ನಟನೆಯತ್ತ ಮನಸೋತು ಆಸೆ ಈಡೇರಿಸಿಕೊಳ್ಳಲು ಅಮೆರಿಕಾದಲ್ಲಿದ್ದ 1 ಕೋಟಿ ರೂಪಾಯಿಗಿಂತ ಹೆಚ್ಚು ಸಂಬಳದ ಕೆಲಸವನ್ನು ತೊರೆದು ಭಾರತಕ್ಕೆ ಹಿಂತಿರುಗಿದ ಯುವಕ.
ಐಐಎಂಗೆ ಸೇರಬೇಕು ಮತ್ತು ಅಮೇರಿಕಾದಲ್ಲಿ ಲಾಭದಾಯಕ ಉದ್ಯೋಗವನ್ನು ಪಡೆಯಬೇಕು ಎಂಬದು ಕನಸು ಅನೇಕರ ಮಹತ್ವಾಕಾಂಕ್ಷೆಯಾಗಿದೆ. ಆದರೆ ಕಂಟೆಂಟ್ ಕ್ರಿಯೇಟರ್ ಆಗಿರುವ ವಿಕಾಸ್ ಯಾದವ್ ಹಾಗಲ್ಲ. ಅವರು ನಟನೆಯತ್ತ ಮನಸೋತು ಅದನ್ನು ಈಡೇರಿಸಿಕೊಳ್ಳಲು ಅಮೆರಿಕಾದಲ್ಲಿದ್ದ 1 ಕೋಟಿ ರೂಪಾಯಿಗಿಂತ ಹೆಚ್ಚು ಸಂಬಳದ ಕೆಲಸವನ್ನು ತೊರೆದು ಭಾರತಕ್ಕೆ ಹಿಂತಿರುಗಿದರು.
ದೆಹಲಿಯ ನೇತಾಜಿ ಸುಭಾಸ್ ಟೆಕ್ನಾಲಜಿ ವಿಶ್ವವಿದ್ಯಾಲಯದಿಂದ ಬಿಟೆಕ್ ಪದವಿ ಪಡೆದಿರುವ ಮತ್ತು ಐಐಎಂ ಲಕ್ನೋದಿಂದ ಎಂಬಿಎ ಪಡೆದಿರುವ ದೆಹಲಿಯಲ್ಲಿ ಬೆಳೆದ 30 ವರ್ಷದ ಸೋಷಿಯಲ್ ಮೀಡಿಯಾ ಇನ್ಪ್ಲೂಯೆನ್ಸರ್ ಉತ್ತಮ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿದ್ದಾರೆ. ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ವಿಕಾಸ್ ಯುಎಸ್ ಮೂಲದ ಮ್ಯಾನೇಜ್‌ಮೆಂಟ್ ಕನ್ಸಲ್ಟಿಂಗ್ ಕಂಪನಿಯಲ್ಲಿ ಅನಾಲಿಟಿಕ್‌ನಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.
undefined
ತಾಯಿ ಬರೆದ ಆತ್ಮಕಥನದಿಂದ ಬಹಿರಂಗವಾಯ್ತು ಈ ಸ್ಟಾರ್ ನಟಿಯ ಆತ್ಮಹತ್ಯೆ ಪ್ರಯತ್ನದ ಕಥೆ!
30 ವರ್ಷದ ಯಾದವ್ ಅವರು ಬಾಲಿವುಡ್‌ಗೆ ಪ್ರವೇಶಿಸುವ ಮೊದಲು ಕಂಟೆಂಟ್ ಪ್ರೊಡಕ್ಷನ್ ಕ್ಷೇತ್ರದಲ್ಲಿ ಪ್ರಸಿದ್ಧರಾದರು. Instagram ನಲ್ಲಿ ಮನರಂಜನೆಯ ವೀಡಿಯೊಗಳೊಂದಿಗೆ ಉತ್ತಮ ಅನುಯಾಯಿಗಳನ್ನು ಗಳಿಸಿದ್ದು, ಸಾಮಾಜಿಕ ಮಾಧ್ಯಮ ದಲ್ಲಿ 2.5 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.
ನಾನು ಯಾವಾಗಲೂ ನಟನೆಯತ್ತ ಒಲವು ಹೊಂದಿದ್ದೆ ಮತ್ತು 2015 ರಲ್ಲಿ ಶ್ರೀ ರಾಮ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ ನಾಲ್ಕು ತಿಂಗಳ ರಂಗಭೂಮಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. ನಾನು ವಿಜಯ್ ತೆಂಡೂಲ್ಕರ್ ಅವರ ಖಾಮೋಶ್ ಅದಾಲತ್ ಜಾರಿ ಹೈ ಆಧಾರಿತ ನಾಟಕದಲ್ಲಿಯೂ ನಟಿಸಿದ್ದೇನೆ ಎಂದು ಯಾದವ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಬೆಂಗಳೂರು ಮೂಲದ ಕಂಪೆನಿಯಿಂದ 18 ಉದ್ಯೋಗಿಗಳು ವಜಾ!
ನಟನಾಗಿ ವೃತ್ತಿಜೀವನವನ್ನು ಮುಂದುವರಿಸಲು ಸುರಕ್ಷಿತ ಸ್ಥಾನವನ್ನು ತೊರೆಯುವ ಅವರ ಆಯ್ಕೆಯ ಬಗ್ಗೆ ಮೊದಲಿಗೆ ಪೋಷಕರಿಗೆ ಇಷ್ಟವಿರಲಿಲ್ಲ. “ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವನು. ನನ್ನ ತಂದೆ ಸರ್ಕಾರಿ ವಲಯದಲ್ಲಿದ್ದು ಇತ್ತೀಚೆಗೆ ನಿವೃತ್ತರಾಗಿದ್ದರು. ಆದ್ದರಿಂದ ಅವರಿಗೆ ಸ್ಥಿರವಾದ ಕೆಲಸದ ಮಹತ್ವ ತಿಳಿದಿದೆ. ಆದರೆ, ಅವರು ನನಗೆ ಬೇಕಾದುದನ್ನು ಮಾಡಲು ಬಿಡುತ್ತಾರೆ. ಬಳಿಕ ಪೋಷಕರು ಕೂಡ ಸಮ್ಮತಿ ಸೂಚಿಸಿದ್ದರು. ಆದಾಗ್ಯೂ, ವಿಕಾಸ್ ತನ್ನ ಹೆಂಡತಿಯ ಬೆಂಬಲದೊಂದಿಗೆ ತನ್ನ ಆಕಾಂಕ್ಷೆಗಳನ್ನು ಮುಂದುವರಿಸಲು ನಿರ್ಧರಿಸಿದರು.
ಯಾದವ್ ಅವರು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಿಂದ ತಿಂಗಳಿಗೆ ಕಡಿಮೆ ಎಂದರೂ ಸರಿಸುಮಾರು 1 ಲಕ್ಷ ರೂ. ಗಳಿಸುತ್ತಾರೆ. ತನ್ನನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳಲು ಕಂಪೆನಿ ತಯಾರಿ ನಡೆಸಿದ್ದು, ಈಗ ಆರು ತಿಂಗಳ ರಜೆಯಲ್ಲಿದ್ದೇನೆ ಎಂದರು.
ಫೋರ್ಬ್ಸ್‌ನ ಬಿಲಿಯನೇರ್‌ಗಳ ಪತ್ನಿಯರ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಎರಡನೇ ಶ್ರೀಮಂತನ ಪತ್ನಿ!
ನನ್ನ ಕಂಪನಿಯು ನನಗೆ ಭಾರತಕ್ಕೆ ಮರಳುವ ಆಯ್ಕೆಯನ್ನು ನೀಡಿದೆ ಏಕೆಂದರೆ ಅವರು ಪ್ರಸ್ತುತ ನನ್ನನ್ನು ಆರು ತಿಂಗಳ ವಿಶ್ರಾಂತಿಗೆ ಕಳಿಸಿದ್ದಾರೆ. ಆದಾಗ್ಯೂ, ನಾನು ಇನ್ನು ಮುಂದೆ 9 ರಿಂದ 5 ಗಂಟೆ ಕೆಲಸವನ್ನು ಮಾಡಲು ಯೋಜಿಸುವುದಿಲ್ಲ ಎಂದು ಯಾದವ್ ಹೇಳಿದ್ದಾರೆ. ಯಾದವ್ ಐಐಎಂ ಲಕ್ನೋದಿಂದ ಪದವಿ ಪಡೆಯುವ ಮೊದಲು ದೆಹಲಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದರು.