UP Elections : ಎಸ್‌ಪಿಯಿಂದ ಹಜ್‌ ಭವನ, ನಮ್ಮಿಂದ ಮಾನಸ ಸರೋವರ ಭವನ

By Kannadaprabha NewsFirst Published Jan 30, 2022, 4:30 AM IST
Highlights

* ಗರಿಗೆದರಿದ ಉತ್ತರ ಪ್ರದೇಶ ಚುನಾವಣಾ ಕಣ
* ಸಮಾಜವಾದಿ ಪಕ್ಷದ ವಿರುದ್ಧ ಯೋಗಿ ಆದಿತ್ಯನಾಥ್ ವಾಗ್ದಾಳಿ
* ನಮ್ಮ ಸರ್ಕಾರ ಮಾನಸ ಸರೋವರ ಭವನವನ್ನು ನಿರ್ಮಿಸಿದೆ

ಲಖನೌ (ಜ. 29): ಉತ್ತರಪ್ರದೇಶದಲ್ಲಿ (Uttar Pradesh)ಈ ಹಿಂದೆ ಆಡಳಿತ ನಡೆಸಿದ್ದ ಸಮಾಜವಾದಿ ಪಕ್ಷ (Samajwadi Party) ಹಜ್‌ ಭವನ (Haj House ) ನಿರ್ಮಿಸಿ, ಅಯೋಧ್ಯೆ ಮೇಲೆ ದಾಳಿ ನಡೆಸಿದ ಉಗ್ರರ ರಕ್ಷಣೆ ಮಾಡಿದ್ದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಾನಸ ಸರೋವರ (Kailash Mansarovar) ಭವನ ನಿರ್ಮಿಸಿತು. ಅಷ್ಟುಮಾತ್ರವಲ್ಲ ರಾಜ್ಯದ ರೈತರ ದೊಡ್ಡ ಪ್ರಮಾಣದ ಸಾಲ ಮನ್ನಾ ಮಾಡಿತು. ಇದೇ ಎರಡೂ ಸರ್ಕಾರಗಳ ನಡುವಿನ ವ್ಯತ್ಯಾಸ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಜೊತೆಗೆ ಅಖಿಲೇಶ್‌ ಯಾದವ್‌ (akhilesh yadav) ಪಾಕ್‌ ಸಂಸ್ಥಾಪಕ ಜಿನ್ನಾ ಪರ ಬೆಂಬಲಿಗ ಎಂದು ಗಾಜಿಯಾಬಾದ್‌ನಲ್ಲಿ (ghaziabad) ನಡೆದ ಪಕ್ಷದ ರಾರ‍ಯಲಿ ವೇಳೆ ಹರಿಹಾಯ್ದರು.

ಉತ್ತರ ಪ್ರದೇಶದ ಹಿಂದಿನ ಸರ್ಕಾರ ಗಾಜಿಯಾಬಾದ್‌ನಲ್ಲಿ 'ಹಜ್ ಹೌಸ್' ನಿರ್ಮಿಸಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಆದರೆ,  ಬಿಜೆಪಿ ಸರಕಾರವು 94 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಕೈಲಾಸ ಮಾನಸ ಸರೋವರ ಭವನವನ್ನು ನಿರ್ಮಿಸಿದೆ. ನಂಬಿಕೆಗೆ ಗೌರವವನ್ನು ನೀಡುವ ಈ ಕಟ್ಟಡವು ಭಕ್ತರಿಗೆ ಉತ್ತಮ ಕೊಡುಗೆಯಾಗಿದೆ. ವ್ಯತ್ಯಾಸ ಸ್ಪಷ್ಟವಾಗಿದೆ. 2020 ರ ಡಿಸೆಂಬರ್‌ನಲ್ಲಿ ಗಾಜಿಯಾಬಾದ್‌ನ ಇಂದಿರಾಪುರಂನಲ್ಲಿ ನಿರ್ಮಿಸಲಾದ ಕೈಲಾಸ ಮಾನಸ ಸರೋವರ ಭವನವನ್ನು ಯೋಗಿ ಉದ್ಘಾಟಿಸಿದರು. ಕೈಲಾಸ ಮಾನಸ ಸರೋವರ ಯಾತ್ರೆ ಮತ್ತು ಚಾರ್ಧಾಮ್ ಯಾತ್ರೆಗೆ ಪ್ರಯಾಣಿಸುವ ಯಾತ್ರಾರ್ಥಿಗಳಿಗೆ ಉನ್ನತ ಮಟ್ಟದ ಸೌಲಭ್ಯಗಳಿಗಾಗಿ ೀ ವ್ಯವಸ್ಥೆ ಮಾಡಲಾಗಿದೆ ಮತ್ತು ಸುಮಾರು 300 ಜನರು ಇಲ್ಲಿ ವಾಸ್ತವ್ಯ ಮಾಡಬಹುದಾಗಿದೆ.

10 ರು.ಗೆ ಸಮಾಜವಾದಿ ಊಟ, ನಗರ ನರೇಗಾ ಜಾರಿ: ಎಸ್‌ಪಿ
ಗಾಜಿಯಾಬಾದ್‌:
ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯಾದ್ಯಂತ 10 ರು.ಗೆ ಪೌಷ್ಟಿಕಾಂಶ ಊಟ ಒದಗಿಸಲು ಸಮಾಜವಾದಿ ಕ್ಯಾಂಟೀನ್‌ ಹಾಗೂ ನಗರ ಪ್ರದೇಶಗಳಲ್ಲೂ ನರೇಗಾ (NAREGA) ರೀತಿಯ ಯೋಜನೆಗಳನ್ನು ಜಾರಿಗೆ ತರುವುದಾಗಿ ಸಮಾಜವಾದಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಭರವಸೆ ನೀಡಿದ್ದಾರೆ.

ಶನಿವಾರ ರಾಷ್ಟ್ರೀಯ ಲೋಕದಳ (RLD)ಮುಖ್ಯಸ್ಥ ಜಯಂತ್‌ ಚೌಧರಿ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಬಡವರು ವಾಸಿಸುವ ಪ್ರದೇಶಗಳಲ್ಲಿ ಕಡಿಮೆ ದರಕ್ಕೆ ವಸ್ತು ಪೂರೈಸುವ ಸಮಾಜವಾದಿ ದಿನಸಿ ಅಂಗಡಿಗಳನ್ನು ತೆರೆಯಲಾಗುತ್ತದೆ’ ಎಂದು ಹೇಳಿದರು. ಅಲ್ಲದೆ ಈಗಾಗಲೇ ಮನೆಗಳಿಗೆ 300 ಯುನಿಟ್‌ವರೆಗೆ ಉಚಿತ ವಿದ್ಯುತ್‌, ರೈತರಿಗೆ ಪಂಪ್‌ಸೆಟ್‌ಗಳಿಗೆ ಉಚಿತ ಕರೆಂಟ್‌, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ನೀಡುವುದಾಗಿ ಎಸ್‌ಪಿ ಈಗಾಗಲೇ ಘೋಷಿಸಿದೆ.

UP Elections : ಸಮಾಜವಾದಿ ಅಧಿಕಾರದ ಕಾಲದಲ್ಲಿ ಸ್ಮಶಾನದಲ್ಲಿ ಮಾತ್ರವೇ ಅಭಿವೃದ್ಧಿ ಕಾಣುತ್ತಿತ್ತು!
ಜನಸಂದಣಿ ಎಂದು ಶಾ ಮನೆ ಮನೆ ಭೇಟಿ ರದ್ದು
ಲಖನೌ:
ಉತ್ತರ ಪ್ರದೇಶದ ದೇವ್‌ಬಂದ್‌ನಲ್ಲಿ (Deoband) ಶನಿವಾರ ಆಯೋಜಿಸಲಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Union Home Minister Amith Shah) ಅವರ ಚುನಾವಣಾ ಪ್ರಚಾರ (door-to-door campaign) ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ವಿಪರೀತ ಜನಸಂದಣಿ ಇದ್ದ ಹಿನ್ನೆಲೆಯಲ್ಲಿ ಕೊರೋನಾ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ತಮ್ಮ ಮನೆ ಮನೆ ಭೇಟಿ ಕಾರ್ಯಕ್ರಮವನ್ನು ರದ್ದುಪಡಿಸಿದ್ದಾಗಿ ಅಮಿತ್‌ ಶಾ ಹೇಳಿದ್ದಾರೆ.

Assembly Elections 2022: ಗೋವಾದಲ್ಲಿ ಫೋಟೋ ಫಿನಿಶ್‌: ಮಣಿಪುರ, ಉ.ಪ್ರ.ದಲ್ಲಿ ಬಿಜೆಪಿಗೆ ಬಹುಮತ: ಸಮೀಕ್ಷೆ!
ಅಲ್ಲದೆ ತಮಗಾಗಿ ಕಾಯ್ದುಕುಳಿತವರಿಗೆ ನಿರಾಸ ಮೂಸಿದ್ದಕ್ಕೆ ಅವರು ಕ್ಷಮೆಯಾಚಿಸಿದ್ದಾರೆ. ಆದರೆ ಮುಜಫ್ಪರ್‌ನಗರದ ದೇವ್‌ಬಂದ್‌ ಬಜಾರ್‌, ಶಿವ ದೇಗುಲಕ್ಕೆ ಭೇಟಿ ನೀಡಿದರು. ಈ ವೇಳೆ ಜನರು ಡೋಲು ಬಡಿದು, ಕುಣಿದು ಕುಪ್ಪಳಿಸುವ ಮೂಲಕ ಅಮಿತ್‌ ಶಾರನ್ನು ಸ್ವಾಗತಿಸಿದರು.

click me!