ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ 6 ತಿಂಗಳಲ್ಲೇ ಉದ್ಯೋಗದಿಂದ ವಜಾಗೊಂಡ ಐಐಟಿ ಪದವೀಧರ!

By Santosh NaikFirst Published Jan 14, 2023, 1:35 PM IST
Highlights

ಹೂಡಿಕೆಯ ದೈತ್ಯ ಕಂಪನಿ ಗೋಲ್ಡ್‌ಮನ್‌ ಸ್ಯಾಚ್ಸ್‌ನ ಬೆಂಗಳೂರು ಕಚೇರಿಯಲ್ಲಿ ಕೆಲಸ ಪಡೆದುಕೊಂಡ 6 ತಿಂಗಳಲ್ಲಿಯೇ ಪ್ರಖ್ಯಾತ ಐಐಟಿ ಖರಗ್‌ಪುರ ಕಾಲೇಜಿನ ಪದವೀಧರ ಉದ್ಯೋಗದಿಂದ ವಜಾಗೊಂಡಿದ್ದಾರೆ. ಲಿಂಕ್ಡಿನ್‌ನಲ್ಲಿ ಹೊಸ ಅವಕಾಶಗಳನ್ನು ಅರಸಿ ಅವರು ಮಾಡಿರುವ ಪೋಸ್ಟ್‌ ಸಾಕಷ್ಟು ವೈರಲ್‌ ಆಗಿದೆ.
 

ಬೆಂಗಳೂರು (ಜ.14): ಬಹುರಾಷ್ಟ್ರೀಯ ಹೂಡಿಕೆ ಕಂಪನಿ ಗೋಲ್ಡ್‌ಮನ್ ಸ್ಯಾಚ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ಐಐಟಿ ಪದವೀಧರನನ್ನು ಕಂಪನಿ ವಜಾ ಮಾಡಿದ್ದು ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗಿದೆ. ಅಮೆರಿಕ ಮೂಲದ ಸಂಸ್ಥೆಯು ತನ್ನ ಉದ್ಯೋಗಿಗಳ ಶೇ. 6.5ಅನ್ನು ಕಡಿತಗೊಳಿಸುವ ತೀರ್ಮಾನ ಮಾಡಿದೆ. ಇದರ ಅಡಿಯಲ್ಲಿ ಐಐಟಿ ಖರಗಗಪುರದಿಂದ ರಾಸಾಯನಿಕ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಶುಭಂ ಸಾಹು ಅವರನ್ನು ಕೂಡ ಬುಧವಾರ ವಜಾ ಮಾಡಲಾಗಿದೆ. ಈ ಕುರಿತಾಗಿ ಸ್ವತಃ ಶುಭಂ ಸಾಹು ಲಿಂಕ್ಡಿನ್‌ನಲ್ಲಿ ಬರೆದುಕೊಂಡಿದ್ದಾರೆ. ಹೊಸ ಅವಕಾಶಗಳಿಗಾಗಿ ನಾನು ಮುಕ್ತವಾಗಿದ್ದೇನೆ ಎಂದು ಅದರಲ್ಲಿ ತಿಳಿಸಿದ್ದಾರೆ. ಹೊಸ ವರ್ಷವನ್ನು ಆರಂಭಿಸುವ ನಿಟ್ಟಿನಲ್ಲಿ ನನ್ನ ಭಿನ್ನ ಪ್ರಯತ್ನ ಎಂದು ಶುಭಂ ಸಾಹು ಬರೆದುಕೊಂಡಿದ್ದಾರೆ. 23ನೇ ವರ್ಷದ ಜನ್ಮದಿನವನ್ನು ಆಚರಣೆ ಮಾಡಿಕೊಂಡ ಕೆಲವೇ ದಿನದಲ್ಲಿ ನನ್ನನ್ನು ಉದ್ಯೋಗದಿಂದ ವಜಾ ಮಾಡಿದ ಸುದ್ದಿ ಲಭಿಸಿತ್ತು. ಇದು ನನ್ನ ಮೊದಲ ಕೆಲಸವಾಗಿತ್ತು. ಕಳೆದ ಆರು ತಿಂಗಳಿನಿಂದ ನಾನು ಗೋಲ್ಡ್‌ಮನ್‌ ಸ್ಯಾಚ್ಸ್‌ನಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಅವರು ಬರೆದುಕೊಂಡಿದ್ದಾರೆ.

2023ರ ಆರಂಭ ನನ್ನ ಪಾಲಿಗೆ ಭಿನ್ನವಾಗಿತ್ತು. ಗೋಲ್ಡ್‌ಮನ್‌ ಸ್ಯಾಚ್ಸ್‌ನಲ್ಲಿ ಉದ್ಯೋಗಿಗಳನ್ನು ವಜಾ ಮಾಡಲಾಗುತ್ತಿದೆ. ನನ್ನ 23ನೇ ಜನ್ಮದಿನದ ಕೆಲವೇ ದಿನಗಳ ನಂತರ ನನ್ನನ್ನೂ ಕೂಡ ವಜಾ ಮಾಡಲಾಯಿತು. ಇದು ಹೊಸ ವರ್ಷವನ್ನು ಬಹಳ ಭಿನ್ನವಾಗಿ ಆಚರಿಸುವ ರೀತಿ ಎಂದು ತಿಳಿಹಾಸ್ಯದಲ್ಲಿಯೇ ತಮ್ಮ ಪೋಸ್ಟ್‌ ಅನ್ನು ಹಂಚಿಕೊಂಡಿದ್ದಾರೆ.

ರೆಸ್ಯೂಮ್‌ ಹಿಡ್ಕೊಂಡು ಐದು ದಿನ ರಸ್ತೆಯಲ್ಲಿ ನಿಂತ ವ್ಯಕ್ತಿಗೆ ಸಿಕ್ತು ಬಂಪರ್‌ ಆಫರ್‌!

ಇದು ನನ್ನ ಮೊದಲ ಕೆಲಸ ಹಾಗೂ ಸಾಫ್ಟ್‌ವೇರ್‌ ಅಭಿವೃದ್ಧಿಯಲ್ಲಿ ನನ್ನ ಮೊದಲ ಅನುಭವ. ಗೋಲ್ಡ್‌ಮನ್‌ ಸ್ಯಾಚ್ಸ್‌ನಲ್ಲಿ ನಾನು ಇದ್ದ ಸಮಯ ಬಹಳ ಕಡಿಮೆ ಆಗಿದ್ದರೂ, ಅಂತಹ ಅನುಕೂಲಕರ ವಾತಾವರಣದಲ್ಲಿ ಕಲಿಯಲು ಮತ್ತು ಬೆಳೆಯಲು ನನಗೆ ಅವಕಾಶ ಸಿಕ್ಕಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ನನಗೆ ಹಾಗೂ ನನ್ನಂತೆ ಉದ್ಯೋಗದಿಂದ ವಜಾಗೊಂಡ ಎಲ್ಲರಿಗೂ ಗುಡ್‌ಲಕ್‌ ಎಂದು ಹೇಳಲು ಬಯಸುತ್ತೇನೆ' ಎಂದು ಅವರು ಹೇಳಿದ್ದಾರೆ.

48 ವರ್ಷಗಳ ಹಿಂದಿನ ತಮ್ಮ ರೆಸ್ಯುಮ್‌ ಶೇರ್‌ ಮಾಡಿದ ಬಿಲ್‌ ಗೇಟ್ಸ್!

ಹಲವಾರು ಇಂಟರ್ನೆಟ್ ಬಳಕೆದಾರರು ಪೋಸ್ಟ್‌ನಲ್ಲಿ ಸಾಹು ಅವರ ಪ್ರಾಮಾಣಿಕತೆಯನ್ನು ಶ್ಲಾಘಿಸಿದರು ಮತ್ತು ಉದ್ಯೋಗಾವಕಾಶಗಳೊಂದಿಗೆ ಮುಂದೆ ಬಂದಿದ್ದಾರೆ. “ಶುಭಮ್ ಸಾಹು, ನಾನು ನಿಮ್ಮನ್ನು ಪ್ರಾಮಾಣಿಕ ಮತ್ತು ಸ್ಪಷ್ಟವಾದ ಪೋಸ್ಟ್‌ಗಾಗಿ ಪ್ರಶಂಸಿಸುತ್ತೇನೆ. ನಿಸ್ಸಂದೇಹವಾಗಿ ಇದು ಅನಿರೀಕ್ಷಿತ, ಮತ್ತು ನಾನು ಧೈರ್ಯ ಹೇಳಲು ಇದು ಕಷ್ಟದ ಸಮಯ. ಆದರೂ, ನೀವು ನಿಮ್ಮ ಸಕಾರಾತ್ಮಕ ಅನುಭವಗಳನ್ನು ಕರೆದಿದ್ದೀರಿ ಮತ್ತು ನಿಮ್ಮ ಕಲಿಕೆ, ಆಕಾಂಕ್ಷೆ ಮತ್ತು ಸಾಮರ್ಥ್ಯಗಳನ್ನು ಎತ್ತಿ ತೋರಿಸಿದ್ದೀರಿ' ಎಂದು ಲಿಂಕ್ಡ್‌ಇನ್ ಬಳಕೆದಾರರು ಉತ್ತರಿಸಿದ್ದಾರೆ.

click me!