Delhi University Job Fair: ಉದ್ಯೋಗಕ್ಕಾಗಿ ವಿದ್ಯಾರ್ಥಿಗಳಿಂದ 30 ಸಾವಿರಕ್ಕೂ ಅಧಿಕ ನೋಂದಣಿ!

By Suvarna News  |  First Published Apr 7, 2022, 1:19 PM IST

*ಪ್ಲೇಸ್ಮೆಂಟ್ ಕಮ್ ಇಂಟರ್ನ್‌ಶಿಪ್‌ಗಾಗಿ ದಾಖಲೆಯ ವಿದ್ಯಾರ್ಥಿಗಳಿಂದ ನೋಂದಣಿ
*ದೆಹಲಿಯ ವಿವಿಯ ಕಾರ್ಯಕ್ರಮದಲ್ಲಿ ದಾಖಲೆ ಸೃಷ್ಟಿಸಿದ ವಿದ್ಯಾರ್ಥಿಗಳು
*ಈ ಪ್ಲೇಸ್ಮೆಂಟ್, ಇಂಟರ್ನ್‌ಶಿಪ್ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ
 


ಬೆಂಗಳೂರು(ಎ.7) ಕಾಲೇಜುಗಳಲ್ಲಿ‌ ಕ್ಯಾಂಪಸ್ ಸೆಲೆಕ್ಷನ್ (Campus Selection) ಮೂಲಕ ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಅನ್ನೋದು ಬಹುತೇಕ ವಿದ್ಯಾರ್ಥಿಗಳ‌ ಕನಸ್ಸಾಗಿರುತ್ತದೆ. ಓದು ಮುಗಿಯುವ ಹೊತ್ತಿಗೆ ಜಾಬ್ ಆಫರ್ (Job offer) ಹಿಡಿದು ಕ್ಯಾಂಪಸ್ ನಿಂದ ಹೊರಬರಲು ಕಾತುರರಾಗಿರುತ್ತಾರೆ. ಪ್ರತಿಷ್ಟಿತ ಕಾಲೇಜುಗಳಲ್ಲಿ ಕ್ಯಾಂಪಸ್ ಆಯ್ಕೆ , ಜಾಬ್ ಮೇಳ (Job Fair) ಆಯೋಜಿಸುವುದು ಸಾಮಾನ್ಯ. ಇಂಥ ಮೇಳಗಳ ಮೂಲಕ ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಳ್ಳುತ್ತಾರೆ.

ಅಷ್ಟರಮಟ್ಟಿಗೆ ಉದ್ಯೋಗ ಮೇಳಕ್ಕೆ ಬಹುಬೇಡಿಕೆ ಇದೆ. ದೆಹಲಿ ವಿಶ್ವವಿದ್ಯಾಲಯ (Delhi University) ಆಯೋಜಿಸಿರುವ ಪ್ಲೇಸ್‌ಮೆಂಟ್-ಕಮ್-ಇಂಟರ್ನ್‌ಶಿಪ್ ಮೇಳಕ್ಕೆ 30,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ದೆಹಲಿ ವಿಶ್ವ ವಿದ್ಯಾಲಯದ  ಇತಿಹಾಸದಲ್ಲಿ ಇದೇ ಮೊದಲ ಬಾರಿ ಇಷ್ಟೊಂದು ಮಟ್ಟದ ‌ಉದ್ಯೋಗ ಆಕಾಂಕ್ಷಿಗಳು ರಿಜಿಸ್ಟರ್ ಮಾಡಿಕೊಂಡಿರುವುದು.

Tap to resize

Latest Videos

'ಉದ್ಯೋಗ ಮೇಳ'ವು (Job Fair) ವಿಶ್ವ ವಿದ್ಯಾನಿಲಯದ 91 ಕಾಲೇಜುಗಳ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ (Internship) ಮತ್ತು ಉದ್ಯೋಗ (Job) ಗಳಿಗಾಗಿ ಸಾಮಾನ್ಯ ವೇದಿಕೆಯನ್ನು ಒದಗಿಸುತ್ತದೆ. ವಿವಿಯ ಅಧಿಕೃತ ಹೇಳಿಕೆಯ ಪ್ರಕಾರ, ದೆಹಲಿ ವಿಶ್ವವಿದ್ಯಾಲಯವು (Delhi University) ಸೂಕ್ತವಾದ ಉದ್ಯೋಗಾವಕಾಶಗಳನ್ನು ಒದಗಿಸಲು ಆಯೋಜಿಸುತ್ತಿರುವ ಪ್ಲೇಸ್‌ಮೆಂಟ್-ಕಮ್-ಇಂಟರ್ನ್‌ಶಿಪ್ ಮೇಳಕ್ಕೆ 30,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. 

Manipuri School Girl: 10 ವರ್ಷದ ವಿದ್ಯಾರ್ಥಿನಿ ಕಂಕುಳಲ್ಲಿ 2 ವರ್ಷದ ತಂಗಿ!

 ಜಾಬ್ ಮೇಳವು ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿ ಈ ರೀತಿಯ ಮೊದಲನೆಯದು ಮತ್ತು 91 ಕ್ಕೂ ಹೆಚ್ಚು ಕಾಲೇಜುಗಳ ಪದವಿಪೂರ್ವ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಮತ್ತು ಉದ್ಯೋಗಗಳಿಗಾಗಿ ಸಾಮಾನ್ಯ ವೇದಿಕೆಯನ್ನು ಒದಗಿಸುತ್ತದೆ. ಈ ಈವೆಂಟ್ ಏಪ್ರಿಲ್ 7 ರಿಂದ ಏಪ್ರಿಲ್ 9 ರವರೆಗೆ ನಡೆಯಲಿದೆ. ಇದು ದೆಹಲಿ ವಿಶ್ವವಿದ್ಯಾಲಯದ 86 ಕ್ಕೂ ಹೆಚ್ಚು ವಿಭಾಗಗಳ ಅರ್ಹ ನುರಿತ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸೂಕ್ತವಾದ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಅಂತಾರೆ ದೆಹಲಿ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ವಿಕಾಸ್ ಗುಪ್ತಾ. 

ವಿವಿಯ ಕೇಂದ್ರ ನಿಯೋಜನೆ ಕೋಶದಿಂದ ಮೂರು ದಿನಗಳ ‘ಉದ್ಯೋಗ ಮೇಳ’ ಆಯೋಜಿಸಲಾಗಿದೆ. ಉಪಕುಲಪತಿ ಯೋಗೇಶ್ ಸಿಂಗ್ ಉದ್ಘಾಟಿಸಲಿದ್ದಾರೆ. ಮೇಳದಲ್ಲಿ 45 ಕ್ಕೂ ಹೆಚ್ಚು ರಾಷ್ಟ್ರೀಯ (National), ಬಹುರಾಷ್ಟ್ರೀಯ ಕಂಪನಿಗಳು (Multi National), ಸ್ಟಾರ್ಟ್‌ಅಪ್‌ಗಳು (Startups), ಸಂಶೋಧನಾ ಸಂಸ್ಥೆಗಳು (Research Institutions), ಎನ್‌ಜಿಒ (NGO) ಗಳು ಭಾಗವಹಿಸಲಿವೆ. ವಿದ್ಯಾರ್ಥಿಗಳ ಆಯ್ಕೆಗಾಗಿ ತಮ್ಮನ್ನು ನೋಂದಾಯಿಸಿಕೊಳ್ಳುವ ಮೂಲಕ ಆಸಕ್ತಿ ತೋರಿಸಿವೆ ಎಂದು ಗುಪ್ತಾ ಹೇಳಿದ್ದಾರೆ. 

'ಉದ್ಯೋಗ ಮೇಳ'ವನ್ನು ಸಂಯೋಜಿತ ಕ್ರಮದಲ್ಲಿ ಆಯೋಜಿಸಲಾಗುವುದು. "ಕಂಪನಿಗಳಿಗೆ ಆನ್‌ಲೈನ್ (Online) ಅಥವಾ ಆಫ್‌ಲೈನ್ (Offline) ವ್ಯವಸ್ಥೆಯ ಅವಶ್ಯಕತೆಗಳಿಗೆ ಅನುಗುಣವಾಗಿ ಮೇಳ ನಡೆಸಲಾಗುತ್ತದೆ" ಎಂದು ರಿಜಿಸ್ಟ್ರಾರ್ ಹೇಳಿದರು. 30,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಾಯಿಸಿಕೊಂಡಿದ್ದಾರೆ. ಮೂರು ದಿನಗಳ ಕಾಲ ನಡೆಯಲಿರುವ ಉದ್ಯೋಗ ಮೇಳ (job fair) ದಲ್ಲಿ ಉದ್ಯೋಗ ಪಡೆಯುವ ನಿರೀಕ್ಷೆಯನ್ನು ಸಾಕಷ್ಟು ವಿದ್ಯಾರ್ಥಿ (Students) ಗಳು ಹೊಂದಿದ್ದಾರೆ. ಹಾಗಾಗಿಯೇ ಇಷ್ಟೊಂದು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿರುವುದನ್ನು ಕಾಣಬಹುದಾಗಿದೆ. 

Aditi Tiwari Facebook Job: ಫೇಸ್‌ಬುಕ್‌ನಿಂದ ಪಾಟ್ನಾ ವಿದ್ಯಾರ್ಥಿನಿಗೆ ₹1.6 ಕೋ ಆಫರ್

ಕೋವಿಡ್ – 19 (Covid – 19) ಸಾಂಕ್ರಾಮಿಕ ಪರಿಸ್ಥಿತಿಯು ನಿಧಾನವಾಗಿ ಸರಿಯುತ್ತಿದ್ದಂತೆ ಆರ್ಥಿಕ ಚಟುವಟಿಕೆಗಳು ಮತ್ತೆ ಗರಿಗೆದರಿವೆ. ಪರಿಣಾಮ, ಉದ್ಯೋಗವಕಾಶಗಳಿಗೆ ಬೇಡಿಕೆಯು ಸೃಷ್ಟಿಯಾಗುತ್ತಿದೆ. ಜತೆಗೆ, ಉದ್ಯೋಗ ಬೇಕು ಎನ್ನುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹಾಗಾಗಿ, ಉದ್ಯೋಗ ಮೇಳದಂಥ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ನೋಂದಣಿ ಮಾಡಿಕೊಳ್ಳುತ್ತಿರುವುದನ್ನು ಕಾಣಬಹುದು. ಜತೆಗೆ, ಪದವಿ ಹಂತದಲ್ಲೇ ಇರುವಾಗಲೇ ನೌಕರಿಯನ್ನು ಪಡೆದುಕೊಳ್ಳುವ ಟ್ರೆಂಡ್ ಕೂಡ ಹೆಚ್ಚಾಗಿದೆ. ಹಾಗಾಗಿಯೇ, ಕಾಲೇಜ್ ಕ್ಯಾಂಪಸ್‌ ಸಂದರ್ಶನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗುತ್ತಿರುವುದನ್ನು ಕಾಣಬಹುದಾಗಿದೆ.

click me!