ಬೆಂಗಳೂರಿನಲ್ಲಿ ಗಗನಸಖಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ನಾಳೆ ಸಂದರ್ಶನ: ವಿವರ ಹೀಗಿದೆ ನೋಡಿ..

Published : Aug 10, 2023, 07:40 PM IST
ಬೆಂಗಳೂರಿನಲ್ಲಿ ಗಗನಸಖಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ನಾಳೆ ಸಂದರ್ಶನ: ವಿವರ ಹೀಗಿದೆ ನೋಡಿ..

ಸಾರಾಂಶ

Air India Jobs ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲೇ ಪೋಸ್ಟಿಂಗ್ ಸಿಗುತ್ತದೆ. ಇನ್ನು, ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಪ್ರಮುಖ ಮಾಹಿತಿಗಳನ್ನು ತಿಳಿದುಕೊಳ್ಳಿ. 

Air India Recruitment 2023: ನಿಮಗೆ ಗಗನಸಖಿ ಆಗುವ ಇಚ್ಛೆ ಇದ್ಯಾ..? ಹಾಗಾದ್ರೆ, ನಿಮಗಿಲ್ಲಿದೆ ಸದವಕಾಶ. ಏರ್​ ಇಂಡಿಯಾ ಲಿಮಿಟೆಡ್‌ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.  ಅನೇಕ ಕ್ಯಾಬಿನ್ ಕ್ರ್ಯೂ ಅಥವಾ ಗಗನಸಖಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.  ಆಗಸ್ಟ್ 11, 2023 ಅಂದರೆ ನಾಳೆ ಬೆಂಗಳೂರಿನಲ್ಲಿ ಸಂದರ್ಶನ ನಡೆಯಲಿದೆ. ಈ ಹಿನ್ನೆಲೆ ವಿಮಾನಯಾನ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದ್ದು, ಆಸಕ್ತರು ಸಂದರ್ಶನದಲ್ಲಿ ಭಾಗಿಯಾಗಬಹುದು.

ಇನ್ನು, ಈ ಹುದ್ದೆ ಮಹಿಳೆಯರಿಗೆ ಮಾತ್ರ ಲಭ್ಯವಿದ್ದು, ಪುರುಷರಿಗೆ ಈ ಬಾರಿ ಅರ್ಜಿ ಸಲ್ಲಿಸಲು ಅಥವಾ ಸಂದರ್ಶನದಲ್ಲಿ ಭಾಗಿಯಾಗಲು ಅವಕಾಶವಿಲ್ಲ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲೇ ಪೋಸ್ಟಿಂಗ್ ಸಿಗುತ್ತದೆ. ಇನ್ನು, ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಪ್ರಮುಖ ಮಾಹಿತಿಗಳನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಈ ಬಗ್ಗೆ ತಿಳಿದುಕೊಳ್ಳಿ.

ಇದನ್ನು ಓದಿ: ಅತ್ಯಾಚಾರಿಗಳಿಗೆ ಸರ್ಕಾರಿ ಉದ್ಯೋಗವಿಲ್ಲ: ಕಾಂಗ್ರೆಸ್‌ ಸರ್ಕಾರದಿಂದ ‘ಜಾಬ್‌ ಬುಲ್ಡೋಜರ್’ ಅಸ್ತ್ರ’!

ಹುದ್ದೆ: ಕ್ಯಾಬಿನ್ ಸಿಬ್ಬಂದಿ (ಮಹಿಳೆ)
ಸ್ಥಳ: ಬೆಂಗಳೂರು
ಪ್ರಕ್ರಿಯೆಯ ದಿನಾಂಕ: 11ನೇ ಆಗಸ್ಟ್, 2023
ನೇಮಕಾತಿ ವಿಧಾನ: ವಾಕ್-ಇನ್ ಇಂಟರ್‌ವ್ಯೂ

ನಾಳೆ ಅಂದರೆ ಆಗಸ್ಟ್‌ 11, 2023 ರಂದು ಬೆಂಗಳೂರಿನಲ್ಲಿ ಬೆಳಗ್ಗೆ 9:30 ರಿಂದ ಮಧ್ಯಾಹ್ನ 12:30 ರವರೆಗೆ ಸಂದರ್ಶನ ನಡೆಯಲಿದೆ. ಹಾಗೂ, ಈ ಸಂದರ್ಶನ ಎಲ್ಲಿ ನಡೆಯುತ್ತೆ ಅಂತೀರಾ..

ಇದನ್ನೂ ಓದಿ: ಕಾರ್ಪೊರೇಟ್‌ ಲೈಫ್‌ ಬೇಕಾ ಗುರು? ಐಟಿ ಉದ್ಯೋಗಕ್ಕಿಂತ ಕ್ಯಾಬ್‌ ಚಾಲಕನಾಗೇ ಹೆಚ್ಚು ದುಡೀತಾರೆ ಈ ಟೆಕ್ಕಿ!

ಸಂದರ್ಶನದ ಸ್ಥಳ: 
ಫಾರ್ಚೂನ್ ಸೆಲೆಕ್ಟ್ JP ಕಾಸ್ಮೋಸ್‌,
# 49, ಕನ್ನಿಂಗ್‌ಹ್ಯಾಮ್‌ ಕ್ರೆಸೆಂಟ್ ರಸ್ತೆ,
ಫೋರ್ಟಿಸ್ ಆಸ್ಪತ್ರೆಯ ಹಿಂದೆ,
ಬೆಂಗಳೂರು 560052.

ಅರ್ಹತೆಯ ಮಾನದಂಡ
ಭಾರತೀಯ ಪ್ರಜೆಯಾಗಿರಬೇಕು, ಭಾರತೀಯ ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಹೊಂದಿರಬೇಕು. 
ಫ್ರೆಶರ್‌ಗಳಿಗೆ 18-27 ವರ್ಷ ವಯಸ್ಸಿನ ನಡುವೆ ಮತ್ತು ಅನುಭವಿ ಸಿಬ್ಬಂದಿಗೆ 35 ವರ್ಷ ದವರೆಗೆ.
ಕನಿಷ್ಠ ಶೈಕ್ಷಣಿಕ ಅರ್ಹತೆ: ಕನಿಷ್ಠ 50% ಅಂಕಗಳೊಂದಿಗೆ ಮಾನ್ಯತೆ ಪಡೆದ ಮಂಡಳಿ / ವಿಶ್ವವಿದ್ಯಾಲಯದಿಂದ 12 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
ಅಗತ್ಯವಿರುವ ಕನಿಷ್ಠ ಎತ್ತರ: ಹೆಣ್ಣು - 155 ಸೆಂ.ಮೀ.
ತೂಕ: ಎತ್ತರಕ್ಕೆ ಅನುಗುಣವಾಗಿ.
BMI ಶ್ರೇಣಿ: ಮಹಿಳಾ ಅಭ್ಯರ್ಥಿಗಳು - 18 ರಿಂದ 22.
ಸಮವಸ್ತ್ರ ಧರಿಬೇಕು, ಯಾವುದೇ ಗೋಚರಿಸುವ ಟ್ಯಾಟೂ ಇರಬಾರದು
ಇಂಗ್ಲಿಷ್ ಮತ್ತು ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡಬೇಕು
ದೃಷ್ಟಿ 6/6.

ಇದನ್ನೂ ಓದಿ: ಮೂನ್‌ಲೈಟಿಂಗ್ ಮಾಡೋರಿಗೆ ಶಾಕಿಂಗ್ ನ್ಯೂಸ್‌: ಹೆಚ್ಚುವರಿ ಆದಾಯ ಘೋಷಿಸದ ಸಾವಿರಾರು ಜನರಿಗೆ ಐಟಿ ನೋಟಿಸ್‌

ಸಂದರ್ಶನ ದಿನ ಹೇಗಿರಬೇಕು? 
ಉಡುಪು: ಪಾಶ್ಚಾತ್ಯ ಫಾರ್ಮಲ್ಸ್
ಸಂದರ್ಶನದ ದಿನದಂದು ದಯವಿಟ್ಟು ನಿಮ್ಮ ಅಪ್‌ಡೇಟ್ ಅಗಿರುವ ರೆಸ್ಯೂಮ್ ಅನ್ನು ತೆಗೆದುಕೊಂಡು ಹೋಗಿ
ಅನುಭವಿ ಅಭ್ಯರ್ಥಿಗಳು ತಮ್ಮ ಎಸ್‌ಇಪಿ ಕಾರ್ಡ್‌ಗಳ ನಕಲನ್ನು ತೆಗೆದುಕೊಂಡು ಹೋಗಿ

ಆಯ್ಕೆ ಪ್ರಕ್ರಿಯೆ: ವಾಕ್-ಇನ್-ಇಂಟರ್‌ವ್ಯೂ

ಇದನ್ನೂ ಓದಿ: ಫುಲ್‌ ಟೈಟಾಗಿ ಮಧ್ಯರಾತ್ರಿ ಬಾಸ್‌ಗೆ ಮೆಸೇಜ್‌ ಮಾಡಿದ ಉದ್ಯೋಗಿ: ವೈರಲ್‌ ಆಯ್ತು ಪೋಸ್ಟ್‌!

ಹುದ್ದೆಯ ಕುರಿತಾದ ಅಧಿಕೃತ ನೋಟಿಫಿಕೇಶನ್‌ಗಾಗಿ https://careers.airindia.com/job/Bangalore-Cabin-Crew-%28Female%29-Walk-ins-Bengaluru-11th-August%2C-2023-Sout/17443044/ ಅನ್ನು ಕ್ಲಿಕ್ ಮಾಡಿ. ಹಾಗೂ, ಹುದ್ದೆಗಾಗಿ ಅರ್ಜಿ ಸಲ್ಲಿಸಲು https://career44.sapsf.com/careers?company=airindiali ಲಿಂಕ್ ಕ್ಲಿಕ್‌ ಮಾಡಿ..  

ಇದನ್ನೂ ಓದಿ: UPSC success story: ಟೀ ಮಾರಿದ ಯುವಕ ಮಂಗೇಶ್ ಖಿಲಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್‌; ಹೋರಾಟದ ಹಾದಿ ಹೀಗಿದೆ..

PREV
Read more Articles on
click me!

Recommended Stories

ಬರೋಬ್ಬರಿ 30 ಸಾವಿರ ಉದ್ಯೋಗಿಗಳ ಕಡಿತಕ್ಕೆ ನಿರ್ಧಾರ! ಅಮೆಜಾನ್ ಸಾಲಿಗೆ ಮತ್ತೊಂದು ಟೆಕ್ ದೈತ್ಯ ಕಂಪನಿ ಸೇರ್ಪಡೆ!
ಅಮೆಜಾನ್ ಬೆನ್ನಲ್ಲೇ ಶಾಕ್ ಕೊಟ್ಟ ಓಲಾ ಎಲೆಕ್ಟ್ರಿಕ್, 620 ಉದ್ಯೋಗಿಗಳ ಕಡಿತಕ್ಕೆ ಮುಂದಾದ ಸಿಇಒ