ಬಾಸ್‌ನ ಹೇಗಂತಾ ಕರಿಲಿ.. . ಹೇಯ್‌ ಅಂತ ಕರೆದು ಆರತಿ ಮಾಡಿಸಿಕೊಂಡ

By Anusha Kb  |  First Published Jul 4, 2022, 6:47 PM IST

ಕೆಲವು ಫ್ರೊಫೆಷನಲ್‌ ನಿಯಮಗಳಿವೆ. ಅವುಗಳ ಪ್ರಕಾರ ನೀವು ಹೇಯ್, ಡ್ಯೂಡ್ ಎಂದೆಲ್ಲಾ ಕರೆಯುವಂತಿಲ್ಲ. ಹಾಗೆಯೇ ಮೇಲ್‌ಗಳಲ್ಲಿ ವಾಟ್ಸಾಪ್ ಟೆಕ್ಸ್ ಮಾಡಿದಂತೆ ಶಾರ್ಟ್‌ಕಟ್ ಪದಗಳನ್ನು ಬಳಸುವಂತಿಲ್ಲ.


ಕಚೇರಿಯಲ್ಲಿ ಬಾಸ್ ಅನ್ನು ಹೇಗೆ ಕರೆಯಬಹುದು. ನಿಮ್ಮ ಬಾಸ್ ಪುರುಷರಾಗಿದ್ದಲ್ಲಿ ಸರ್‌ ಎಂದು ಮಹಿಳೆಯಾಗಿದ್ದಲ್ಲಿ ಮ್ಯಾಮ್, ಮೇಡಂ ಎಂದು ಕರೆಯುತ್ತಾರೆ. ಕೆಲವು ತುಂಬಾ ಫ್ರೆಂಡ್ಲಿಯಾಗಿರುವವರು ಡ್ಯೂಡ್‌ ಅಂತ ಕರಿತಾರೆನೋ ಗೊತ್ತಿಲ್ಲ. ಆದರೆ ಇನ್ನೂ ಕೆಲವರು ಹೇಗೆ ಕರೆದರೂ ಕೂಡ ತಲೆಕೆಡಿಸಿಕೊಳ್ಳುವುದಿಲ್ಲ. ಕೆಲಸ ಆದರೆ ಸಾಕು ಎಂಬಂತಿರುತ್ತಾರೆ. ಆದರೂ ಕೆಲವು ಫ್ರೊಫೆಷನಲ್‌ ನಿಯಮಗಳಿವೆ. ಅವುಗಳ ಪ್ರಕಾರ ನೀವು ಹೇಯ್, ಡ್ಯೂಡ್ ಎಂದೆಲ್ಲಾ ಕರೆಯುವಂತಿಲ್ಲ. ಹಾಗೆಯೇ ಮೇಲ್‌ಗಳಲ್ಲಿ ವಾಟ್ಸಾಪ್ ಟೆಕ್ಸ್ ಮಾಡಿದಂತೆ ಶಾರ್ಟ್‌ಕಟ್ ಪದಗಳನ್ನು ಬಳಸುವಂತಿಲ್ಲ.  ಉದಾಹರಣೆಗೆ please ಬರೆಯಲು plz ಹೀಗೆ ಬರೆಯುವಂತಿಲ್ಲ. ಸಂಪೂರ್ಣ ಪದಗಳನ್ನು ಬರೆಯಲೇಬೇಕು ಎಂಬ ನಿಯಮವಿದೆ. ಆದಾಗ್ಯೂ ಒಲ್ಲೊಂದು ಕಡೆ ಕಿರಿಯ ಉದ್ಯೋಗಿ ಹಾಗೂ ಆತನ ಹಿರಿಯ ಅಧಿಕಾರಿ ನಡುವಿನ ವಾಟ್ಸಾಪ್ ಸಂಭಾಷಣೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಬಾಸ್ ಅನ್ನು ಹೇಗೆ ಕರೆಯಬೇಕು. ವಾಟ್ಸಾಪ್‌ನಲ್ಲಿ(whatsapp) ಅವರನ್ನು ಏನೆಂದು ಕರೆದು ಸಂಭಾಷಣೆ ಮಾಡಬೇಕು ಎಂಬ ವಿಚಾರದ ಬಗ್ಗೆ ದೊಡ್ಡ ಚರ್ಚೆಯೇ ನಡೆದಿದೆ. 

ಕಾಲಕ್ಕೆ ತಕ್ಕಂತೆ ಮನುಷ್ಯರ ಭಾಷೆಗಳು ಬದಲಾಗುತ್ತಿರುತ್ತದೆ. ಅದೇ ರೀತಿ ಹೊಸ ಹೊಸ ಭಾಷೆಗಳನ್ನು(Language) ಅಳವಡಿಸಿಕೊಳ್ಳುತ್ತೇವೆ. ಹಾಗೆಯೇ ರೆಡಿಟ್‌ನಲ್ಲಿ ಕಿರಿಯ ಉದ್ಯೋಗಿಯೊಬ್ಬ ತನ್ನ ಹಿರಿಯ ಉದ್ಯೋಗಿಯೊಂದಿಗಿನ ಸಂಭಾಷಣೆಯನ್ನು ಶೇರ್ ಮಾಡಿದ್ದಾನೆ. ವಾಟ್ಸಾಪ್‌ನಲ್ಲಿ ನಡೆದ ಸಂಭಾಷಣೆಯ ಸ್ಕ್ರೀನ್‌ಶಾಟ್‌ ಅನ್ನು ಶೇರ್‌ ಮಾಡಿದ ಉದ್ಯೋಗಿ ಬಾಸ್‌ನ ಹೇಗೆ ಕರೆಯಬೇಕು ಎಂದು ನೆಟ್ಟಿಗರಲ್ಲಿ ಪ್ರಶ್ನಿಸಿದ್ದಾನೆ. ಹೇಯ್ ಎಂಬ ಪದ ಪ್ರೊಫೆಷನಲ್ ಅಲ್ಲವೇ ಎಂದು ಆತ ಪ್ರಶ್ನಿಸಿದ್ದಾನೆ.

Latest Videos

undefined

ವಾರಕ್ಕೆ 4 ದಿನ ಮಾತ್ರ ಕೆಲಸ: UKಯ 70 ಸಂಸ್ಥೆಗಳಲ್ಲಿ ಪ್ರಯೋಗ ಶುರು: ಭಾರತದಲ್ಲಿ ಸಾಧ್ಯವಾ?

ಸ್ಕ್ರೀನ್‌ಶಾಟ್‌ನಲ್ಲಿ ಅವರ ಸಂಭಾಷಣೆಯ ವಿವರ ಹೀಗಿದೆ. ಹೇಯ್‌ ಶ್ರೇಯಸ್‌, ನೀವು ಟೆಸ್ಟ್‌ ಅನ್ನು ಸಲ್ಲಿಕೆ ಮಾಡಿದ್ದೀರಾ ಎಂದು ಹಿರಿಯಾಧಿಕಾರಿ ಕೇಳಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಉದ್ಯೋಗಿ ಹೇಯ್‌ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಅದಕ್ಕೆ ಆತನ ಮೇಲಾಧಿಕಾರಿ ಹೇಯ್‌ ಶ್ರೇಯಸ್‌(Shreyas) ನನ್ನ ಹೆಸರು ಸಂದೀಪ್ (Sandeep), ದಯವಿಟ್ಟು ನೀವು 'ಹೇಯ್‌' ಎಂಬ ಪದವನ್ನು ಬಳಸಬೇಡಿ. ಆ ರೀತಿ ಪದ ಬಳಸುವುದು ತಪ್ಪು ನಿಮಗೆ ನನ್ನ ಹೆಸರು ನೆನಪಿಲ್ಲದಿದ್ದರೆ, 'ಹಾಯ್'(Hi) ಎಂದು ಬಳಸಿ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಯಾವ ಪದಗಳನ್ನು ಬಳಸಬೇಕು ಬಳಸಬಾರದು ಎಂಬುದರ ಪಟ್ಟಿ ನೀಡಿದ್ದಾರೆ. 'ಡ್ಯೂಡ್', 'ಮ್ಯಾನ್', 'ಹಲೋ' ಮತ್ತು 'ಹಾಯ್ ದೇರ್' ಪದಗಳನ್ನು ಮೇಲ್‌ಗಳಲ್ಲಿ ಬಳಸದಂತೆ ಅದರಲ್ಲೂ ವೃತ್ತಿಪರ (professional)  ಸಂದರ್ಭಗಳಲ್ಲಿ ಅವುಗಳನ್ನು ಎಂದಿಗೂ ಬಳಸದಂತೆ ಶ್ರೇಯಸ್ ಅವರಿಗೆ ಸಲಹೆ ನೀಡಿದರು.

ಆದರೆ ಮೇಲಾಧಿಕಾರಿ ಹೀಗೆ ಹೇಳಿದಾಗ ಬಹುತೇಕರು ಕ್ಷಮೆ ಕೇಳುತ್ತಾರೆ. ಆದರೆ ಶ್ರೇಯಸ್ ಹಾಗೇ ಮಾಡಿಲ್ಲ. ಅದೇ ಕ್ಷಣಕ್ಕೆ ಅವರು ತನ್ನನ್ನು ತಾನು ಸಮರ್ಥಿಸಿಕೊಂಡಿದ್ದಾರೆ. ನಾವು ಪ್ರಸ್ತುತ ವಾಟ್ಸಾಪ್‌ನಲ್ಲಿ ಸಂಭಾಷಣೆ ನಡೆಸುತ್ತಿದ್ದೇವೆ. ಲಿಂಕ್ಡ್‌ಇನ್ ಅಥವಾ ಮೇಲ್ ಮೂಲಕ ಅಲ್ಲ ಎಂದು ಅವರು ಉತ್ತರಿಸಿದರು. ನೀವು ನನ್ನ ವೈಯಕ್ತಿಕ ಸಂಖ್ಯೆಗೆ ಸಂದೇಶ ಕಳುಹಿಸುತ್ತಿರುವುದರಿಂದ ನಾನು ಸಾಂದರ್ಭಿಕವಾಗಿ ವರ್ತಿಸುತ್ತಿದ್ದೇನೆ ಎಂದು ಹೇಳಿದ್ದಾರೆ. 

ಇದ್ದಕ್ಕಿದ್ದಂತೆ ಅಕೌಂಟ್‌ಗೆ ಬಿತ್ತು ಕೋಟಿ ರೂ. ಸ್ಯಾಲರಿ: ಕೆಲಸಕ್ಕೆ ರಾಜೀನಾಮೆ ನೀಡಿ ಉದ್ಯೋಗಿ ಪರಾರಿ
ಸಂಭಾಷಣೆಯು ಮತ್ತಷ್ಟು ಮುಂದುವರಿದಿದ್ದು, ವಾಟ್ಸಾಪ್ ಕೇವಲ ವೈಯಕ್ತಿಕವಾಗಿ ಈಗ ಉಳಿದಿಲ್ಲ. ಅದನ್ನು ವ್ಯವಹಾರಕ್ಕೂ ಬಳಸುತ್ತಾರೆ ಎಂದು ಅವರು ಮೇಲಾಧಿಕಾರಿ ಹೇಳಿದ್ದಾರೆ. ಆದಾಗ್ಯೂ ನಾನು ನನ್ನ ವಿಚಾರಧಾರೆಗಳನ್ನು ನಿಮ್ಮ ಮೇಲೆ ಹೇರುತ್ತಿಲ್ಲ. ನೀವು ಅದನ್ನು ಅರ್ಥಮಾಡಿಕೊಂಡರೆ, ಒಳ್ಳೆಯದು. ನೀವು ಈಗ ಅರ್ಥ ಮಾಡಿಕೊಳ್ಳದಿದ್ದರೆ ಮುಂದೆ ಆದಷ್ಟು ಬೇಗ ಅರ್ಥ ಮಾಡಿಕೊಳ್ಳುವಿರಿ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ. 

ಈ ಪೋಸ್ಟ್‌ಗೆ ಅನೇಕರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದು, ಅನೇಕರು ಕಿರಿಯ ಉದ್ಯೋಗಿಯನ್ನು ಬೆಂಬಲಿಸಿದ್ದರು. 
 

click me!