ಹರಹರಿದ ಪಂಚಮಸಾಲಿ ಮಠದಲ್ಲಿ ಆಜಾದಿ ಅಮೃತ ಮಹೋತ್ಸವ,ಉದ್ಯೋಗ ಮೇಳ

By Suvarna News  |  First Published Apr 11, 2022, 5:25 PM IST

* ಹರಹರಿದ ಪಂಚಮಸಾಲಿ ಮಠದಲ್ಲಿ ಆಜಾದಿ ಅಮೃತ ಮಹೋತ್ಸವ
* ಪೀಠದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಉದ್ಯೋಗ ಮೇಳ ಆಯೋಜನೆ
* ಹರಿಹರ  ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಶ್ರೀ ಮಾಹಿತಿ


ವರದಿ - ವರದರಾಜ್

ದಾವಣಗೆರೆ, (ಏ.11): ದಾವಣಗೆರೆ ಜಿಲ್ಲೆ ಹರಿಹರದ ವೀರಶೈವ ಪಂಚಮಸಾಲಿ ಪೀಠದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ‌.  ಹರಿಹರ  ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಇಂದು(ಸೋಮವಾರ) ಪತ್ರಿಕಾಗೋಷ್ಠಿ ನಡೆಸಿ ಉದ್ಯೋಗ ಮೇಳ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮಾಹಿತಿ ನೀಡಿದರು. 

Tap to resize

Latest Videos

ಏಪ್ರೀಲ್ 23 ಮತ್ತು ಏಪ್ರೀಲ್ 24 ರಂದು ಎರಡು ದಿನ  ಹರಿಹರ ಪೀಠದ ಆವರಣದಲ್ಲಿ ಆಜಾದಿ ಅಮೃತ ಮಹೋತ್ಸವ ಅಂಗವಾಗಿ  ಉದ್ಯೋಗ ಮೇಳ ಹಾಗು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಾಗಿ ವಿವಿಧ ಚರ್ಚೆಗಳು ನಡೆಯಲಿವೆ.  ಉನ್ನತಶಿಕ್ಷಣ ಇಲಾಖೆ ,ಐಟಿ ಬಿಟಿ ಸಚಿವಾಲಯ , ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ ಆಗಮಿಸುವ ಕಾರ್ಯಕ್ರಮದಲ್ಲಿ  ಬೃಹತ್ ಕಂಪನಿಗಳು ಆಗಮಿಸಲಿವೆ ಎಂದರು.

ಎಸ್ ಎಸ್ ಎಲ್ ಸಿಯಿಂದ ವಿವಿಧ ಪದವಿ ವಿದ್ಯಾರ್ಥಿಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೋಂಡು ಉದ್ಯೋಗ ಪಡೆಯಬಹುದಾಗಿದೆ.  ಸ್ವಾತಂತ್ರ್ಯ ಅಮೃತಮಹೋತ್ಸವ ಅಂಗವಾಗಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಸಮಗ್ರ ಚರ್ಚೆ  ನಡೆಯಲಿದೆ.  ಹೊಸ ಶಿಕ್ಷಣ ನೀತಿಯ ಸವಾಲುಗಳು, ಅದರ ಉಪಯೋಗಗಳು, ಉದ್ಯೋಗ ಅವಕಾಶಗಳ ಬಗ್ಗೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಂಪನ್ಮೂಲವ್ಯಕ್ತಿಗಳಿಂದ ಚರ್ಚೆ ನಡೆಯಲಿದೆ ಎಂದು ವಿವರಿಸಿದರು.

ಸ್ವಾತಂತ್ರ್ಯಕ್ಕಾಗಿ ಪಂಚಮಸಾಲಿಗಳ ಕೊಡುಗೆ ಸಾಕಷ್ಟಿದೆ
ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಮೈಲಾರ ಮಹಾದೇಪ್ಪ, ಕೆಳದಿ ಚೆನ್ನಪ್ಪ , ಕಂಬಳಿ ಸಿದ್ದಪ್ಪ, ಹರತಾಳ್ ರುದ್ರುಗೌಡ್ರು, ಹದರಗುಂಚಿ ಶಂಕರ್ ಗೌಡ್ರು  ಹೀಗೆ ಹಲವು ಮಹನೀಯರ ಸಾಧನೆ ಗೆ ಗೌರವ ನೀಡುವ ಉದ್ದೇಶ ಹೊಂದಿದೆ. ಇಡೀ ದೇಶಕ್ಕೆ ಅವರ ಕೊಡುಗೆ ಏನು ಎಂಬುದಕ್ಕೆ ಎಷ್ಟೊ ಜನಕ್ಕೆ ಗೊತ್ತಿಲ್ಲ .ದೇಶಕ್ಕಾಗಿ ದುಡಿದವರಿಗೆ ನುಡಿನಮನ ವಾಗಬೇಕು, ಆಂಗ್ಲ ಹಿಂದಿ ಭಾಷೆಯಲ್ಲಿ ಬರವಣಿಗೆಯಾಗಬೇಕು, ಸಂಶೋಧನೆಯಾಗಬೇಕೆಂದು  ನಮ್ಮ ಆಶಯ ಇದೆ ಎಂದರು.

 ಹರ ಜಾತ್ರೆ ಕಾನ್ಸಪ್ಟ್ ಬದಲಾಯಿಸಿ ಸ್ವಾತಂತ್ರ್ಯದ ಅಮೃತಮಹೋತ್ಸವ ಕಲ್ಪನೆಯಲ್ಲಿ ಹರಜಾತ್ರೆ ಗಮನ ಸೆಳೆಯಲಿದೆ. ಕೆಲವು ಮಹಾನ್ ವ್ಯಕ್ತಿಗಳು ಸಾಕ್ಷ್ಯಚಿತ್ರದ  ವರ್ಣಚಿತ್ರಗಳು, ಪೇಟಿಂಗ್ ಮಾಡುತ್ತಿದ್ದೇವೆ. ವರ್ಣಚಿತ್ರಗಳ ಮೂಲಕ ದೇಶದ ಗಮನ ಸೆಳೆಯುವ ಪ್ರಯತ್ನ ನಮ್ಮದಾಗಿದೆ.  ಏಪ್ರಿಲ್ 23 ರಿಂದ ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿದೆ. ಬೃಹತ್ ಕೈಗಾರಿಕೆ ಇಲಾಖೆ ಐಎಎಸ್ ಕೆಎಎಸ್ ಅಧಿಕಾರಿಗಳು ಇದರ ನೇತೃತ್ವ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕೇಂದ್ರಮಟ್ಟದಲ್ಲಿ ಎಲ್ಲಾ ಲಿಂಗಾಯತರಿಗೆ ಓಬಿಸಿ ಬೇಕಾಗಿದೆ
ಮೀಸಲಾತಿ ಬಗ್ಗೆ ರಾಜ್ಯದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ.ವಾರಕ್ಕೆ ಎರಡು ಬಾರಿ ಹಿಂದುಳಿದ ವರ್ಗಗಳ ಆಯೋಗದ ಜೊತೆ ಸಮೀಕ್ಷೆ ನಡೆಯುತ್ತಿದೆ. ಸಮಿತಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಅದು ಮುಗಿದ ಮೇಲೆ ಆ ಹಿಂದುಳಿದ ವರ್ಗಗಳ ಆಯೋಗದ  ಜೊತೆ ಮಾತನಾಡುತ್ತೇವೆ. ಜಯಪ್ರಕಾಶ್ ಹೆಗಡೆಯವರು ಸಮಯ ಕೇಳಿದ್ದಾರೆ‌. ಆದಾದ ನಂತರ ನಾವು ಮುಂದುವರಿಯುತ್ತೇವೆ.   ಕೇಂದ್ರ ಸರ್ಕಾರದಲ್ಲಿ ಎಲ್ಲಾ ಲಿಂಗಾಯತರಿಗೆ ಓಬಿಸಿ ಸಿಗಬೇಕೆಂಬುದು ನಮ್ಮ ಆಶಯ. ಎಲ್ಲಾ ಲಿಂಗಾಯತ ಪಂಗಡಗಳು ಓಬಿಸಿಗೆ ಸೇರಬೇಕೆಂಬುದು ನಮ್ಮ ಅಶಯ  ಬೊಮ್ಮಾಯಿ ನಾವು ಹತ್ತಿರದಲ್ಲಿ ಕಂಡಿದ್ದು ಪಂಚಮಸಾಲಿ ‌ಸಮುದಾಯಕ್ಕೆ ನ್ಯಾಯ ಕೊಡುವ ಆಶಯ ಮುಖ್ಯಮಂತ್ರಿ ಯವರಿಗಿದೆ. ಅವರು ನಮ್ಮ ಮೇಲೆ ವಿಶ್ವಾಸಯಿಡಿ ಎಂದು ಹೇಳಿದ್ದಾರೆ‌ ಅದಕ್ಕಾಗಿ ಕಾಯುತ್ತಿದ್ದೇವೆ.  ಆ ಸಮೀಕ್ಷೆ ಮುಗಿದ ಮೇಲೆ ಮೀಸಲಾತಿಗೆ ಹೋರಾಟ ಮಾಡುತ್ತೇವೆ ಎಂದು ಸ್ವಾಮೀಜಿ ಹೇಳಿದರು. 

ಹರಿಹರದ ಪಂಚಮಸಾಲಿ ಪೀಠ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಕಳೆದ  ಎರಡು ತಿಂಗಳಲ್ಲಿ ಎರಡು ಬಾರಿ ಡೆಲ್ಲಿಗೆ ಹೋಗಿದ್ದೇನೆ. ಪ್ರತಿವರ್ಷ ಯೋಗ ದಿನಾಚರಣೆ ಯನ್ನು ಸರ್ಕಾರ ಮಾಡುತ್ತಿದೆ. 6 ಮತ್ತು 7 ನೇ ತಾರೀಖು 75 ದಿನದ ಕಾರ್ಯಕ್ರಮ ನಿಮಿತ್ತ ಆಲ್ ಇಂಡಿಯಾ ಆಪೀಸರ್ಸ್  ಮೀಟ್ ಇತ್ತು. ಬೆಂಗಳೂರಿನಲ್ಲಿರುವ ನಮ್ಮ  ಶ್ವಾಸಸಂಸ್ಥೆಯನ್ನು ಯೋಗಾ ಡೇ ಆಚರಣೆ ಮಾಡಲು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ. 126 ವರ್ಷದ ಯೋಗಿ ಯನ್ನು ನರೇಂದ್ರ ಮೋದಿ ಭೇಟಿ ಮಾಡಿದ್ದರು.  ಆ ಧೀರ್ಘಾಯುಷಿ ಯೋಗಿಯನ್ನು ಕರೆದು ಮೊದಲು ಸನ್ಮಾನ ಮಾಡಿದ  ಹೆಗ್ಗಳಿಕೆ ನಮ್ಮ ಮಠಕ್ಕಿದೆ..  ಐದು ವರ್ಷದಲ್ಲಿ ಆರು ಜನರಿಗೆ ಯೋಗ ರತ್ನ ಸಿಕ್ಕಿದೆ‌. ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಗಳನ್ನು  ನೀಡಿ ಗೌರವಿಸಲಾಗಿದೆ. ಶ್ರೇಷ್ಠ ವ್ಯಕ್ತಿಗಳು ಪೀಠಕ್ಕೆ ಆಗಮಿಸುತ್ತಿದ್ದು ಪೀಠ ದಿನದಿಂದ ದಿನಕ್ಕೆ ಅಭ್ಯುದಯವಾಗುತ್ತಿದೆ ಎಂದರು.

click me!