2020ರಲ್ಲಿ ಕೋವಿಡ್ 19 ಲಾಕ್‌ಡೌನ್‌ನ ಮೊದಲ ಮೂರು ತಿಂಗಳ ಅವಧಿಯಲ್ಲಿ ಭಾರತದ ಸುಮಾರು 23 ಲಕ್ಷ ಜನರು ಒಂಬತ್ತು ವಲಯಗಳಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ವರದಸಿ ತಿಳಿಸಿದೆ.
ನವದೆಹಲಿ(ಫೆ.11): 2020ರಲ್ಲಿ ಆಗಿದ್ದ ಕೋವಿಡ್ 19 ಲಾಕ್‌ಡೌನ್‌ನ (Covid-19 lockdown in 2020) ಮೊದಲ ಮೂರು ತಿಂಗಳ ಅವಧಿಯಲ್ಲಿ ಸುಮಾರು 23 ಲಕ್ಷ ಜನರು (16 ಲಕ್ಷ ಪುರುಷರು ಮತ್ತು 7 ಲಕ್ಷ ಮಹಿಳೆಯರು) ಒಂಬತ್ತು ವಲಯಗಳಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ (Ministry of Labour and Employment ) ಮಾಹಿತಿ ಬಹಿರಂಗಪಡಿಸಿದೆ.
ಗುರುವಾರ ಸಂಸತ್ತಿನಲ್ಲಿ ಒದಗಿಸಲಾದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಒಂಬತ್ತು ವಲಯಗಳಲ್ಲಿ ಲಾಕ್‌ಡೌನ್‌ಗೆ ಮೊದಲು (ಮಾರ್ಚ್ 25, 2020) ಪುರುಷ ಉದ್ಯೋಗಿಗಳ (employees) ಸಂಖ್ಯೆ 2.17 ಕೋಟಿ ಇತ್ತು, ಇದು ಜುಲೈ 1 ರಂದು 2.01 ಕೋಟಿಗೆ ಇಳಿದಿದೆ. ಮಹಿಳಾ ಉದ್ಯೋಗಿಗಳ ಸಂಖ್ಯೆ ಅದೇ ಅವಧಿಯಲ್ಲಿ ಸುಮಾರು 90 ಲಕ್ಷದಿಂದ 83.3 ಲಕ್ಷಕ್ಕೆ ಇಳಿದಿದೆ ಎಂದಿದೆ.
undefined
ಈ ಮಾಹಿತಿಯು ಉತ್ಪಾದನೆ (manufacturing), ನಿರ್ಮಾಣ (construction), ಆರೋಗ್ಯ (Health), ಶಿಕ್ಷಣ (Education), ವ್ಯಾಪಾರ (Trade), ಸಾರಿಗೆ (transport) , ಆತಿಥ್ಯ (hospitality) ಮತ್ತು ಇತರ ಒಂಬತ್ತು ಕ್ಷೇತ್ರಗಳಿಗೆ ಸಂಬಂಧಿಸಿದೆ ಎಂದು ಸಚಿವಾಲಯ ಹೇಳಿದೆ. ಉತ್ಪಾದನಾ ವಲಯವು ಗರಿಷ್ಠ ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿದೆ. ಲಾಕ್‌ಡೌನ್‌ಗೂ ಮುನ್ನ ಸುಮಾರು 1.25 ಕೋಟಿ ಜನರು ಈ ವಲಯದೊಂದಿಗೆ ಸಂಬಂಧ ಹೊಂದಿದ್ದರು.
BARC RECRUITMENT 2022: ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅಖಿಲ ಭಾರತ ತ್ರೈಮಾಸಿಕ ಸ್ಥಾಪನೆ ಆಧಾರಿತ ಉದ್ಯೋಗ ಸಮೀಕ್ಷೆಯ (AQEES) ಭಾಗವಾಗಿ ತ್ರೈಮಾಸಿಕ ಉದ್ಯೋಗ ಸಮೀಕ್ಷೆಯನ್ನು ನಡೆಸುವ ಕಾರ್ಯವನ್ನು ಲೇಬರ್ ಬ್ಯೂರೋಗೆ ವಹಿಸಲಾಗಿದೆ. ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಮೇ, 2021) ನಡೆಸಲಾದ ತ್ರೈಮಾಸಿಕ ಉದ್ಯೋಗ ಸಮೀಕ್ಷೆಯನ್ನು ಒಂಬತ್ತು ವಲಯಗಳಲ್ಲಿನ ಸಂಸ್ಥೆಗಳ ಕಾರ್ಯಾಚರಣೆ ಮತ್ತು ಉದ್ಯೋಗದ ಸ್ಥಿತಿಯ ಮೇಲೆ ಸಾಂಕ್ರಾಮಿಕ ರೋಗದ ಪ್ರಭಾವದ ಕುರಿತು ಮಾಹಿತಿಯನ್ನು ಸಂಗ್ರಹಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ನಿರುದ್ಯೋಗದಿಂದ ಭಾರತದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದೆ. ಕೋವಿಡ್ ಬಂದ ಬಳಿಕ ಉದ್ಯೋಗವಿಲ್ಲದೆ ಜನರು ಹೈರಾಣವಾಗಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ನಿರುದ್ಯೋಗ (Unemployment ) ಸಮಸ್ಯೆಗಳ ಬಗ್ಗೆ ಪ್ರತಿಪಕ್ಷಗಳು ಸರ್ಕಾರವನ್ನು ಪ್ರಶ್ನಿಸಿದ್ದವು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಈ ಬಗ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ತಮ್ಮ ವಾದವನ್ನು ಬೆಂಬಲಿಸುವ ಸಮೀಕ್ಷೆಯನ್ನು ಉಲ್ಲೇಖಿಸಿದ್ದರು.
Central Bank of India Recruitment 2022: ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಲು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಹಲವಾರು ದೀರ್ಘಾವಧಿಯ ಯೋಜನೆಗಳು/ಕಾರ್ಯಕ್ರಮಗಳು/ನೀತಿಗಳನ್ನು ಒಳಗೊಂಡಿರುವ ಆತ್ಮನಿರ್ಭರ್ ಭಾರತ್ ಹಣಕಾಸು ಪ್ಯಾಕೇಜ್‌ನ ಭಾಗವಾಗಿ ಸರ್ಕಾರವು 27 ಲಕ್ಷ ಕೋಟಿಗೂ ಹೆಚ್ಚು ಹಣಕಾಸಿನ ಉತ್ತೇಜನವನ್ನು ನೀಡುತ್ತಿದೆ.
27 ಲಕ್ಷ ಕೋಟಿ ವಿತ್ತೀಯ ಉತ್ತೇಜನ: ಸರ್ಕಾರ ಸಾಂಕ್ರಾಮಿಕ ರೋಗದಿಂದ ಉಂಟಾಗುವ ಭಾರೀ ನಷ್ಟವನ್ನು ಗಮನದಲ್ಲಿಟ್ಟುಕೊಂಡು, ದೇಶವನ್ನು ಸ್ವಯಂ ರೂಪಿಸುವ ವಿವಿಧ ಯೋಜನೆಗಳು, ಕಾರ್ಯಕ್ರಮಗಳು, ನೀತಿಗಳನ್ನು ಒಳಗೊಂಡಿರುವ ಆತ್ಮನಿರ್ಭರ್ ಭಾರತ್ ಹಣಕಾಸು ಪ್ಯಾಕೇಜ್‌ನ ಭಾಗವಾಗಿ 27 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣಕಾಸಿನ ಉತ್ತೇಜನವನ್ನು ನೀಡುತ್ತಿದೆ ಎಂದು ಕೇಂದ್ರವು ಸದನಕ್ಕೆ ತಿಳಿಸಿದೆ.
HAL Recruitment 2022: ಮ್ಯಾನೇಜ್ಮೆಂಟ್ ಟ್ರೇನಿ ಸೇರಿ 85 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ