
ತಂತ್ರಜ್ಞಾನ ಬೆಳೆದಂತೆ ಇನ್ನಿಲ್ಲದ ಖುಷಿ ಪಡುವ ವಿಷಯ ಒಂದೆಡೆಯಾದರೆ, ಹಲವಾರು ಕಂಪೆನಿಗಳಲ್ಲಿ ಅದರಲ್ಲಿಯೂ ಐಟಿ-ಬಿಟಿ ಕಂಪೆನಿಗಳ ಉದ್ಯೋಗಿಗಳ ಸ್ಥಿತಿ ತಲ್ಲಣಗೊಳ್ಳುತ್ತಿದೆ. ಐಟಿ ಹಬ್ ಎಂದೇ ಫೇಮಸ್ ಆಗಿರುವ ಬೆಂಗಳೂರಿನ ಐಟಿ ಕಂಪೆನಿಗಳು ಕೆಲ ವರ್ಷಗಳಿಂದ ಉದ್ಯೋಗಿಗಳನ್ನು ಕಡಿತಗೊಳಿಸುತ್ತಲೇ ಬಂದಿವೆ. ಕೃತಕ ಬುದ್ಧಿಮತ್ತೆ, ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಸೇರಿದಂತೆ ಹಲವು ಕಾರಣಗಳಿಂದ ಕೆಲಸ ಕಳೆದುಕೊಳ್ಳುವ ಟೆಕ್ಕಿಗಳು ಸೇರಿದಂತೆ ಐಟಿ ಕಂಪೆನಿಯಲ್ಲಿ ಇರುವ ಹಲವು ಉದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿದೆ. ಎಂಜಿನಿಯರಿಂಗ್ ಪದವಿ ಪಡೆದು ಐಟಿ ಕಂಪೆನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಬಹುದೊಡ್ಡ ಆಸೆಯನ್ನು ಹೊತ್ತ ಯುವಸಮುದಾಯಕ್ಕೆ ಇದು ನುಂಗುಲಾಗದ ತುತ್ತಾಗಿದೆ. ಇದಾಗಲೇ ಕಷ್ಟಪಟ್ಟೋ, ಇಷ್ಟಪಟ್ಟೋ ಕೆಲಸ ಪಡೆದುಕೊಂಡವರು ಕೂಡ ಮನೆಗೆ ಹೋಗುವ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಫಾರಿನ್ ಕನಸು ಕಂಡು ಹೋದವರನ್ನು ಅಲ್ಲಿಯ ಸರ್ಕಾರಗಳು ವಾಪಸ್ ಕಳಿಸುತ್ತಿರುವುದು ಒಂದೆಡೆಯಾದರೆ, ಭಾರತದಲ್ಲಿಯೇ ಅದರಲ್ಲಿಯೂ ಬೆಂಗಳೂರಿನಲ್ಲಿ ಉದ್ಯೋಗ ಕಡಿತ ಎನ್ನುವುದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ.
ಇದಾಗಲೇ ಹಲವಾರು ಕಂಪೆನಿಗಳು ತಮ್ಮ ಉದ್ಯೋಗಿಗಳನ್ನು ಮನೆಗೆ ಕಳಹಿಸಿದೆ. ಜಾಗತಿಕ ತಂತ್ರಜ್ಞಾನ ಉದ್ಯಮವು 2025 ರಲ್ಲಿ ಮತ್ತೊಂದು ಸಾಮೂಹಿಕ ವಜಾಗೊಳಿಸುವಿಕೆಯನ್ನು ಎದುರಿಸುತ್ತಿದೆ, ಮೈಕ್ರೋಸಾಫ್ಟ್, ಅಮೆಜಾನ್, ಗೂಗಲ್ ಮತ್ತು ಕ್ರೌಡ್‌ಸ್ಟ್ರೈಕ್‌ನಂತಹ ದೈತ್ಯ ತಂತ್ರಜ್ಞಾನ ಕಂಪೆನಿಗಳು ಈಗಾಗಲೇ ಸಾವಿರಾರು ಉದ್ಯೋಗಗಳನ್ನು ಕಡಿತಗೊಳಿಸಿವೆ. ವಜಾಗೊಳಿಸುವ ಟ್ರ್ಯಾಕರ್ Layoffs.fyi ಪ್ರಕಾರ, 2025 ರಲ್ಲಿ ಇಲ್ಲಿಯವರೆಗೆ, 130 ಕಂಪೆನಿಗಳಲ್ಲಿ 61,220 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಬೆಂಗಳೂರಿನಲ್ಲಿಯೇ ಈ ವರ್ಷವೂ ಸಹಸ್ರಾರು ಮಂದಿಯನ್ನು ಮನೆಗೆ ಕಳುಹಿಸಲಾಗಿದೆ. 2024ರಲ್ಲಿ ಭಾರತಾದ್ಯಂತ ಒಂದೂವರೆ ಲಕ್ಷಕ್ಕೂ ಅಧಿಕ ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರೆ, ಬೆಂಗಳೂರು ಒಂದರಲ್ಲಿಯೇ 50 ಸಾವಿರ ಮಂದಿ ಟೆಕ್ಕಿಗಳು ಉದ್ಯೋಗ ಕಳೆದುಕೊಂಡಿದ್ದರು. ಅದೇ ಪ್ರವೃತ್ತಿ ಈಗಲೂ ಮುಂದುವರೆದಿದೆ. ಸಂಕ್ಷಿಪ್ತ ನೋಟ ಇಲ್ಲಿದೆ..
ಮೇ 13 ರಂದು, ರೆಡ್ಮಂಡ್ ಮೂಲದ ದೈತ್ಯ ಕಂಪೆನಿಯು 6,000 ಉದ್ಯೋಗಗಳನ್ನು ಕಡಿತಗೊಳಿಸುವ ನಿರ್ಧಾರವನ್ನು ಘೋಷಿಸಿತು - ಇದು 2023 ರ ನಂತರದ ಅತಿದೊಡ್ಡ ವಜಾಗೊಳಿಸುವಿಕೆ ಆಗಿದೆ. ಇದು ಅದರ ಜಾಗತಿಕ ಕಾರ್ಯಪಡೆಯ ಸುಮಾರು 3 ಪ್ರತಿಶತದಷ್ಟು ಪರಿಣಾಮ ಬೀರುತ್ತದೆ. "ಡೈನಾಮಿಕ್ ಮಾರುಕಟ್ಟೆ" ಎಂದೇ ಬಿಂಬಿತವಾಗಿರುವ ಮೈಕ್ರೋಸಾಫ್ಟ್ ಕೂಡ ಹಲವು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ. ಗಮನಾರ್ಹವಾಗಿ, ಜನವರಿಯ ಆರಂಭದಿಂದಲೇ ಈ ಪ್ರಕ್ರಿಯೆ ಶುರುವಾಗಿದೆ.
ಮಿಸ್ಡ್ ಕಾಲ್ ಕೊಟ್ಟು ಪಿಎಫ್ ಬ್ಯಾಲೆನ್ಸ್ ತಿಳಿಯಿರಿ, ರಿಸೈನ್ ಬಳಿಕ ದುಡ್ಡು ತೆಗೆಯದಿದ್ರೆ ಏನಾಗುತ್ತೆ?
2023 ರಲ್ಲಿ ಸಾಮೂಹಿಕ ವಜಾಗೊಳಿಸಿದ ನಂತರ ಗೂಗಲ್ ದೊಡ್ಡ ಮತ್ತು ಸಣ್ಣ ಸಂಖ್ಯೆಯ ಉದ್ಯೋಗಿಗಳನ್ನು ಕಡಿತಗೊಳಿಸುತ್ತಿದೆ. ಇತ್ತೀಚೆಗೆ, ಕಂಪೆನಿಯು ಮತ್ತೆ ವಜಾಗೊಳಿಸುವ ಪ್ರವೃತ್ತಿಯನ್ನು ಶುರುವಿಟ್ಟುಕೊಂಡಿದೆ. ಮೇ ಆರಂಭದಲ್ಲಿ ಅದರ ಜಾಗತಿಕ ವ್ಯಾಪಾರ ಘಟಕದಿಂದ ಸುಮಾರು 200 ಉದ್ಯೋಗಗಳನ್ನು ಕಡಿತಗೊಳಿಸಿತು. ಈ ತಂಡವು ಮಾರಾಟ ಮತ್ತು ಪಾಲುದಾರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಏಪ್ರಿಲ್‌ನಲ್ಲಿ ಆಂಡ್ರಾಯ್ಡ್, ಪಿಕ್ಸೆಲ್, ಕ್ರೋಮ್ ವಿಭಾಗಗಳಲ್ಲಿ ಕೆಲಸ ಮಾಡುವ ನೂರಾರು ಉದ್ಯೋಗಗಳಿಗೆ ಸ್ವಯಂಪ್ರೇರಿತ ನಿರ್ಗಮನಕ್ಕೆ ಅವಕಾಶ ಕಲ್ಪಿಸಲಾಯಿತು. ಫೆಬ್ರವರಿಯಲ್ಲಿ ಅದರ ಕ್ಲೌಡ್ ವಿಭಾಗದಲ್ಲಿ ಉದ್ಯೋಗಿಗಳ ಕಡಿತ ಆರಂಭವಾಯಿತು.
ಈ ತಿಂಗಳು ಅಮೆಜಾನ್‌ನಿಂದ ಮತ್ತೊಂದು ಸುತ್ತಿನ ವಜಾಗೊಳಿಸುವ ಸುದ್ದಿ ಬಂದಿತು, ಏಕೆಂದರೆ ಕಂಪನಿಯು ಎಕೋ ಸ್ಪೀಕರ್‌ಗಳು, ಅಲೆಕ್ಸಾ, ಕಿಂಡಲ್ ಮತ್ತು ಝೂಕ್ಸ್ ಸ್ವಯಂ-ಚಾಲನಾ ಕಾರುಗಳಂತಹ ಉತ್ಪನ್ನಗಳನ್ನು ನೋಡಿಕೊಳ್ಳುವ ತನ್ನ ಸಾಧನಗಳು ಮತ್ತು ಸೇವೆಗಳ ಘಟಕದಿಂದ ಸುಮಾರು 100 ಉದ್ಯೋಗಿಗಳನ್ನು ವಜಾಗೊಳಿಸಿದೆ. ಕಂಪೆನಿಯ ಪ್ರಕಾರ, ಅದರ ಉತ್ಪನ್ನ ಮಾರ್ಗಸೂಚಿಯೊಂದಿಗೆ ಉತ್ತಮವಾಗಿ ಹೊಂದಿಕೊಳ್ಳಲು ಮತ್ತು ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಈ ವಜಾಗೊಳಿಸುವಿಕೆಗಳು ಅಗತ್ಯವಾಗಿದ್ದವು. ಅದೇ ಇನ್ನೊಂದೆಡೆ, ಸೈಬರ್ ಸೆಕ್ಯುರಿಟಿ ಕಂಪೆನಿ ಕ್ರೌಡ್‌ಸ್ಟ್ರೈಕ್ ಕೂಡ ಈ ವರ್ಷ ಇಲ್ಲಿಯವರೆಗೆ ತನ್ನ ಉದ್ಯೋಗಿಗಳ ಶೇಕಡಾ 5 ರಷ್ಟು ಜನರನ್ನು ವಜಾಗೊಳಿಸಿದೆ.
Microsoft Layoffs: ಮೈಕ್ರೋಸಾಫ್ಟ್‌ನಲ್ಲಿ ದೊಡ್ಡ ಮಟ್ಟದ ಉದ್ಯೋಗ ಕಡಿತ: ಕೋಡಿಂಗ್ ತಜ್ಞರಿಗೆ ಶಾಕ್!