Zerodha BMI Challenge ಈ ಕಂಪನಿಯಲ್ಲಿ ಬೋನಸ್ ಬೇಕಾದರೆ ದೇಹದ ತೂಕ ಇಳಿಸಿಕೊಳ್ಳಬೇಕು!

By Suvarna NewsFirst Published Apr 10, 2022, 12:52 PM IST
Highlights

ಕೊರೊನಾ ಅಲೆ ಕಡಿಮೆಯಾಗಿರುವ ಕಾರಣ ಉದ್ಯೋಗಿಗಳು ಕಂಪನಿಯತ್ತ ಮರಳುತ್ತಿದ್ದಾರೆ. ವರ್ಕ್ ಫ್ರಂ ಹೋಂ ಕಾರಣದಿಂದಾಗಿ ಕೆಲವು ಉದ್ಯೋಗಿಗಳು ಧಡೂತಿಗಳಾಗಿದ್ದಾರೆ. ಜೆರೋದಾ ಎಂಬ ಕಂಪೆನಿ  ಬೋನಸ್ ಬೇಕಾದರೆ ದೇಹದ ತೂಕ ಇಳಿಸಿಕೊಳ್ಳಿ ಎಂದು ಹೇಳಿದೆ.

ನವದೆಹಲಿ(ಎ.10): ಕೊರೋನಾದಿಂದ ಎಲ್ಲಾ ಕಂಪನಿಗಳಿಗು ವರ್ಕ್ ಫ್ರಂ ಹೋಂ (work from home) ಆಯ್ಕೆ ನೀಡಿದ್ದವು. ಇದೀಗ ಕೊರೊನಾ ಅಲೆ ಕಡಿಮೆಯಾಗಿರುವ ಕಾರಣ ಉದ್ಯೋಗಿಗಳು ಕಂಪನಿಯತ್ತ ಮರಳುತ್ತಿದ್ದಾರೆ. ಈಗಾಗಲೇ ಹಲವು ಕಂಪನಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ವರ್ಕ್ ಫ್ರಂ ಹೋಂ ಕಾರಣದಿಂದಾಗಿ ಕೆಲವು ಉದ್ಯೋಗಿಗಳು ಧಡೂತಿಗಳಾಗಿದ್ದಾರೆ. ಇದನ್ನು ಗಮನಿಸಿಯೋ ಏನೋ ತಿಳಿಯದು, ಶೇರ್ ಮಾರ್ಕೆಟಿಂಗ್ ಕಂಪೆನಿಯೊಂದು ವಿಶ್ವ ಆರೋಗ್ಯ ದಿನದಂದು ಉದ್ಯೋಗಿಗಳಿಗೆ ಆರೋಗ್ಯ ಕಾಪಾಡಿಕೊಳ್ಳುವ ಹಿತದೃಷ್ಟಿಯ ಜೊತೆಗೆ ಹೊಸ ಆಫರ್ ಅನ್ನು ಕೊಟ್ಟಿದೆ.

ಜೆರೋದಾ (Zerodha) ಎಂಬ ಶೇರ್ ಮಾರ್ಕೆಟಿಂಗ್ ಕಂಪೆನಿ ನಿಮಗೆ ಬೋನಸ್ ಬೇಕಾದರೆ ದೇಹದ ತೂಕ ಇಳಿಸಿಕೊಳ್ಳಿ ಎಂದು ಹೇಳಿದೆ. ಈ ಕಂಪನಿಯ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

UDUPI ANGANWADI RECRUITMENT 2022: ಅಂಗನವಾಡಿ ಕೇಂದ್ರದ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ

 

Sharing more context.
We have experimented with a bunch of ideas since Covid & WFH to help the team think about their health. Sitting is the new smoking, & the idea has been to nudge everyone to move.
Killing all work chats post 6pm & weekends have probably had the best ROI. 1/5 https://t.co/YsP83CrCmm

— Nithin Kamath (@Nithin0dha)

ಈ ಬಗ್ಗೆ ಎಲ್ಲಾ ಉದ್ಯೋಗಿಗಳಿಗೆ ಸವಾಲೆಸೆದ ಜೆರೋದಾ (Zerodha) ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ 25ಕ್ಕಿಂತ ಕಡಿಮೆ ಬಿಎಂಐ ( Body mass index - BMI ) ಇದ್ದರೆ ಅಂತಹ ವ್ಯಕ್ತಿಗಳು ಅರ್ಧ ತಿಂಗಳ ಸಂಬಳವನ್ನು ಬೋನಸ್ ಆಗಿ ಪಡೆಯುತ್ತಾರೆ ಎಂದು ಹೇಳಿದ್ದಾರೆ. ತೂಕ ಕಳೆದುಕೊಳ್ಳುವ ಸಿಬ್ಬಂದಿಗೆ ಕೆಲವು ಲಾಭಗಳನ್ನು ಘೋಷಿಸಿದ್ದಾರೆ.

Uttara Kannada Anganwadi Recruitment 2022: ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ

We are running a fun health program at . Anyone on our team with BMI <25 gets half a month's salary as bonus. The avg BMI of our team is 25.3 & if we can get to <24 by Aug, everyone gets another ½ month as a bonus. It'd be fun to compete with other companies 😁 1/3

— Nithin Kamath (@Nithin0dha)

ಇವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧದ ಚರ್ಚೆ ನಡೆದಿದೆ. ಕೆಲವರು ತಕ್ಷಣವೇ ದೇಹ ತೂಕ ಇಳಿಕೆಗೆ ಮುಂದಾದರೆ ಆರೋಗ್ಯ ಸಮಸ್ಯೆಗೆ ಕಾರಣವಾಗಲಿದೆ ಎಂದು ಹೇಳಿದರೆ, ಇನ್ನು ಕೆಲವರು ಉದ್ಯೋಗಿಗಳ ಆರೋಗ್ಯದ ಮೇಲೆ ಕಂಪನಿಯ ಕಾಳಜಿ ಕಂಡು ಹರ್ಷ ವ್ಯಕ್ತಪಡಿಸಿದ್ದಾರೆ.

 

Today is the RBI policy meet and the volatility will be higher than usual. You can keep track of all key events that can impact your trades on the fundamentals widget both on Kite web and mobile. 👇https://t.co/ojml0NQYfo

Fundamentals by pic.twitter.com/3JJof6SG54

— Zerodha (@zerodhaonline)

ರಾಜ್ಯ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಮತ್ತಷ್ಟು ವಿಳಂಬ!

click me!