Gen-z ಉದ್ಯೋಗಿಗಳ ಜೊತೆ ಈ ಆಟ ಎಲ್ಲಾ ನಡೆಯಲ್ಲ: ವಿಮಾನ ಏರುವಾಗ ರಜೆ ಕ್ಯಾನ್ಸಲ್ ಎಂದ ಬಾಸ್: ಯುವತಿ ಮಾಡಿದ್ದೇನು?

Published : Feb 26, 2026, 07:54 PM IST
gen z employees

ಸಾರಾಂಶ

ಪ್ರವಾಸಕ್ಕೆಂದು ವಿಮಾನ ನಿಲ್ದಾಣದಲ್ಲಿದ್ದ ಜೆನ್ ಜಿ ಯುವತಿಗೆ, ಬಾಸ್ ಕೊನೆ ಕ್ಷಣದಲ್ಲಿ ರಜೆ ರದ್ದುಗೊಳಿಸಿ ಸಂದೇಶ ಕಳುಹಿಸಿದ್ದಾರೆ. ಈ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಯುವತಿ ಐ ಡೋಂಟ್ ಕೇರ್ ಎಂದಿದ್ದು, ಅವರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವೈರಲ್ ಆಯ್ತು ಜೆನ್ ಜೆಡ್ ಉದ್ಯೋಗಿಯ ಪೋಸ್ಟ್‌:

80-90ರ ದಶಕದಲ್ಲಿ ಜನಿಸಿದವರಿಗೂ ನಂತರ ಜನಿಸಿದ ಈ ಜೇನ್ ಜಿ ಜನರೇಷನ್‌ಗೂ ಕೆಲಸದಿಂದ ಹಿಡಿದು ಪ್ರತಿಯೊಂದು ವಿಚಾರದಲ್ಲಿ ಬಹಳ ವ್ಯತ್ಯಾಸವಿದೆ. ಅವರ ಕೈಯಿಂದ ಕೆಲಸ ಮಾಡಿಸುವುದಕ್ಕೆ ಬಹಳ ಕಷ್ಟವಿದೆ ಅವರು 70ರಿಂದ 90 ಹಾಗೂ 2000 ದಶಕದ ಉದ್ಯೋಗಿಗಳಂತೆ ಅಲ್ಲ ಎಂದು ಕೆಲವು ಕಂಪನಿಗಳ ಬಾಸ್‌ಗಳೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅವರು ಸಮಯವನ್ನು ಮೀರಿ ಕಚೇರಿಯಲ್ಲಿ ಕೆಲಸ ಮಾಡುವುದಕ್ಕೆ ಒಪ್ಪುವುದಿಲ್ಲ, ಅನಿವಾರ್ಯತೆಯ ಕಾರಣಕ್ಕೆ ಬಾಸ್ ಹೇಳಿದ್ದೆಲ್ಲವನ್ನು ಕೇಳುವುದಿಲ್ಲ, ಟೈಮಿಂಗ್ಸ್ ಅಂದ್ರೆ ಟೈಮಿಂಗ್ಸ್ ಟೈಮ್ ಮೀರಿ ಒಂದು ನಿಮಿಷವು ಹೆಚ್ಚು ಕೆಲಸ ಮಾಡುವುದಿಲ್ಲ. ಕಂಪನಿಯೊಂದು ತಮಗೆ ನೀಡುವ ಎಲ್ಲಾ ರಜೆ ಸವಲತ್ತುಗಳನ್ನು ಅವರು ಬಳಸಿಕೊಳ್ಳುತ್ತಾರೆ. ಕಂಪನಿ ಈ ಬಗ್ಗೆ ಕೇಳಿದರೆ ಕೆಲಸ ಬಿಟ್ಟು ತೆರಳುವುದಕ್ಕೆ ಅವರು ಸಿದ್ಧರಿರುತ್ತಾರೆ. ಹೀಗೆ ಬಾಸ್‌ಗಾಗಲಿ ಕಂಪನಿಗಾಗಲಿ ಅವರು ಕ್ಯಾರೇ ಅನ್ನೋಲ್ಲ ಎಂಬ ಚರ್ಚೆಗಳು ಈ ಜೆಡ್ ತಲೆಮಾರಿನ ಉದ್ಯೋಗಿಗಳ ಬಗ್ಗೆ ಚರ್ಚೆಯಲ್ಲಿದೆ. ಹೀಗಿರುವಾಗ ಈ ಜೆನ್ ಜೆಡ್ ತಲೆಮಾರಿನ ಯುವತಿಯೊಬ್ಬಳ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಖಾಸಗಿ ಕಂಪನಿಗಳಲ್ಲಿ ನಿಮ್ಮ ರಜೆಗಳು ಯಾವಾಗ ಬೇಕಾದರು ಕ್ಯಾನ್ಸಲ್ ಆಗಬಹುದು. ಕೊನೆಕ್ಷಣದಲ್ಲಿ ರಜೆ ಇಲ್ಲ ಎಂದು ಕ್ಯಾನ್ಸಲ್ ಆಗಬಹುದು. ನಿಮ್ಮ ಪ್ಲಾನ್‌ಗಳು ತಲೆಕೆಳಗಾಗಬಹುದು. ಇದೆಲ್ಲಾ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಅನುಭವ ಇರುತ್ತದೆ. ಇದೆಲ್ಲವೂ ಬಹುತೇಕ ಖಾಸಗಿ ಕಂಪನಿಗಳಲ್ಲಿ ಸಾಮಾನ್ಯವಾಗಿರುತ್ತದೆ. ವಾರಾಂತ್ಯದಲ್ಲಿ ರಜೆ ಇರಲ್ಲ, ದಿನದ ಕೆಲಸದ ಅವಧಿಯಲ್ಲೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಹಾಗೆಯೇ ಇಲ್ಲೊಬ್ಬ ಜೆನ್ ಜಿ ಉದ್ಯೋಗಿ ಇನ್ನೇನು ರಜೆ ಅಂತ ಪ್ರವಾಸಕ್ಕೆ ವಿಮಾನ ಏರಬೇಕು ಅಷ್ಟರಲ್ಲಿ ಬಾಸ್ ರಜೆ ಕ್ಯಾನ್ಸಲ್ ಎಂಬ ಸಂದೇಶ ಕಳುಹಿಸಿದ್ದಾರೆ.

ಸಿಮ್ರಾನ್ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಮಾಡಿದ್ದು ಈ ವಿಚಾರ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ವೀಡಿಯೋ ಕ್ಲಿಪ್‌ನಲ್ಲಿ ಸಿಮ್ರಾನ್ ಹೀಗೆ ಹೇಳಿದ್ದಾರೆ. ತನ್ನ ಪ್ರಯಾಣದ ಯೋಜನೆಗಳ ಬಗ್ಗೆ ವಾರಗಳ ಮೊದಲೇ ತನ್ನ ಮ್ಯಾನೇಜರ್‌ಗೆ ತಿಳಿಸಿದ್ದಾಗಿ ಅವರು ಹೇಳಿದ್ದಾರೆ. ಅವರ ಪ್ರಕಾರ, ಆ ಸಮಯದಲ್ಲಿ ಯಾವುದೇ ಆಕ್ಷೇಪಣೆ ವ್ಯಕ್ತವಾಗಿರಲಿಲ್ಲ. ಆದರೆ, ಅವರು ವಿಮಾನ ಹತ್ತಲು ವಿಮಾನ ನಿಲ್ದಾಣದಲ್ಲಿದ್ದಾಗ, ತುರ್ತು ನಿಯೋಜನೆಯ ಅಗತ್ಯತೆಯಿಂದಾಗಿ ಅವರ ರಜೆಯನ್ನು ರದ್ದುಗೊಳಿಸಲಾಗಿದೆ ಎಂದು ಅವರಿಗೆ ತಿಳಿಸಲಾಯಿತು.

ಇದನ್ನೂ ಓದಿ: ಕೆಲ ತಿಂಗಳ ಅಂತರದಲ್ಲಿ ಹೃದಯಾಘಾತಕ್ಕೆ ಇಬ್ಬರೂ ಮಕ್ಕಳನ್ನು ಕಳೆದುಕೊಂಡ ಕುಟುಂಬ: ಸಾವಿನಲ್ಲೂ ಅಣ್ಣನ ಹಾದಿ ಹಿಡಿದ ತಂಗಿ

ಈ ಘಟನೆ ತಮ್ಮನ್ನು ತೀವ್ರ ನಿರಾಶೆಗೊಳಿಸಿತು ಎಂದಿರುವ ಸಿಮ್ರಾನ್ ಪರಿಸ್ಥಿತಿಯನ್ನು ಸಂವಹನ ವೈಫಲ್ಯ ಎಂದು ಕರೆದ ಅವರು ಇದು ನೌಕರರ ವೈಯಕ್ತಿಕ ಸಮಯದ ಬಗ್ಗೆ ಕಂಪನಿಯ ಬಾಸ್‌ಗಳಿಗೆ ಇರದ ಗೌರವದ ಕೊರತೆಯನ್ನು ತೋರಿಸುತ್ತದೆ ಎಂದು ಅವರು ದೂರಿದ್ದಾರೆ. ಕೆಲಸದಲ್ಲಿ ತುರ್ತು ಪರಿಸ್ಥಿತಿಗಳು ಸಂಭವಿಸಬಹುದಾದರೂ, ಅವು ವೈಯಕ್ತಿಕ ಬದ್ಧತೆಗಳನ್ನು ಪದೇ ಪದೇ ಮೀರಬಾರದು ಎಂದು ಸಿಮ್ರಾನ್ ಹೇಳಿದರು. ತನ್ನ ಜೀವನ ಮತ್ತು ಪ್ರಯಾಣವನ್ನು ಆನಂದಿಸುವುದಕ್ಕಾಗಿ ತಾನು ಕೆಲಸ ಮಾಡುತ್ತೇನೆ ಮತ್ತು ಕೊನೆಯ ಕ್ಷಣದ ಬೇಡಿಕೆಗಳಿಗೆ ನೌಕರರು ಯಾವಾಗಲೂ ಲಭ್ಯವಿರಬೇಕು ಎಂಬ ನಿಯಮಗಳನ್ನು ನಾನು ಒಪ್ಪುವುದಿಲ್ಲ ಹೀಗಾಗಿ ಬಾಸ್‌ ಏನು ಬೇಕಾದರೂ ಮಾಡಲಿ ಐ ಡೋಂಟ್ ಕೇರ್ ಎಂದು ಅವರು ಹೇಳಿದ್ದಾರೆ.

ಅವರ ಈ ವೀಡಿಯೊ ವೇಗವಾಗಿ ಆನ್‌ಲೈನ್‌ನಲ್ಲಿ ಗಮನ ಸೆಳೆಯಿತು ಮತ್ತು ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯ್ತು. ಅನೇಕ ಬಳಕೆದಾರರು ಅವರ ನಿಲುವನ್ನು ಬೆಂಬಲಿಸಿದರು, ಉದ್ಯೋಗಿಗಳಿಗೆ ಅವರ ಗಡಿಗಳನ್ನು ನಿಗದಿಪಡಿಸುವ ಮತ್ತು ಅವರ ವೈಯಕ್ತಿಕ ಜೀವನಕ್ಕೆ ಆದ್ಯತೆ ನೀಡುವ ಹಕ್ಕಿದೆ ಎಂದು ಹೇಳಿದರು.

ಇದನ್ನೂ ಓದಿ:  ಕೇರಳದ ತ್ರಿಶ್ಯೂರ್ ದೇಗುಲದ ಉತ್ಸವದಲ್ಲಿ ಆನೆಯ ರೌದ್ರಾವತಾರ: ಯುವಕನ ಎತ್ತಿ ಎಸೆದ ಆನೆ

ಹಾಗೆಯೇ ಇನ್ನೂ ಕೆಲವರು ರಜೆಯನ್ನು ಔಪಚಾರಿಕವಾಗಿ ಅನುಮೋದಿಸಲಾಗಿದೆಯೇ ಎಂದು ಪ್ರಶ್ನಿಸಿದರು. ನೌಕರರು ಪ್ರಯಾಣಿಸುವ ಮೊದಲು ತಮ್ಮ ರಜೆಯನ್ನು ಅಧಿಕೃತವಾಗಿ ಮಂಜೂರು ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ವಾದಿಸಿದರು. ರಜೆಯನ್ನು ಅನುಮೋದಿಸದಿದ್ದರೆ, ಅದನ್ನು ದೃಢೀಕರಿಸುವ ಜವಾಬ್ದಾರಿ ಉದ್ಯೋಗಿಯ ಮೇಲಿದೆ ಎಂದು ಒಬ್ಬ ಬಳಕೆದಾರರು ಹೇಳಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಇತರರು ಅಧಿಕೃತ ವ್ಯವಸ್ಥೆಯ ಮೂಲಕ ರಜೆ ವಿನಂತಿಯನ್ನು ಸಲ್ಲಿಸಿದ್ದರೆ ಮತ್ತು ಅದನ್ನು ಸಕಾಲದಲ್ಲಿ ತಿರಸ್ಕರಿಸದಿದ್ದರೆ, ವ್ಯವಸ್ಥಾಪಕರು ಸರಿಯಾದ ಬ್ಯಾಕಪ್ ವ್ಯವಸ್ಥೆ ಮಾಡಿ ಸ್ಪಷ್ಟವಾಗಿ ತಿಳಿಸಬೇಕಾಗಿತ್ತು ಎಂದು ವಾದಿಸಿದರು.

PREV
Read more Articles on
click me!

Recommended Stories

ಕರಾವಳಿಯ ಬದಲಾಗುತ್ತಿರುವ ಚಿತ್ರಣ: ಬೆಂಗಳೂರು ಬಿಟ್ಟು ಬ್ಯಾಕ್ ಟು ಊರು, ಐಟಿ ಹಬ್‌ ಆಗಿ ಬದಲಾಗ್ತಿರುವ ಮಂಗಳೂರು!
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್‌ನಲ್ಲಿ ಭಾರೀ ನೇಮಕಾತಿ, ಬಿಇ-ಬಿಟೆಕ್ ಪದವೀಧರರ ಭವಿಷ್ಯಕ್ಕೆ ಹೊಸ ದಾರಿ!