು ನಾನು ಎದುರಿಸಿದ ಅತ್ಯಂತ ಕೆಟ್ಟ ಕೆಲಸದ ಸಂಸ್ಕೃತಿಯಾಗಿದೆ. ನಾನು ಯಾವಾಗಲೂ ಅದನ್ನು ಜನರಿಗೆ ಕೆಟ್ಟ ಉದಾಹರಣೆ ಎಂದು ಉಲ್ಲೇಖಿಸುತ್ತೇನೆ. ಶುದ್ಧ ಹುಚ್ಚುತನ ಎಂದು ಆ ಉದ್ಯೋಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ವಿರಾಟ್ ಅನುಷ್ಕಾ, ರಣ್ಬೀರ್ ಕಪೂರ್ ಅಲಿಯಾ ದಾಖಲೆ ಬ್ರೇಕ್ ಮಾಡಿದ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ

ಈ ಪೋಸ್ಟ್ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲಸದ ಸ್ಥಳದಲ್ಲಿನ ಈ ರೀತಿಯ ಒತ್ತಡದ ಬಗ್ಗೆ ಅನೇಕರು ಹೇಳಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಒಬ್ಬರು ಪ್ರತಿಕ್ರಿಯಿಸಿದ್ದು, ನಾನು 8-5 ಅಥವಾ 9-6 ರ ಅವಧಿಯಲ್ಲಿ ಕೆಲಸ ಮಾಡಬಹುದಾದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ, ಆದರೆ ಅವರು ನಿಮ್ಮನ್ನು ಕೆಲಸದ ಅವಧಿಗಿಂತ 16 ನಿಮಿಷ ಮೊದಲು ನೀವು ನಿಮ್ಮ ಮೇಜಿನ ಮೇಲಿರಬೇಕು ಎಂದು ಬಯಸಿದ್ದರು. ನಂತರ ಅವರು ನೀವು ಒಂದು ನಿಮಿಷ ತಡವಾಗಿ ಬಂದರೂ ನಿಮ್ಮ ತಡವಾದ ಸಮಯವನ್ನು ಸರಿದೂಗಿಸಲು ಹೆಚ್ಚುವರಿ ಒಂದು ಗಂಟೆ ಕೆಲಸ ಮಾಡಬೇಕು ಎಂದು ನಿರ್ಧರಿಸಿದರು. ಆದ್ದರಿಂದ ನೀವು 8:01 ಕ್ಕೆ ಬಂದರೆ ನೀವು ಸಂಜೆ 6 ಗಂಟೆಯವರೆಗೆ ಇರಬೇಕಾಗುತ್ತಿತ್ತು. ಊಟಕ್ಕೂ ಅದೇ ರೀತಿ, ನೀವು ಪರಿಣಾಮಕಾರಿಯಾಗಿ ಒಂದು ಗಂಟೆಗಿಂತ ಕಡಿಮೆ ಸಮಯವನ್ನು ಬಳಸಬೇಕಾಗಿತ್ತು ಇಲ್ಲದಿದ್ದರೆ ನಿಮಗೆ ದಂಡ ವಿಧಿಸಲಾಗುತ್ತಿತ್ತು ಎಂದು ಒಬ್ಬರು ಹೇಳಿಕೊಂಡಿದ್ದಾರೆ.

ಹಾಗೆಯೇ ಮತ್ತೊಬ್ಬರು ಪ್ರತಿಕ್ರಿಯಿಸಿ ನಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಕೆಲವು ಉದ್ಯೋಗಿಗಳು ಬೇಗನೆ ಕೆಲಸ ಬಿಟ್ಟು ಹೋಗುತ್ತಿದ್ದರು.. ಮತ್ತು ಏಕೆ ಎಂದು ಒತ್ತಡ ಹೇರಿದಾಗ ಮೊದಲನೆ ಕೆಲಸದಲ್ಲಿ ಸಾಕಷ್ಟು ಸಂಬಳ ನೀಡದ ಕಾರಣ ಅವರು ತಮ್ಮ ಎರಡನೇ ಕೆಲಸಕ್ಕೆ ಹೋಗಬೇಕು ಎಂದು ಹೇಳಿದರು. ಇದು ದುಃಸ್ವಪ್ನದಂತೆ ಅನಿಸುತ್ತಿದೆ. ನಾನು ಇದೇ ರೀತಿಯ ಬಲೆಗೆ ಸಿಲುಕಿದ್ದ ಸಮಯವನ್ನು ನೆನಪಿಸುತ್ತದೆ. ನಾನು ಅದನ್ನು ಬಿಟ್ಟು ಬಂದಿದ್ದಕ್ಕೆ ಈಗ ಸಂತೋಷವಾಗಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

 

PREV
Read more Articles on
click me!

Recommended Stories

ಟೆಂಪಲ್ ಸ್ಟಾರ್ಟ್ಅಪ್ ನೇಮಕಾತಿ ಆರಂಭ, ಒಂದೇ ಕಂಡೀಷನ್ ದೇಹದ ಫ್ಯಾಟ್ ಶೇ.16ರ ಒಳಗಿರಬೇಕು
ಎಐ ಬಂದ್ರೂ ಈ ಜಾಬ್‌ಗಿಲ್ಲ ಆತಂಕ, ಜೋಹೋ ಸಂಸ್ಥಾಪಕ ಮಾಡಿದ ಲಿಸ್ಟ್‌ನಲ್ಲಿ ನಿಮ್ಮ ಕೆಲಸ ಇದೆಯಾ?