IT Jobs: 2022ರಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್‌..!

Published : Jan 10, 2023, 12:32 PM IST
IT Jobs: 2022ರಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್‌..!

ಸಾರಾಂಶ

2014ರಲ್ಲಿ 3.23 ಲಕ್ಷ ಕೋಟಿ ರೂ. ನಷ್ಟಿದ್ದ ರಾಜ್ಯದ ಐಟಿ ಉದ್ಯಮ 2022ರಲ್ಲಿ 8.7 ಲಕ್ಷ ಕೋಟಿ ರು.ಗೆ ತಲುಪಿದೆ. ಇನ್ನು ಇದೇ ಅವಧಿಯಲ್ಲಿ ಐಟಿ ರಫ್ತು ಪ್ರಮಾಣ 57,000 ಕೋಟಿ ರೂ ನಿಂದ 1.83 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ಕೆ.ಟಿ.ರಾಮರಾವ್‌ ಹೇಳಿದ್ದಾರೆ.

ಹೈದ್ರಾಬಾದ್‌: ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಹೊಸ ಉದ್ಯೋಗ ಸೃಷ್ಟಿಯಲ್ಲಿ ಕಳೆದ ವರ್ಷ ಬೆಂಗಳೂರನ್ನು ಹಿಂದಿಕ್ಕಿರುವ ತೆಲಂಗಾಣದ ರಾಜಧಾನಿ ಹೈದರಾಬಾದ್‌ ಮೊದಲ ಸ್ಥಾನದಲ್ಲಿದೆ ಎಂದು ತೆಲಂಗಾಣ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಕೆ.ಟಿ.ರಾಮರಾವ್‌ ಹೇಳಿದ್ದಾರೆ. ಹೈದ್ರಾಬಾದ್‌ ಸಾಫ್ಟ್‌ವೇರ್‌ ಎಂಟರ್‌ಪ್ರೈಸಸ್‌ ಅಸೋಸಿಯೇಷನ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಟಿ.ರಾಮರಾವ್‌, ಕಳೆದ ವರ್ಷ ದೇಶದ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಒಟ್ಟಾರೆ 4.5 ಲಕ್ಷ ಉದ್ಯೋಗಳು ಸೃಷ್ಟಿಯಾಗಿವೆ. 

ಈ ಪೈಕಿ 1.5 ಲಕ್ಷ ಉದ್ಯೋಗಳು (Jobs) ಕೇವಲ ಹೈದರಾಬಾದ್‌ (Hyderabad) ಒಂದರಲ್ಲೇ ಸೃಷ್ಟಿಯಾಗಿದೆ. ಈ ಮೂಲಕ ಬೆಂಗಳೂರನ್ನು (Bengaluru) (1.46 ಲಕ್ಷ) ಹೈದರಾಬಾದ್‌ ಹಿಂದಿಕ್ಕಿದೆ. ಹೈದರಾಬಾದ್‌ ಕಡೆಗೆ ಮುಖ ಮಾಡುತ್ತಿರುವ ಉದ್ಯೋಗದಾತರು (Employers) ಮತ್ತು ಉದ್ಯೋಗಿಗಳ (Employees) ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇದು ಆರಂಭವಷ್ಟೇ ಎಂದು ಹೇಳಿದ್ದಾರೆ.

ಇದನ್ನು ಓದಿ: IT BPM Industry Jobs: ಭಾರತದ ಐಟಿ ವಲಯದಲ್ಲಿ ಮುಂದಿನ ವರ್ಷ 3.75 ಲಕ್ಷ ಉದ್ಯೋಗ ಸೃಷ್ಟಿ

ಇದೇ ವೇಳೆ 2014ರಲ್ಲಿ 3.23 ಲಕ್ಷ ಕೋಟಿ ರೂ. ನಷ್ಟಿದ್ದ ರಾಜ್ಯದ ಐಟಿ ಉದ್ಯಮ (IT Industry) 2022ರಲ್ಲಿ 8.7 ಲಕ್ಷ ಕೋಟಿ ರು.ಗೆ ತಲುಪಿದೆ. ಇನ್ನು ಇದೇ ಅವಧಿಯಲ್ಲಿ ಐಟಿ ರಫ್ತು ಪ್ರಮಾಣ 57,000 ಕೋಟಿ ರೂ ನಿಂದ 1.83 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ಕೆ.ಟಿ.ರಾಮರಾವ್‌ ಹೇಳಿದ್ದಾರೆ. ಈ ಸಂಬಂಧ ಸೋಮವಾರ ಹೈದರಾಬಾದ್‌ನಲ್ಲಿ ಐಟಿ ಉದ್ಯಮದ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕಚೇರಿ ಜಾಗದ ವಿಷಯದಲ್ಲೂ ಹೈದರಾಬಾದ್ 8 ತ್ರೈಮಾಸಿಕಗಳಲ್ಲಿ ಬೆಂಗಳೂರನ್ನು ಪ್ರತಿ ತ್ರೈಮಾಸಿಕದಲ್ಲೂ ಸೋಲಿಸಿದೆ ಎಂದೂ ಹೇಳಿದ್ದಾರೆ.

ನಂತರ, ನಾನು ಬೆಂಗಳೂರಿನ ವಿರುದ್ಧ ವಾಗ್ದಾಳೀ ಮಾಡಲು ಆಗಲಿ ಅಥವಾ ನಕಾರಾತ್ಮಕವಾಗಿ ಏನನ್ನೂ ಹೇಳಲು ನಾನಿಲ್ಲಿ ಮಾತನಾಡುತ್ತಿಲ್ಲ. ಆದರೆ ಹೈದರಾಬಾದ್‌ಗೆ ಇದು ಆರಂಭವಷ್ಟೇ ಎಂದು ರಾಮರಾವ್ ಹೇಳಿದರು. ತೆಲಂಗಾಣ ಸರ್ಕಾರವು ವಿವಿಧ ಕ್ಷೇತ್ರಗಳಿಗೆ, ವಿಶೇಷವಾಗಿ ಐಟಿ ವಲಯಕ್ಕೆ ಗುಣಮಟ್ಟದ ಮಾನವಶಕ್ತಿ ಪೂರೈಕೆಯನ್ನು ಖಾತ್ರಿಪಡಿಸುವಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದೆ. ತೆಲಂಗಾಣ ಅಕಾಡೆಮಿ ಆಫ್ ಸ್ಕಿಲ್ಸ್ ಅಂಡ್ ನಾಲೆಡ್ಜ್ (TASK) ಕಳೆದ ಎಂಟು ವರ್ಷಗಳಲ್ಲಿ 14,000 ಪ್ಲಸ್ ಫ್ಯಾಕಲ್ಟಿ ಸದಸ್ಯರನ್ನು ಒಳಗೊಂಡಂತೆ 7 ಲಕ್ಷಕ್ಕೂ ಹೆಚ್ಚು ಯುವಕರಿಗೆ ತರಬೇತಿ ನೀಡಿದೆ. ಇದು ಕೇವಲ ಐಟಿ ಕ್ಷೇತ್ರವಲ್ಲ, ಯುವಕರಿಗೆ ಜೀವ ವಿಜ್ಞಾನ, ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿಯೂ ತರಬೇತಿ ನೀಡಲಾಗಿದೆ ಎಂದೂ ಅವರು ಹೇಳಿದರು.

ಇದನ್ನೂ ಓದಿ: IT ಕಂಪನಿಗಳಿಂದ ಪದವೀಧರರಿಗೆ 1 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶ!

ರಾಜ್ಯ ಸರ್ಕಾರ ಈಗಾಗಲೇ ವಾರಂಗಲ್, ಖಮ್ಮಂ ಮತ್ತು ಕರೀಂನಗರದಲ್ಲಿ ಐಟಿ ಹಬ್‌ಗಳನ್ನು ಆರಂಭಿಸಿದೆ. ನಿಜಾಮಾಬಾದ್ ಐಟಿ ಹಬ್ ಅನ್ನು ಮುಂದಿನ ತಿಂಗಳು ಪ್ರಾರಂಭಿಸಲಾಗುವುದು. ಇನ್ನು, ಮುಂದಿನ ತಿಂಗಳುಗಳಲ್ಲಿ ಮಹಬೂಬ್‌ನಗರ ಮತ್ತು ನಲ್ಗೊಂಡ ಐಟಿ ಹಬ್‌ಗಳನ್ನು ಪ್ರಾರಂಭಿಸಲಾಗುವುದು ಎಂದೂ ಅವರು ಹೇಳಿದರು. ಈ ಐಟಿ ಹಬ್‌ಗಳು ಎರಡು ಪ್ರಯೋಜನಗಳನ್ನು ನೀಡುತ್ತವೆ. ಕೋವಿಡ್ ನಂತರ, ಎಲ್ಲಿಂದಲಾದರೂ ಕೆಲಸವನ್ನು ಮಾಡಬಹುದು ಮತ್ತು ಉದ್ಯಮಕ್ಕೆ, ಆಟ್ರಿಷನ್ ದರವನ್ನು ತೀವ್ರವಾಗಿ ಕಡಿತಗೊಳಿಸಬಹುದು ಎಂಬುದು ಸ್ಪಷ್ಟವಾಗಿದೆ ಎಂದೂ ಕೆ.ಟಿ. ರಾಮರಾವ್‌ ವಿವರಿಸಿದರು.

"ಇನ್ಫೋಸಿಸ್, ಟಿಸಿಎಸ್, ವಿಪ್ರೋ ಮತ್ತು ಇತರ ಪ್ರಮುಖ ಐಟಿ ದಿಗ್ಗಜರು ಅಂತಹ ಉಪಕ್ರಮಗಳನ್ನು ಮುನ್ನಡೆಸಬೇಕು" ಎಂದು ರಾಮರಾವ್ ಹೇಳಿದರು. ವಾರಂಗಲ್ ಐಟಿ ಹಬ್ ಅನ್ನು ಹೊಂದಿದ ಬಳಿಕ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಮತ್ತು ಇತರ ವಿಭಾಗಗಳಲ್ಲಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಆಶ್ಚರ್ಯವಾಯಿತು ಎಂದೂ ಹೇಳಿದರು. 
ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮೃದು ಆರ್ಥಿಕ ಹಿಂಜರಿತದ ವರದಿಗಳಿವೆ ಮತ್ತು ಇದು ಭಾರತಕ್ಕೆ ಸಾಕಷ್ಟು ಅವಕಾಶಗಳನ್ನು ತೆರೆಯುತ್ತದೆ. ನಾವು ಅವಕಾಶಗಳನ್ನು ಎರಡೂ ಕೈಗಳಿಂದ ಬಾಚಿ ಪಡೆಯಬೇಕು" ಎಂದೂ ರಾಮರಾವ್ ಹೇಳಿದರು.

ಇದನ್ನೂ ಓದಿ: Jobs Vacancy: ಭಾರತೀಯ ಐಟಿ ಕ್ಷೇತ್ರದಿಂದ ಭರ್ಜರಿ ನೇಮಕಾತಿ !

PREV
Read more Articles on
click me!

Recommended Stories

ಬೆಂಗಳೂರಿನ ಅಮರ್‌ ಸುಬ್ರಹ್ಮಣ್ಯ ಆಪಲ್‌ ಎಐ ಟೀಮ್‌ಗೆ ಉಪಾಧ್ಯಕ್ಷ!
ಸರಾಸರಿ ಮಾಸಿಕ ವೇತನ: ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ, ಸಿಗೋ ಸ್ಯಾಲರಿ ಎಷ್ಟು?