Google Revealed Most Searched Jobs: ಲಾಕ್‌ಡೌನ್ ಬಳಿಕ ನಿರುದ್ಯೋಗಿಗಳಾಗಿ 2022 ರವರೆಗೆ ಅತೀ ಹೆಚ್ಚು ಹುಡುಕಿದ ಉದ್ಯೋಗಳಿವು

By Suvarna News  |  First Published Feb 13, 2022, 9:07 PM IST

ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ 2021 ರಲ್ಲಿ ಬಹಳಷ್ಟು ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡರು, ಮಾತ್ರವಲ್ಲ ಇದಕ್ಕಾಗಿ ಜನ  Google ನಲ್ಲಿ ಹುಡುಕಾಟ ಮಾಡಿದ್ದು, 2021 ರಿಂದ 2022ರವರೆಗೆ ಹುಡುಕಾಡಿದ ಉದ್ಯೋಗಗಳ ಮಾಹಿತಿ ಈಗ ಬಹಿರಂಗವಾಗಿದೆ.  


ಬೆಂಗಳೂರು(ಫೆ.13): ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ 2021 ರಲ್ಲಿ ಬಹಳಷ್ಟು ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡರು ಮತ್ತು ಕಳೆದ ವರ್ಷದಲ್ಲಿ ಜನರು ಇತರರಿಗೆ ಸಹಾಯ ಮಾಡುವ, ತಮ್ಮ ಸ್ವ-ಉದ್ಯೋಗ ಆರಂಭಿಸುವ ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಕೆಲಸ ಮಾಡುವ ಉದ್ಯೋಗಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಮಾತ್ರವಲ್ಲ ಇದಕ್ಕಾಗಿ ಜನ  Google ನಲ್ಲಿ ಹುಡುಕಾಟ ಮಾಡಿದ್ದು, 2021 ರಿಂದ 2022ರವರೆಗೆ ಹುಡುಕಾಡಿದ ಉದ್ಯೋಗಗಳ ಮಾಹಿತಿ ಈಗ ಬಹಿರಂಗವಾಗಿದೆ.  COVID-19 ಸಾಂಕ್ರಾಮಿಕವು ಅನೇಕರನ್ನು ನಿರುದ್ಯೋಗಿಗಳನ್ನಾಗಿಸಿತು.  ಈ ಸಮಯದಲ್ಲಿ ಅನೇಕರು ತಮ್ಮ ಸ್ವಂತ ವ್ಯವಹಾರದತ್ತ ಮುಖ ಮಾಡಲು ಆರಂಭಿಸಿದರು. ಕೆಲವರು  ಆನ್‌ಲೈನ್‌ನಲ್ಲಿ ಉದ್ಯೋಗಗಳನ್ನು ಹುಡುಕುತ್ತಿದ್ದರು.

ಇತ್ತೀಚೆಗೆ  ಗೂಗಲ್ ಸಮೀಕ್ಷೆಯನ್ನು ಬಿಡುಗಡೆ ಮಾಡಿದ್ದು, ಇತರರಿಗೆ ಸಹಾಯ ಮಾಡುವುದು, ಪ್ರಯಾಣಿಸುವುದು ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಕೆಲಸ ಮಾಡುವುದು ಸೇರಿದಂತೆ ಹೆಚ್ಚು ಹುಡುಕಲಾದ ಉದ್ಯೋಗಗಳು ಯಾವುವು ಎಂಬುದನ್ನು ಬಹಿರಂಗಪಡಿಸಿದೆ.  ಇದ್ದರಲ್ಲಿ ಹೆಚ್ಚಿನವರು ಸ್ವ ಉದ್ಯೋಗದತ್ತ ಮುಖ ಮಾಡಿದರು ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

Tap to resize

Latest Videos

undefined

ಜನವರಿ 2021ರಿಂದ ಜನವರಿ 2022 ರವರೆಗೆ ಹುಡುಕಲಾದ ಉದ್ಯೋಗಗಳ ಮಾಹಿತಿಯನ್ನು ಗೂಗಲ್ ನೀಡಿದ್ದು, ಅನೇಕರು ವಿವಿಧ ರೀತಿಯ ಉದ್ಯೋಗಕ್ಕಾಗಿ ಸರ್ಚ್ ಮಾಡಿದ್ದಾರೆ. ಜೊತೆಗೆ ಸ್ವ-ಉದ್ಯೋಗಗಳಿಗೆ ಯಾವೆಲ್ಲ ಅವಕಾಶ ಇದೆ ಎಂಬುದನ್ನು ಕೂಡ ನೋಡಿದ್ದಾರೆ.

NDRI RECRUITMENT 2022: ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗೆ ಈ ಕೂಡಲೇ ಅರ್ಜಿ ಸಲ್ಲಿಸಿ

ರಿಯಲ್ ಎಸ್ಟೇಟ್ ಏಜೆಂಟ್ (Real estate agent): ಉದ್ಯೋಗ ಸ್ಥಿರಾಸ್ತಿಯಲ್ಲಿ ಯಾವೆಲ್ಲ ವ್ಯವಹಾರವನ್ನು ಮಾಡಬಹುದು ಎಂಬುದನ್ನು ಪರಿಶಿಲನೆ ಮಾಡಿದ್ದಾರೆ. ಈ ಬಗ್ಗೆ ಗೂಗಲ್ ಒಂದು ಸಮೀಕ್ಷೆಯನ್ನು ನೀಡಿತ್ತು. ಸ್ಥಿರಾಸ್ತಿಯಲ್ಲಿ ವಿವಿಧ ಉದ್ಯೋಗಗಳನ್ನು ಮಾಡಬಹುದು ಎಂಬುದನ್ನು ಗೂಗಲ್ ತಿಳಿಸಿದೆ. 50 ಶೇಕಾಡದಷ್ಟು ಜನ ಈ ಬಗ್ಗೆ ಗೂಗಲ್ ನಲ್ಲಿ ಪರಿಶೀಲಿಸಿದ್ದಾರೆ.

ಫ್ಲೈಟ್ ಅಟೆಂಡೆಂಟ್ (Flight Attendant): ಫ್ಲೈಟ್ ಅಟೆಂಡೆಂಟ್ ಉದ್ಯೋಗಗಳು ಯಾವುದೆಲ್ಲ ಮತ್ತು ಯಾವ ವಿಭಾಗದಲ್ಲೆಲ್ಲ ಇದೆ ಎಂಬುದನ್ನು ಹುಡುಕಿದ್ದಾರೆ. ಈ ಬಗ್ಗೆ ಗೂಗಲ್ ಕೂಡ ಒಂದಿಷ್ಟು ಪರಿಚಯವನ್ನು ಮಾಡಿಕೊಟ್ಟಿದೆ. ಯುವಕರು ಮತ್ತು ಯುವತಿಯರು ಇದರಲ್ಲಿ ನಿರಂತರ ಹುಡುಕಾಟದಲ್ಲಿದ್ದರು. ಹಾಗೂ ಉನ್ನತ ಶಿಕ್ಷಣ ಪೂರೈಸಿದ ಯುವಕ ಯುವತಿಯರು ಈ ಬಗ್ಗೆ ಹೆಚ್ಚು ಜಾಲಾಡಿದ್ದಾರೆ.

ನೋಟರಿ (Notary): ನೋಟರಿ ಉದ್ಯೋಗಗಳು ಎಷ್ಟಿದೆ ಮತ್ತು ಯಾವೆಲ್ಲ ವಿಭಾಗದಲ್ಲಿ  ಇದೆ ಎನ್ನುವುದನ್ನು ಎಂದು ಹುಡುಕಿದ್ದಾರೆ. ನೋಟರಿ ಹುದ್ದೆಗಾಗಿ ಸರ್ಕಾರಿ ಉದ್ಯೋಗಕ್ಕಾಗಿ ಹೆಚ್ಚು  ಹುಡುಕಾಡಿ ತಿಳಿದುಕೊಂಡಿದ್ದಾರೆ. ಗೂಗಲ್ ನಲ್ಲಿ ಈ ಬಗ್ಗೆ ಹೆಚ್ಚು ಜಾಲಾಡಿದ್ದಾರೆ ಎಂದು  ಗೂಗಲ್ ತನ್ನ ಸಮೀಕ್ಷೆಯಲ್ಲಿ ಹೇಳಿದೆ.

ಚಿಕಿತ್ಸಕ (Therapist): ಕೊರೊನಾ ಸಮಯದಲ್ಲಿ ಹಲವು ಚಿಕಿತ್ಸಾಲಯದಲ್ಲಿ ಗರಿಷ್ಠ ಮಟ್ಟದಲ್ಲಿ ಹುದ್ದೆಗಳು  ಖಾಲಿ ಇದ್ದವು. ಈ ಬಗ್ಗೆ ಮಾಹಿತಿಯನ್ನು ಪಡೆಯಲು ಕೆಲಸ ಕಳೆದುಕೊಂಡ ಯುವಕ-ಯುವತಿಯರು ಗೂಗಲ್ ನಲ್ಲಿ ಹುಡುಕಾಡಿದ್ದಾರೆ. ಗೂಗಲ್ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದೆ ಎಂದು ಹೇಳಿದೆ. ಕೊರೊನಾ ಸಮಯದಲ್ಲಿ ಅನೇಕ ವೈದ್ಯಕೀಯ ವಿಭಾಗಗಳಲ್ಲಿ ಹುದ್ದೆಗಳು ಖಾಲಿಯಾಗಿತ್ತು. ಯಾಕೆಂದರೆ ಈ ಸಮಯದಲ್ಲಿ ಅನೇಕ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಎಷ್ಟೆಂದರೆ ಆಸ್ಪತ್ರೆಗಳಲ್ಲಿ ಜಾಗ ಕೂಡ ಇರುತ್ತಿರಲಿಲ್ಲ.

TCIL Recruitment 2022: ಟೆಕ್ನಿಷಿಯನ್ ಅಪ್ರೆಂಟಿಸ್ ಟ್ರೈನಿ ಹುದ್ದೆ

ಪೈಲಟ್ (Pilot): ಪೈಲಟ್ ವಿಭಾಗದಲ್ಲಿ ಯಾವುದೆಲ್ಲ ಹುದ್ದೆಗಳ ಖಾಲಿ ಇದೆ ಎಂಬುದನ್ನು  ಕೂಡ ಅತೀ ಹೆಚ್ಚು ಜನ ಗೂಗಲ್‌ ನಲ್ಲಿ ಸರ್ಚ್‌ ಮಾಡಿದ್ದಾರೆ. ಯಾವೆಲ್ಲ ಸ್ಥಳದಲ್ಲಿ ಮತ್ತು ಯಾವೆಲ್ಲ ವಿಮಾನ ಕಂಪನಿಗಳಲ್ಲಿ ಈ ಹುದ್ದೆ ಖಾಲಿ ಇದೆ ಎಂಬುದನ್ನು ಸಂಪೂರ್ಣ ಮಾಹಿತಿಯನ್ನು ಕೂಡ ಗೂಗಲ್  ಹುಡುಕಾಡಿದವರಿಗೆ ನೀಡಿದೆ.

ಅಗ್ನಿಶಾಮಕ ಸಿಬ್ಬಂದಿ (Firefighter): ಅಗ್ನಿಶಾಮಕ ದಳದಲ್ಲಿ ಹುದ್ದೆ ಖಾಲಿ ಇರುವ ಬಗ್ಗೆ ಗೂಗಲ್ ನಲ್ಲಿ  ಹುಡುಕಿ ಮಾಹಿತಿ ಪಡೆದುಕೊಂಡಿದ್ದಾರೆ. ಅಗ್ನಿಶಾಮಕ ದಳದಲ್ಲಿ ಯಾವೆಲ್ಲ ವಿಭಾಗದಲ್ಲಿ ಹುದ್ದೆಯನ್ನು ಭರ್ತಿ ಮಾಡಲು ಇಲಾಖೆ ಮುಂದಾಗಿದೆ ಎಂಬುದನ್ನು ಗೂಗಲ್ ನಲ್ಲಿ ಹೆಚ್ಚು ಹುಡುಕಿದ್ದಾರೆ.

ಸ್ವ-ಉದ್ಯೋಗ( self business): ಕೊರೊನಾ ಸಮಯದಲ್ಲಿ ಕೆಲಸ ಕಳೆದುಕೊಂಡು ಅನೇಕ ಮಂದಿ  ಸ್ವ-ಉದ್ಯೋಗದತ್ತ ಮನಸ್ಸು ಮಾಡಿದ್ದೇ ಹೆಚ್ಚು, ಈ ಬಗ್ಗೆ ಅನೇಕರು ಮಾಹಿತಿಯನ್ನು ಗೂಗಲ್ ನಿಂದ ಪಡೆದುಕೊಂಡಿದ್ದಾರೆ.  ಯಾವೆಲ್ಲ ಸ್ವ-ಉದ್ಯೋಗವನ್ನು ಮಾಡಬಹುದು, ಯಾವ ರೀತಿಯಲ್ಲಿ ಮಾಡಬಹುದು ಎಂಬುದನ್ನು ಗೂಗಲ್‌ ನಿಂದ ತಿಳಿದುಕೊಂಡಿದ್ದಾರೆ.

ಮಿಕ್ಕಂತೆ ಅತೀ ಹೆಚ್ಚು ಹುಡುಕಿದ ಉದ್ಯೋಗವೆಂದರೆ ವೈಯಕ್ತಿಕ ತರಬೇತಿದಾರ (Personal trainer), ಮನೋವೈದ್ಯ (Psychiatrist), ದೈಹಿಕ ಚಿಕಿತ್ಸಕ (Physical therapist), ಮತ್ತು ಎಲೆಕ್ಟ್ರಿಷಿಯನ್ ಉದ್ಯೋಗದ ಬಗ್ಗೆ ಅತೀ ಹೆಚ್ಚು ಹುಡುಕಾಟ  ನಡೆಸಿದ್ದಾರೆ ಎಂದು ಗೂಗಲ್ ಸಮೀಕ್ಷೆ ಬಿಡುಗಡೆ ಮಾಡಿದೆ.

click me!