ಚಿಕ್ಕೋಡಿ ಕೆಎಲ್‌ಇ ಇಂಜಿನಿಯರಿಂಗ್‌ ಕಾಲೇಜಿನ 13 ವಿದ್ಯಾರ್ಥಿಗಳು ಕ್ಯಾಂಪಸ್‌ ಸಂದರ್ಶನದಲ್ಲಿ ಟಿಸಿಎಸ್‌ ಗೆ ಆಯ್ಕೆ

By Suvarna News  |  First Published Jan 2, 2023, 10:18 PM IST

ಚಿಕ್ಕೋಡಿ ಕೆ.ಎಲ್‌.ಇ ಇಂಜಿನಿಯರಿಂಗ್‌ ಕಾಲೇಜಿನ 7ನೇಯ ಸೇಮಿಸ್ಟರನ 13 ವಿದ್ಯಾರ್ಥಿಗಳು ಟಿ ಸಿ ಎಸ್‌ ಕಂಪನಿಯ ಕ್ಯಾಂಪಸ್‌ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ. ಕಾಲೇಜಿನ ಪ್ರಾಚಾರ್ಯ ಡಾ. ಪ್ರಸಾದ ರಾಂಪೂರೆ ಸಂತಸ ವ್ಯಕ್ತಪಡಿಸಿದ್ದಾರೆ.


ಚಿಕ್ಕೋಡಿ (ಜ.2): ಚಿಕ್ಕೋಡಿ ಕೆ.ಎಲ್‌.ಇ ಇಂಜಿನಿಯರಿಂಗ್‌ ಕಾಲೇಜಿನ 7ನೇಯ ಸೇಮಿಸ್ಟರನ 13 ವಿದ್ಯಾರ್ಥಿಗಳು ಟಿ ಸಿ ಎಸ್‌ ಕಂಪನಿಯ ಕ್ಯಾಂಪಸ್‌ ಸಂದರ್ಶನದಲ್ಲಿ ಆಯ್ಕೆಯಾಗಿರುವುದು ಕಾಲೇಜಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಪ್ರಸಾದ ರಾಂಪೂರೆ ತಿಳಿಸಿದ್ದಾರೆ. ವಿದ್ಯಾರ್ಥಿ ಪ್ರಿಯಾಂಶು ಜಿ. 7.2 ಲಕ್ಷ ಪ್ರತಿ ವರ್ಷದಂತೆ ವೇತನ ಹಾಗೂ ವಿದ್ಯಾರ್ಥಿಗಳಾದ ಧನರಾಜ ಬೊಂಗಾಳೆ, ಗುರುಪ್ರಸಾದ ಪಾಟೀಲ, ಕವಿತಾ ಎಸ್‌, ಕೌಶಲ ಭಟ್‌, ರಾಹುಲ ಜಿಗನ, ಸಚಿನ ಬಿರಜದಾರ, ಶಿಲ್ಪಾ ಹರಗಿ, ಸುರಜ ಪಾಟಿಲ, ವೈಭವ ಪಾಟೀಲ, ವೈಶ್ನವಿ ಪೊಂಡೆ, ಶಿವಮ್‌ ಕದಮ, ಆದೇಶ ಸಾವಂತ ಈ ವಿದ್ಯಾರ್ಥಿಗಳಿಗೆ 3.65 ಲಕ್ಷ ಪ್ರತಿ ವರ್ಷದಂತೆ ಪಡೆಯಲಿದ್ದಾರೆ.

ನಮ್ಮ ಮಹಾವಿದ್ಯಾಲಯದಲ್ಲಿ ಉದ್ಯೋಗಾವಕಾಶ ಮತ್ತು ತರಬೇತಿ ಘಟಕದ ಆಶ್ರಯದಲ್ಲಿ ದ್ವೀತಿಯ  ವರ್ಷದಿಂದಲೇ ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳ ತಜ್ಞರಿಂದ ಕಾರ್ಯಾಗಾರ ಹಾಗೂ ತರಬೇತಿಯನ್ನು ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗುತ್ತಿದೆ. ಜೊತೆಗೆ ಕಾಲೇಜಿನಲ್ಲಿ ಪ್ರತ್ಯೇಕ ಕಂಪನಿ ಆಧಾರೀತ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ತರಬೇತಿ ಅಧಿಕಾರಿ ಡಾ. ಸಂಜಯ ಅಂಕಲಿ, ನೇಮಕಾತಿ ಅಧಿಕಾರಿ ಮಹೇಶ ಲಟ್ಟೆಉಪಸ್ಥಿತರಿದ್ದರು.

Latest Videos

undefined

ಶೈಕ್ಷಣಿಕ ವರ್ಷದಲ್ಲಿ 95% ಅರ್ಹ-ವಿದ್ಯಾರ್ಥಿಗಳನ್ನು ನೇಮಕಾತಿ ಹೊಂದುವಲ್ಲಿ ಯಶಸ್ವಿಯಾಗುವಂತೆ ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಪ್ರಾಚಾರ್ಯ ಪ್ರಸಾದ ರಾಂಪುರೆ ತಿಳಿಸಿದ್ದಾರೆ. ಕೆ.ಎಲ್‌.ಇ ಸಂಸ್ಥೆಯ ಕಾರಾರ‍ಯಧ್ಯಕ್ಷ ಡಾ.ಪ್ರಭಾಕರ ಕೋರೆ ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದ್ದಾರೆ.

ನೋಯ್ಡಾ ಐಟಿ ಕಂಪೆನಿಗಳಿಗೆ ಬಾರ್‌ ತೆರೆಯಲು ಅನುಮತಿ, ದಣಿದ ಉದ್ಯೋಗಿಗಳಿಗೆ ಸಿಹಿ ಸುದ್ದಿ

ಅದ್ವಿತಿಯ-22 ದಲ್ಲಿ ಚಿಕ್ಕೋಡಿಯ ಕೆ.ಎಲ್‌.ಇ. ಇಂಜಿನಿಯರಿಂಗ್‌ ವಿದ್ಯಾರ್ಥಿಗಳ ಸಾಧನೆ
ಕಳೆದ ಡಿಸೆಂಬರ್ ಕೊನೆಯವಾರ ಹುಬ್ಬಳ್ಳಿಯ ಕೆಎಲ್‌ಇ ಇನಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿಯಲ್ಲಿ ಜರುಗಿದ ರಾಷ್ಟ್ರಮಟ್ಟದ ವಿದ್ಯಾರ್ಥಿಗಳ ತಾಂತ್ರಿಕ ಸಮ್ಮೇಳನ ಅದ್ವಿತಿಯ-22 ದಲ್ಲಿ   ಚಿಕ್ಕೋಡಿಯ ಕೆ.ಎಲ್‌.ಇ. ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ಬೆಸ್ಟ್‌ ಪಾರ್ಟಿಸಿಪಂಟ್‌ ಪ್ರಶಸ್ತಿ ಪಡೆದುಕೊಂಡಿದ್ದರು.

ಕೆಲಸದಿಂದ ತೆಗೆದು ಹಾಕಿದ ಸಂಸ್ಥೆ: ಕೇಸ್ ಹಾಕಿದವನಿಗೆ ಸಿಕ್ತು 17 ಲಕ್ಷ ಪರಿಹಾರ

ಚಿಕ್ಕೋಡಿ ಕಾಲೇಜಿನ 86 ವಿದ್ಯಾರ್ಥಿಗಳು ತಾಂತ್ರಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಅದರಲ್ಲಿ ಸಿವಿಲ್‌ನ ಟೆಕ್ನಿಕಲ್‌ ಕ್ವಿಜ್‌ನಲ್ಲಿ ಆರತಿ ಅಥಣೆ ಮತ್ತು ಪ್ರತಿಕ್ಷಾ ಕಾಂಬಳೆ ಪ್ರಥಮ, ವಿರೇಶ ಪಾಟೀಲ ಪ್ರಬಂಧ ಮಂಡನೆಯಲ್ಲಿ ತೃತೀಯ, ಮೆಕ್ಯಾನಿಕಲ್‌ನ ಟೆಕ್ನಿಕಲ್‌ ಕ್ವಿಜ್‌ನಲ್ಲಿ ಶಿವಮ ಕದಮ ಮತ್ತು ಸುರಜ ಕಂಬಾರ ತೃತೀಯ, ಎಲೆಕ್ಟ್ರಾನಿಕ್ಸ್‌ ಪ್ರಬಂಧ ಮಂಡನೆಯಲ್ಲಿ ಸಾಗರ ಉಮರಾಣೆ ತೃತೀಯ, ಫಂಟಾಸ್ಟಿಕಾ ಸ್ಪರ್ಧೆಯಲ್ಲಿ ಅಕ್ಷತಾ ಮಸ್ತಮರಡಿ ಮತ್ತು ಆರತಿ ಮಿಠಾರೆ ದ್ವಿತಿಯ, ಕಂಪ್ಯೂಟರ್‌ ಸಾಯನ್ಸ್‌ನ ಸ್ನಿಪರ ಮಾಸ್ಟರನಲ್ಲಿ ಆದಿತ್ಯ ಶಿಡ್ಲಾಳೆ ದ್ವೀತಿಯ ಮತ್ತು ಆದಿತ್ಯ ಘೊರ್ಪಡೆ ತೃತೀಯ ಸ್ಥಾನ, ಕಾಲ ಆಫ ಡ್ಯೂಟಿ ಗೆಮಿಂಗ್‌ನಲ್ಲಿ ವರುಣ ಪಲ್ಲೊಡ, ಸಾಹಿಲ ರಾವುತ, ರೆವಂತ ಮಾಂಗಿಚಿಟ್ಟಿ, ಸಮರ್ಥ ಕದಮ ತಂಡ ಪ್ರಥಮ ಸ್ಥಾನ ಗಳಿಸಿ ಕಾಲೇಜಿಗೆ ಹೆಮ್ಮೆ ತಂದಿದ್ದರು.

click me!